Kichcha Sudeep: ಅಮ್ಮ ನೋಡದ ಮೊದಲ ಸಿನಿಮಾ ಇದು; ಇಟ್ ಹರ್ಟ್ಸ್‌ ಎಂದು ಭಾವುಕ ಪೋಸ್ಟ್ ಹಂಚಿಕೊಂಡ ಕಿಚ್ಚ ಸುದೀಪ್
ಕನ್ನಡ ಸುದ್ದಿ  /  ಮನರಂಜನೆ  /  Kichcha Sudeep: ಅಮ್ಮ ನೋಡದ ಮೊದಲ ಸಿನಿಮಾ ಇದು; ಇಟ್ ಹರ್ಟ್ಸ್‌ ಎಂದು ಭಾವುಕ ಪೋಸ್ಟ್ ಹಂಚಿಕೊಂಡ ಕಿಚ್ಚ ಸುದೀಪ್

Kichcha Sudeep: ಅಮ್ಮ ನೋಡದ ಮೊದಲ ಸಿನಿಮಾ ಇದು; ಇಟ್ ಹರ್ಟ್ಸ್‌ ಎಂದು ಭಾವುಕ ಪೋಸ್ಟ್ ಹಂಚಿಕೊಂಡ ಕಿಚ್ಚ ಸುದೀಪ್

Kichcha Sudeep: ಕಿಚ್ಚ ಸುದೀಪ್ ಅಭಿನಯದ ಸಿನಿಮಾ ಇಂದು ರಿಲೀಸ್ ಆಗಿದೆ. ಮ್ಯಾಕ್ಸ್‌ ಸಿನಿಮಾ ಇಂದು ಹಲವು ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಸುದೀಪ್ ಒಂದು ಭಾವುಕ ಪೋಸ್ಟ್‌ ಶೇರ್ ಮಾಡಿದ್ದಾರೆ.

 ಅಮ್ಮ ನೋಡದ ಮೊದಲ ಸಿನಿಮಾ ಇದು
ಅಮ್ಮ ನೋಡದ ಮೊದಲ ಸಿನಿಮಾ ಇದು

Kichcha Sudeep: ಕಿಚ್ಚ ಸುದೀಪ್ ಸಿನಿಮಾ ಬಿಡುಗಡೆಯಾಗುತ್ತಿರುವ ಈ ಹೊತ್ತಿನಲ್ಲಿ ಅವರು ಬೇಸರವಾಗಿಯೇ ಇದ್ದಾರೆ. ಅವರ ಅಮ್ಮ ಇದ್ದಿದ್ದರೆ ಎಷ್ಟು ಚಂದವಿತ್ತು ಎಂದು ಅವರಿಗೆಅ ಅನಿಸುತ್ತಲೇ ಇದೆ ಎಂದು ಅವರ ಪೋಸ್ಟ್‌ ನೋಡಿದರೆ ತಿಳಿಯುತ್ತದೆ. ಅವರಿಗೆ ತಮ್ಮ ತಾಯಿ ಈ ಸಿನಿಮಾವನ್ನು ನೋಡಲು ಇರಬೇಕಿತ್ತು ಎನ್ನುವ ಬಯಕೆಯಾಗಿದೆ. ಆದರೆ ಈಗ ಅದು ಸಾಧ್ಯವಿಲ್ಲ. ಯಾಕೆಂದರೆ ಅವರ ತಾಯಿ ನಿಧನರಾಗಿದ್ದಾರೆ. ಈ ವಿಷಯ ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ರಾಜ್ಯಾದ್ಯಂತ ಎಲ್ಲಾ ಥಿಯೇಟರ್‌ಗಳಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ.

ಈಗಾಗಲೇ ರಾಜ್ಯಾದ್ಯಂತ ಎಲ್ಲಾ ಥಿಯೇಟರ್‌ಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿರುವುದು ಸಂತಸ ತಂದಿದೆ.

“ಇದು ಸಂತೋಷದ ಕ್ಷಣ. ಈ ಕ್ಷಣವನ್ನು ಆಚರಿಸಲು ಸಮಯವಾಗಿದ್ದರೂ, ನಾನು ನೋವು ಅನುಭವಿಸುತ್ತೇನೆ. ನನ್ನ ಪ್ರೀತಿಯ ಅಮ್ಮ ನನ್ನ ಒಂದೇ ಒಂದು ಚಲನಚಿತ್ರವನ್ನು ಎಂದಿಗೂ ತಪ್ಪಿಸಿರಲಿಲ್ಲ ಇದು ಈ ಹೊಸ ಆರಂಭದ ಮೊದಲನೆಯ ದಿನ. ನೋವುಂಟುಮಾಡುತ್ತಿದೆ” ಎಂದು ಸುದೀಪ್ ಬರೆದುಕೊಂಡಿದ್ದಾರೆ.

"ಈ ಚಿತ್ರದ ನಿರ್ಮಾಣದ ಸಮಯದಲ್ಲಿ ಈ ಚಿತ್ರವು ಅವಳಿಲ್ಲದ ಮೊದಲ ಚಿತ್ರ ಆಗುತ್ತದೆ ಎಂದು ತಿಳಿದಿರಲಿಲ್ಲ. ಆಕೆಯ ಚಿತ್ರ ಈ ರೀತಿ ತೆರೆಮೇಲೆ ಬರುವುದನ್ನು ನೋಡುವ ಶಕ್ತಿ ನನ್ನಲ್ಲಿದೆಯೋ ಇಲ್ಲವೋ ಗೊತ್ತಿಲ್ಲ. ಅಪ್ಪನ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿ ಇದೆ. ನಾನು ಸಮಯಕ್ಕೆ ಸರಿಯಾಗಿ ಹೋಗಬೇಕು ಎಂದು ಬಯಸುತ್ತೇನೆ. ನಾನು ಅವಳನ್ನು ಕಳೆದುಕೊಳ್ಳದಿದ್ದರೆ ಚೆನ್ನಾಗಿರುತ್ತಿತ್ತು.

ಮಿಸ್ ಯು, ಅಮ್ಮಾ. ನಿನ್ನ ಮಗನ ಕೆಲಸವನ್ನು ನೋಡಿದಾಗಲೆಲ್ಲ ನಿನ್ನ ಮೊಗದಲ್ಲಿ ನಗುವಿರುತ್ತಿತ್ತು. ನೀನು ಸುಖವಾಗಿದ್ದೀಯ, ನೆಮ್ಮದಿಯ ಸ್ಥಳ ತಲುಪಿದ್ದೀಯ" ಎಂದು ಕಿಚ್ಚ ಸುದೀಪ್ ಭಾವುಕರಾಗಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸುದೀಪ್ ಅಭಿನಯದ ಮ್ಯಾಕ್ಸ್‌ ಸಿನಿಮಾ ಈಗಾಗಲೇ ಕರ್ನಾಟಕದಲ್ಲಿ ಬಿಡುಗಡೆಯಾಗಿದ್ದು ಅಭಿಮಾನಿಗಳು ಫಸ್ಟ್‌ ಡೇ, ಫಸ್ಟ್‌ ಶೋ ನೋಡಲು ಮುಗಿಬಿದ್ದಿದ್ದಾರೆ. ಕಿಚ್ಚ ಸುದೀಪ್ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ವರ್ಷಗಳ ನಂತರ ಸುದೀಪ್ ಅವರ ಸಿನಿಮಾ ತೆರೆಗೆ ಬಂದಿದೆ ಆದರೆ ನಟ ಕಿಚ್ಚ ಸುದೀಪ್‌ ಇನ್ನೂ ಅಮ್ಮನ ಅಗಲಿಕೆಯ ನೋವಿಂದ ಆಚೆ ಬಂದಿಲ್ಲ ಎಂಬುದು ಅವರ ಈ ಪೋಸ್ಟ್ ನೋಡದರೆ ಅರ್ಥವಾಗುತ್ತದೆ. ಕಿಚ್ಚ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌, ವಯಸ್ಸಹಜ ಅನಾರೋಗ್ಯದಿಂದ ಅಕ್ಟೋಬರ್‌ 20ರ ಭಾನುವಾರ ನಿಧನರಾಗಿದ್ದಾರೆ.

Whats_app_banner