GOAT OTT: ದಳಪತಿ ವಿಜಯ್‌ ಫ್ಯಾನ್ಸ್‌ ಫುಲ್ ಖುಷ್‌; ಹಲವು ದಿನಗಳಿಂದ ಕಾದಿದ್ದ 'ದಿ ಗೋಟ್' ಓಟಿಟಿ ಸ್ಟ್ರೀಮಿಂಗ್ ಡೇಟ್‌ ಫಿಕ್ಸ್‌-the long awaited the goat ott streaming date is fixed will release in netflix on october 3 smk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Goat Ott: ದಳಪತಿ ವಿಜಯ್‌ ಫ್ಯಾನ್ಸ್‌ ಫುಲ್ ಖುಷ್‌; ಹಲವು ದಿನಗಳಿಂದ ಕಾದಿದ್ದ 'ದಿ ಗೋಟ್' ಓಟಿಟಿ ಸ್ಟ್ರೀಮಿಂಗ್ ಡೇಟ್‌ ಫಿಕ್ಸ್‌

GOAT OTT: ದಳಪತಿ ವಿಜಯ್‌ ಫ್ಯಾನ್ಸ್‌ ಫುಲ್ ಖುಷ್‌; ಹಲವು ದಿನಗಳಿಂದ ಕಾದಿದ್ದ 'ದಿ ಗೋಟ್' ಓಟಿಟಿ ಸ್ಟ್ರೀಮಿಂಗ್ ಡೇಟ್‌ ಫಿಕ್ಸ್‌

ಥಿಯೇಟರ್‌ಗಳಿಗೆ ಹೋಲಿಸಿದರೆ The Goat ಚಲನಚಿತ್ರವು Netflix OTTಯಲ್ಲಿ ಹೆಚ್ಚಿನ ವೀಕ್ಷಣೆ ಹಾಗೂ ಲಾಭವನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಎರಡೇ ದಿನಗಳಲ್ಲಿ ನೀವು ನಿಮ್ಮ ಮನೆಯಲ್ಲಿ ಈ ಚಿತ್ರ ವೀಕ್ಷಣೆ ಮಾಡಬಹುದಾಗಿದೆ. 'ದಿ ಗೋಟ್' ಓಟಿಟಿ ಸ್ಟ್ರೀಮಿಂಗ್ ಡೇಟ್‌ ಫಿಕ್ಸ್‌ ಆಗಿದೆ.

ಹಲವು ದಿನಗಳಿಂದ ಕಾದಿದ್ದ 'ದಿ ಗೋಟ್' ಓಟಿಟಿ ಸ್ಟ್ರೀಮಿಂಗ್ ಡೇಟ್‌ ಫಿಕ್ಸ್‌
ಹಲವು ದಿನಗಳಿಂದ ಕಾದಿದ್ದ 'ದಿ ಗೋಟ್' ಓಟಿಟಿ ಸ್ಟ್ರೀಮಿಂಗ್ ಡೇಟ್‌ ಫಿಕ್ಸ್‌

'ದಿ ಗೋಟ್' ಚಿತ್ರ ಈಗ ಒಟಿಟಿಯಲ್ಲಿ ಬರಲು ಸಿದ್ಧವಾಗಿದೆ. ತಮಿಳು ಸ್ಟಾರ್ ಹೀರೋ ದಳಪತಿ ವಿಜಯ್ ಅಭಿನಯದ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (The GOAT) ಭಾರೀ ಪ್ರಚಾರದ ನಡುವೆ ತೆರೆಕಂಡಿದೆ. ಭಾರೀ ನಿರೀಕ್ಷೆಗಳೊಂದಿಗೆ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ನೋಡಲು ಜನರು ಕಾಯುತ್ತಿದ್ದರು. ಅದರಂತೆ ಸೆಪ್ಟೆಂಬರ್ 2 ರಂದು ಈ ಚಿತ್ರ ಬಿಡುಗಡೆಯಾಗಿತ್ತು. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರವನ್ನು ನೋಡಿ ಜನ ಇಷ್ಟಪಟ್ಟಿದ್ದಾರೆ. 'ದಿ ಗೋಟ್' ಚಿತ್ರ ಯಾವಾಗ ಓಟಿಟಿಗೆ ಬರಬಹುದು ಎಂದು ಜನರು ಕಾದಿದ್ದರು. ಅದರಂತೆ ದಳಪತಿ ವಿಜಯ್ ಫ್ಯಾನ್ಸ್‌ ಈಗ ಮತ್ತೊಮ್ಮೆ ತಮ್ಮ ಮನೆಯಲ್ಲೇ ಈ ಚಿತ್ರವನ್ನು ಓಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.

ಒಟಿಟಿಯಲ್ಲಿ 'ದಿ ಗೋಟ್' ಸ್ಟ್ರೀಮಿಂಗ್‌ ಯಾವಾಗ?

ಅಧಿಕೃತ ಸ್ಟ್ರೀಮಿಂಗ್ ದಿನಾಂಕವನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 3 ರಂದು Netflix OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಂದರೆ ಇನ್ನೆರಡು ದಿನಗಳಲ್ಲಿ ಚಿತ್ರ ಒಟಿಟಿ ಪ್ರವೇಶಿಸಲಿದೆ. ಗೋಟ್ ಅಕ್ಟೋಬರ್ 3 ರಂದು ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಈ 5 ಭಾಷೆಗಳಲ್ಲಿ ರಿಲೀಸ್ ಆಗ್ತಿದೆ. ಏಕಕಾಲದಲ್ಲಿ ಎಲ್ಲಾ 5 ಭಾಷೆಗಳಲ್ಲಿ ಒಟಿಟಿಗೆ ಬರುತ್ತಿದೆ.

ಥಿಯೇಟರ್‌ಗಳಿಗೆ ಹೋಲಿಸಿದರೆ The Goat ಚಲನಚಿತ್ರವು Netflix OTTಯಲ್ಲಿ ಹೆಚ್ಚಿನ ವೀಕ್ಷಣೆ ಹಾಗೂ ಲಾಭವನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. OTTಗೆ ಈ ಸಿನಿಮಾವನ್ನು ಸೇರಿಸುವಾಗ ಇನ್ನು ಕೆಲವು ದೃಶ್ಯಗಳನ್ನು ಸೇರಿಸುತ್ತಾರೆ ಎಂದು ಹೇಳಲಾಗುತ್ತದೆ. ಈಗಾಗಲೇ ಚಿತ್ರದ ನಿರ್ದೇಶಕ ವೆಂಕಟ್ ಪ್ರಭು ಸುಳಿವು ನೀಡಿದ್ದಾರೆ.

125 ಕೋಟಿ ರೂ.ಗಳ ಡೀಲ್ ನಡೆದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಚಿತ್ರವು ಥಿಯೇಟ್ರಿಕಲ್ ಬಿಡುಗಡೆಯಾದ ಸುಮಾರು ಒಂದು ತಿಂಗಳ ನಂತರ ನೆಟ್‌ಫ್ಲಿಕ್ಸ್ OTT ನಲ್ಲಿ ಸ್ಟ್ರೀಮ್ ಆಗಲಿದೆ.

ದ್ವಿಪಾತ್ರದಲ್ಲಿ ನಟನೆ

ಈ ಚಿತ್ರದಲ್ಲಿ ದಳಪತಿ ವಿಜಯ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ವೆಂಕಟ್ ಪಾತ್ರಕ್ಕೆ ಡೀಜಿಂಗ್ ತಂತ್ರಜ್ಞಾನ ಬಳಸಿದ್ದಾರೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ಅದರಲ್ಲಿಯೂ ಈ ಸಿನಿಮಾ ನಿರೀಕ್ಷೆಯನ್ನು ಮುಟ್ಟಲಿಲ್ಲ ಎಂಬ ಮಾತೇ ಹೆಚ್ಚಾಗಿ ಕೇಳಿ ಬರುತ್ತಿದೆ. ಈ ಚಿತ್ರದಲ್ಲಿ ವಿಜಯ್‌ಗೆ ನಾಯಕಿಯಾಗಿ ಮೀನಾಕ್ಷಿ ಚೌಧರಿ ನಟಿಸಿದ್ದರು. ಪ್ರಶಾಂತ್, ಪ್ರಭುದೇವ, ಮೋಹನ್, ಜಯರಾಮ್, ಅಜ್ಮಲ್ ಅಮೀರ್, ವೈಭವ್ ಮತ್ತು ಯೋಗಿಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ಹಿರಿಯ ನಾಯಕಿ ತ್ರಿಷಾ ವಿಶೇಷ ಹಾಡೊಂದನ್ನು ಹಾಡಿದ್ದಾರೆ. ಈ ಚಿತ್ರವನ್ನು ಎಜಿಎಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ನಿರ್ಮಿಸಿದೆ. ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜನೆ ಮಾಡಿದ್ದಾರೆ. ನೀವೂ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ನೋಡಬಹುದಾಗಿದೆ.

mysore-dasara_Entry_Point