ಕನ್ನಡ ಸುದ್ದಿ  /  Entertainment  /  The Elephant Whisperers Won 95th Academy Award

Oscar 2023: ಭಾರತೀಯ ಚಿತ್ರರಂಗಕ್ಕೆ ಡಬಲ್‌ ಧಮಾಕ... 'ದಿ ಎಲಿಫೆಂಟ್​ ವಿಸ್ಪರರ್ಸ್' ಸಾಕ್ಷ್ಯಚಿತ್ರಕ್ಕೆ ಒಲಿದ ಆಸ್ಕರ್‌ !

ಈ ಸಾಕ್ಷ್ಯಚಿತ್ರ ಬಹಳ ಎಮೋಷನಲ್‌ ಆಗಿದ್ದು ನೋಡುಗರನ್ನು ಸೆಳೆಯುತ್ತಿದೆ. ಅಷ್ಟೇ ಅಲ್ಲ, ಈ ಸಾಕ್ಷ್ಯಚಿತ್ರದಲ್ಲಿ ಕಾಡಿನ ಸೌಂದರ್ಯವನ್ನು ಕೂಡಾ ತೋರಿಸಲಾಗಿದೆ. ಈ ಡಾಕ್ಯುಮೆಂಟರಿಯನ್ನು ಸಿಖ್ಯ ಎಂಟರ್ನೈನ್ಮೆಂಟ್‌ ಬ್ಯಾನರ್‌ ಅಡಿ ಡೊಗ್ಲಾಸ್ ಬ್ಲಶ್ , ಕಾರ್ತಿಕಿ ಗೊನ್ಸಾಲ್ವಿಸ್ , ಗುನೀತ್ ಮೊಂಗಾ ಹಾಗೂ ಅಚಿನ್ ಜೈನ್ ನಿರ್ಮಿಸಿದ್ದು ಕಾರ್ತಿಕಿ ಗೊನ್ಸಾಲ್ವಿಸ್ ನಿರ್ದೇಶಿಸಿದ್ದಾರೆ.

ಕಾರ್ತಿಕಿ ಗೊನ್ಸಾಲ್ವಿಸ್ ನಿರ್ದೇಶನದ 'ದಿ ಎಲಿಫೆಂಟ್​ ವಿಸ್ಪರರ್ಸ್​'ಗೆ ಆಸ್ಕರ್
ಕಾರ್ತಿಕಿ ಗೊನ್ಸಾಲ್ವಿಸ್ ನಿರ್ದೇಶನದ 'ದಿ ಎಲಿಫೆಂಟ್​ ವಿಸ್ಪರರ್ಸ್​'ಗೆ ಆಸ್ಕರ್ (PC: Twitter)

ಈ ಬಾರಿ ಭಾರತೀಯ ಚಿತ್ರರಂಗದ ಪಾಲಿಗೆ ಡಬಲ್‌ ಧಮಾಕಾ. 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಒಂದೆಡೆ 'ಆರ್‌ಆರ್‌ಆರ್‌' ಚಿತ್ರದ ನಾಟು ನಾಟು... ಹಾಡಿಗೆ ಬೆಸ್ಟ್​ ಒರಿಜಿನಲ್​ ಸಾಂಗ್ ವಿಭಾಗದಲ್ಲಿ ಆಸ್ಕರ್ ಲಭಿಸಿದೆ. ಇದರ ಜೊತೆಗೆ 'ದಿ ಎಲಿಫೆಂಟ್​ ವಿಸ್ಪರರ್ಸ್' (The Elephant Whisperers) ಎಂಬ ಸಾಕ್ಷ್ಯಚಿತ್ರಕ್ಕೆ ಕೂಡಾ ಆಸ್ಕರ್‌ ಒಲಿದು ಬಂದಿದೆ.

'ದಿ ಎಲಿಫೆಂಟ್​ ವಿಸ್ಪರರ್ಸ್​' ಸಾಕ್ಷ್ಯಚಿತ್ರಕ್ಕೆ ಬೆಸ್ಟ್​ ಡಾಕ್ಯುಮೆಂಟರಿ ಶಾರ್ಟ್​ ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಸಾಕ್ಷ್ಯಚಿತ್ರ ಕಳೆದ ವರ್ಷ ಡಿಸೆಂಬರ್‌ 8 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಕಂಡಿತ್ತು. ಆನೆ ಹಾಗೂ ಮನುಷ್ಯರ ನಡುವಿನ ಬಾಂಧವ್ಯವನ್ನು ಈ ಡಾಕ್ಯುಮೆಂಟರಿಯಲ್ಲಿ ಹೇಳಲಾಗಿದೆ. ತಮಿಳುನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಡಾಕ್ಯುಮೆಂಟರಿ ಚಿತ್ರೀಕರಣ ಮಾಡಲಾಗಿದೆ. ಇದೇ ಸ್ಥಳದಲ್ಲಿರುವ ಬೊಮ್ಮನ್‌ ಮತ್ತು ಬೆಳ್ಳಿ ದಂಪತಿ ಆನೆಯೊಂದರ ಆರೈಕೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ಧಾರೆ. ಅನಾಥವಾಗಿ ಸಿಕ್ಕ ಮರಿ ಆನೆಯನ್ನು ತಮ್ಮೊಂದಿಗೆ ಕರೆ ತಂದು ಅದಕ್ಕೆ ರಘು ಎಂದು ಹೆಸರಿಟ್ಟು ತಮ್ಮ ಸ್ವಂತ ಮಗುವಿನಂತೆ ಪೋಷಿಸುತ್ತಿದ್ದಾರೆ. ಪ್ರಾಣಿಗಳ ರಕ್ಷಣೆ ಕುರಿತಾದ ಸಂದೇಶ ಹೊಂದಿರುವ ಈ ಸಾಕ್ಷ್ಯಚಿತ್ರ ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿದೆ.

ಈ ಸಾಕ್ಷ್ಯಚಿತ್ರ ಬಹಳ ಎಮೋಷನಲ್‌ ಆಗಿದ್ದು ನೋಡುಗರನ್ನು ಸೆಳೆಯುತ್ತಿದೆ. ಅಷ್ಟೇ ಅಲ್ಲ, ಈ ಸಾಕ್ಷ್ಯಚಿತ್ರದಲ್ಲಿ ಕಾಡಿನ ಸೌಂದರ್ಯವನ್ನು ಕೂಡಾ ತೋರಿಸಲಾಗಿದೆ. ಈ ಡಾಕ್ಯುಮೆಂಟರಿಯನ್ನು ಸಿಖ್ಯ ಎಂಟರ್ನೈನ್ಮೆಂಟ್‌ ಬ್ಯಾನರ್‌ ಅಡಿ ಡೊಗ್ಲಾಸ್ ಬ್ಲಶ್ , ಕಾರ್ತಿಕಿ ಗೊನ್ಸಾಲ್ವಿಸ್ , ಗುನೀತ್ ಮೊಂಗಾ ಹಾಗೂ ಅಚಿನ್ ಜೈನ್ ನಿರ್ಮಿಸಿದ್ದು ಕಾರ್ತಿಕಿ ಗೊನ್ಸಾಲ್ವಿಸ್ ನಿರ್ದೇಶಿಸಿದ್ದಾರೆ. ಪ್ರಿಸ್ಸಿಲ್ಲಾ ಗೊನ್ಸಾಲ್ವಿಸ್ ಕಥೆ ಬರೆದಿದ್ದಾರೆ.

'ದಿ ಎಲಿಫೆಂಟ್​ ವಿಸ್ಪರರ್ಸ್​' ಜೊತೆಗೆ ಈ ಬಾರಿ 'ಹೌ ಡು ಯು ಮೆಷರ್‌ ಎ ಈಯರ್? ', 'ಹಾಲ್‌ ಔಟ್ ', 'ದಿ ಮಾರ್ಥಾ ಮಿಚೆಲ್ ಎಫೆಕ್ಟ್ ', 'ಸ್ಟ್ರೇಂಜರ್ ಅಟ್ ದಿ ಗೇಟ್ ' ಸಾಕ್ಷ್ಯಚಿತ್ರಗಳು ಬೆಸ್ಟ್​ ಡಾಕ್ಯುಮೆಂಟರಿ ಶಾರ್ಟ್​ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದವರು. ಆದರೆ 'ದಿ ಎಲಿಫೆಂಟ್​ ವಿಸ್ಪರರ್ಸ್​' ಇವೆಲ್ಲವನ್ನು ಹಿಂದಿಕ್ಕಿ ಅಕಾಡೆಮಿ ಅವಾರ್ಡ್‌ ಗಳಿಸುವಲ್ಲಿ ಸಫಲವಾಗಿದೆ. ಆರ್‌ಆರ್‌ಆರ್‌ ಸಿನಿಮಾ ಜೊತೆಗೆ ಭಾರತೀಯ ಸಾಕ್ಷ್ಯಚಿತ್ರಕ್ಕೆ ಆಸ್ಕರ್‌ ದೊರೆತಿರುವುದು ಭಾರತೀಯರ ದುಪಟ್ಟು ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಸಿನಿಪ್ರಿಯರು ಹಾಗೂ ಗಣ್ಯರು 'ದಿ ಎಲಿಫೆಂಟ್​ ವಿಸ್ಪರರ್ಸ್​' ಹಾಗೂ 'ಆರ್‌ಆರ್‌ಆರ್‌' ತಂಡಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಆಸ್ಕರ್‌ ಕುರಿತಾದ ಮತ್ತಷ್ಟು ಸುದ್ದಿಗಳು ಇಲ್ಲಿವೆ

ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಗರಿಮೆ.. ಇಂಗ್ಲೀಷ್‌ ಹಾಡುಗಳನ್ನು ಹಿಂದಿಕ್ಕಿ ಆಸ್ಕರ್‌ ದೋಚಿದ ನಾಟು ನಾಟು!

ಅಂತೂ ಭಾರತೀಯ ಚಿತ್ರರಂಗದ ಪಾಲಿಗೆ ಮತ್ತೊಂದು ಸುವರ್ಣ ದಿನ ಎದುರಾಗಿದೆ. ಎಂ. ಕೀರವಾಣಿ ಸಂಗೀತ ನಿರ್ದೇಶನದ 'ಆರ್‌ಆರ್‌ಆರ್‌' ಚಿತ್ರದ ನಾಟು ನಾಟು... ಹಾಡು ಆಸ್ಕರ್‌ ಬಾಚಿಕೊಂಡು ಇತಿಹಾಸ ಸೃಷ್ಟಿಸಿದೆ. ಹಾಲಿವುಡ್‌ ಸಿನಿಮಾ ಹಾಡುಗಳನ್ನೂ ಹಿಂದಿಕ್ಕಿ ಪ್ರಶಸ್ತಿ ಪಡೆದಿರುವುದು ಭಾರತೀಯರಿಗೆ ಖುಷಿ ನೀಡಿದೆ. ಪೂರ್ತಿ ಮಾಹಿತಿಗೆ ಈ ಲಿಂಕ್‌ ಒತ್ತಿ.

2023ರ ಆಸ್ಕರ್‌ನ ಕುತೂಹಲಕಾರಿ ಅಂಶಗಳಿವು? ಆಸ್ಕರ್‌ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲಿದೆಯೇ ಆರ್‌ಆರ್‌ಆರ್‌ ಜೋಡಿ?

ಅಕಾಡೆಮಿ ಪ್ರಶಸ್ತಿ ಎಂದರೆ ಕಾತರ, ಕುತೂಹಲ. ಆ ರಾತ್ರಿಯ ಪ್ರಶಸ್ತಿ ಪ್ರದಾನ ಕ್ಷಣಕ್ಕಾಗಿ ಬಹಳಷ್ಟು ಮಂದಿ ಬಹಳಷ್ಟು ದಿನಗಳಿಂದ ಕಾಯುತ್ತಿರುತ್ತಾರೆ, ಇದಕ್ಕೆ 2023ರ ಆಸ್ಕರ್‌ ಕೂಡ ಹೊರತಾಗಿಲ್ಲ. ದಾಖಲೆಗಳನ್ನು ಮುರಿಯುವ ಗೆಲುವುಗಳಿಂದ ಹಿಡಿದು ಅನಿರೀಕ್ಷಿತ ಪ್ರದರ್ಶನಗಳವರೆಗೆ 95ನೇ ಅಕಾಡೆಮಿ ಪ್ರಶಸ್ತಿ ಅವಿಸ್ಮರಣೀಯವಾಗಿ ಉಳಿಯಲಿದೆ. ಹಾಗಾದರೆ ಈ ಬಾರಿಯ ಆಸ್ಕರ್‌ ಷೋನಲ್ಲಿ ನೀವು ನೋಡಬಹುದಾದ 9 ಪ್ರಮುಖ ಅಂಶಗಳು ಇಲ್ಲಿವೆ. ಸ್ಟೋರಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

IPL_Entry_Point