ಒಟಿಟಿಗೆ ಪಾದಾರ್ಪಣೆ ಮಾಡಿದ ‘ಕೋಬಾಲಿ’ ವೆಬ್‌ ಸರಣಿ; ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯ
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಗೆ ಪಾದಾರ್ಪಣೆ ಮಾಡಿದ ‘ಕೋಬಾಲಿ’ ವೆಬ್‌ ಸರಣಿ; ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯ

ಒಟಿಟಿಗೆ ಪಾದಾರ್ಪಣೆ ಮಾಡಿದ ‘ಕೋಬಾಲಿ’ ವೆಬ್‌ ಸರಣಿ; ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯ

Telugu Kobali in OTT: ರಿವೇಂಜ್ ಆಕ್ಷನ್ ಥ್ರಿಲ್ಲರ್ ತೆಲುಗು ವೆಬ್‌ ಸರಣಿ ‘ಕೋಬಾಲಿ’ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹಳ್ಳಿಗಾಡಿನ ಜನರ ಸೇಡಿನ ಕಥೆಯನ್ನು ಈ ಸರಣಿ ಹೊಂದಿದ್ದು, 8 ಎಪಿಸೋಡ್‌ಗಳನ್ನು ಒಳಗೊಂಡಿದೆ.

ಒಟಿಟಿಗೆ ಪಾದಾರ್ಪಣೆ ಮಾಡಿದ ‘ಕೋಬಾಲಿ’ ವೆಬ್‌ ಸರಣಿ
ಒಟಿಟಿಗೆ ಪಾದಾರ್ಪಣೆ ಮಾಡಿದ ‘ಕೋಬಾಲಿ’ ವೆಬ್‌ ಸರಣಿ

ಕೋಬಾಲಿ ಒಟಿಟಿ: 'ಕೋಬಾಲಿ' ಒಂದು ರಿವೇಂಜ್ ಆಕ್ಷನ್ ಥ್ರಿಲ್ಲರ್ ತೆಲುಗು ವೆಬ್‌ ಸರಣಿ. ಈ ಸಿನಿಮಾ ಫೆಬ್ರವರಿ ಮೊದಲ ವಾರದಲ್ಲಿ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗುತ್ತದೆ ಎಂದು ಮುಂಚಿತವಾಗಿ ತಿಳಿಸಲಾಗಿತ್ತು. ಅದರಂತೆ ಫೆಬ್ರವರಿ 4ರಂದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‍‌ನಲ್ಲಿ ಈ ವೆಬ್‌ ಸರಣಿ ಸ್ಟ್ರೀಮಿಂಗ್ ಆರಂಭಿಸಿದೆ. ಇದರಲ್ಲಿ ರವಿಪ್ರಕಾಶ್‌, ಶ್ಯಾಮಲಾ, ರಾಕಿ ಸಿಂಗ್ ಮತ್ತು ವೆಂಕಟ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸರಣಿಯನ್ನು ರೇವಂತ್ ಲೇವಕ ನಿರ್ದೇಶಿಸಿದ್ದಾರೆ.

ಒಟಿಟಿಯಲ್ಲಿ ಸಾಕಷ್ಟು ವೆಬ್‌ ಸರಣಿಗಳು ಬಿಡುಗಡೆಯಾಗಿವೆ. ಹಿಂದಿ, ಇಂಗ್ಲೀಷ್‌, ಕನ್ನಡ ತಮಿಳು, ತೆಲುಗು ಹೀಗೆ ನಾನಾ ಭಾಷೆಗಳಲ್ಲಿ ವೆಬ್‌ ಸರಣಿಗಳು ಲಭ್ಯವಿದೆ. ಕ್ರೈಮ್‌ ಥ್ರಿಲರ್ ಕಥೆಗಳೆಂದರೆ ಈ ಜನರು ಹೆಚ್ಚು ಆಸಕ್ತಿಯಿಂದ ನೋಡುತ್ತಾರೆ. ಆ ಕಾರಣದಿಂದ ಕ್ರೈಮ್‌, ಆಕ್ಷನ್ ಮತ್ತು ಥ್ರಿಲ್ಲರ್ ದೃಶ್ಯಗಳನ್ನು ಹೊಂದಿರುವ ಸಿನಿಮಾ ಹಾಗೂ ವೆಬ್‌ ಸರಣಿಗಳೇ ಹೆಚ್ಚಾಗಿ ತೆರೆಕಾಣುತ್ತಿವೆ. ಅದೇ ರೀತಿ ತೆಲುಗಿನ ಈ ಕೋಬಾಲಿ ಕೂಡ ಒಂದು ರಿವೇಂಜ್ ಆಕ್ಷನ್ ಥ್ರಿಲ್ಲರ್ ವೆಬ್‌ ಸರಣಿಯಾಗಿದೆ.

ಮುಖ್ಯ ಪಾತ್ರದಲ್ಲಿ ಜನಪ್ರಿಯ ತೆಲುಗು ನಟ ರವಿ ಪ್ರಕಾಶ್

ಜನಪ್ರಿಯ ತೆಲುಗು ನಟ ರವಿ ಪ್ರಕಾಶ್ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ರವಿ ಪ್ರಕಾಶ್, ನಿರೂಪಕಿ ಶ್ಯಾಮಲಾ, ರಾಕಿ ಸಿಂಗ್, ವೆಂಕಟ್, ತರುಣ್ ರೋಹಿತ್, ಭರತ್ ರೆಡ್ಡಿ, ಯೋಗ್ ಖತ್ರಿ, ಗಡ್ಡಂ ನವೀನ್, ಮಣಿಕಂಠ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ವೆಬ್ ಸರಣಿಯನ್ನು ರೇವಂತ್ ಲೇವಾಕಾ, ಜೀವನ್ ಬಂಡಿ, ರಾಜಶೇಖರ್ ರೆಡ್ಡಿ ಮತ್ತು ಇತರರು ನಿರ್ದೇಶಿಸಿದ್ದಾರೆ. ಕಮ್ಮಿರೆಡ್ಡಿ ಕಥೆ ಬರೆದಿದ್ದಾರೆ.

ಜ್ಯೋತಿ ಮೇಘವತ್, ರಾಜಶೇಖರ್ ರೆಡ್ಡಿ ಮತ್ತು ತಿರುಪತಿ ಶ್ರೀನಿವಾಸ ರಾವ್ ನಿರ್ಮಿಸಿರುವ ಕೋಬಾಲಿ ವೆಬ್ ಸರಣಿಗೆ ಗೌರಾ ಹರಿ ಸಂಗೀತ ನೀಡಿದ್ದಾರೆ. ಕಿಶೋರ್ ಮದ್ದಾಲಿ ಅವರು ಕೋಬಾಲಿ ವೆಬ್ ಸರಣಿಯ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಇದು ಸೇಡು ತೀರಿಸಿಕೊಳ್ಳುವ ಕ್ರೈಮ್ ಥ್ರಿಲ್ಲರ್ ವಲಯವನ್ನು ಹೊಂದಿದೆ. ಕೋಬಾಲಿ ವೆಬ್‌ ಸರಣಿಯ ಟ್ರೇಲರ್ ನಿದ್ದೆಗೆಡಿಸುವಂತಿದೆ. ಹಿಂಸಾತ್ಮಕ ದೃಶ್ಯಗಳೇ ಇದರಲ್ಲಿ ಹೆಚ್ಚಾಗಿ ಕಾಣಿಸಿದೆ.

ಕೋಬಾಲಿ ಒಟಿಟಿ ಸ್ಟ್ರೀಮಿಂಗ್ ವಿವರ

ಕೋಬಾಲಿ ವೆಬ್‌ ಸರಣಿ ಒಟಿಟಿಯಲ್ಲಿ ಈಗಾಗಲೇ ಸ್ಟ್ರೀಮಿಂಗ್‌ ಆರಂಭಿಸಿದೆ. ನಿನ್ನೆಯಿಂದ (ಫೆಬ್ರವರಿ 4) ಡಿಸ್ನಿ ಪ್ಲಸ್ ಹಾಟ್‌ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ತೆಲುಗು ಸೇರಿದಂತೆ ಏಳು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ, ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲಿ ಕೋಬಾಲಿ ವೆಬ್‌ ಸರಣಿಯನ್ನು ವೀಕ್ಷಿಸಬಹುದು.

ಒಂದು ವಾರದ ಹಿಂದೆ, ಕೋಬಾಲಿ ಸರಣಿಯನ್ನು ಫೆಬ್ರವರಿ ಮೊದಲ ವಾರದಲ್ಲಿ ಒಟಿಟಿಯಲ್ಲಿ ಸ್ಟ್ರೀಮ್ ಮಾಡಲಾಗುವುದು ಎಂದು ಡಿಸ್ನಿ + ಹಾಟ್‌ಸ್ಟಾರ್‌ ಅಧಿಕೃತವಾಗಿ ಘೋಷಿಸಿತ್ತು. ಕೋಬಾಲಿ ವೆಬ್ ಸರಣಿಯಲ್ಲಿ ಐಟಂ ಸಾಂಗ್ ಇದೆ. ಲಿಲ್ಲಿ ಕಿಲ್ಲಿ ಎಂಬ ಐಟಂ ಸಾಂಗ್‌ ಕೂಡ ಯುಟ್ಯೂಬ್‌ನಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಈ ವೆಬ್ ಸರಣಿಯು 8 ಕಂತುಗಳನ್ನು ಹೊಂದಿದ್ದು, ಸುಮಾರು 30 ನಿಮಿಷಗಳ ರನ್ ಟೈಮ್ ಹೊಂದಿದೆ. ಹಳ್ಳಿಗಾಡಿನ ಜನರ ಸೇಡಿನ ಕಥೆಯನ್ನು ಈ ಸರಣಿ ಹೊಂದಿದ್ದು, ಪ್ರೇಕ್ಷಕರು ಈ ವೆಬ್‌ ಸರಣಿಯನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.

Whats_app_banner