Varisu and Thunivu OTT: ಒಟಿಟಿಗೆ ವಿಜಯ್ 'ವಾರಿಸು', ಅಜಿತ್ 'ತುನಿವು'; ಯಾವ ಒಟಿಟಿಯಲ್ಲಿ ಯಾವಾಗ ಸ್ಟ್ರೀಮಿಂಗ್?
ತಮಿಳಿನ 'ವಾರಿಸು' ಮತ್ತು 'ತುನಿವು' ಸಿನಿಮಾಗಳು ಸಂಕ್ರಾಂತಿಗೆ ಬಿಡುಗಡೆ ಆಗಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದ್ದವು. ಈಗ ಈ ಚಿತ್ರಗಳು ಒಟಿಟಿಗೆ ಆಗಮಿಸುತ್ತಿವೆ.
Varisu and Thunivu OTT: ದಳಪತಿ ವಿಜಯ್ ಮತ್ತು ತಲಾ ಅಜಿತ್ ಅಭಿಮಾನಿಗಳಿಗೆ ಜನವರಿ ತಿಂಗಳು ಒಂದು ರೀತಿ ಬಾಡೂಟದಂತಿತ್ತು. ಬಹುನಿರೀಕ್ಷೆ ಮೂಡಿಸಿದ್ದ 'ವಾರಿಸು' ಮತ್ತು 'ತುನಿವು' ಸಿನಿಮಾಗಳು ಸಂಕ್ರಾಂತಿಗೆ ಬಿಡುಗಡೆ ಆಗಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದ್ದವು. ಬಾಕ್ಸ್ ಆಫೀಸ್‌ನಲ್ಲಿಯೂ ಒಳ್ಳೇ ಫಸಲನ್ನೇ ಈ ಸಿನಿಮಾಗಳು ತೆಗೆದಿದ್ದವು. ಇದೀಗ ಈ ಎರಡು ಚಿತ್ರಗಳು ಒಟಿಟಿ ಅಂಗಳಕ್ಕೆ ಆಗಮಿಸಲು ಸಿದ್ಧವಾಗಿವೆ. ಚಿತ್ರಮಂದಿರದಲ್ಲಿ ಈ ಸಿನಿಮಾಗಳನ್ನು ಮಿಸ್ ಮಾಡಿಕೊಂಡವರು, ಒಟಿಟಿಯಲ್ಲಿ ಕಣ್ತುಂಬಿಕೊಳ್ಳಬಹುದು. ಹಾಗಾದರೆ ಯಾವ ಓಟಿಟಿ? ಮುಂದೆ ಓದಿ.
ಈ ಒಟಿಟಿಯಲ್ಲಿ ವಿಜಯ್ ವಾರಿಸು
ಜ. 11ರಂದು ಸಂಕ್ರಾಂತಿ ಪ್ರಯುಕ್ತ ತೆರೆಕಂಡ ವಿಜಯ್ ನಟನೆಯ 'ವಾರಿಸು' ಚಿತ್ರವನ್ನು ತೆಲುಗು ನಿರ್ಮಾಪಕ ದಿಲ್ ರಾಜು ತಮ್ಮ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಅದೇ ರೀತಿ ವಂಶಿ ಪಡಿಪಲ್ಲಿ ಅವರ ನಿರ್ದೇಶನ ಈ ಚಿತ್ರಕ್ಕಿತ್ತು. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ 280 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಶರತ್ ಕುಮಾರ್, ಜಯಸುಧಾ, ಖುಷ್ಬೂ, ಶ್ರೀಕಾಂತ್, ಶಾಮ್, ಯೋಗಿ ಬಾಬು ಮತ್ತು ಸಂಗೀತಾ ಕ್ರಿಶ್ ನಟಿಸಿದ್ದರು. ಪ್ರವೀಣ್ ಕೆಎಲ್ ಅವರ ಸಂಕಲನ, ಥಮನ್ ಸಂಗೀತ ಮತ್ತು ಕಾರ್ತಿಕ್ ಪಳನಿ ಅವರ ಛಾಯಾಗ್ರಹಣ ಈ ಸಿನಿಮಾಕ್ಕಿದೆ.
ಇದೀಗ ಈ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಡಲು ಸಿದ್ಧತೆ ನಡೆಸಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಫೆ. 22ರಂದು ಈ ಚಿತ್ರ ಸ್ಟ್ರೀಮ್ ಆಗಲಿದೆ. ಅಂದರೆ ಬಿಡುಗಡೆ ಆಗಿ ತಿಂಗಳ ಬಳಿಕ ಒಟಿಟಿಗೆ ಬಂದಂತಾಗಲಿದೆ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂಗೆ ಡಬ್ ಆಗಿ ಸ್ಟ್ರೀಮಿಂಗ್ ಆರಂಭಿಸಲಿದೆ.
'ತುನಿವು' ಸಿನಿಮಾ ಒಟಿಟಿ ಅಪ್‌ಡೇಟ್...
ತಲಾ ಅಜಿತ್ ನಟನೆಯ 'ತುನಿವು' ಸಿನಿಮಾ ಸಹ ದೊಡ್ಡ ಮಟ್ಟದಲ್ಲಿ ಹೈಪ್ ಸೃಷ್ಟಿಸಿತ್ತು. ಬಾಕ್ಸ್ ಆಫೀಸ್‌ನಲ್ಲಿ 180 ಕೋಟಿ ರೂ. ಗಳಿಕೆ ಮಾಡಿದ ಈ ಚಿತ್ರವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದರು. ಬ್ಯಾಂಕ್ ದರೋಡೆ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ಬ್ಯಾಂಕ್ ದರೋಡೆಕೋರನಾಗಿ ಅಜಿತ್ ಕಾಣಿಸಿದರೆ, ಮಂಜು ವಾರಿಯರ್, ಸಮುದ್ರಕಣಿ ಸೇರಿ ಹಲವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದರು.
ಇದೀಗ 'ತುನಿವು' ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಡಲು ಸಿದ್ಧತೆ ನಡೆಸಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಫೆ. ೮ರಂದು ಈ ಚಿತ್ರ ಸ್ಟ್ರೀಮ್ ಆಗಲಿದೆ. ಬಿಡುಗಡೆ ಆಗಿ ತಿಂಗಳ ಬಳಿಕ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂಗೆ ಡಬ್ ಆಗಿ ರಿಲೀಸ್ ಆಗಲಿದೆ.
ಈ ಸಿನಿಮಾ ಸುದ್ದಿಯನ್ನೂ ಓದಿ..
Darshan on Sudeep: ‘ಭಿನ್ನಾಭಿಪ್ರಾಯ ಬಿಟ್ಟು ಸುದೀಪ್ ಮತ್ತೆ ನೀವು ಒಂದಾಗಬೇಕು!’; ಮುಖ್ಯಮಂತ್ರಿ ಚಂದ್ರು ಮಾತಿಗೆ ನಕ್ಕ ದರ್ಶನ್!
Darshan on Sudeep: ಹೊಸಪೇಟೆಯಲ್ಲಿ ‘ಕ್ರಾಂತಿ’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಘಟನೆಯ ಬಳಿಕ ಇಡೀ ಸ್ಯಾಂಡಲ್‌ವುಡ್ ಅವರ ಪರವಾಗಿ ನಿಂತಿತ್ತು. ಸಿನಿಮಾ ಸ್ನೇಹಿತರು, ಕಲಾವಿದರು ಒಟ್ಟಾಗಿ ನಾವಿದ್ದೇವೆ ಎಂದು ಹೇಳಿ ದರ್ಶನ್‌ಗೆ ಸಾಥ್ ನೀಡಿದ್ದರು. ಇದೆಲ್ಲದರ ನಡುವೆ ಅಭಿಮಾನಿಗಳ ಖುಷಿ ಇಮ್ಮಡಿಯಾಗುವಂತೆ ಮಾಡಿದ್ದು ನಟ ಸುದೀಪ್, ದರ್ಶನ್‌ಗೆ ಬೆಂಬಲಕ್ಕೆ ನಿಂತು ಬರೆದ ಸಾಲುಗಳು. ಅದಾದ ಮೇಲೆ ಸುದೀಪ್ ಮಾತಿಗೆ ದರ್ಶನ್ ಸಹ ಪ್ರತಿಕ್ರಿಯೆ ನೀಡಿ ಧನ್ಯವಾದ ಅರ್ಪಿಸಿದ್ದರು. ಈ ಎರಡು ಟ್ವಿಟ್‌ಗಳು ದರ್ಶನ್ ಮತ್ತು ಸುದೀಪ್ ಅಭಿಮಾನಿಗಳನ್ನು ಒಂದು ಮಾಡಿತ್ತು. ಸಂಭ್ರಮಕ್ಕೂ ಹಾಲೆರೆದಿತ್ತು. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ