'HIT 3' ಸಿನಿಮಾದ ಹೊಸ ಪೋಸ್ಟರ್‌ನಲ್ಲಿ ಹೇಗಿದೆ ನೋಡಿ ನಾನಿ ಲುಕ್; ಬಿಡುಗಡೆ ದಿನಾಂಕವೂ ಫಿಕ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  'Hit 3' ಸಿನಿಮಾದ ಹೊಸ ಪೋಸ್ಟರ್‌ನಲ್ಲಿ ಹೇಗಿದೆ ನೋಡಿ ನಾನಿ ಲುಕ್; ಬಿಡುಗಡೆ ದಿನಾಂಕವೂ ಫಿಕ್ಸ್‌

'HIT 3' ಸಿನಿಮಾದ ಹೊಸ ಪೋಸ್ಟರ್‌ನಲ್ಲಿ ಹೇಗಿದೆ ನೋಡಿ ನಾನಿ ಲುಕ್; ಬಿಡುಗಡೆ ದಿನಾಂಕವೂ ಫಿಕ್ಸ್‌

ಟಾಲಿವುಡ್‌ ನಟ ನಾನಿ ತಮ್ಮ ಹೊಸ ಸಿನಿಮಾದ ಬಗ್ಗೆ ಅಪ್‌ಡೇಟ್‌ ನೀಡಿದ್ದಾರೆ. 'HIT3' ಸಿನಿಮಾ ಪೋಸ್ಟರ್‌ ಜೊತೆ ಬಿಡುಗಡೆ ದಿನಾಂಕವನ್ನೂ ಹಂಚಿಕೊಂಡಿದ್ದಾರೆ. ಆ ಕುರಿತು ಹೆಚ್ಚಿನ ಮಾಹಿತಿ ಇಲ್ಲೇ ಇದೆ ಗಮನಿಸಿ.

'HIT 3' ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್‌
'HIT 3' ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್‌

ತೆಲುಗಿನಲ್ಲಿ ರೊಮ್ಯಾಂಟಿಕ್‌ ಸಿನಿಮಾಗಳ ಜತೆಗೆ ಮಾಸ್‌ ಅವತಾರಕ್ಕೂ ಸೈ ಎನಿಸಿಕೊಳ್ಳುವಂಥ ನಟ ನಾನಿ. ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿರುವ ಇದೇ ನಾನಿ, ಇತ್ತೀಚಿನ ದಿನಗಳಲ್ಲಿ ಅಪ್ಪಟ ಲವ್‌ಸ್ಟೋರಿ ಸಿನಿಮಾಗಳಿಗಿಂತ ಹೆಚ್ಚಾಗಿ ಮಾಸ್‌ ಎಲಿಮೆಂಟ್‌ ಇರುವ ಸಿನಿಮಾಗಳತ್ತ ಒಲವು ಬೆಳೆಸಿಕೊಳ್ಳುತ್ತಿದ್ದಾರೆ. ಅದರಂತೆ, ಹಿಟ್‌ ಫ್ರಾಂಚೈಸಿಯ ಮೂರನೇ ಕಂತಿನ ಬಗ್ಗೆ ನಾನಿ ಅಪ್‌ಡೇಟ್‌ ನೀಡಿದ್ದಾರೆ. HIT 3 ಚಿತ್ರದ ಪೋಸ್ಟರ್‌ ಝಲಕ್‌ ಬಿಡುಗಡೆ ಮಾಡಿ, ಕುತೂಹಲಕ್ಕೆ ಒಗ್ಗರಣೆ ಹಾಕಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವನ್ನೂ ರಿವೀಲ್‌ ಮಾಡಿದ್ದಾರೆ.

ಹೌದು, ನಾನಿ ತಮ್ಮ ಹೊಸ ಸಿನಿಮಾದ ಬಗ್ಗೆ ಅಪ್‌ಡೇಟ್‌ ನೀಡಿದ್ದಾರೆ. ಇತ್ತೀಚೆಗಷ್ಟೇ ಅವರು ಪೋಸ್ಟರ್ ಕೂಡ ಶೇರ್ ಮಾಡಿಕೊಂಡಿದ್ದಾರೆ. ನಾನಿ ನಾಯಕ ನಟನಾಗಿ ಅಭಿನಯಿಸುತ್ತಿರುವ 'HIT3' ಸಿನಿಮಾ ಪೋಸ್ಟರ್‌ನಲ್ಲಿ ಅವರ ಫಸ್ಟ್‌ ಲುಕ್ ರಿವೀಲ್ ಆಗಿದೆ. ಈಗ ಅವರು ಹಂಚಿಕೊಂಡ ಪೋಸ್ಟರ್‌ನಲ್ಲಿ ಬ್ಲಾಕ್‌ ಹಾರ್ಸ್‌ ಜೊತೆ ಹಿಮದಲ್ಲಿ ತಾವೂ ಕಪ್ಪು ಬಣ್ಣದ ವಸ್ತ್ರ ಧರಿಸಿದ್ದಾರೆ.

ಈ ಹಿಂದೆ ಬಿಡುಗಡೆಯಾದ ಇದೇ ಸಿನಿಮಾದ ಪೋಸ್ಟರ್‌ನಲ್ಲಿ ನಾನಿ ಸಿಗಾರ್ ಸೇದುತ್ತ ಕಾರ್‌ನಲ್ಲಿ ಕುಳಿತಿರುವುದು ಕಾಣಿಸಿತ್ತು. ಜೊತೆಗೆ ಕಾರ್‌ನಲ್ಲಿ ರಕ್ತ ಸಿಕ್ತವಾದ ಕೊಡಲಿಯೊಂದು ಅವರ ಮುಖಕ್ಕೆ ಅಡ್ಡ ಬಂದಂತಿತ್ತು. 'HIT3' ಸಿನಿಮಾ ಯಾವಾಗ ರಿಲೀಸ್‌ ಆಗುತ್ತದೆ ಎಂದು ಕಾದಿದ್ದವರಿಗೆ ಇದೇ ಪೋಸ್ಟರ್ ಜೊತೆ ಉತ್ತರವೂ ಸಿಕ್ಕಿದೆ. ಹಾಗಾದರೆ ಈ ಸಿನಿಮಾ ಯಾವಾಗ ರಿಲೀಸ್‌ ಆಗುತ್ತದೆ ಎಂಬ ಪ್ರಶ್ನೆಗೆ ಉತ್ತರವೂ ಇಲ್ಲೇ ಇದೆ ಗಮನಿಸಿ.

ಸಿನಿಮಾ ಯಾವಾಗ ರಿಲೀಸ್‌ ಆಗಲಿದೆ?

ನಾನಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟರ್ ಹಂಚಿಕೊಂಡ ನಂತರ ಸಾಕಷ್ಟು ಜನರ ಕುತೂಹಲ ಹೆಚ್ಚಿದೆ. ನಾನಿ ಅಭಿಮಾನಿಗಳು ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದಿದ್ದಾರೆ. ಹೀಗಿರುವಾಗ ಪೋಸ್ಟರ್‌ನಲ್ಲೇ ಈ ಪ್ರಶ್ನೆಗೆ ಉತ್ತರವಿದೆ. 'HIT3' ಸಿನಿಮಾ 2025ರ ಮೇ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಈ ಸಿನಿಮಾದ ಕಥೆ ಏನು?
ಈ ಸಿನಿಮಾ ಯಾವ ರೀತಿ ಇರಬಹುದು ಎಂಬ ಕುತೂಹಲಕ್ಕೆ ಉತ್ತರ ಎಂಬಂತೆ, ಇದೊಂದು ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಸಿನಿಮಾ. "ಲೆಸ್ ಆಫ್ ಎ ಪೋಲೀಸ್, ಮೋರ್ ಆಫ್ ಎ ಕ್ರಿಮಿನಲ್. ಅರ್ಜುನ್ ಸರ್ಕಾರ್ ಟೇಕ್ ಚಾರ್ಜ್" ಎಂದು ನಾನಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದು ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. HIT 2 ನ ಕ್ಲೈಮ್ಯಾಕ್ಸ್‌ನಲ್ಲಿ ನಾನಿ ಪಾತ್ರವನ್ನು ಬಹಿರಂಗಪಡಿಸಲಾಗಿತ್ತು.ಎಲ್ಲಾ ಕೊಲೆಗಳ ಹಿಂದಿನ ಸತ್ಯವನ್ನು ತನಿಖೆ ಮಾಡುವ ಕಥೆ ಈ ಸಿನಿಮಾದಲ್ಲಿದೆ.

ಚಿತ್ರತಂಡ
ಸಾನು ಜಾನ್ ವರ್ಗೀಸ್ ಛಾಯಾಗ್ರಹಣ, ಮಿಕ್ಕಿ ಜೆ ಮೇಯರ್ ಸಂಗೀತ ನೀಡಿದ್ದಾರೆ. ಕಾರ್ತಿಕ ಶ್ರೀನಿವಾಸ್ ಆರ್ ಸಂಕಲನ ಮತ್ತು ಶ್ರೀ ನಾಗೇಂದ್ರ ತಂಗಳ ನಿರ್ಮಾಣ ವಿನ್ಯಾಸಕರಾಗಿ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಯುನಾನಿಮಸ್ ಪ್ರೊಡಕ್ಷನ್ಸ್ ಸಹಯೋಗದಲ್ಲಿ ವಾಲ್ ಪೋಸ್ಟರ್ ಸಿನಿಮಾ ಅಡಿಯಲ್ಲಿ ಪ್ರಶಾಂತಿ ತಿಪಿರ್ನೇನಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.  

Whats_app_banner