Game Changer: ಇತಿಹಾಸ ಸೃಷ್ಟಿಸಲು ರೆಡಿಯಾಗ್ತಿದೆ ರಾಮ್ ಚರಣ್ ಅಭಿನಯದ ಸಿನಿಮಾ ‘ಗೇಮ್ ಚೇಂಜರ್’; ಅಮೆರಿಕ ನೆಲದಲ್ಲಿ ಅಪರೂಪದ ಸಾಧನೆ
ರಾಮ್ ಚರಣ್ ನಾಯಕನಾಗಿ ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಬಿಗ್ ಬಜೆಟ್ ಚಿತ್ರ 'ಗೇಮ್ ಚೇಂಜರ್' ಅಪರೂಪದ ಗೌರವಕ್ಕೆ ಪಾತ್ರವಾಗಲಿದೆ. ಅಮೇರಿಕದಲ್ಲಿ ಪ್ರೀ ರಿಲೀಸ್ ನಡೆಯಲಿದೆ.
ರಾಮ್ ಚರಣ್ ನಾಯಕನಾಗಿ ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಬಿಗ್ ಬಜೆಟ್ ಚಿತ್ರ 'ಗೇಮ್ ಚೇಂಜರ್' ಅಪರೂಪದ ಗೌರವಕ್ಕೆ ಪಾತ್ರವಾಗಲಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದುವರೆಗೆ ಯುಎಸ್‌ನಲ್ಲಿ ತೆಲುಗು ಚಿತ್ರವೊಂದರ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿರಲಿಲ್ಲ. ಆದರೆ ಈ ಸಿನಿಮಾ ಆ ದಾಖಲೆ ಮಾಡಲಿದೆ. ಡಿಸೆಂಬರ್ 21ರಂದು ಅಮೆರಿಕದಲ್ಲಿ ‘ಗೇಮ್ ಚೇಂಜರ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲು ಚಿತ್ರತಂಡ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ಸಮಾರಂಭಕ್ಕೆ ಚಿತ್ರತಂಡದ ಜೊತೆಗೆ ಎಲ್ಲಾ ಸೆಲೆಬ್ರಿಟಿಗಳು ಇರಲಿದ್ದಾರೆ ಎಂದು ವರದಿಯಾಗಿದೆ.
'ಗೇಮ್ ಚೇಂಜರ್' ಸಿನಿಮಾದ ಪೋಸ್ಟರ್ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆಯಾಗಿದೆ. ಬಿಡುಗಡೆಯಾದ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಕಿದೆ. ‘ಜರಗಂಡಿ ಜರಗಂಡಿ’ ‘ರಾ ಮಚ್ಚಾ ರಾ’ ಈ ಎರಡೂ ಹಾಡುಗಳು ಈಗಾಗಲೇ ವೈರಲ್ ಆಗಿದೆ. ಹಾಡುಗಳು ಮತ್ತು ಟೀಸರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಸಿನಿಮಾ ತಾರಾಗಣ
ಈ ಚಿತ್ರದಲ್ಲಿ ರಾಮ್ ಚರಣ್ ಎರಡು ಶಕ್ತಿಶಾಲಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಅಂದಹಾಗೆ ಸಿನಿಮಾದಲ್ಲಿ ಹಿರಿಯ ನಾಯಕ ಶ್ರೀಕಾಂತ್, ನವೀನ್ ಚಂದ್ರ, ನಾಯಕಿ ಅಂಜಲಿ, ಎಸ್.ಜೆ.ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಿಲ್ ರಾಜು ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
RRR ಚಿತ್ರದ ನಂತರ ರಾಮ್ ಚರಣ್ ಮತ್ತೆ ಅದೇ ರೀತಿ ಹಿಟ್ ಸಿನಿಮಾವನ್ನು ಕೊಡಲು ರೆಡಿಯಾಗಿದ್ದಾರೆ. ಆಚಾರ್ಯ ಸಿನಿಮಾ ಡಿಸಾಸ್ಟರ್ ಆಗುತ್ತಿದ್ದಂತೆ ರಾಮ್ ಚರಣ್ ಮಾತ್ರವಲ್ಲದೆ ಮೆಗಾ ಅಭಿಮಾನಿಗಳು ಈ ಗೇಮ್ ಚೇಂಜರ್ ಸಿನಿಮಾದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಗೇಮ್ ಚೇಂಜರ್ ಸಿನಿಮಾ ಶಂಕರ್ ಅವರ ಕೆರಿಯರ್ ನಲ್ಲೂ ನಿರ್ಣಾಯಕವಾಗಲಿದೆ.
ಮುಂದಿನ ವರ್ಷ ಬಿಡುಗಡೆಯಾಗಲಿದೆ ಸಿನಿಮಾ
ಈ ಸಿನಿಮಾ ಕ್ರಿಸ್‌ಮಸ್‌ಗೆ ಬರಲಿದೆ ಎಂದು ನಿರ್ಮಾಪಕ ದಿಲ್ ರಾಜು ಮೊದಲು ಅನೌನ್ಸ್ ಮಾಡಿದ್ದರು. ಆದರೆ ಚಿತ್ರತಂಡ ಈಗ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಗೇಮ್ ಚೇಂಜರ್ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರತಂಡ ಈಗಾಗಲೇ ಜನವರಿ 10 ರಂದು ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಇತ್ತೀಚೆಗಷ್ಟೇ ಲಕ್ನೋದಲ್ಲಿ ಟೀಸರ್ ಕಾರ್ಯಕ್ರಮವೂ ನಡೆದಿದೆ. ಬಿಡುಗಡೆಗೂ ಮುನ್ನ ದೇಶಾದ್ಯಂತ ಹಲವು ನಗರಗಳಲ್ಲಿ ಪ್ರಚಾರ ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಇದೆ. ನಿರ್ಮಾಪಕ ದಿಲ್ ರಾಜು ಮೆಗಾಸ್ಟಾರ್ ಚಿರಂಜೀವಿಗೆ ಧನ್ಯವಾದ ಕೂಡಾ ಹೇಳಿದ್ದಾರೆ.