ಕನ್ನಡ ಸುದ್ದಿ  /  Entertainment  /  There Is An Inextricable Connection Between The Sarja Family And The Month Of October Why Check It Here

Sarja family and October: ಮ್ಯಾಜಿಕ್‌ ಮೇಲೆ ಮ್ಯಾಜಿಕ್‌.. ಸರ್ಜಾ ಕುಟುಂಬಕ್ಕೆ ಅಕ್ಟೋಬರ್‌ ತಿಂಗಳೇಕೆ ಇಷ್ಟ? ಮೇಘನಾ ರಾಜ್‌ ಹೇಳಿದ್ದು ಹೀಗೆ

ಅಕ್ಟೋಬರ್‌ 2ರ ಗಾಂಧಿ ಜಯಂತಿಯ ದಿನದಂದೇ ಸರ್ಜಾ ಕುಟುಂಬಕ್ಕೆ ಪುಟಾಣಿ ಕಂದಮ್ಮನ ಎಂಟ್ರಿಯಾಗಿದೆ. ಧ್ರುವ ಸರ್ಜಾ ಪತ್ನಿ ಪ್ರೇರಣಾ ಶಂಕರ್‌ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಎಲ್ಲರ ಮೊಗದಲ್ಲಿ ನಗು ಅರಳಿಸಿದ್ದಾರೆ.

ಮ್ಯಾಜಿಕ್‌ ಮೇಲೆ ಮ್ಯಾಜಿಕ್‌.. ಸರ್ಜಾ ಕುಟುಂಬಕ್ಕೆ ಅಕ್ಟೋಬರ್‌ ತಿಂಗಳೇಕೆ ಇಷ್ಟ? ಮೇಘನಾ ರಾಜ್‌ ಹೇಳಿದ್ದು ಹೀಗೆ..
ಮ್ಯಾಜಿಕ್‌ ಮೇಲೆ ಮ್ಯಾಜಿಕ್‌.. ಸರ್ಜಾ ಕುಟುಂಬಕ್ಕೆ ಅಕ್ಟೋಬರ್‌ ತಿಂಗಳೇಕೆ ಇಷ್ಟ? ಮೇಘನಾ ರಾಜ್‌ ಹೇಳಿದ್ದು ಹೀಗೆ.. (Instagram/ Meghana Raj Sarja)

ಅಕ್ಟೋಬರ್‌ 2ರ ಗಾಂಧಿ ಜಯಂತಿಯ ದಿನದಂದೇ ಸರ್ಜಾ ಕುಟುಂಬಕ್ಕೆ ಪುಟಾಣಿ ಕಂದಮ್ಮನ ಎಂಟ್ರಿಯಾಗಿದೆ. ಧ್ರುವ ಸರ್ಜಾ ಪತ್ನಿ ಪ್ರೇರಣಾ ಶಂಕರ್‌ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಎಲ್ಲರ ಮೊಗದಲ್ಲಿ ನಗು ಅರಳಿಸಿದ್ದಾರೆ. ಇತ್ತ ಧ್ರುವ ಸರ್ಜಾ ಮತ್ತು ಇಡೀ ಕುಟುಂಬ ಸಂಭ್ರಮದಲ್ಲಿ ತೇಲುತ್ತಿದೆ. ಹೀಗೆ ಸಂಭ್ರಮದ ನಡುವೆಯೇ ಇನ್ನೊಂದು ವಿಶೇಷತೆಯೂ ಮತ್ತೆ ಕಾಣಿಸಿಕೊಂಡಿದೆ. ಏನದು?

ಸರ್ಜಾ ಕುಟುಂಬಕ್ಕೆ ಅಕ್ಟೋಬರ್‌ ವಿಶೇಷ ತಿಂಗಳು..

ಹೌದು ಸರ್ಜಾ ಕುಟುಂಬಕ್ಕೆ ಅಕ್ಟೋಬರ್‌ ವಿಶೇಷ ತಿಂಗಳೆಂದೆ ಹೇಳಬಹುದು. ಏಕೆಂದರೆ, ಚಿರಂಜೀವಿ ಸರ್ಜಾ ಸಹ ಹುಟ್ಟಿದ್ದುಇದೇ ಅಕ್ಟೋಬರ್‌ನಲ್ಲಿಯೇ. ಅ. 17ರಂದು ಚಿರು ಜನಿಸಿದ್ದರೆ, ಇನ್ನೇನು ಅಕ್ಟೋಬರ್‌ 6ಕ್ಕೆ ಧ್ರುವ ಸರ್ಜಾ ಅವರ ಬರ್ತ್‌ಡೇ. ಅಷ್ಟೇ ಅಲ್ಲ ಮೇಘನಾ ಮತ್ತು ಚಿರು ಸರ್ಜಾ ಪುತ್ರ ರಾಯನ್‌ ಹುಟ್ಟಿದ್ದೂ ಸಹ ಅಕ್ಟೋಬರ್‌ 22 ರಂದು. ಈ ವಿಶೇಷ ತಿಂಗಳ ಬಗ್ಗೆ ಮೇಘನಾ ರಾಜ್‌ ಸರ್ಜಾ ಸೋಷಿಯಲ್‌ ಮೀಡಿಯಾದಲ್ಲಿ ಅಕ್ಟೋಬರ್‌ ತಿಂಗಳನ್ನು ಮ್ಯಾಜಿಕ್‌ ಎಂದಿದ್ದಾರೆ. ಏಕೆಂದರೆ, ಇದೀಗ ಈ ತಿಂಗಳಲ್ಲಿ ಇದೀಗ ಧ್ರುವ ಸರ್ಜಾ ಮಗಳೂ ಜನಿಸಿದ್ದಾಳೆ.

<p>ಮೇಘನಾ ರಾಜ್‌ ಸರ್ಜಾ ಇನ್‌ಸ್ಟಾ ಪೋಸ್ಟ್‌&nbsp;</p>
ಮೇಘನಾ ರಾಜ್‌ ಸರ್ಜಾ ಇನ್‌ಸ್ಟಾ ಪೋಸ್ಟ್‌&nbsp;

ಅಜ್ಜಿ, ಅಣ್ಣನನ್ನು ನೆನೆದ ಧ್ರುವ

ಧ್ರುವ ಸರ್ಜಾ ಕುಟುಂಬದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಮಗು ರಾಯನ್‌ ರಾಜ್‌ ಸರ್ಜಾ ಜನಿಸಿದ ನಂತರ, ಇದೀಗ ಹೆಣ್ಣು ಮಗು ಜನಿಸಿರುವುದು ಸಂಭ್ರಮ ಹೆಚ್ಚಾಗಿದೆ. ಆದರೆ ಈ ಸಂತೋಷದ ಸಮಯದಲ್ಲಿ ಅಣ್ಣ ಹಾಗೂ ಅಜ್ಜಿ ಇದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು. ಅವರಿಬ್ಬರನ್ನೂ ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂದು ಧ್ರುವ ಸರ್ಜಾ ಭಾವುಕರಾಗಿದ್ದಾರೆ.

ಒಂದೆಡೆ ಧ್ರುವ ಸರ್ಜಾ ತಂದೆಯಾದ ಖುಷಿಯಲ್ಲಿದ್ದರೆ, ಮತ್ತೊಂದೆಡೆ ಅಜ್ಜಿ ಹಾಗೂ ಅಣ್ಣ ಜೊತೆಯಲ್ಲಿಲ್ಲ ಎಂಬ ಬೇಸರದಲ್ಲಿದ್ದಾರೆ. ಧ್ರುವ ಸರ್ಜಾ ಕುಟುಂಬದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಮಗು ರಾಯನ್‌ ರಾಜ್‌ ಸರ್ಜಾ ಜನಿಸಿದ ನಂತರ, ಇದೀಗ ಹೆಣ್ಣು ಮಗು ಜನಿಸಿರುವುದು ಸಂಭ್ರಮ ಹೆಚ್ಚಾಗಿದೆ. ಆದರೆ ಈ ಸಂತೋಷದ ಸಮಯದಲ್ಲಿ ಅಣ್ಣ ಹಾಗೂ ಅಜ್ಜಿ ಇದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು. ಅವರಿಬ್ಬರನ್ನೂ ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಅವರು ಇಂದು ಇದ್ದಿದ್ದರೆ ಎಷ್ಟು ಖುಷಿ ಪಡುತ್ತಿದ್ದರು, ಎಂದು ಧ್ರುವ ಸರ್ಜಾ ಭಾವುಕರಾಗಿದ್ದಾರೆ.

ಹೆಣ್ಣು ಮಗುವೇ ಬೇಕಿತ್ತು..

ಇನ್ನು, ತಮಗೆ ಹೆಣ್ಣು ಮಗು ಜನಿಸಿದ್ದರ ಬಗ್ಗೆ ಕೂಡಾ ಸಂತೋಷ ವ್ಯಕ್ತಪಡಿಸಿರುವ ಧ್ರುವ ಸರ್ಜಾ, "ನನಗೆ ಮೊದಲಿನಿಂದಲೂ ಹೆಣ್ಣುಮಕ್ಕಳು ಎಂದರೆ ಬಹಳ ಗೌರವ. ಆದರೆ ಇದೀಗ ಅದು ದುಪ್ಪಟ್ಟಾಗಿದೆ. ಈಗಾಗಲೇ ಅಣ್ಣನ ಮಗ ಇದ್ದಾನೆ. ನಮಗೆ ಹೆಣ್ಣು ಮಗು ಬೇಕಿತ್ತು. ಅದೀಗ ನೆರವೇರಿದೆ. ಎಲ್ಲರ ಜೀವನದಲ್ಲೂ ಏನಾದರೂ ಸಮಸ್ಯೆಗಳಿರುತ್ತವೆ. ನಮ್ಮ ಜೀವನದಲ್ಲಿ ಕೂಡಾ ಅಂತಹ ಕಷ್ಟ ಎದುರಾಗಿತ್ತು. ವೈದ್ಯರ ಸಲಹೆಯಿಂದ ಮುದ್ದಾದ ಮಗುವಿಗೆ ನಾವು ತಂದೆ-ತಾಯಿಯಾಗಿದ್ದೇವೆ. ಇಷ್ಟು ದಿನ ನಮ್ಮ ಕುಟುಂಬಕ್ಕೆ ಹೇಗೆ ಪ್ರೀತಿ, ಆಶೀರ್ವಾದ ನೀಡಿದ್ದಿರೋ ಇನ್ಮುಂದೆ ನನ್ನ ಮಗುವಿಗೆ ಕೂಡಾ ಆ ಪ್ರೀತಿ, ಆಶೀರ್ವಾದ ಇರಲಿʼ ಎಂದು ಧ್ರುವ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.

IPL_Entry_Point