‘X ಅಂಡ್ Y’ ಚಿತ್ರದ ರಿಯಲ್ ಸ್ಟಾರ್‌ ಈ ‘ಆಂಬು ಆಟೋ’! ನಿರ್ದೇಶಕ ಸತ್ಯಪ್ರಕಾಶ್‍ ಪರಿಕಲ್ಪನೆಯಲ್ಲಿ ಮೂಡಿ ಬರ್ತಿದೆ ಹೊಸ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  ‘X ಅಂಡ್ Y’ ಚಿತ್ರದ ರಿಯಲ್ ಸ್ಟಾರ್‌ ಈ ‘ಆಂಬು ಆಟೋ’! ನಿರ್ದೇಶಕ ಸತ್ಯಪ್ರಕಾಶ್‍ ಪರಿಕಲ್ಪನೆಯಲ್ಲಿ ಮೂಡಿ ಬರ್ತಿದೆ ಹೊಸ ಸಿನಿಮಾ

‘X ಅಂಡ್ Y’ ಚಿತ್ರದ ರಿಯಲ್ ಸ್ಟಾರ್‌ ಈ ‘ಆಂಬು ಆಟೋ’! ನಿರ್ದೇಶಕ ಸತ್ಯಪ್ರಕಾಶ್‍ ಪರಿಕಲ್ಪನೆಯಲ್ಲಿ ಮೂಡಿ ಬರ್ತಿದೆ ಹೊಸ ಸಿನಿಮಾ

ನೀವು ಅಂಬುಲೆನ್ಸ್‌ ನೋಡಿರ್ತೀರಾ ಆದ್ರೆ ‘ಆಂಬು ಆಟೋ’ ನೋಡಿರಲಿಕ್ಕಿಲ್ಲ. ನಿರ್ದೇಶಕ ಸತ್ಯಪ್ರಕಾಶ್‍ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ‘X&Y’ ಚಿತ್ರದ ರಿಯಲ್ ಸ್ಟಾರ್‌ ಇದೇ ‘ಆಂಬು ಆಟೋ’

‘X&Y’ ಚಿತ್ರದ ರಿಯಲ್ ಸ್ಟಾರ್‌ ಈ ‘ಆಂಬು ಆಟೋ’
‘X&Y’ ಚಿತ್ರದ ರಿಯಲ್ ಸ್ಟಾರ್‌ ಈ ‘ಆಂಬು ಆಟೋ’

ನಿರ್ದೇಶಕ ಸತ್ಯಪ್ರಕಾಶ್‍, ತಮ್ಮ ಪ್ರತಿ ಚಿತ್ರದಲ್ಲೂ ಒಂದಿಲ್ಲೊಂದು ಹೊಸ ಪ್ರಯೋಗವನ್ನು ಮಾಡುತ್ತಲೇ ಇರುತ್ತಾರೆ. ಈಗ ತಮ್ಮ ನಾಲ್ಕನೆಯ ಚಿತ್ರ ‘X&Y’ನಲ್ಲಿ ಹೊಸ ಪ್ರಯೋಗವನ್ನು ಮಾಡುತ್ತಿದ್ದಾರೆ. ಅದೇ 'ಆಂಬು ಆಟೋ’. ‘X&Y’ ಚಿತ್ರದಲ್ಲಿ ಸತ್ಯಪ್ರಕಾಶ್‍, ಆಟೋ ಡ್ರೈವರ್‍ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಟೋ ಎಂದರೆ ಅದು ಬರೀ ಆಟೋ ಅಲ್ಲ, ಆಂಬ್ಯುಲೆನ್ಸ್ ಸೌಲಭ್ಯಗಳಿರುವ ಆಟೋ ಅದು. ಈ ಆಟೋಗೆ ಅವರು 'ಆಂಬು ಆಟೋ’ ಎಂಬ ಹೆಸರನ್ನು ಇಡಲಾಗಿದೆ. ಈ 'ಆಂಬು ಆಟೋ' ಚಿತ್ರದಲ್ಲೊಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆಯಂತೆ.

ಸಿನಿಮಾದ ಈ 'ಆಂಬು ಆಟೋ’ ಎಂಬ ಪರಿಕಲ್ಪನೆ, ನಿಜಜೀವನದಲ್ಲಿ ಅದೆಷ್ಟು ಜನಪ್ರಿಯವಾಗಿದೆ ಎಂದರೆ, ಇದನ್ನು ನೋಡಿರುವ ಕೆಲವು ಆಟೋ ಡ್ರೈವರ್‌ಗಳು, ತಾವೂ ತಮ್ಮಆಟೋಗಳನ್ನು 'ಆಂಬು ಆಟೋ' ಆಗಿ ಮಾಡಿ ಸಾರ್ವಜನಿಕ ಸಹಾಯಕ್ಕಾಗಿ ಬಳಸುವುದಕ್ಕೆ ಮುಂದಾಗಿದ್ದಾರಂತೆ.

ಇತ್ತೀಚೆಗೆ ಬೆಂಗಳೂರಿನ ಜಯನಗರದ ಬೆಂಗಳೂರು ಸಾರಥಿ ಸೇನೆ ಆಟೋ ಚಾಲಕರ ಸಂಘವು ರಾಜ್ಯೋತ್ಸವದ ಜೊತೆಗೆ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಈ ‘ಆಂಬು ಆಟೋ’ವನ್ನು ಪ್ರದರ್ಶನಕ್ಕಿಡಲಾಗಿದೆ. ಈ ಸಂದರ್ಭದಲ್ಲಿ, ಈ ಆಟೋದಲ್ಲಿ ECG ತಪಾಸಣೆ ಮಾಡಲಾಗಿದೆ.

ಇದು ನಾಲ್ಕನೇ ಚಿತ್ರ

‘ರಾಮ ರಾಮಾ ರೇ’, ‘ಒಂದಲ್ಲಾ ಎರಡಲ್ಲಾ’ ಮತ್ತು ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರಗಳನ್ನು ನಿರ್ದೇಶಿಸಿದ್ದ ಸತ್ಯ, ನಿರ್ದೇಶನದ ನಾಲ್ಕನೇ ಚಿತ್ರ ಈ ‘X&Y’. ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಾಯಕರಾಗಿಯೂ ಅವರು ಕಾಣಿಸಿಕೊಂಡಿದ್ದಾರೆ. ಜೊತೆಗೆ ಸತ್ಯ ಪಿಕ್ಚರ್ಸ್‍ ಬ್ಯಾನರ್ ಅಡಿ ಅವರೇ ನಿರ್ಮಾಣವನ್ನೂ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ.

ಪಾತ್ರವರ್ಗ

‘X&Y’ ಚಿತ್ರದಲ್ಲಿ ಸತ್ಯಪ್ರಕಾಶ್‍ ಜೊತೆಗೆ ಅಥರ್ವ ಪ್ರಕಾಶ್, ಬೃಂದಾ ಆಚಾರ್ಯ, ಸುಂದರ್‍ ವೀಣಾ ಮುಂತಾದವರು ನಟಿಸಿದ್ದು, ವಾಸುಕಿ ವೈಭವ್ ಸಂಗೀತ ಮತ್ತು ಲವಿತ್‍ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಜನವರಿ ಅಥವಾ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ.

Whats_app_banner