Saif Ali Khan: ಸೈಪ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕನ ನಡೆಗೆ ಪ್ರಶಂಸೆ; ಸಿಕ್ಕಿದೆ ಉಡುಗೊರೆ
ಕನ್ನಡ ಸುದ್ದಿ  /  ಮನರಂಜನೆ  /  Saif Ali Khan: ಸೈಪ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕನ ನಡೆಗೆ ಪ್ರಶಂಸೆ; ಸಿಕ್ಕಿದೆ ಉಡುಗೊರೆ

Saif Ali Khan: ಸೈಪ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕನ ನಡೆಗೆ ಪ್ರಶಂಸೆ; ಸಿಕ್ಕಿದೆ ಉಡುಗೊರೆ

Saif Ali Khan: ಸೈಪ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕ ಭಜನ್ ಸಿಂಗ್ ರಾಣಾಗೆ ಉಡುಗೊರೆ ನೀಡಲಾಗಿದೆ. ಅಂದು ರಾತ್ರಿ ಆ ಸಮಯಕ್ಕೆ ಸ್ವಂದಿಸಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಸೈಪ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕನಿಗೆ ಉಡುಗೊರೆ
ಸೈಪ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕನಿಗೆ ಉಡುಗೊರೆ

ನಟ ಸೈಫ್ ಅಲಿ ಖಾನ್ ಇರಿತ ಪ್ರಕರಣದ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಆದರೆ ಅಂದು ರಾತ್ರಿ ಅವರನ್ನು ಆಸ್ಪತ್ರೆಗೆ ಸೇರಿಸಿದ ಆಟೋ ರಿಕ್ಷಾ ಚಾಲಕ ಭಜನ್ ಸಿಂಗ್ ರಾಣಾ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ. ನಟ ಸೈಫ್ ಅಲಿ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ಸಾಗಿಸಿದ ಆಟೋರಿಕ್ಷಾ ಚಾಲಕನಿಗೆ ಉಡುಗೊರೆ ನೀಡಲಾಗಿದೆ ಎಂದು ವರದಿಯಾಗಿದೆ. ಆಟೋ ರಿಕ್ಷಾ ಚಾಲಕ ಭಜನ್ ಸಿಂಗ್ ರಾಣಾ, ಸೈಫ್ ಅಲಿ ಖಾನ್ ಕುತ್ತಿಗೆಯಿಂದ ರಕ್ತಸ್ರಾವವಾಗುತ್ತಿತ್ತು ಮತ್ತು ಅವರ ಬಿಳಿ ಕುರ್ತಾ ಕೆಂಪು ಬಣ್ಣಕ್ಕೆ ತಿರುಗಿತ್ತು ಎಂದು ಹೇಳಿದ್ದರು. ಆದರೆ ನಟ ಹೆದರಿದಂತೆ ಕಾಣುತ್ತಿರಲಿಲ್ಲ ಎಂದಿದ್ದರು. ಆದರೆ ಆ ವ್ಯಕ್ತಿಯನ್ನು ನೋಡಿ ತಕ್ಷಣಕ್ಕೆ ಆಸ್ಪತ್ರೆಗೆ ಸೇರಿಸುವುದು ಮಾತ್ರ ತನ್ನ ಗುರಿಯಾಗಿತ್ತು ಎಂದಿದ್ದ ಆಟೋ ರಿಕ್ಷಾ ಚಾಲಕ ಭಜನ್ ಸಿಂಗ್ ರಾಣಾ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

ಸಿಕ್ಕ ಉಡುಗೊರೆ ಏನು?

ಗಾಯಗೊಂಡ ನಟನನ್ನು ಗುರುತಿಸದಿದ್ದರೂ ಯಾರೋ ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದಾನೆ ಎಂದು ಅರ್ಥ ಮಾಡಿಕೊಂಡು ಅವರು ತಕ್ಷಣಕ್ಕೆ ಆಸ್ಪತ್ರೆವರೆಗೆ ಕರೆದುಕೊಂಡು ಹೋಗಿದ್ದಾರೆ. ಅವರ ಈ ಕಾರ್ಯವನ್ನು ಮೆಚ್ಚಿ ಸಾಮಾಜಿಕ ಮಾಧ್ಯಮದ ಪ್ರಭಾವಿ ಫೈಜಾನ್ ಅನ್ಸಾ 11 ಸಾವಿರ ರೂ ಚೆಕ್ ನೀಡಿ ಗೌರವಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಸೈಫ್ ಅಲಿ ಖಾನ್ ಕುಟುಂಬವೂ ಆಟೋ ರಿಕ್ಷಾ ಚಾಲಕನನ್ನು ಗೌರವಿಸಬೇಕು ಎಂದು ಸಾರ್ವಜನಿಕ ವಲಯ ಅ

ಅಂದು ರಾತ್ರಿ ಸೈಫ್ ಅಲಿ ಖಾನ್ ನಿವಾಸದಿಂದ ಆಸ್ಪತ್ರೆಗೆ ತಲುಪಲು ಸುಮಾರು 8-10 ನಿಮಿಷಗಳ ಬೇಕಾಗಿತ್ತು ಎಂದಿದ್ದಾರೆ. “ನಾವು ಆಸ್ಪತ್ರೆಯ ಗೇಟ್ ತಲುಪಿದಾಗ ಅವರು ಸ್ಟ್ರೆಚರ್ ತರಲು ಸಿಬ್ಬಂದಿಯನ್ನು ಕರೆದರು, ಅವರು ಸೈಫ್ ಅಲಿ ಖಾನ್ ಎಂದು ನಂತರ ತಿಳಿಯಿತು” ಎಂದು ಆಟೋ ಚಾಲಕ ಹೇಳಿದ್ದಾರೆ. ಆಟೋ ರಿಕ್ಷಾ ಚಾಲಕ ಭಜನ್ ಸಿಂಗ್ ರಾಣಾ, ಸೈಫ್ ಅಲಿ ಖಾನ್ ಕುತ್ತಿಗೆಯಿಂದ ರಕ್ತಸ್ರಾವವಾಗುತ್ತಿತ್ತು ಮತ್ತು ಅವರ ಬಿಳಿ ಕುರ್ತಾ ಕೆಂಪು ಬಣ್ಣಕ್ಕೆ ತಿರುಗಿತ್ತು ಎಂಬುದನ್ನು ಅಂದೇ ವಿವರಿಸಿದ್ದರು.

ಆಟೋ ಚಾಲಕ ಹೇಳಿದ್ದೇನು?

"ನಾವು ಆಸ್ಪತ್ರೆಯನ್ನು ತಲುಪಿದಾಗ, ಅವರು ಗೇಟ್‌ನಲ್ಲಿರುವ ಕಾವಲುಗಾರನನ್ನು ಕರೆದು ಅವರಿಗೆ ಹೇಳಿದರು: ದಯವಿಟ್ಟು ಸ್ಟ್ರೆಚರ್ ತನ್ನಿ. ನಾನು ಸೈಫ್ ಅಲಿ ಖಾನ್," ಎಂದು ಆಗಲೇ ನನಗೆ ಗೊತ್ತಾಗಿದ್ದು" ಎಂದು ಆಟೋ ಚಾಲಕ ವರದಿಗಾರರಿಗೆ ಹೇಳಿದ್ದರು. ಆದರೆ ಅವರ ಕಾರ್ಯವನ್ನು ಮೆಚ್ಚಿ ಸನ್ಮಾನಿಸಲಾಗಿದೆ. ಯಾರಾದರೂ ಅಪಾಯದಲ್ಲಿದ್ದರೆ ಅಥವಾ ತಕ್ಷಣ ಅಗತ್ಯ ಹೊಂದಿದ್ದರೆ ಅಂತವರಿಗೆ ಸರಿಯಾದ ಸಮಯಕ್ಕೆ ಸೇವೆ ನೀಡುವ ಮನೊಭಾವನೆ ಬೇಕು. ಅದನ್ನು ಈ ಚಾಲಕ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ಗೌರವಿಸಲಾಗಿದೆ.

ನಟನನ್ನು ಆಸ್ಪತ್ರೆಗೆ ಡ್ರಾಪ್ ಮಾಡಿದ ನಂತರ ಅವರು ಯಾವುದೇ ಮೊತ್ತವನ್ನೂ ಪಡೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ. ಸಾರ್ವಜನಿಕ ವಲಯದಿಂದ ಅವರ ನಡೆಗೆ ಪ್ರಶಂಸೆ ವ್ಯಕ್ತವಾಗಿದೆ.

ಸೈಫ್ ಅಲಿ ಖಾನ್‌ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಅವರ ಆರೋಗ್ಯದಲ್ಲಿ ಸುಧಾರಣೆ ಇದೆ. ಸಾಕಷ್ಟು ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಆಸಕ್ತರಾಗಿದ್ದರು. ನಟ ಬೇಗ ಗುಣಮುಖರಾಗಲಿ ಎಂದು ಸಾಕಷ್ಟು ಜನ ಕೇಳಿಕೊಂಡಿದ್ದರು. ಅವರು ಆಸ್ಪತ್ರೆ ಆವರಣದಲ್ಲಿ ನಡೆದುಕೊಂಡು ಬಂದು ಕಾರ್ ಹತ್ತಿರುವ ವಿಡಿಯೋ ಬಿಡುಗಡೆ ಆದಾಗಿನಿಂದ ನಾನಾ ರೀತಿಯ ಕಾಮೆಂಟ್‌ಗಳು ಹರಿದಾಡುತ್ತಿದೆ.

Whats_app_banner