ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳಿವು; ಕನ್ನಡದ ಹಲವು ಹೊಸ ಪ್ರಯತ್ನಗಳ ನಡುವೆ, ಬಾಲಿವುಡ್‌ನಲ್ಲಿ ‘ಸ್ಕೈ ಫೋರ್ಸ್’ ಸಿನಿಮಾ ಅಬ್ಬರ
ಕನ್ನಡ ಸುದ್ದಿ  /  ಮನರಂಜನೆ  /  ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳಿವು; ಕನ್ನಡದ ಹಲವು ಹೊಸ ಪ್ರಯತ್ನಗಳ ನಡುವೆ, ಬಾಲಿವುಡ್‌ನಲ್ಲಿ ‘ಸ್ಕೈ ಫೋರ್ಸ್’ ಸಿನಿಮಾ ಅಬ್ಬರ

ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳಿವು; ಕನ್ನಡದ ಹಲವು ಹೊಸ ಪ್ರಯತ್ನಗಳ ನಡುವೆ, ಬಾಲಿವುಡ್‌ನಲ್ಲಿ ‘ಸ್ಕೈ ಫೋರ್ಸ್’ ಸಿನಿಮಾ ಅಬ್ಬರ

Movies Releasing This Week: ಈ ವಾರ ಕನ್ನಡದಲ್ಲಿ ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಸ್ಕೈ ಫೋರ್ಸ್' ಸಿನಿಮಾ ಬಿಡುಗಡೆಯಾಗುತ್ತಿದ್ದು ಬಹಳ ನಿರೀಕ್ಷೆ ಮೂಡಿಸಿದೆ.

ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳಿವು
ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳಿವು

Movies releasing this week: ಜನವರಿಯು ಬಹುತೇಕ ಮುಗಿದಿದೆ ಆದರೂ ಶುಕ್ರವಾರ ಬಂದರೆ ಸಾಕು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿರುತ್ತವೆ. ಎಷ್ಟೇ ಸಿನಿಮಾಗಳು ಬಿಡುಗಡೆಯಾದರೂ ಆಸಕ್ತಯಿಂದ ನೋಡುವ ವೀಕ್ಷಕರಿದ್ದಾರೆ. ಸಿನಿ ಪ್ರಿಯರು ಪ್ರತಿ ವಾರವೂ ಹೊಸ ಹೊಸ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿರುತ್ತಾರೆ. ಈ ವಾರ ಕೂಡ ಕನ್ನಡದ ನಾಲ್ಕು ಸಿನಿಮಾಗಳು ನಾಳೆ (ಜನವರಿ 24) ಬಿಡುಗಡೆಯಾಗುತ್ತಿದೆ. ಇಂಗ್ಲೀಷ್, ಹಿಂದಿ ಹೀಗೆ ಬೇರೆ ಬೇರೆ ಭಾಷೆಗಳ ಇನ್ನೂ ಹಲವು ಸಿನಿಮಾಗಳು ತೆರೆಕಾಣಲಿದೆ. ಅಕ್ಷಯ್ ಕುಮಾರ್ ಅಭಿನಯದ ಸಿನಿಮಾ ಸ್ಕೈ ಫೋರ್ಸ್ ಕೂಡ ಜನವರಿ 24ರಂದೇ ಬಿಡುಗಡೆಯಾಗುತ್ತಿದ್ದು, ಈ ಚಿತ್ರಮೇಲೆ ನಿರೀಕ್ಷೆ ಹೆಚ್ಚಿದೆ.

ಕನ್ನಡ
ಫಾರೆಸ್ಟ್‌ - ದೆ. ಆ್ಯಕ್ಷನ್, ಕಾಮಿಡಿ, ಹಾರರ್ ಹಾಗೂ ಥ್ರಿಲ್ ಕಥೆಯುಳ್ಳ ಸಿನಿಮಾ ಇದಾಗಿದ್ದು ಜನವರಿ 24ರಂದು ಬಿಡುಗಡೆಯಾಗುತ್ತಿದೆ. ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರು ನಂದನ್, ಶರಣ್ಯಾ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು ಮೊದಲಾದವರು ಈ ಸಿನಿಮಾ ತಾರಾಗಣದಲ್ಲಿದ್ದಾರೆ.ಚಂದ್ರ ಮೋಹನ್ ನಿರ್ದೇಶನದ ಈ ಚಿತ್ರಕ್ಕೆ ಎನ್​ಎಂ ಕಾಂತರಾಜ್ ಬಂಡವಾಳ ಹೂಡಿದ್ದಾರೆ. ಧರ್ಮ ವಿಶ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ರುದ್ರ ಗರುಡ ಪುರಾಣ -ರಿಷಿ, ಪ್ರಿಯಾಂಕಾ ಕುಮಾರ್, ವಿನೋದ್ ಆಳ್ವಾ, ಅವಿನಾಶ್, ಕೆಎಸ್ ಶ್ರೀಧರ್, ಶಿವರಾಜ್​ ಕೆಆರ್​ ಪೇಟೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದು, . ಕೆಎಸ್ ನಂದೀಶ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ರೈಡ್‌ - ಥ್ರಿಲ್ಲರ್ ಹಾಗೂ ಸಸ್ಪೆನ್ಸ್‌ ಹೊಂದಿರುವ ಸಿನಿಮಾ ಇದಾಗಿದ್ದು. ಒಂದು ಕಾಡಿನಲ್ಲಿ ಜೋಡಿಯೊಂದು ಸಾಯಹಸಕ್ಕಿಳಿದು ಮುಂದೇನಾಗುತ್ತದೆ? ಎಂಬುದು ಈ ಸಿನಿಮಾದ ಕಥೆ

ಇದನ್ನೂ ಓದಿ: ನಿರ್ದೇಶಕ​ ರಾಮ್​ ಗೋಪಾಲ್ ವರ್ಮಾ ಜೈಲು ಪಾಲು; 2018ರ ಪ್ರಕರಣದಲ್ಲಿ 3 ತಿಂಗಳು ಕಾರಾಗೃಹ ಶಿಕ್ಷೆ

ರಾಯಲ್ - ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಸಂಜನಾ ಆನಂದ್, ರಂಗಾಯಣ ರಘು, ಅಚ್ಯುತ್ ಕುಮಾರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಇಂಗ್ಲೀಷ್
ಎ ರಿಯಲ್ ಪೇನ್‌ ಮತ್ತು ಫೈಟ್‌ ರಿಸ್ಕ್‌ ಎಂಬ ಸಿನಿಮಾಗಳು ರಿಲೀಸ್‌ ಆಗುತ್ತಿವೆ.

ಹಿಂದಿ
ಸ್ಕೈ ಫೋರ್ಸ್ - ಅಕ್ಷಯ್ ಕುಮಾರ್ ನಟನೆಯ ‘ಸ್ಕೈ ಫೋರ್ಸ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 1965 ರ ಭಾರತ-ಪಾಕಿಸ್ತಾನ ವಾಯು ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯ ಮೇಲೆ ಭಾರತದ ಪ್ರತೀಕಾರದ ದಾಳಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕುಮಾರ್, ವೀರ್ ಪಹಾರಿಯಾ, ಸಾರಾ ಅಲಿ ಖಾನ್ ಮತ್ತು ನಿಮ್ರತ್ ಕೌರ್ ಈ ಸಿನಿಮಾದಲ್ಲಿ ಅಭಿನಯಸಿದ್ದಾರೆ.

ಹಾಂಕಾಂಗ್ ವಾರಿಯರ್, ಡಾಕು ಮಹಾರಾಜ್‌ (ಹಿಂದಿ) ಕೂಡ ಬಿಡುಗಡೆಗೆ ಸಿದ್ಧವಾಗಿದೆ.

Whats_app_banner