OTT Movies: ಆರಗನ್‌, ಲವ್‌ ರೆಡ್ಡಿ, ಆಲ್ ವಿ ಇಮ್ಯಾಜಿನ್ ಆ್ಯಸ್‌ ಲೈಟ್; ಇಂದು ಒಟಿಟಿಯಲ್ಲಿ ಬಿಡುಗಡೆಯಾದ ಟಾಪ್‌ ಸಿನಿಮಾಗಳಿವು
ಕನ್ನಡ ಸುದ್ದಿ  /  ಮನರಂಜನೆ  /  Ott Movies: ಆರಗನ್‌, ಲವ್‌ ರೆಡ್ಡಿ, ಆಲ್ ವಿ ಇಮ್ಯಾಜಿನ್ ಆ್ಯಸ್‌ ಲೈಟ್; ಇಂದು ಒಟಿಟಿಯಲ್ಲಿ ಬಿಡುಗಡೆಯಾದ ಟಾಪ್‌ ಸಿನಿಮಾಗಳಿವು

OTT Movies: ಆರಗನ್‌, ಲವ್‌ ರೆಡ್ಡಿ, ಆಲ್ ವಿ ಇಮ್ಯಾಜಿನ್ ಆ್ಯಸ್‌ ಲೈಟ್; ಇಂದು ಒಟಿಟಿಯಲ್ಲಿ ಬಿಡುಗಡೆಯಾದ ಟಾಪ್‌ ಸಿನಿಮಾಗಳಿವು

Todayʼs OTT Movies: ಇಂದು ಒಂದೇ ದಿನದಲ್ಲಿ 12 ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಒಟಿಟಿ ಅಂಗಳ ತಲುಪಿವೆ. ಆ 12ರಲ್ಲಿ 7 ಕಂಟೆಂಟ್‌ಗಳು ತುಂಬಾ ವಿಶೇಷ ಎನಿಸಿಕೊಂಡಿವೆ. ಅವಾರ್ಡ್‌ ವಿನ್ನಿಂಗ್‌ ಮಲಯಾಳಂ ಸಿನಿಮಾ ಜತೆಗೆ ಹಾರರ್ ಫ್ಯಾಂಟಸಿ, ಥ್ರಿಲ್ಲರ್, ಆಕ್ಷನ್, ರೊಮ್ಯಾಂಟಿಕ್, ಅಡ್ವೆಂಚರ್ ಥ್ರಿಲ್ಲರ್ ಸಿನಿಮಾಗಳೂ ಒಟಿಟಿಗೆ ಆಗಮಿಸಿವೆ.

ಒಟಿಟಿಯಲ್ಲಿ ಜ. 3ರಂದು ಹತ್ತು ಹಲವು ಸಿನಿಮಾಗಳು ಒಟಿಟಿಗೆ ಪ್ರವೇಶಿಸಲಿವೆ.
ಒಟಿಟಿಯಲ್ಲಿ ಜ. 3ರಂದು ಹತ್ತು ಹಲವು ಸಿನಿಮಾಗಳು ಒಟಿಟಿಗೆ ಪ್ರವೇಶಿಸಲಿವೆ.

Today OTT Movies: ಇಂದು (ಜನವರಿ 3) ಒಂದೇ ದಿನ 12 ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಒಟಿಟಿಯಲ್ಲಿ ಬಿಡುಗಡೆಯಾಗಿವೆ. ಇವುಗಳಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಪ್ರತಿಷ್ಠಿತ ಚಿತ್ರ ಮತ್ತು ತೆಲುಗು ಸಿನಿಮಾಗಳ ಜತೆಗೆ, ಹಾರರ್‌ ಫ್ಯಾಂಟಸಿ, ಥ್ರಿಲ್ಲರ್, ರೊಮ್ಯಾಂಟಿಕ್ ಮತ್ತು ಫ್ಯಾಮಿಲಿ ಆಕ್ಷನ್ ಥ್ರಿಲ್ಲರ್ ಜಾನರ್‌ನ ಸಿನಿಮಾಗಳೂ ಇವೆ. ಹಾಗಾದರೆ ಯಾವ ಒಟಿಟಿಯಲ್ಲಿ ಯಾವೆಲ್ಲ ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಿವೆ ಎಂಬುದನ್ನು ಇಲ್ಲಿ ತಿಳಿಯೋಣ.

ಅಮೆಜಾನ್ ಪ್ರೈಮ್ ಒಟಿಟಿ

  • ಗುಣ ಸೀಸನ್ 2 (ಹಿಂದಿ ಥ್ರಿಲ್ಲರ್ ಡ್ರಾಮಾ ವೆಬ್ ಸರಣಿ) - ಜನವರಿ 3
  • ಐ ವಾಂಟ್ ಟು ಟಾಕ್ (ಹಿಂದಿ ಸಿನಿಮಾ) - ಜನವರಿ 3
  • ಕ್ರಿಸ್ಮಸ್ ಈವ್ ಇನ್ ಮಿಲ್ಲರ್ಸ್ ಪಾಯಿಂಟ್ (ಇಂಗ್ಲಿಷ್ ಕಾಮಿಡಿ ಡ್ರಾಮಾ ಸಿನಿಮಾ)- ಜನವರಿ 3
  • ವೈಸ್ಡ್ ಇಂಗ್ಲಿಷ್ (ಮ್ಯೂಸಿಕಲ್ ಫ್ಯಾಂಟಸಿ ಸಿನಿಮಾ)- ಜನವರಿ 3

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಒಟಿಟಿ

  • ಆಲ್ ವಿ ಇಮ್ಯಾಜಿನ್ ಆ್ಯಸ್‌ ಲೈಟ್ (ಪ್ರಶಸ್ತಿ ವಿಜೇತ ಮಲಯಾಳಂ ಸಿನಿಮಾ) - ಜನವರಿ 3
  • ಡೇಂಜರಸ್ ವಾಟರ್ಸ್ (ಇಂಗ್ಲಿಷ್ ಆಕ್ಷನ್ ಥ್ರಿಲ್ಲರ್ ಚಿತ್ರ)- ಜನವರಿ 3
  • ಟೈಗರ್ಸ್ ಟ್ರಿಗರ್ (ಚೈನೀಸ್ ಫ್ಯಾಮಿಲಿ ಆಕ್ಷನ್ ಸಿನಿಮಾ)- ಜನವರಿ 3

ನೆಟ್‌ಫ್ಲಿಕ್ಸ್‌ ಒಟಿಟಿ

  • ಸೆಲ್ಲಿಂಗ್ ದಿ ಸಿಟಿ (ಇಂಗ್ಲಿಷ್ ವೆಬ್ ಸರಣಿ)- ಜನವರಿ 3
  • ವೆನ್ ದಿ ಸ್ಟಾರ್ಸ್ ಗಾಸಿಪ್ (ಕೊರಿಯನ್ ರೊಮ್ಯಾಂಟಿಕ್ ವೆಬ್ ಸರಣಿ)- ಜನವರಿ 4

ಆಹಾ ಒಟಿಟಿ

  • ಲವ್ ರೆಡ್ಡಿ (ತೆಲುಗು ರೊಮ್ಯಾಂಟಿಕ್ ಡ್ರಾಮಾ ಚಿತ್ರ)- ಜನವರಿ 3
  • ಆರಗನ್ (ತಮಿಳು ಹಾರರ್ ಫ್ಯಾಂಟಸಿ ಥ್ರಿಲ್ಲರ್ ಚಿತ್ರ)

ದಿ ಮ್ಯಾನ್ ಆನ್ ದಿ ರೋಡ್ (ಇಟಾಲಿಯನ್ ಥ್ರಿಲ್ಲರ್ ಸಿನಿಮಾ) - ವಿಆರ್‌ಎಫ್ ಒಟಿಟಿ - ಜನವರಿ 3

ಒಟ್ಟು 12 ಸಿನಿಮಾ, ವೆಬ್‌ಸಿರೀಸ್‌ಗಳು

ಇಂದು (ಜನವರಿ 3) ಹಲವು ಒಟಿಟಿಗಳಲ್ಲಿ 12 ಸಿನಿಮಾ ಮತ್ತು ವೆಬ್‌ಸರಣಿಗಳು ಸ್ಟ್ರೀಮಿಂಗ್‌ ಆರಂಭಿಸಿವೆ. ಈ 12 ಕಂಟೆಂಟ್‌ಗಳಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮಲಯಾಳಂ ಚಿತ್ರ ಆಲ್ ವಿ ಇಮ್ಯಾಜಿನ್ ಆ್ಯಸ್‌ ಲೈಟ್ ಎಲ್ಲರ ಗಮನ ಸೆಳೆದ ಸಿನಿಮಾ. ಇದರ ಜತೆಗೆ ತೆಲುಗು ರೊಮ್ಯಾಂಟಿಕ್ ಡ್ರಾಮಾ ಲವ್ ರೆಡ್ಡಿ ಮತ್ತು ಸೌತ್‌ ಭಾಷೆಗಳಿಗೆ ಡಬ್‌ ಆದ ಬಿಗ್ ಗೇಮ್ ಮತ್ತು ದಿ ಮ್ಯಾನ್ ಆನ್ ದಿ ರೋಡ್ ಸಿನಿಮಾಗಳು ಆಸಕ್ತಿ ಕೆರಳಿಸಿವೆ.

ಗಮನ ಸೆಳೆದ ಕಂಟೆಂಟ್‌ಗಳು

ಹ್ಯೂಮರಸ್‌ ಜಾನರ್‌ನ ಹಿಂದಿ ಚಿತ್ರ ಐ ವಾಂಟ್ ಟು ಟಾಕ್, ತಮಿಳು ಹಾರರ್‌ ಫ್ಯಾಂಟಸಿ ಚಿತ್ರ ಅರಗನ್ ಮತ್ತು ಅಭಿಷೇಕ್ ಬಚ್ಚನ್ ಅವರ ತಂದೆ-ಮಗಳ ಬಂಧವನ್ನು ಪ್ರತಿಬಿಂಬಿಸುವ ಥ್ರಿಲ್ಲರ್ ಸರಣಿ ಗುಣ ಸೀಸನ್‌ 2 ಕೂಡ ವಿಶೇಷವಾಗಿದೆ.

ಬರಾಕ್‌ ಒಬಾಮ ಇಷ್ಟಪಟ್ಟ ಸಿನಿಮಾ

ಕಾನ್‌ ಸಿನಿಮೋತ್ಸವದಲ್ಲಿ ಪ್ರಶಸ್ತಿ ವಿಜೇತ ಸಿನಿಮಾ 'ಆಲ್ ವಿ ಇಮ್ಯಾಜಿನ್ ಆ್ಯಸ್‌ ಲೈಟ್' ಇಂದು (ಜನವರಿ 3) ಡಿಸ್ನಿ + ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಮೂಲ ಮಲಯಾಳಂ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಕಾನಿ ಕುಶ್ರುತಿ ಮತ್ತು ದಿವ್ಯಾ ಪ್ರಭಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಪಾಯಲ್ ಕಪಾಡಿಯಾ ನಿರ್ದೇಶಿಸಿದ್ದಾರೆ. ಈ ಚಿತ್ರವು ಮುಂಬೈ ನಗರದಲ್ಲಿ ವಾಸಿಸುವ ಇಬ್ಬರು ದಾದಿಯರ ಸುತ್ತ ಸುತ್ತುತ್ತದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ.

Whats_app_banner