Upendra on Election: ಇದು ಪ್ರಶ್ನೆಯಷ್ಟೇ.. ಟೀಕೆ ಅಲ್ಲ ಎಂದು ಸರ್ಕಾರಕ್ಕೆ ಮತ್ತೊಂದು ಸವಾಲೆಸೆದ ಉಪೇಂದ್ರ!
ಉಪೇಂದ್ರ ಅವರ ಹೇಳಿಕೆಯನ್ನು ಕೆಲವರು ಟ್ರೋಲ್ ಮಾಡಿದರೆ, ಇನ್ನು ಕೆಲವರು ಇದು ಸರಿಯಿದೆಯಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಟ್ರೋಲ್‌ಗೆ ಪ್ರತಿಯಾಗಿ ಮತ್ತೊಂದು ಪ್ರಶ್ನೆ ಅವರ ಟ್ವಿಟ್ ಬತ್ತಳಿಕೆಯಿಂದ ಬಂದಿದೆ.
Upendra on Election: ಕರ್ನಾಟಕದಲ್ಲೀಗ ಚುನಾವಣೆ ಕಹಳೆ ಮೊಳಗಿದೆ. ರಾಜಕೀಯ ಪಕ್ಷಗಳು ತೆರೆಮರೆಯಲ್ಲಿ ಕಸರತ್ತು ನಡೆಸಲು ತಯಾರಿ ನಡೆಸಿವೆ. ಈ ನಡುವೆ ನಟ ಮತ್ತು ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ತಮ್ಮ ಹೇಳಿಕೆ ಮತ್ತು ನಿಲುವುಗಳ ಮೂಲಕವೇ ಸದ್ಯ ಸುದ್ದಿಯಲ್ಲಿದ್ದಾರೆ. ಉಪೇಂದ್ರ ಅವರ ಹೇಳಿಕೆಯನ್ನು ಕೆಲವರು ಟ್ರೋಲ್ ಮಾಡಿದರೆ, ಇನ್ನು ಕೆಲವರು ಇದು ಸರಿಯಿದೆಯಲ್ಲ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಟ್ರೋಲ್‌ಗೆ ಪ್ರತಿಯಾಗಿ ಮತ್ತೊಂದು ಪ್ರಶ್ನೆ ಅವರ ಟ್ವಿಟ್ ಬತ್ತಳಿಕೆಯಿಂದ ಬಂದಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಆಗಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಎಲೆಕ್ಷನ್ ದಿನಾಂಕ ಘೋಷಣೆ ಆಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪಕ್ಷಗಳು ಬಹಿರಂಗ ಪ್ರಚಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ. ಹೀಗೆ ದಿನಾಂಕ ಘೋಷಣೆ ಆಗುತ್ತಿದ್ದಂತೆ, ಮತ ಎಣಿಕೆಗೆ ಎರಡು ದಿನ ಬೇಕಾ ಎಂದು ಉಪೇಂದ್ರ ಪ್ರಶ್ನೆ ಮಾಡಿದ್ದರು. ಅವರ ಆ ಮಾತು ಪರ ವಿರೋಧ ಚರ್ಚೆಗೆ ಆಹಾರವಾಯಿತು. ಇದೀಗ ಮತ್ತೊಂದು ಪ್ರಶ್ನೆಯ ಮೂಲಕ ಆಗಮಿಸಿದ್ದಾರೆ.
ಉಪೇಂದ್ರ ಹೊಸ ಟ್ವಿಟ್‌ನಲ್ಲೇನಿದೆ?
ಇದು ತಂತ್ರಜ್ಞಾನ ಯುಗ….
ಅನಕ್ಷರಸ್ತ ರಸ್ತೆ ವ್ಯಾಪಾರಿಗಳು ಫೋನ್ ಮೂಲಕ ಡಿಜಿಟಲ್ ನಲ್ಲಿ ಹಣದ ವ್ಯವಹಾರ ಮಾಡುತ್ತಾರೆ..
ವ್ಯಾಪಾರಸ್ತರು ಕೋಟ್ಯಾಂತರ ಹಣ ಸುರಕ್ಷಿತವಾಗಿ ಆನ್ಲೈನ್ ನಲ್ಲಿ ಟ್ರಾನ್ಸ್ಫರ್ ಮಾಡುತ್ತಾರೆ.
ಬಹು ಮುಖ್ಯ ದಾಖಲೆಗಳೊಂದಿಗೆ ವ್ಯವಹಾರ ಮಾಡುವ ದೊಡ್ಡ ದೊಡ್ಡ ಅಂತಾರಾಷ್ಟ್ರೀಯ ಕಂಪನಿಗಳು ಡಿಜಿಟಲ್ ಮೂಲಕ ವ್ಯವಹರಿಸುತ್ತಾರೆ.
ಪ್ರಧಾನ ಮಂತ್ರಿಗಳು ತಮ್ಮ ಬೆರಳಿಂದಲೇ ಲಕ್ಷಾಂತರ ಬ್ಯಾಂಕ್ ಖಾತೆಗೆ ಏಕಕಾಲಕ್ಕೆ ಹಣ ವರ್ಗಾಯಿಸುತ್ತಾರೆ!
ಇಷ್ಟೆಲ್ಲಾ ಬದಲಾವಣೆ ಆದರೂ ಚುನಾವಣೆಯಲ್ಲಿ ಮತದಾರರು ಅವರಿರುವ ಜಾಗದಿಂದಲೇ ಮತದಾನ ಮಾಡುವ ತಂತ್ರಜ್ಞಾನ ಏಕೆ ಬರುತ್ತಿಲ್ಲ ? ಯೋಚಿಸಿ…
ಇದು ಪ್ರಶ್ನೆ ಅಷ್ಟೇ. ಟೀಕೆ ಅಲ್ಲ.. ಎಂದಿದ್ದಾರೆ ಉಪೇಂದ್ರ..
ಈ ಹಿಂದಿನ ಹೇಳಿಕೆಗಳೇನು?
ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು
ಮೇ 13, ಶನಿವಾರ ಫಲಿತಾಂಶ ಪ್ರಕಟ.
ಮತ ಎಣಿಕೆಗೆ ಎರಡು ದಿನ ಬೇಕೆ ?!
ಏಕೆಂದು ಬಲ್ಲವರು ತಿಳಿಸುತ್ತೀರಾ ?
ಡಿಜಿಟಲ್ ವೋಟಿಂಗ್ ಅಲ್ವಾ ?
ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ….
ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?!
ವಾರೆ ವಾಹ್ …
ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು….