ಇಂದು ಒಟಿಟಿಯಲ್ಲಿ ಬಿಡುಗಡೆಯಾದ ಟಾಪ್‌ 5 ಸಿನಿಮಾಗಳಿವು; ಸ್ಯಾಂಡಲ್‌ವುಡ್‌ ನಟ ವಿಲನ್‌ ಆಗಿ ನಟಿಸಿದ ಚಿತ್ರವೂ ಲಿಸ್ಟ್‌ನಲ್ಲಿದೆ
ಕನ್ನಡ ಸುದ್ದಿ  /  ಮನರಂಜನೆ  /  ಇಂದು ಒಟಿಟಿಯಲ್ಲಿ ಬಿಡುಗಡೆಯಾದ ಟಾಪ್‌ 5 ಸಿನಿಮಾಗಳಿವು; ಸ್ಯಾಂಡಲ್‌ವುಡ್‌ ನಟ ವಿಲನ್‌ ಆಗಿ ನಟಿಸಿದ ಚಿತ್ರವೂ ಲಿಸ್ಟ್‌ನಲ್ಲಿದೆ

ಇಂದು ಒಟಿಟಿಯಲ್ಲಿ ಬಿಡುಗಡೆಯಾದ ಟಾಪ್‌ 5 ಸಿನಿಮಾಗಳಿವು; ಸ್ಯಾಂಡಲ್‌ವುಡ್‌ ನಟ ವಿಲನ್‌ ಆಗಿ ನಟಿಸಿದ ಚಿತ್ರವೂ ಲಿಸ್ಟ್‌ನಲ್ಲಿದೆ

ಇಂದು (ಮೇ 8) ಅಮೆಜಾನ್‌ ಪ್ರೈಮ್‌ ವಿಡಿಯೋ, ಈ ಟಿವಿ ವಿನ್‌ ಮತ್ತು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಹಲವು ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಿವೆ. ಆ ಪೈಕಿ ಟಾಪ್‌ 5 ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಇಂದು ಒಟಿಟಿಯಲ್ಲಿ ಬಿಡುಗಡೆಯಾದ ಟಾಪ್‌ 5 ಸಿನಿಮಾಗಳಿವು; ತೆಲುಗಿನ ಮೂರು, ತಮಿಳಿನ ಎರಡು ಚಿತ್ರಗಳ ಡಿಜಿಟಲ್‌ ಸ್ಟ್ರೀಮಿಂಗ್‌ ಶುರು
ಇಂದು ಒಟಿಟಿಯಲ್ಲಿ ಬಿಡುಗಡೆಯಾದ ಟಾಪ್‌ 5 ಸಿನಿಮಾಗಳಿವು; ತೆಲುಗಿನ ಮೂರು, ತಮಿಳಿನ ಎರಡು ಚಿತ್ರಗಳ ಡಿಜಿಟಲ್‌ ಸ್ಟ್ರೀಮಿಂಗ್‌ ಶುರು (imdb)

ಒಟಿಟಿಯಲ್ಲಿ ಇಂದು (ಮೇ 8) ಬೇರೆ ಬೇರೆ ಭಾಷೆಯ ಹಲವು ಸಿನಿಮಾಗಳು ಪ್ರೀಮಿಯರ್‌ ಆರಂಭಿಸಿವೆ. ಆ ಪೈಕಿ ಟಾಪ್‌ 5 ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ. ತಮಿಳಿನ ಎರಡು ಸಿನಿಮಾಗಳು, ತೆಲುಗಿನ ಮೂರು ಚಿತ್ರಗಳು ಸ್ಟ್ರೀಮಿಂಗ್‌ ಆರಂಭಿಸಿದ್ದು, ಇದರಲ್ಲಿ ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ ಮತ್ತು ತಮನ್ನಾ ಭಾಟಿಯಾ ನಟಿಸಿದ ಚಿತ್ರವೂ ಸೇರಿದೆ.

ಗುಡ್‌ ಬ್ಯಾಡ್‌ ಅಗ್ಲಿ: ಕಾಲಿವುಡ್ ನಟ ಅಜಿತ್ ಕುಮಾರ್‌ ನಟನೆಯ ʻಗುಡ್‌ ಬ್ಯಾಡ್‌ ಅಗ್ಲಿʼ ಸಿನಿಮಾ ಇಂದಿನಿಂದ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಕಳೆದ ತಿಂಗಳ ಏಪ್ರಿಲ್‌ 10ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಅಧಿಕ್‌ ರವಿಚಂದ್ರನ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಭು, ಅರ್ಜುನ್ ದಾಸ್, ಪ್ರಸನ್ನ, ಸುನಿಲ್, ರಾಹುಲ್ ದೇವ್, ಯೋಗಿ ಬಾಬು, ಪ್ರಿಯಾ ಪ್ರಕಾಶ್ ವಾರಿಯರ್ ಸೇರಿ ಹಲವರು ನಟಿಸಿದ್ದಾರೆ.

ಜಾಕ್‌: ಟಾಲಿವುಡ್‌ನ ಕ್ರೇಜಿ ಹೀರೋ ಡಿಜೆ ಟಿಲ್ಲು ಮತ್ತು ಟಿಲ್ಲು ಸ್ಕ್ವೇರ್ ಚಿತ್ರಗಳ ಮೂಲಕ ಸಕ್ಸಸ್‌ ಸಿನಿಮಾ ಕೊಟ್ಟಿರುವ ಸಿದ್ದು ಜೊನ್ನಲಗಡ್ಡ ಇದೀಗ ಜಾಕ್‌ ಸಿನಿಮಾ ಒಟಿಟಿಗೆ ಆಗಮಿಸಿದ್ದಾರೆ. ಏಪ್ರಿಲ್‌ 10ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದ್ದ ಈ ಸಿನಿಮಾವನ್ನು ಬೊಮ್ಮರಿಲು ಭಾಸ್ಕರ್‌ ನಿರ್ದೇಶನ ಮಾಡಿದ್ದಾರೆ. ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಇದೀಗ ಮೂಲ ತೆಲುಗಿನ ಜತೆಗೆ ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ.

ಓದೆಲ್ಲ 2: ಏಪ್ರಿಲ್‌ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ತಮನ್ನಾ ಭಾಟಿಯಾ, ವಸಿಷ್ಠ ಸಿಂಹ ಖಳನಾಯಕನಾಗಿ ನಟಿಸಿರುವ ʻಓದೆಲ್ಲ 2ʼ ಚಿತ್ರವೀಗ ಒಟಿಟಿಗೆ ಆಗಮಿಸಿದೆ. ಚಿತ್ರಮಂದಿರಗಳಲ್ಲಿ ತೆರೆಕಂಡು ಕೇವಲ 20 ದಿನಕ್ಕೆ ಡಿಜಿಟಲ್‌ ಪ್ರೀಮಿಯರ್‌ಗೆ ಬಂದಿದೆ. ಅಶೋಕ್‌ ತೇಜ ನಿರ್ದೇಶನದ ಈ ಚಿತ್ರ, ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಇದೀಗ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಅಮೆಜಾನ್‌ ಪ್ರೈಂ ಒಟಿಟಿಗೆ ಆಗಮಿಸಿದೆ.

ಜಾಕ್‌: ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ: ಪ್ರದೀಪ್‌ ಮಾಚಿರಾಜು ನಾಯಕನಾಗಿ ನಟಿಸಿರುವ ತೆಲುಗಿನ ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ ಸಿನಿಮಾ ಇದೀಗ ಒಟಿಟಿಗೆ ಆಗಮಿಸಿದೆ. ಏಪ್ರಿಲ್‌ 11ರಂದು ತೆರೆಕಂಡಿದ್ದ ಈ ಸಿನಿಮಾದಲ್ಲಿ ಗೆಟಪ್‌ ಶ್ರೀನು, ಸತ್ಯ, ವೆನ್ನೆಲಾ ಕಿಶೋರ್‌, ಬ್ರಹ್ಮಾನಂದಂ ಸೇರಿ ಹಲವರು ಮುಖ್ಯಭೂಮಿಕೆಯಲ್ಲಿದ್ದಾರೆ. ಇದೀಗ ಈ ಸಿನಿಮಾ ಇಂದಿನಿಂದ ಈಟಿವಿ ವಿನ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ.

ಟೆನ್‌ ಹವರ್ಸ್‌: ತಮಿಳು ನಟ ಸಿಬಿ ಸತ್ಯರಾಜ್ ನಟಿಸಿದ ʻಟೆನ್ ಅವರ್ಸ್ʼ ಸಿನಿಮಾ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಿಗೆ ಆಗಮಿಸಿತ್ತು. ಚೆನ್ನೈನಿಂದ ಕೊಯಮತ್ತೂರಿಗೆ ಬಸ್ ಪ್ರಯಾಣದ ಸಮಯದಲ್ಲಿ ನಡೆಯುವ ಕೊಲೆಯ ಸುತ್ತ ಇಡೀ ಸಿನಿಮಾ ಸುತ್ತಲಿದೆ. ಈ ಸಿನಿಮಾ ಇಂದಿನಿಂದ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.