Thriller OTT: ಒಟಿಟಿಯಲ್ಲಿ ನಿಗೂಢ ಥ್ರಿಲ್ಲರ್ ಚಿತ್ರ ನೋಡಬೇಕೆಂದುಕೊಂಡಿದ್ದೀರಾ? ಇದು ಈ ವರ್ಷ ಅತಿಹೆಚ್ಚು ಗಳಿಕೆ ಮಾಡಿದ ಮಲಯಾಳಂ ಸಿನಿಮಾ
Thriller OTT: ಈ ವರ್ಷ ರೇಖಾಚಿತ್ರಂ (Rekhachithram) ಅತಿಹೆಚ್ಚು ಗಳಿಕೆ ಮಾಡಿದ ಮಲಯಾಳಂ ಸಿನಿಮಾವಾಗಿದೆ. ನಿಗೂಢ ಕಥೆಯ ಈ ಥ್ರಿಲ್ಲರ್ ಚಿತ್ರ ಒಟಿಟಿಗೆ ಆಗಮಿಸಲಿದೆ. ಸೋನಿ ಲಿವ್ ಒಟಿಟಿಯಲ್ಲಿ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಇದು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.

Thriller OTT: ಒಟಿಟಿಯಲ್ಲಿ ಮಲಯಾಳಂ ಸಿನಿಮಾಗಳಿಗೆ ದೊಡ್ಟಮಟ್ಟದ ಪ್ರೇಕ್ಷಕ ಬಳಗವಿದೆ. ಮಲಯಾಳಂನಲ್ಲಿ ಇತ್ತೀಚೆಗೆ ರೇಖಾಚಿತ್ರಂ (Rekhachithram) ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿದೆ. ಮಲಯಾಳಂನ ಈ ನಿಗೂಢ ಥ್ರಿಲ್ಲರ್ ಚಿತ್ರವು ಒಟಿಟಿಗೆ ಬಿಡುಗಡೆಯಾಗುವುದು ಇನ್ನಷ್ಟು ತಡವಾಗುತ್ತಿದೆ. ಫೆಬ್ರವರಿ ತಿಂಗಳಲ್ಲಿ ಇದು ಒಟಿಟಿಯಲ್ಲಿ ಬಿಡುಗಡೆಯಾಗಬಹುದೆಂದು ವದಂತಿಗಳಿದ್ದವು. ಆದರೆ, ಸಿನಿಮಾ ನಿರ್ಮಾಪಕರು ಅಭಿಮಾನಗಳಿಗೆ ಬೇಸರದ ಸುದ್ದಿ ನೀಡಿದ್ದಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎರಡು ತಿಂಗ ಬಳಿಕ ಒಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ, ಈ ಸಿನಿಮಾ ಫೆಬ್ರವರಿ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗದು. ಮುಂದಿನ ತಿಂಗಳು, ಮಾರ್ಚ್‌ನಲ್ಲಿ ಬಿಡುಗಡೆಯಾಗುವ ಸೂಚನೆ ಇದೆ.
ಒಟಿಟಿ ಬಿಡುಗಡೆ ದಿನಾಂಕ
ರೇಖಾಚಿತ್ರಂ ಸಿನಿಮಾದ ಒಟಿಟಿ ಬಿಡುಗಡೆ ಕುರಿತು ಸೋಷಿಯಲ್ ಮೀಡಿಯಾಲ್ಲಿ ಈಗ ಚರ್ಚೆಯಾಗುತ್ತಿದೆ. ಈ ಸಿನಿಮಾ ಮಾರ್ಚ್ 14ರಿಂದ ಸೋನಿಲಿವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗುತ್ತಿದೆ. ಇದು ಮಲಯಾಳ ಮಾತ್ರವಲ್ಲದೆ, ಕನ್ನಡ, ತೆಲುಗು, ತಮಿಳ, ಹಿಂದಿ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ. ಒಟಿಟಿ ಬಿಡುಗಡೆ ಕುರಿತು ಪೋಸ್ಟರ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ನಿಗೂಢ ಅಪರಾಧ ಥ್ರಿಲ್ಲರ್ ಕಥಾನಕ
ಈ ನಿಗೂಢ ಅಪರಾಧ ಥ್ರಿಲ್ಲರ್ ಕಥೆಯ ಸಿನಿಮಾದಲ್ಲಿ ಆಸಿಫ್ ಅಲಿ ಮತ್ತು ಅನಶ್ವರ ರಾಜನ್ ಪ್ರಮುಖ ನಟರಾಗಿ ನಟಿಸಿದ್ದಾರೆ. ಅತಿಥ ಪಾತ್ರದಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಇದ್ದಾರೆ. ಇದು ಜೋಶಿನ್ ಚಾಕೊ ನಿರ್ದೇಶನದ ಸಿನಿಮಾವಾಗಿದ.
ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಜನವರಿ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ರೇಖಾಚಿತ್ರಂ ಚಿತ್ರವು ಬಾಕ್ಸ್ ಆಫೀಸನಲ್ಲಿ ಅತಿದೊಡ್ಡ ಬ್ಲಾಕ್‌ಬಸ್ಟರ್ ಆಗಿದೆ. 2025ರಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರ ಎಂಬ ದಾಖಲೆಯನ್ನು ನಿರ್ಮಿಸಿದೆ. ಕೇವಲ ಆರು ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು 55 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆಸಿಫ್ ಅಲಿ ಮತ್ತು ಅನಶ್ವರ ರಾಜನ್ ಅವರ ನಟನೆ ಸೂಪರ್ ಆಗಿದೆ ಎಂದು ಸಿನಿಮಾ ನೋಡಿದವರ ಅಭಿಪ್ರಾಯ. ಇದು ಮಲಯಾಳಂನ ಅತ್ಯುತ್ತಮ ಥ್ರಿಲ್ಲರ್ ಚಿತ್ರಗಳಲ್ಲಿ ಒಂದಾಗಿದೆ.
ರೇಖಾಚಿತ್ರಂ ಸಿನಿಮಾದ ಕಥೆಯೇನು?
ವಿವೇಕ್ ಗೋಪಿನಾಥ್ ಒಬ್ಬ ಪೊಲೀಸ್ ಅಧಿಕಾರಿ. ಕರ್ತವ್ಯದಲ್ಲಿರುವಾಗ ಆನ್‌ಲೈನ್ ರಮ್ಮಿ ಆಡುತ್ತಿದ್ದಾಗ ಮೇಲಧಿಕಾರಿಗಳಿಗೆ ಸಿಕ್ಕಿಬೀಳುತ್ತಾನೆ. ಇವರನ್ನು ಅರಣ್ಯ ಪ್ರದೇಶದ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ. ವಿವೇಕ್ ಗೋಪಿನಾಥ್ ಕರ್ತವ್ಯಕ್ಕೆ ಸೇರಿದ ದಿನ, ಅವರು ಸವಾಲಿನ ಪ್ರಕರಣವನ್ನು ಎದುರಿಸುತ್ತಾರೆ. ನಲವತ್ತು ವರ್ಷಗಳ ಹಿಂದೆ ಮಾಡಿದ ಕೊಲೆಯ ವಿವರವನ್ನು ಫೇಸ್‌ಬುಕ್ ಲೈವ್‌ನಲ್ಲಿ ಬಹಿರಂಗಪಡಿಸಿದ ನಂತರ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನು ಯಾರನ್ನು ಕೊಲೆ ಮಾಡಿದ್ದಾನೆ? ನಲವತ್ತು ವರ್ಷಗಳ ಹಿಂದಿನ ಪ್ರಕರಣವನ್ನು ವಿವೇಕ್ ಗೋಪಿನಾಥ್ ಹೇಗೆ ಬಗೆಹರಿಸಿದರು? ಮಮ್ಮುಟ್ಟಿ ಅಭಿಮಾನಿಯಾಗಿರುವ ಸಿನಿಮಾ ನಾಯಕಿ ರೇಖಾ ಕಣ್ಮರೆಯಾಗಲು ಕಾರಣವೇನು? ಮುಂತಾದ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರವಿದೆ.
ಕಿಷ್ಕಿಂದಾ ಕಾಂಡಂ
ರೇಖಾಚಿತ್ರಂಗಿಂತ ಮೊದಲು ಆಸಿಫ್ ಅಲಿ ನಾಯಕನಾಗಿ ನಟಿಸಿದ ಕಿಷ್ಕಿಂದಾ ಕಾಂಡಂ ಬಾಕ್ಸ್ ಆಫೀಸ್‌ನಲ್ಲಿ ಕಮರ್ಷಿಯಲ್ ಆಗಿ ಹಿಟ್ ಆಗಿದೆ. ಈ ಮರ್ಡರ್ ಮಿಸ್ಟರಿ ಥ್ರಿಲ್ಲರ್ ಸಿನಿಮಾ 77 ಕೋಟಿಗೂ ಹೆಚ್ಚು ಗಳಿಸಿತು. ಇದಾದ ಬಳಿಕ ರೇಖಾಚಿತ್ರಂ ಕೂಡ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಚಿತ್ರದ ಒಟಿಟಿ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸುವುದನ್ನು ಒಟಿಟಿ ಪ್ರಿಯರು ಎದುರು ನೋಡುತ್ತಿದ್ದಾರೆ.
