ಕನ್ನಡ ಸುದ್ದಿ  /  ಮನರಂಜನೆ  /  ನಟಿ ಪವಿತ್ರಾ ಜಯರಾಮ್‌ಗೆ ನನ್ನ ಗಂಡ ಆರನೇಯವನು; ಅಕ್ರಮ ಸಂಬಂಧದ ಬಗ್ಗೆ ಮೌನ ಮುರಿದ ಮೃತ ಚಂದ್ರಕಾಂತ್‌ ಪತ್ನಿ ಶಿಲ್ಪಾ

ನಟಿ ಪವಿತ್ರಾ ಜಯರಾಮ್‌ಗೆ ನನ್ನ ಗಂಡ ಆರನೇಯವನು; ಅಕ್ರಮ ಸಂಬಂಧದ ಬಗ್ಗೆ ಮೌನ ಮುರಿದ ಮೃತ ಚಂದ್ರಕಾಂತ್‌ ಪತ್ನಿ ಶಿಲ್ಪಾ

ತೆಲುಗು ಕಿರುತೆರೆಯಲ್ಲಿ ಒಂದೇ ವಾರದಲ್ಲಿ ಎರಡು ದುರ್ಘಟನೆಗಳು ನಡೆದಿವೆ. ನಟಿ ಪವಿತ್ರಾ ಜಯರಾಮ್‌ ಅಪಘಾತದಲ್ಲಿ ನಿಧನದ ಬಳಿಕ, ಅವರನ್ನು ಪ್ರೀತಿಸುತ್ತಿದ್ದ ಚಂದ್ರಕಾಂತ್‌, ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತ ಚಂದ್ರಕಾಂತ್‌ ಪತ್ನಿ ಇವರಿಬ್ಬರ ಅಕ್ರಮ ಸಂಬಂಧದಿಂದ ನಾನೆಷ್ಟು ನೋವು ಅನುಭವಿಸಿದ್ದೇನೆ ಎಂಬುದನ್ನು ಹೇಳಿ ಕಣ್ಣೀರಾಗಿದ್ದಾರೆ.

ನಟಿ ಪವಿತ್ರಾ ಜಯರಾಮ್‌ಗೆ ನನ್ನ ಗಂಡ ಆರನೇಯವನು; ಅಕ್ರಮ ಸಂಬಂಧದ ಬಗ್ಗೆ ಮೌನ ಮುರಿದ ಮೃತ ಚಂದ್ರಕಾಂತ್‌ ಪತ್ನಿ ಶಿಲ್ಪಾ
ನಟಿ ಪವಿತ್ರಾ ಜಯರಾಮ್‌ಗೆ ನನ್ನ ಗಂಡ ಆರನೇಯವನು; ಅಕ್ರಮ ಸಂಬಂಧದ ಬಗ್ಗೆ ಮೌನ ಮುರಿದ ಮೃತ ಚಂದ್ರಕಾಂತ್‌ ಪತ್ನಿ ಶಿಲ್ಪಾ

Chandrakanth wife Shilpa: ತ್ರಿನಯನಿ ಧಾರಾವಾಹಿ ನಟಿ ಪವಿತ್ರಾ ಜಯರಾಮ್ ಕಳೆದ ಭಾನುವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಐದು ದಿನಗಳ ಬಳಿಕ ನಟಿಯ ಗೆಳೆಯ ಚಂದ್ರಕಾಂತ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್‌ನ ಮಣಿಕೊಂಡದಲ್ಲಿರುವ ತಮ್ಮ ಮನೆಯಲ್ಲಿ ಚಂದ್ರಕಾಂತ್‌ ನೇಣಿಗೆ ಕೊರಳೊಡ್ಡಿದ್ದಾರೆ. ಪವಿತ್ರಾ ಅವರ ಸಾವಿನಿಂದ ಶಾಕ್‌ಗೆ ಒಳಗಾಗಿದ್ದ ತೆಲುಗು ಕಿರುತೆರೆ ಕ್ಷೇತ್ರ, ಇದೀಗ ಚಂದ್ರಕಾಂತ್‌ ಸಾವಿನಿಂದ ಮತ್ತಷ್ಟು ನೊಂದಿದೆ. ಪವಿತ್ರಾ ಜಯರಾಮ್ ಸಾವನ್ನು ಸಹಿಸಲಾಗದೆ ಚಂದ್ರಕಾಂತ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಮೂರು ದಿನಗಳ ಹಿಂದೆ ಪವಿತ್ರಾ  ಅವರ ಹುಟ್ಟುಹಬ್ಬವಿತ್ತು. ಹುಟ್ಟುಹಬ್ಬದ ನಿಮಿತ್ತ ಪವಿತ್ರಾ ಜಯರಾಮ್ ಅವರು ಎಡಿಟ್ ಮಾಡಿರುವ ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಚಂದು. "ನನಗಾಗಿ ಎರಡು ದಿನ ಕಾಯಿರಿ" ಎಂದು ವಿಡಿಯೋಗೆ ಕ್ಯಾಪ್ಷನ್‌ ನೀಡಿದ್ದರು ಚಂದ್ರಕಾಂತ್‌. ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಚಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪವಿತ್ರಾ ಜತೆಗೆ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಚಂದ್ರಕಾಂತ್‌, ಇನ್ನೇನು ಶೀಘ್ರದಲ್ಲಿ ಅವರ ಜತೆಗೆ ಎರಡನೇ ಮದುವೆ ಆಗುವವರಿದ್ದರು.

ಅಕ್ರಮ ಸಂಬಂಧದ ಬಗ್ಗೆ ಶಿಲ್ಪಾ ಮಾತು

ಇದೀಗ ಪತಿ ಚಂದ್ರಕಾಂತ್‌ ಆತ್ಮಹತ್ಯೆ ಬೆನ್ನಲ್ಲೇ ಅವರ ಪತ್ನಿ ಶಿಲ್ಪಾ ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ಪವಿತ್ರಾ ಮತ್ತು ಚಂದ್ರಕಾಂತ್‌ ನಡುವಿನ ಅಕ್ರಮ ಸಂಬಂಧದ ಬಗ್ಗೆ, ಇಲ್ಲಿಯವರೆಗೂ ಪತಿ ನೀಡಿದ ಕಿರುಕುಳದ ಬಗ್ಗೆಯೂ ಮೌನ ಮುರಿದಿದ್ದಾರೆ ಶಿಲ್ಪಾ. "ಚಂದು ನನ್ನನ್ನು ಹಿಂದೆ ಬಿದ್ದು, ಪ್ರಪೋಸ್‌ ಮಾಡಿದ್ದ. ನಾನೂ ಆ ಪ್ರೀತಿಗೆ ಸಮ್ಮತಿ ನೀಡಿ ಮನೆಯವರ ವಿರೋಧದ ನಡುವೆಯೇ ಮದುವೆಯಾಗಿದ್ದೆವು. ನಮಗೆ ಇಬ್ಬರು ಮಕ್ಕಳಿದ್ದಾರೆ. ತ್ರಿನಯನಿಯ ಧಾರಾವಾಹಿ ಪ್ರಾಜೆಕ್ಟ್ ಬಂದ ಕೂಡಲೇ ಪವಿತ್ರಾ ಜೊತೆ ಚಂದು ಸಂಬಂಧ ಶುರುವಾಯಿತು. ಆಕೆಯ ಎಂಟ್ರಿಯಿಂದ ನನ್ನ ಸಂಸಾರವೂ ಹಾಳಾಗತೊಡಗಿತು" ಎಂದಿದ್ದಾರೆ.

ನಟಿ ಪವಿತ್ರಾ ಜಯರಾಮ್‌ಗೆ ಚಂದು ಆರನೇಯವನು

ಮುಂದುವರಿದು ಮಾತನಾಡಿದ ಶಿಲ್ಪಾ, "ಪವಿತ್ರಾ ಜತೆಗೆ ಸಂಬಂಧವಿಟ್ಟುಕೊಂಡು ನನ್ನನ್ನು ಹಾಗೂ ನನ್ನ ಮಕ್ಕಳನ್ನು ಬಿಟ್ಟು ಹೋಗಿದ್ದಾನೆ. ಐದು ವರ್ಷಗಳಿಂದ ಚಂದು ನನ್ನ ಜೊತೆ ಮಾತನಾಡಿಲ್ಲ. ಪವಿತ್ರಾ ಮೇಲೆ ಅಪಾರ ಪ್ರೀತಿಯನ್ನು ಬೆಳೆಸಿಕೊಂಡರು. ಆದರೆ, ನನ್ನ ಪತಿ ಚಂದ್ರಕಾಂತ್‌ಗೂ ಮುನ್ನ ಪವಿತ್ರಾ ಆರು ಜನರ ಜತೆಗೆ ಸಂಬಂಧ ಹೊಂದಿದ್ದರು. ಅದ್ಯಾವುದನ್ನೂ ಕೇಳದ ಚಂದ್ರು, ಪವಿತ್ರಾಳ ಭ್ರಮೆಗೆ ಬಿದ್ದು ಇದೀಗ ನಮ್ಮೆಲ್ಲರನ್ನು ನಡು ನೀರಿನಲ್ಲಿ ಕೈ ಬಿಟ್ಟು ಹೋಗಿದ್ದಾನೆ.

ಪವಿತ್ರಾ ಸಾವಿನ ಬಳಿಕ ಖಿನ್ನತೆಗೆ ಜಾರಿದ ಚಂದ್ರಕಾಂತ್

"ಪವಿತ್ರಾ ಹಠಾತ್ ಸಾವನ್ನಪ್ಪಿದ್ದರಿಂದ, ಕಳೆದ ನಾಲ್ಕು ದಿನಗಳಿಂದ ಚಂದ್ರು ಖಿನ್ನತೆಗೆ ಒಳಗಾಗಿದ್ದರು. ಮೂರು ದಿನಗಳ ಹಿಂದೆ ತನ್ನ ಕೈಗೆ ಚಾಕು ಚುಚ್ಚಿಕೊಂಡಿದ್ದರು. ಇನ್‌ಸ್ಟಾಗ್ರಾಂನಲ್ಲೂ ನಾನೂ ನಿನ್ನ ಬಳಿ ಬರುತ್ತಿದ್ದೇನೆ ಎಂದು ಪವಿತ್ರಾ ಬಗ್ಗೆ ಬರೆದುಕೊಂಡಿದ್ದರು. ನಿನ್ನೆ ನಾನು ಫೋನ್ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ. ಆದ್ದರಿಂದ ನಾವು ನಮಗೆ ತಿಳಿದಿರುವವರನ್ನು ಅವರ ಫ್ಲಾಟ್‌ಗೆ ಕಳುಹಿಸಿದ್ದೆವು. ಅಲ್ಲಿ ಬಾಗಿಲು ಒಡೆದು ನೋಡಿದಾಗ ಚಂದ್ರಕಾಂತ್‌ ಆತ್ಮಹತ್ಯೆ ಮಾಡಿಕೊಂಡಿದ್ದರು" ಎಂದು ಕಣ್ಣೀರಾದರು ಶಿಲ್ಪಾ. ‌

ಒಳ್ಳೆಯ ಗಂಡನಾಗಲಿಲ್ಲ, ಮಕ್ಕಳಿಗೆ ತಂದೆಯಾಗಲಿಲ್ಲ..

“ಇದಷ್ಟೇ ಅಲ್ಲ ಗಂಡ ಪವಿತ್ರಾ ಹಿಂದೆ ಬಿದ್ದ ಬಳಿಕ, ತವರು ಮನೆಯವರೂ ಮನೆಗೆ ಕರೆದರು. ಆದರೆ ನಾನು ಹೋಗಲಿಲ್ಲ. ಗಂಡನ ಮನೆ ಬಿಟ್ಟು ಬರುವುದಿಲ್ಲ ಎಂದಿದ್ದೆ. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇನೆ. ನನಗೆ ಒಳ್ಳೆಯ ಗಂಡನಾಗದಿದ್ದರೂ ಪರವಾಗಿಲ್ಲ, ಮಕ್ಕಳಿಗೆ ಒಳ್ಳೆಯ ಅಪ್ಪನೂ ಆಗಲಿಲ್ಲ. ಒಂದೇ ಒಂದು ದಿನವೂ ಮಕ್ಕಳಿಗರ ತಂದೆ ಸ್ಥಾನದಲ್ಲಿ ನಿಲ್ಲಲಿಲ್ಲ. ಮಕ್ಕಳ ಶಾಲೆಗೆ ಹೋಗಿ ಸಹಿ ಹಾಕಲಿಲ್ಲ. ಆದರೆ, ಪವಿತ್ರಾ ಮಗಳ ಕಾಲೇಜಿಗೆ ಹೋಗಿ ಪಾಲಕರ ಸ್ಥಾನದಲ್ಲಿ ನಿಂತು ಸಹಿ ಹಾಕಿದ್ದರು ಎಂದು ಶಿಲ್ಪಾ ಹಳೆಯದನ್ನು ನೆನಪಿಸಿಕೊಂಡಿದ್ದಾರೆ.

ಟಿ20 ವರ್ಲ್ಡ್‌ಕಪ್ 2024