ಕನ್ನಡ ಸುದ್ದಿ  /  ಮನರಂಜನೆ  /  Kalki Collection: 4ನೇ ದಿನ ಕಲ್ಕಿ 2898 ಎಡಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು? ಭಾರತದಲ್ಲಿ ನೂರಾರು ಕೋಟಿ ಬಾಚಿಕೊಂಡ ಪ್ರಭಾಸ್‌ ಸಿನಿಮಾ

Kalki collection: 4ನೇ ದಿನ ಕಲ್ಕಿ 2898 ಎಡಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು? ಭಾರತದಲ್ಲಿ ನೂರಾರು ಕೋಟಿ ಬಾಚಿಕೊಂಡ ಪ್ರಭಾಸ್‌ ಸಿನಿಮಾ

Kalki 2898 AD box office collection day 4: ಪ್ರಭಾಸ್‌- ದೀಪಿಕಾ ಪಡುಕೋಣೆ ನಟನೆಯ, ನಾಗ್‌ ಅಶ್ವಿನ್‌ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾವು ಮೊದಲ ದಿನ ಭಾರತದಲ್ಲಿ 95.3 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ನಾಲ್ಕನೇ ದಿನ 85 ಕೋಟಿ ರೂಪಾಯಿ ಗಳಿಕೆ ಮಾಡಿದೆ.

Kalki collection: 4ನೇ ದಿನ ಕಲ್ಕಿ 2898 ಎಡಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌
Kalki collection: 4ನೇ ದಿನ ಕಲ್ಕಿ 2898 ಎಡಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ (HT_PRINT)

Kalki 2898 AD box office collection day 4: ನಾಗ್‌ ಅಶ್ವಿನಿ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾ ಜೂನ್‌ 27ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಸಕ್‌ನಿಲ್ಕ್‌.ಕಾಂ ಪ್ರಕಾರ ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್‌ ಬಚ್ಚನ್‌ ಮತ್ತು ಕಮಲ್‌ ಹಾಸನ್‌ ನಟಿಸಿರುವ ಕಲ್ಕಿ 2898 ಎಡಿ ಸಿನಿಮಾವು ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ ಭಾನುವಾರದವರೆಗೆ ಒಟ್ಟು 302.4 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಕಲ್ಕಿ 2898 ಎಡಿ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವರದಿ

ಸಕ್‌ನಿಲ್ಕ್‌.ಕಾಂ ವರದಿ ಪ್ರಕಾರ ಕಲ್ಕಿ 2898 ಎಡಿ ಸಿನಿಮಾವು ಮೊದಲ ದಿನ 95.3 ಕೋಟಿ ರೂಪಾಯಿ, ಶುಕ್ರವಾರ 57.6 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಶನಿವಾರ ಈ ಸಿನಿಮಾದ ಗಳಿಕೆ ಶುಕ್ರವಾರಕ್ಕಿಂತ ಹೆಚ್ಚಾಗಿತ್ತು. ಶನಿವಾರ 64.5 ಕೋಟಿ ರೂಪಾಯಿ ಮತ್ತು ಭಾನುವಾರ 85 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲಿ ಈ ಸಿನಿಮಾವು ಒಟ್ಟಾರೆ 302.4 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಜಾಗತಿಕವಾಗಿ ಕಲ್ಕಿ 2898 ಎಡಿ ಚಲನಚಿತ್ರವು ಮೊದಲ ಮೂರು ದಿನಗಳಲ್ಲಿ 415 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾನುವಾರದ ಜಾಗತಿಕ ಲೆಕ್ಕ ಇನ್ನೂ ಬಂದಿಲ್ಲ. ಈ ಸಿನಿಮಾವು ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ 2ಡಿ ಮತ್ತು 3ಡಿ ಅವತರಣಿಕೆಗಳಲ್ಲಿ ಬಿಡುಗಡೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ನನಗೆ ನರ್ವಸ್‌ ಆಗುತ್ತಿದ್ದಾಗ ಪ್ರಭಾಸ್‌ ಸಲಹೆ ನೀಡುತ್ತಿದ್ದರು ಎಂಬ ವಿವರವನ್ನು ವೈರಲ್‌ ಬಾಲಿವುಡ್‌ಗೆ ಹುಮು ಹೇಳಿದ್ದಾರೆ. "ನನಗೆ ಈ ಭಾಗದಲ್ಲಿ ಅಮಿತಾಬ್‌ ಬಚ್ಚನ್‌ ಜತೆಗೆ ಯಾವುದೇ ಸೀನ್‌ ಇರಲಿಲ್ಲ. ಬಹುಶಃ ಮುಂದಿನ ಭಾಗದಲ್ಲಿ ನನಗೆ ಸೀನ್‌ ದೊರಕುವ ನಿರೀಕ್ಷೆಯಿದೆ. ಆದರೆ, ನನಗೆ ಪ್ರಭಾಸ್‌ ಮತ್ತು ದೀಪಿಕಾ ಜತೆ ಸಾಕಷ್ಟು ಸೀನ್‌ಗಳಿದ್ದವು. ಪ್ರಭಾಸ್‌ ಅವರನ್ನು ಡಾರ್ಲಿಂಗ್‌ ಎಂದು ಸರಿಯಾಗಿಯೇ ಕರೆಯಲಾಗುತ್ತದೆ. ನನಗೆ ವೈಯಕ್ತಿಕವಾಗಿ ಸಾಕಷ್ಟು ವಿಷಯ ಕಲಿಸಿದ್ದಾರೆ. ಆಕ್ಷನ್‌ ಸೀಕ್ವೆನ್ಸ್‌ನಲ್ಲಿ ನನ್ನನ್ನು ಪಕ್ಕಕ್ಕೆ ಕರೆದು ಸಲಹೆ ನೀಡಿದ್ದರು. ಅವರು ಆ ಸಲಹೆ ನೀಡಬೇಕೆಂದಿರಲಿಲ್ಲ. ಆದರೆ, ಅವರಿಗೆ ಹೊಸಬರ ಕುರಿತ ಕಾಳಜಿಯನ್ನು ಅದು ತೋರಿಸುತ್ತದೆ. ನಾನು ಈಗಾಗಲೇ ಪ್ರಭಾಸ್‌ರ ಫ್ಯಾನ್‌ ಆಗಿದ್ದೇನೆ. ಅವರ ಮಾತುಗಳು ನನಗೆ ನನ್ನ ಸಹೋದರ ಪ್ರೀತಿಯಿಂದ ಸಲಹೆ ನೀಡಿದಂತೆ ಇತ್ತು" ಎಂದು ವೈರಲ್‌ ಬಾಲಿವುಡ್‌ಗೆ ನೀಡಿದ ಸಂದರ್ಶನದಲ್ಲಿ ಹುಮು ಹೇಳಿದ್ದಾರೆ.

ಕಲ್ಕಿಯಲ್ಲಿ ಶ್ರೀಕೃಷ್ಣನ ವೇಷಧಾರಿ ಯಾರು?

ಕಲ್ಕಿ 2898 ಎಡಿ ಸಿನಿಮಾದಲ್ಲಿ ಶ್ರೀಕೃಷ್ಣನ ಪಾತ್ರದ ಪರಿಚಯ ಮಾಡಲಾಗಿಲ್ಲ. ಕೃಷ್ಣನ ಮುಖವನ್ನು ಕಪ್ಪಗೆ ತೋರಿಸಲಾಗಿತ್ತು. ಕಣ್ಣು ಮೂಗು ತೋರಿಸಿರಲಿಲ್ಲ. ತಮಿಳು ನಟ ಕೃಷ್ಣಕುಮಾರ್ ಈ ಚಿತ್ರದಲ್ಲಿ ಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದಾರೆ. ಅರ್ಜುನ್‌ ದಾಸ್‌ ಕೃಷ್ಣನ ಪಾತ್ರಕ್ಕೆ ಧ್ವನಿ ನೀಡಿದ್ದರು. 2010ರಲ್ಲಿ ತೆರೆಕಂಡ 'ಕಾದಲಗಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೃಷ್ಣಕುಮಾರ್ ಹಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಒಟಿಟಿಯಲ್ಲಿ ಕಲ್ಕಿ ಸಿನಿಮಾ ಬಿಡುಗಡೆ ಯಾವಾಗ?

ಅಮೆಜಾನ್ ಪ್ರೈಮ್ ವಿಡಿಯೋ ಕಲ್ಕಿ ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿದ್ದು ಥಿಯೇಟರ್‌ನಲ್ಲಿ ಸಿನಿಮಾದ ಅಬ್ಬರ ಕಡಿಮೆಯಾದ ಬಳಿಕ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಕಲ್ಕಿಯ ಡಿಜಿಟಲ್ ಸ್ಟ್ರೀಮಿಂಗ್ ಅಮೆಜಾನ್‌ ವಿಡಿಯೋದಲ್ಲಿ ಇರಲಿದೆ ಎಂದು ಚಿತ್ರತಂಡವು ಟೈಟಲ್ ಕಾರ್ಡ್‌ನಲ್ಲಿ ಪ್ರಕಟಿಸಿದೆ. ಭಾರೀ ಪೈಪೋಟಿಯ ನಡುವೆಯೇ ಅಮೆಜಾನ್ ಪ್ರೈಮ್ ಸುಮಾರು 150 ಕೋಟಿಗೆ ಈ ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.