OTT Thriller Movie: 59 ಅಮಾಯಕರ ಸಾವಿನ ಕಥೆ, ಪ್ರಧಾನಿ ಮೋದಿ ಸಂಸತ್ತಿನಲ್ಲಿ ನೋಡಿದ ಚಿತ್ರವಿದು; ಶೀಘ್ರದಲ್ಲಿ ಈ ಒಟಿಟಿಯಲ್ಲಿ ಪ್ರಸಾರ
The Sabarmati Report Movie OTT: ಬಾಲಿವುಡ್ ನಟ ವಿಕ್ರಾಂತ್ ಮಾಸ್ಸೆ ಮತ್ತು ರಾಶಿ ಖನ್ನಾ ಮುಖ್ಯಭೂಮಿಕೆಯಲ್ಲಿ ನಟಿಸಿದ ನೈಜ ಘಟನೆ ಆಧರಿತ ಥ್ರಿಲ್ಲರ್ ಡ್ರಾಮಾ ದಿ ಸಾಬರಮತಿ ರಿಪೋರ್ಟ್ ಸಿನಿಮಾ ಶೀಘ್ರದಲ್ಲಿ ಒಟಿಟಿಗೆ ಆಗಮಿಸಿಲಿದೆ. ಈ ಚಿತ್ರವನ್ನು ಪ್ರಧಾನಿ ಮೋದಿ ಸಂಸತ್‌ನಲ್ಲಿ ವೀಕ್ಷಿಸಿದ್ದರು.
The Sabarmati Report OTT: ಬಾಲಿವುಡ್‌ನ ಯುವ ನಟ ವಿಕ್ರಾಂತ್ ಮಾಸ್ಸೆ ತಮ್ಮ ಸಿನಿಮಾಗಳಿಂದಲೇ ಅಪಾರ ಜನಪ್ರಿಯತೆ ಸಂಪಾದಿಸಿದ್ದಾರೆ. ಕಳೆದ ವರ್ಷದ 12th ಫೇಲ್ ಸಿನಿಮಾ ಅವರ ಕೆರಿಯರ್‌ಗೆ ದೊಡ್ಡ ಹಿಟ್ ನೀಡಿದೆ. ಹೀಗಿರುವಾಗ ಈ ವರ್ಷ ಅವರ ಪಾಲಿಗೆ ನೆನಪಿನಲ್ಲಿಡುವ ವರ್ಷವಾಗಿಲ್ಲ. ಅವರ ಒಟ್ಟು ನಾಲ್ಕು ಸಿನಿಮಾಗಳು ಈ ವರ್ಷ ಬಿಡುಗಡೆ ಆಗಿವೆ. ಆ ಪೈಕಿ ದಿ ಸಾಬರಮತಿ ರಿಪೋರ್ಟ್ ಸಿನಿಮಾವೊಂದೇ ಚಿತ್ರಮಂದಿರದಲ್ಲಿ ಬಿಡುಗಡೆ ಆದರೆ, ಇನ್ನುಳಿದ ಮೂರು ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿವೆ. ಇದೀಗ ಇದೇ ದಿ ಸಾಬರಮತಿ ರಿಪೋರ್ಟ್ ಸಿನಿಮಾ ಒಟಿಟಿಗೆ ಆಗಮಿಸುವ ಸನಿಹದಲ್ಲಿದೆ.
‘ಸೆಕ್ಟರ್ 36’, ‘ಹಸೀನಾ ದಿಲ್ರುಬಾ’ ಮತ್ತು ‘ಬ್ಲಾಕೌಟ್’ ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದವು. ಗೋದ್ರಾ ಘಟನೆ ಆಧರಿಸಿದ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ನವೆಂಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ನೈಜ ಘಟನೆ ಆಧರಿತ ಸಿನಿಮಾ ಆದರೂ, ವಿಮರ್ಶೆ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಈ ಸಿನಿಮಾ, ಹೇಳಿಕೊಳ್ಳುವ ಕಲೆಕ್ಷನ್ ಸಹ ಮಾಡಲಿಲ್ಲ. ಇದೀಗ ಚಿತ್ರಮಂದಿರದಲ್ಲಿ ತೆರೆಕಂಡ 50 ದಿನಗಳ ಬಳಿಕ ಒಟಿಟಿಗೆ ಆಗಮಿಸಲಿದೆ.
ಸಾಬರಮತಿ ರಿಪೋರ್ಟ್ OTT ಬಿಡುಗಡೆ ದಿನಾಂಕ
ಧೀರಜ್ ಸರ್ನಾ ನಿರ್ದೇಶನದ ದಿ ಸಾಬರಮತಿ ರಿಪೋರ್ಟ್ ಚಿತ್ರವನ್ನು ಏಕ್ತಾ ಕಪೂರ್ ನಿರ್ಮಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾದ ಈ ಸಿನಿಮಾ ವಿವಾದಗಳು ಮತ್ತು ಚರ್ಚೆಯ ಹೊರತಾಗಿಯೂ, ಬಾಕ್ಸ್ ಆಫೀಸ್‌ನಲ್ಲಿ ಕಮಾಯಿ ಮಾಡಲಿಲ್ಲ. ಇದೀಗ ಈ ಸಿನಿಮಾ ಒಟಿಟಿಯ ಹಾದಿ ಹಿಡಿದಿದೆ. ಹಿಂದೂಸ್ಥಾನ್ ಟೈಮ್ಸ್‌ನ ಸೋದರ ಸಂಸ್ಥೆ ಮಿಂಟ್ ವರದಿಯ ಪ್ರಕಾರ, ಜನವರಿ 10ರಂದು ಜೀ5 ಒಟಿಟಿಯಲ್ಲಿ'ದಿ ಸಾಬರಮತಿ ರಿಪೋರ್ಟ್' ಸಿನಿಮಾ ಸ್ಟ್ರೀಮ್ ಆಗಲಿದೆ.
ಸಂಸತ್‌ನಲ್ಲಿ ಸಿನಿಮಾ ವೀಕ್ಷಣೆ
ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಸಂಸತ್ತಿನ ಗ್ರಂಥಾಲಯದ ಬಾಲಯೋಗಿ ಸಭಾಂಗಣದಲ್ಲಿ ದಿ ಸಾಬರಮತಿ ರಿಪೋರ್ಟ್ ಸಿನಿಮಾ ವೀಕ್ಷಿಸಿದ್ದರು. ಅವರೊಂದಿಗೆ ಹಿರಿಯ ನಟ ಜಿತೇಂದ್ರ ಮತ್ತು ನಟಿ ರಾಶಿ ಖನ್ನಾ ಸಹ ಇದ್ದರು. ದಿ ಸಾಬರಮತಿ ರಿಪೋರ್ಟ್ ಸಿನಿಮಾ ನೋಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ತಂಡಕ್ಕೆ ಶ್ಲಾಘನೆ ಸಿಕ್ಕಿತ್ತು.
ನೈಜ ಘಟನೆ ಆಧರಿತ ಸಿನಿಮಾ..
2002 ಫೆಬ್ರವರಿ 27ರಂದು ಗುಜರಾತ್‌ನ ಗೋದ್ರಾದಲ್ಲಿ ಸಂಭವಿಸಿದ ಸಾಬರಮತಿ ಎಕ್ಸ್‌ಪ್ರೆಸ್ ರೈಲು ದುರಂತವನ್ನೇ ಆಧರಿಸಿ ಈ ಸಿನಿಮಾ ಮಾಡಲಾಗಿತ್ತು. ಈ ದುರಂತದಲ್ಲಿ ಬರೋಬ್ಬರಿ 59 ಮಂದಿ ಸಜೀವ ದಹನವಾಗಿದ್ದರು. ಇದೇ ಘಟನೆಯನ್ನೇ ಆಧರಿಸಿ ನಿರ್ದೇಶಕ ಧೀರಜ್ ಸೆರ್ನಾ ಸಿನಿಮಾ ಮಾಡಿದ್ದಾರೆ. ನವೆಂಬರ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಸಿನಿಮಾದಲ್ಲಿ, ವಿಕ್ರಾಂತ್ ಮಾಸ್ಸೆ, ರಾಶಿ ಖನ್ನಾ, ರಿದ್ಧಿ ಡೋಗ್ರಾ ಮತ್ತು ಬರ್ಖಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ಯಾಕ್ನಿಲ್ಕ್ ಪ್ರಕಾರ, ಚಿತ್ರದ ಬಜೆಟ್ 50 ಕೋಟಿ ರೂ. ಆದರೆ, ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 40.73 ಕೋಟಿ ರೂಪಾಯಿಗಳನ್ನು ಮಾತ್ರ ಗಳಿಸಿದೆ.
ವಿಕ್ರಾಂತ್ ಮಾಸ್ಸೆ ಸಿನಿಮಾಗಳು
37 ವರ್ಷದ ವಿಕ್ರಾಂತ್ ಮಾಸ್ಸೆ, ಲೂಟೆರಾ (2013) ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ನಂತರ ಒಟಿಟಿಯಲ್ಲಿ 'ಬ್ರೋಕನ್ ಬಟ್ ಬ್ಯೂಟಿಫುಲ್' ಸಿನಿಮಾ ಮೂಲಕ ಜನಪ್ರಿಯರಾದರು. 'ಸೆಕ್ಟರ್ 36', '12th ಫೇಲ್', 'ಗ್ಯಾಸ್ಲೈಟ್', 'ಲವ್ ಹಾಸ್ಟೆಲ್', '14 ಫೇರೆ', 'ಛಪಕ್' ಮತ್ತು 'ಹಸೀನ್ ದಿಲ್ರುಬಾ' ಸಿನಿಮಾ ಮತ್ತು ಕೆಲ ವೆಬ್‌ಸಿರೀಸ್‌ಗಳಲ್ಲಿಯೂ ಕಾಣಿಸಿಕೊಂಡರು. 12th ಚಿತ್ರಕ್ಕೆ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ವಿಕ್ರಾಂತ್ ಪಡೆದರು.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope