ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಈಗ ಶುರು; ಕಿಚ್ಚನ ಪ್ರಶ್ನೆಗೆ ಉತ್ತರ ರೂಪದಲ್ಲಿ ಹೊರಬಿತ್ತು ಸ್ಪರ್ಧಿಗಳ ನಿಜವಾದ ಭಾವನೆ
ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಈಗ ಶುರುವಾಗಿದೆ. ಇಷ್ಟು ದಿನ ತಮ್ಮ ಮನಸಿನಲ್ಲಿ ಮುಚ್ಚಿಟ್ಟುಕೊಂಡಿದ್ದ ಒಂದೊಂದೇ ಸತ್ಯಗಳು ಈಗ ಹೊರಬರುತ್ತಿದೆ. ಈ ವಾರದ ಬಿಗ್ ಬಾಸ್ ಸೂಪರ್ ಸಂಡೆ ವಿತ್ ಬಾದ್‌ಷಾದಲ್ಲಿ ಕೇಳಿದ ಪ್ರಶ್ನೆಗಳಿಗೆ ಸ್ಪರ್ಧಿಗಳು ಖಡಕ್ ಉತ್ತರ ನೀಡಿದ್ದಾರೆ.
ಈ ವಾರದ ಬಿಗ್ ಬಾಸ್ ಸೂಪರ್ ಸಂಡೆ ವಿತ್ ಬಾದ್‌ಷಾದಲ್ಲಿ ಮಾತಿನ ಕಾವು ಹೆಚ್ಚಾಗಿದೆ. ಈ ಮನೆಯಲ್ಲಿ ಯಾರು ಸ್ಪರ್ಧಿಗಳು ಹಾಗೂ ಯಾರು ಇನ್ನೂ ಈ ಮನೆಗೆ ಹೊಸಬರಂತೆ ಅಥವಾ ಅತಿಥಿಗಳಂತೆ ಇದ್ದಾರೆ ಎಂಬ ಪ್ರಶ್ನೆಯನ್ನು ಎತ್ತಲಾಯಿತು. ಆ ಪ್ರತಿಯೊಬ್ಬರೂ ಅದಕ್ಕೆ ಉತ್ತರ ನೀಡಬೇಕಾಗಿತ್ತು. ಈ ಸಂದರ್ಭದಲ್ಲಿ ಯಾರ ಹೆಸರನ್ನು ಸೂಚಿಸಿದರೂ ಅದು ತಪ್ಪು ಅಥವಾ ಸರಿ ಎನ್ನುವುದಕ್ಕಿಂತ ನನ್ನ ಬಗ್ಗೆ ಇನ್ನೊಬ್ಬರಿಗೆ ಯಾವ ರೀತಿ ಅಭಿಪ್ರಾಯ ಇದೆ ಎನ್ನುವುದೇ ಹೆಚ್ಚಿನ ವಿಷಯವಾಗುತ್ತಿತ್ತು. ಹೀಗಿರುವಾಗ ಶಿಶಿರ್ ಈ ವಾರದ ಕ್ಯಾಪ್ಟನ್ ಎದ್ದು ಹೋಗಿ ಧನರಾಜ್ ಆಚಾರ್ ಅವರಿಗೆ ಅತಿಥಿ ಪಟ್ಟ ಕಟ್ಟುತ್ತಾರೆ.
ಶಿಶಿರ್ - ಧನರಾಜ್
ಅವರು ಈ ಮನೆಗೆ ಯಾಕೆ ಅತಿಥಿ ಎಂಬ ಕಾರಣವನ್ನೂ ಅವರು ನೀಡಬೇಕಾಗಿರುತ್ತದೆ. ಆಗ ಶಿಶಿರ್ ಹೇಳುತ್ತಾರೆ. ಅವರು ಈ ಮನೆಗೆ ಇನ್ನೂ ಹೊಂದಿಕೆ ಆಗಿಲ್ಲ. ಈ ಮನೆಯಲ್ಲಿ ತನ್ನ ಸ್ಥಾನ ಏನು ಎನ್ನುವ ಕ್ಲಾರಿಟಿ ಧನರಾಜ್ ಅವರಿಗೆ ಬೇಕಾಗಿದೆ ಎಂದು ಶಿಶಿರ್ ಹೇಳಿದ್ದಾರೆ. ಅವರ ಮಾತನ್ನು ಕೇಳಿ ಧನರಾಜ್ ಆಚಾರ್ ಸುಮ್ಮನೆ ಕುಳಿತಿದ್ದಾರೆ. ಇಲ್ಲಿ ಇನ್ನೊಬ್ಬರು ನಮಗೆ ನೀಡಿದ್ದನ್ನು ಸ್ವೀಕರಿಸಿ ಸುಮ್ಮನೆ ಕೂರಲೇ ಬೇಕಾದ ಸಂದರ್ಭ ಇರುತ್ತದೆ. ಆ ಕಾರಣಕ್ಕೂ ಎಲ್ಲರೂ ಸುಮ್ಮನೆ ಕೂತಿರಬಹುದು.
ಮೋಕ್ಷಿತಾ - ಸುರೇಶ್
ಇನ್ನು ಪಾರು ಅಲಿಯಾಸ್ ಮೋಕ್ಷಿತಾ ಪೈ ಅವರು ಸುರೇಶ್ ಅವರಿಗೆ ಹೇಳಿದ್ದಾರೆ. ಅವರು ಈ ಮನೆಯಲ್ಲಿ ಅತಿಥಿಯ ಹಾಗೇ ಇದ್ದಾರೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ರೀತಿಯಲ್ಲಿ ಇದ್ದಾರೆ. ಹಾಗಾಗಿ ನಾನು ಅವರಿಗೆ ಈ ಗೆಸ್ಟ್ ಪಟ್ಟಿ ನೀಡುತ್ತಿದ್ದೇನೆ ಎಂದು ಹೇಳಿದ್ಧಾರೆ. ಇನ್ನು ಉಗ್ರಂ ಮಂಜು ಅವರು ಅನುಷಾ ಅವರನ್ನು ಅತಿಥಿ ಎಂದು ಸೂಚಿಸಿದ್ದಾರೆ. ಇರುವ ಎಲ್ಲ ಸ್ಪರ್ಧಿಗಳಿಗೆ ಹೋಲಿಸಿ ನೋಡಿದರೆ ಅನುಷಾ ಅವರು ವೀಕ್ ಎಂದು ಅನಿಸುತ್ತಾರೆ ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಅನುಷಾ - ಚೈತ್ರಾ ಕುಂದಾಪುರ
ಇನ್ನು ಅನುಷಾ ಅವರು ಚೈತ್ರಾ ಕುಂದಾಪುರ್ ಅವರು ಈ ಮನೆಗೆ ಅತಿಥಿ ಎಂದು ಹೇಳಿದ್ದಾರೆ. ಯಾಕೆಂದರೆ ಅವರು ಆಡಿದ ಮಾತಿನಲ್ಲಿ ಅವರಿಗೆ ಸ್ಟ್ಯಾಂಡ್ ಇಲ್ಲ. ಅವರು ಏನ್ ಮಾಡ್ತಾರೆ ಅನ್ನೋದು ಅವರಿಗೇ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಹೀಗೆ ಬೇರೆ ಬೇರೆಯವರು ಬೇರೆ ಬೇರೆಯ ಹೆಸರುಗಳನ್ನು ಸೂಚಿಸಿದ್ದಾರೆ. ಕಿಚ್ಚನ ಈ ಒಂದು ಪಂಚಾಯ್ತಿಯಲ್ಲಿ ಆಟದ ಕಾವಂತೂ ಹೆಚ್ಚಾಗಿಯೇ ಇತ್ತು.
ಜಗದೀಶ್ ಮತ್ತು ಹಂಸಾ
ಜಗದೀಶ್ ಅವರು ಹಿಂದಿನ ವಾರ ಕ್ಯಾಪ್ಟನ್ ಆದ ಹಂಸಾ ಅವರಿಗೆ ಐ ಲವ್ ಯೂ ಎಂದು ಹೇಳಿದ್ದರು. ಆದರೆ ಅದಾದ ನಂತರ ಡುಯೆಟ್ ಕೂಡ ಹಾಡಿದ್ದಾರೆ. ತಮಾಷೆಗಾಗಿ ಅವರು ಮಾಡಿದ ಎಲ್ಲವನ್ನೂ ಜನ ಇಷ್ಟಪಡುತ್ತಿದ್ದಾರೆ. ಈ ಬಗ್ಗೆ ಇಂದಿನ ಸೂಪರ್ ಸಂಡೆ ವಿತ್ ಬಾದ್‌ಷಾ ಸುದೀಪ್ ಕಾರ್ಯಕ್ರಮದಲ್ಲಿ ಸುದೀಪ್ ಮಾತನಾಡಿದ್ದಾರೆ. ಎಷ್ಟೋ ಜನ ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ನಮಗೆ ಜಗದೀಶ್ ಇಷ್ಟ ಆಗ್ತಾ ಇರ್ಲಿಲ್ಲ. ಆದ್ರೆ ಈಗ ಅವರನ್ನು ನೋಡದೆ ಇರೋಕೆ ಆಗ್ತಾ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ನಂತರ ಮತ್ತೊಮ್ಮೆ ಜಗದೀಶ್ ಹಾಗೂ ಹಂಸಾ ಡಾನ್ಸ್ ಮಾಡುತ್ತಾರೆ.ಈ ರೀತಿ ಡಾನ್ಸ್ ಮಾಡುವ ಸಂದರ್ಭದಲ್ಲಿ ಜಗದೀಶ್ ಅವರು ತುಂಬಾ ನಾಚಿಕೊಂಡಂತೆ ಕಾಣುತ್ತದೆ. ಒಟ್ಟಿನಲ್ಲಿ ತಮಾಷೆಗಾಗಿ ಮತ್ತು ತಮಾಷೆಯಾಗಿ ಇಂದಿನ ಎಪಿಸೋಡ್ ಮೂಡಿ ಬಂದಿದೆ.