ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲ್‌ ಹಾಸನ್‌; ಅಲ್ಲೇ ಇದ್ದ ಶಿವಣ್ಣನ ಪ್ರತಿಕ್ರಿಯೆ ಏನಾಗಿತ್ತು?
ಕನ್ನಡ ಸುದ್ದಿ  /  ಮನರಂಜನೆ  /  ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲ್‌ ಹಾಸನ್‌; ಅಲ್ಲೇ ಇದ್ದ ಶಿವಣ್ಣನ ಪ್ರತಿಕ್ರಿಯೆ ಏನಾಗಿತ್ತು?

ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲ್‌ ಹಾಸನ್‌; ಅಲ್ಲೇ ಇದ್ದ ಶಿವಣ್ಣನ ಪ್ರತಿಕ್ರಿಯೆ ಏನಾಗಿತ್ತು?

ಕನ್ನಡ ಭಾಷೆ ಹುಟ್ಟಿಗೆ ತಮಿಳು ಕಾರಣ. ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂದು ಹಿರಿಯ ನಟ ಕಮಲ್‌ ಹಾಸನ್‌ ಆಡಿದ ಮಾತು ಇದೀಗ ಕನ್ನಡಿಗರನ್ನು ಕೆಣಕಿದೆ. ʻಥಗ್‌ ಲೈಫ್‌ʼ ಸಿನಿಮಾದ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್‌ ಅವರ ಮುಂದೆಯೇ ಈ ಮಾತನ್ನು ಹೇಳಿದ್ದಾರೆ ಕಮಲ್‌ ಹಾಸನ್‌.

ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲ್‌ ಹಾಸನ್‌; ಅಲ್ಲೇ ಇದ್ದ ಶಿವಣ್ಣನ ಪ್ರತಿಕ್ರಿಯೆ ಏನಾಗಿತ್ತು?
ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲ್‌ ಹಾಸನ್‌; ಅಲ್ಲೇ ಇದ್ದ ಶಿವಣ್ಣನ ಪ್ರತಿಕ್ರಿಯೆ ಏನಾಗಿತ್ತು?

ಕನ್ನಡ ಭಾಷೆ ಹುಟ್ಟಿಗೆ ತಮಿಳು ಕಾರಣ. ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂದು ಹಿರಿಯ ನಟ ಕಮಲ್‌ ಹಾಸನ್‌ ಆಡಿದ ಮಾತು ಇದೀಗ ಕನ್ನಡಿಗರನ್ನು ಕೆಣಕಿದೆ. ʻಥಗ್‌ ಲೈಫ್‌ʼ ಸಿನಿಮಾದ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್‌ ಅವರ ಮುಂದೆಯೇ ಈ ಮಾತನ್ನು ಹೇಳಿದ್ದಾರೆ ಕಮಲ್‌ ಹಾಸನ್‌. ಸದ್ಯ ಕಮಲ್‌ ಅವರ ಈ ಹೇಳಿಕೆಗೆ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಕಾಲಿವುಡ್‌ನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ʻಥಗ್‌ ಲೈಫ್‌ʼ ಸಿನಿಮಾ ಇನ್ನೇನು, ಜೂನ್‌ 5ರಂದು ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೇ ಚೆನ್ನೈನಲ್ಲಿ ಅದ್ಧೂರಿಯಾಗಿ ಈ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್‌ ಅತಿಥಿಯಾಗಿ ಆಗಮಿಸಿದ್ದರು. ಅವರ ಮುಂದೆಯೇ, ʻಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದುʼ ಎಂದು ಹೇಳಿದ್ದಾರೆ.

ಕಮಲ್‌ ಹಾಸನ್‌ ಹೇಳಿದ್ದೇನು?

ತಮಿಳುನಾಡಿಗೆ ಬಂದ ಶಿವರಾಜ್‌ಕುಮಾರ್‌ ಅವರನ್ನು ಸ್ವಾಗತಿಸಿದ ಕಮಲ್‌ ಹಾಸನ್‌, ಕನ್ನಡಿಗರ ಪ್ರೀತಿ ಮತ್ತು ಗೌರವಾದರಗಳಿಗೆ ನಮಿಸುತ್ತ ಮಾತನಾಡಿದ ಕಮಲ್‌ ಹಾಸನ್, ʻಆ ಊರಲ್ಲಿರುವ ನನ್ನ ಕುಟುಂಬ ಅದು. ಅದಕ್ಕಾಗಿಯೇ ಅವರು ಇಲ್ಲಿ ಬಂದಿದ್ದಾರೆ. ಹಾಗಾಗಿಯೇ ನಾನು ಮಾತು ಆರಂಭಿಸುವಾಗಲೇ ಉಸಿರೇ ತಮಿಳೇ ಎಂದೆ. ಏಕೆಂದರೆ ಕನ್ನಡವೂ ತಮಿಳಿನಿಂದ ಹುಟ್ಟಿ ಬೆಳೆದ ಭಾಷೆ. ನೀವೂ ಸಹ ಅದರೊಳಗೊಬ್ಬರುʼ ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ.

ಜೂನ್‌ 5ರಂದು ತೆರೆಗೆ

ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, ಮದ್ರಾಸ್ ಟಾಕೀಸ್ ಮತ್ತು ರೆಡ್ ಜೈಂಟ್ ಮೂವೀಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಲಾದ ʻಥಗ್‌ ಲೈಫ್‌ʼ ಸಿನಿಮಾ ಜೂನ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಈ ಚಿತ್ರ ರಿಲೀಸ್‌ ಆಗಲಿದೆ. ಕಮಲ್ ಹಾಸನ್ ಮತ್ತು ಸಿಲಂಬರಸನ್, ತ್ರಿಷಾ, ಅಭಿರಾಮಿ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಬಹುತಾರಾಗಣದ ಸಿನಿಮಾ

ಇನ್ನುಳಿದಂತೆ, ಶಾ ಕೃಷ್ಣನ್, ಐಶ್ವರ್ಯ ಲಕ್ಷ್ಮಿ, ಅಶೋಕ್ ಸೆಲ್ವನ್, ಸಾನ್ಯಾ ಮಲ್ಹೋತ್ರಾ, ಜೋಜು ಜಾರ್ಜ್, ನಾಸರ್, ಪಂಕಜ್ ತ್ರಿಪಾಠಿ, ಸಂಜನಾ ಕೃಷ್ಣಮೂರ್ತಿ, ಮಹೇಶ್ ಮಂಜ್ರೇಕರ್, ತನಿಕೆಲ್ಲ ಭರಣಿ,ವಡಿವುಕರಸಿ, ಚಿನ್ನಿ ಜಯಂತ್, ವೈಯಾಪುರಿ, ಭಗವತಿ ಪೆರುಮಾಳ್, ಬಾಬುರಾಜ್, ಅಲಿ ಫಜಲ್, ರೋಹಿತ್ ಸರಾಫ್, ಅರ್ಜುನ್ ಚಿದಂಬರಂ, ಚೇತನ್, ರಾಜಶ್ರೀ ದೇಶಪಾಂಡೆ, ಶ್ರೀಕಾಂತ್ ಮೆನನ್ ಮತ್ತು ನಿತ್ಯ ಶ್ರೀ ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ಎ. ಆರ್. ರೆಹಮಾನ್ ಸಂಗೀತ ಸಂಯೋಜನೆ, ರವಿ ಕೆ. ಚಂದ್ರನ್ ಛಾಯಾಗ್ರಹಣ ಮತ್ತು ಎ. ಶ್ರೀಕರ್ ಪ್ರಸಾದ್ ಸಂಕಲನ ಇದೆ

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.