ಕನ್ನಡ ಸುದ್ದಿ  /  ಮನರಂಜನೆ  /  ನಟಿ ಪವಿತ್ರಾ ಜಯರಾಮ್‌ ಅಪಘಾತದಲ್ಲಿ ಸಾವನ್ನಪ್ಪಿದಾಗ ಅದೇ ಕಾರ್‌ನಲ್ಲಿದ್ದ ನಟ ಚಂದ್ರಕಾಂತ್‌ ಆತ್ಮಹತ್ಯೆ!

ನಟಿ ಪವಿತ್ರಾ ಜಯರಾಮ್‌ ಅಪಘಾತದಲ್ಲಿ ಸಾವನ್ನಪ್ಪಿದಾಗ ಅದೇ ಕಾರ್‌ನಲ್ಲಿದ್ದ ನಟ ಚಂದ್ರಕಾಂತ್‌ ಆತ್ಮಹತ್ಯೆ!

ಅಪಘಾತದಲ್ಲಿ ಕರ್ನಾಟಕ ಮೂಲದ ತೆಲುಗು ಸೀರಿಯಲ್‌ ನಟಿ ಪವಿತ್ರಾ ಜಯರಾಮ್‌ ಸಾವಿನ ಬೆನ್ನಲ್ಲೇ, ಸಹ ನಟ ಚಂದ್ರಕಾಂತ್‌ ಹೈದರಾಬಾದ್‌ನ ಮಣಿಕೊಂಡದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಟಿ ಪವಿತ್ರಾ ಜಯರಾಮ್‌ ಅಪಘಾತದಲ್ಲಿ ಸಾವನ್ನಪ್ಪಿದಾಗ ಅದೇ ಕಾರ್‌ನಲ್ಲಿದ್ದ ನಟ ಚಂದ್ರಕಾಂತ್‌ ಆತ್ಮಹತ್ಯೆ!
ನಟಿ ಪವಿತ್ರಾ ಜಯರಾಮ್‌ ಅಪಘಾತದಲ್ಲಿ ಸಾವನ್ನಪ್ಪಿದಾಗ ಅದೇ ಕಾರ್‌ನಲ್ಲಿದ್ದ ನಟ ಚಂದ್ರಕಾಂತ್‌ ಆತ್ಮಹತ್ಯೆ!

Telugu Serial Actor Chandrakanth Suicide: ಇತ್ತೀಚೆಗೆ ತೆಲುಗಿನ ತ್ರಿನಯನಿ ಧಾರಾವಾಹಿ ನಟಿ ಪವಿತ್ರಾ ಜಯರಾಮ್ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಅದೇ ಧಾರಾವಾಹಿಯ ಸಹ ನಟ ಚಂದು ಅಲಿಯಾಸ್ ಚಂದ್ರಕಾಂತ್ ಶನಿವಾರ (ಮೇ 17) ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಂದ್ರಕಾಂತ್ ಅವರು ಹೈದರಾಬಾದ್‌ನ ಮಣಿಕೊಂಡದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ವಿಷಯ ಹೊರಬೀಳುತ್ತಿದ್ದಂತೆಯೇ ತೆಲುಗು ಕಿರುತೆರೆ ಕ್ಷೇತ್ರಕ್ಕೆ ಮತ್ತೊಂದು ಬರಸಿಡಿಲು ಬಡಿದಂಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಪವಿತ್ರಾ ಜಯರಾಮ್ ಸಾವನ್ನು ಸಹಿಸಲಾಗದೆ ಚಂದ್ರಕಾಂತ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಪವಿತ್ರಾ ನಿಧನರಾದ ದಿನದಿಂದಲೂ ಚಂದ್ರಕಾಂತ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದುಃಖವನ್ನು ತೋಡಿಕೊಂಡಿದ್ದರು. ಕೊನೆಗೆ ಅವರಿಲ್ಲದ ಬದುಕು ಬೇಡವೆಂದು ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ಮತ್ತು ಘಟನೆಯ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಅಪಘಾತದ ವೇಳೆ ಜತೆಗಿದ್ದ ಚಂದ್ರಕಾಂತ್‌

ಕಳೆದ ಕೆಲ ದಿನಗಳ ಹಿಂದಷ್ಟೇ ಕರ್ನಾಟಕದ ಮಂಡ್ಯ ಮೂಲದ ಸೀರಿಯಲ್‌ ನಟಿ ಪವಿತ್ರಾ ಜಯರಾಮ್, ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಕಿರುತೆರೆ ವಲಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಅವರಿಗೆ ಆತ್ಮೀಯರಾಗಿದ್ದ ಕಿರುತೆರೆ ನಟರೆಲ್ಲ ಪವಿತ್ರಾ ಅವರ ಸಾವನ್ನು ಅರಗಿಸಿಕೊಳ್ಳಲಾಗಲಿಲ್ಲ. ಚಂದ್ರಕಾಂತ್ ಕೂಡ ಪವಿತ್ರಾ ಸಾವನ್ನಪ್ಪಿದ್ದಾಳೆ ಎಂಬ ಸತ್ಯವನ್ನು ನಂಬಲಾಗಲಿಲ್ಲ. ಅಪಘಾತದ ವೇಳೆ ಪವಿತ್ರಾ ಜೊತೆ ಚಂದ್ರಕಾಂತ್ ಕೂಡ ಕಾರಿನಲ್ಲಿದ್ದರು. ಆದರೆ ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

ಸಾವಿನ ಮುನ್ಸೂಚನೆ ನೀಡಿದ್ದರು..

ಮೂರು ದಿನಗಳ ಹಿಂದೆ ಚಂದ್ರಕಾಂತ್ ಹುಟ್ಟುಹಬ್ಬವಿತ್ತು. ಆದರೆ ಚಂದ್ರಕಾಂತ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಪವಿತ್ರಾ ಜಯರಾಮ್ ಅವರು ಎಡಿಟ್ ಮಾಡಿರುವ ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. "ಅಪ್ಪ ನನಗಾಗಿ ಎರಡು ದಿನ ಕಾಯಿರಿ" ಎಂದು ಅವರು ವಿಡಿಯೋಗೆ ಕ್ಯಾಪ್ಷನ್‌ ನೀಡಿದ್ದರು. ಆದರೆ, ಆಗ ಆ ಶೀರ್ಷಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಪವಿತ್ರ ಇಲ್ಲದ ಬದುಕು ಬೇಡವೆಂದು ಜಯರಾಮ್ ಮೂರು ದಿನಗಳ ಹಿಂದೆಯೇ ನಿರ್ಧರಿಸಿ, ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶೀಘ್ರದಲ್ಲಿ ಮದುವೆ ಆಗಬೇಕಿತ್ತು ಈ ಜೋಡಿ

ಪವಿತ್ರಾ ಜಯರಾಮ್‌ ಮತ್ತು ಚಂದ್ರಕಾಂತ್ ಇನ್ನೇನು ಶೀಘ್ರದಲ್ಲಿ ಮದುವೆ ಆಗುವವರಿದ್ದರು. ಇಬ್ಬರು ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು ಎಂದೂ ಹೇಳಲಾಗುತ್ತಿದೆ. ಪವಿತ್ರಾಗೂ ಈಗಾಗಲೇ ಮದುವೆ ಆಗಿತ್ತು. ಮಗಳೂ ಇದ್ದಳು. ಇತ್ತ ಚಂದ್ರಕಾಂತ್‌ ಅವರಿಗೂ ಮದುವೆ ಆಗಿತ್ತು. ಪತ್ನಿ ಶಿಲ್ಪಾ ಮತ್ತು ಇಬ್ಬರು ಮಕ್ಕಳಿದ್ದಾರೆ. ಪತ್ನಿಯಿಂದ ದೂರವಾಗಿದ್ದ ಚಂದ್ರಕಾಂತ್‌ ಮತ್ತು ಪತಿಯಿಂದ ದೂರವಾಗಿದ್ದ ಪವಿತ್ರಾ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ಇನ್ನೇನು ಶೀಘ್ರದಲ್ಲಿ ಮದುವೆ ಆಗಬೇಕು ಎಂದು ನಿರ್ಧರಿಸಿದ್ದರು. ಆದರೆ ಮದುವೆಗೂ ಮುನ್ನವೇ ಇಬ್ಬರ ಬಾಳಲ್ಲಿ ದುರಂತವೇ ಘಟಿಸಿದೆ.

ಮೇ 12ರಂದು ಪವಿತ್ರ ಸಾವು

ಮೇ 12ರಂದು ಆಂಧ್ರದ ಮಹೆಬೂಬ್‌ನಗರ ಜಿಲ್ಲೆಯ ಭೂತ್‌ಪುರ ಪುರಸಭೆ ವ್ಯಾಪ್ತಿಯ ಶೇರಿಪಲ್ಲಿ (ಬಿ) ಗ್ರಾಮದ ಬಳಿ, ಪವಿತ್ರಾ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಹೈದರಾಬಾದ್‌ನಿಂದ ವನಪರ್ತಿಗೆ ಬರುತ್ತಿದ್ದ ಬಸ್ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಪವಿತ್ರಾ ಜಯರಾಮ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಚಂದ್ರಕಾಂತ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಪವಿತ್ರಾ ಅವರ ಹುಟ್ಟೂರು ಮಂಡ್ಯದ ಹನಕೆರೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.

ಟಿ20 ವರ್ಲ್ಡ್‌ಕಪ್ 2024