Kannappa Movie: ಕಣ್ಣಪ್ಪನ ಸುದ್ದಿಗೆ ಹೋಗ್ಬೇಡ್ರಪ್ಪ... ಶಿವನ ಶಾಪ ತಟ್ಟುತ್ತದೆ; ನಟ ರಘುಬಾಬು ಹೇಳಿಕೆಗೆ ನೆಟ್ಟಿಗರು ಕೆಂಡಾಮಂಡಲ
ಕನ್ನಡ ಸುದ್ದಿ  /  ಮನರಂಜನೆ  /  Kannappa Movie: ಕಣ್ಣಪ್ಪನ ಸುದ್ದಿಗೆ ಹೋಗ್ಬೇಡ್ರಪ್ಪ... ಶಿವನ ಶಾಪ ತಟ್ಟುತ್ತದೆ; ನಟ ರಘುಬಾಬು ಹೇಳಿಕೆಗೆ ನೆಟ್ಟಿಗರು ಕೆಂಡಾಮಂಡಲ

Kannappa Movie: ಕಣ್ಣಪ್ಪನ ಸುದ್ದಿಗೆ ಹೋಗ್ಬೇಡ್ರಪ್ಪ... ಶಿವನ ಶಾಪ ತಟ್ಟುತ್ತದೆ; ನಟ ರಘುಬಾಬು ಹೇಳಿಕೆಗೆ ನೆಟ್ಟಿಗರು ಕೆಂಡಾಮಂಡಲ

Kannappa Movie: ವಿಷ್ಣು ಮಂಚು ಪ್ರಮುಖ ಪಾತ್ರದಲ್ಲಿ ನಟಿಸಿರುವ, ಪ್ರಭಾಸ್‌, ಅಕ್ಷಯ್‌ ಕುಮಾರ್‌ ಮುಂತಾದವರು ಅತಿಥಿ ಪಾತ್ರಗಳಲ್ಲಿ ನಟಿಸಿರುವ ಕಣ್ಣಪ್ಪ ಸಿನಿಮಾದ ಕುರಿತು ನಟ ರಘುಬಾಬು ನೀಡಿರುವ ವಿವಾದಾತ್ಮಕ ಹೇಳಿಕೆ ವೈರಲ್‌ ಆಗಿದೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

Kannappa Movie: ಕಣ್ಣಪ್ಪನ ಸುದ್ದಿಗೆ ಹೋಗ್ಬೇಡ್ರಪ್ಪ... ಶಿವನ ಶಾಪ ತಟ್ಟುತ್ತದೆ; ನಟ ರಘುಬಾಬು ಹೇಳಿಕೆಗೆ ನೆಟ್ಟಿಗರು ಕೆಂಡಾಮಂಡಲ
Kannappa Movie: ಕಣ್ಣಪ್ಪನ ಸುದ್ದಿಗೆ ಹೋಗ್ಬೇಡ್ರಪ್ಪ... ಶಿವನ ಶಾಪ ತಟ್ಟುತ್ತದೆ; ನಟ ರಘುಬಾಬು ಹೇಳಿಕೆಗೆ ನೆಟ್ಟಿಗರು ಕೆಂಡಾಮಂಡಲ

Kannappa Movie: ವಿಷ್ಣು ಮಂಚು ಪ್ರಮುಖ ಪಾತ್ರದಲ್ಲಿ ನಟಿಸಿರುವ, ಪ್ರಭಾಸ್‌, ಅಕ್ಷಯ್‌ ಕುಮಾರ್‌ ಮುಂತಾದವರು ಅತಿಥಿ ಪಾತ್ರಗಳಲ್ಲಿ ನಟಿಸಿರುವ ಕಣ್ಣಪ್ಪ ಸಿನಿಮಾದ ಕುರಿತು ನಟ ರಘುಬಾಬು ನೀಡಿರುವ ಹೇಳಿಕೆಯ ಕುರಿತು ನೆಟ್ಟಿಗರು ಕೋಪಗೊಂಡಿದ್ದಾರೆ. ಕಣ್ಣಪ್ಪ ಸಿನಿಮಾದ ಕುರಿತು ಟ್ರೋಲ್‌ ಮಾಡಬೇಡಿ. ಟ್ರೋಲ್‌ ಮಾಡಿದ್ರೆ ಶಿವನ ಕೋಪ, ಶಾಪಕ್ಕೆ ತುತ್ತಾಗುವಿರಿ ಎಂದು ಈ ಹಾಸ್ಯ ನಟ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಕನ್ನಡದಲ್ಲಿ ಬೇಡರ ಕಣ್ಣಪ್ಪ ಸಿನಿಮಾ ಬಂದಿರುವುದು ನಿಮಗೆ ಗೊತ್ತು. ಇದೇ ಕಥೆಯ ಸಿನಿಮಾವನ್ನು ದೊಡ್ಡಮಟ್ಟದಲ್ಲಿ ತೆಲುಗಿನಲ್ಲಿ ನಿರ್ಮಿಸಲಾಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ದಕ್ಷಿಣ ಭಾರತದ ಹಾಸ್ಯ ನಟ ರಘು ಬಾಬು ಅವರು ನೀಡಿದ ಹೇಳಿಕೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಶಿವ ಮತ್ತು ಶಿವ ಭಕ್ತ ಕಣ್ಣಪ್ಪನ ಕುರಿತಾದ ಈ ಸಿನಿಮಾದ ಕುರಿತು ರಘುಬಾಬು ಹೇಳಿಕೆ ನೀಡಿದ್ದಾರೆ. "ಯಾರಾದರೂ ಕಣ್ಣಪ್ಪ ಸಿನಿಮಾದ ಕುರಿತು ಟ್ರೋಲ್‌ ಮಾಡಿದರೆ, ಶಿವನ ಕೋಪ ಮತ್ತು ಶಾಪಕ್ಕೆ ತುತ್ತಾಗಬೇಕಾಗುತ್ತದೆ. ನೆನಪಿಡಿ, ಇದು ಶೇಕಡ 100ರಷ್ಟು ಸತ್ಯ" ಎಂದು ಅವರು ಹೇಳಿಕೆ ನೀಡಿದ್ದರು. ಈ ಮಾತು ನೆಟ್ಟಿಗರಿಗೆ ಇಷ್ಟವಾಗಿಲ್ಲ.

ರಘು ಬಾಬು ಹೇಳಿಕೆಯ ವಿಡಿಯೋ ತುಣುಕು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. "ಯಾರೂ ಕಣ್ಣಪ್ಪನ ಸುದ್ದಿಗೆ ಹೋಗ್ಬೇಡ್ರಪ್ಪ. ಆ ಸಿನಿಮಾವನ್ನು ಟಿಕೆಟ್‌ ಕೊಟ್ಟು ಕೂಡ ನೋಡಬೇಡಿ. ಶಿವನ ಶಾಪ ತಟ್ಟಬಹುದು" ಎಂದೆಲ್ಲ ನೆಟ್ಟಿಗರು ಆಕ್ರೋಶದಿಂದ ಕಾಮೆಂಟ್‌ ಮಾಡುತ್ತಿದ್ದಾರೆ. "ಮೊದಲೆಲ್ಲ ಸಿನಿಮಾದ ಕುರಿತು ಕೆಟ್ಟ ಕಾಮೆಂಟ್‌ ಮಾಡಬೇಡಿ ಎಂದು ಹೇಳುತ್ತಿದ್ದರು. ಈಗ ಶಿವನ ಶಾಪ ದೊರಕಬಹುದು ಎಂದು ಹೆದರಿಸುತ್ತಿದ್ದಾರೆ" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. "ನನ್ನನ್ನು ಬಿಟ್ಟುಬಿಡಿರಪ್ಪ, ನಾನು ಈ ವಿಷಯದಲ್ಲಿ ಇಲ್ಲ ಎಂದು ಶಿವ ದೇವರು ಹೇಳುತ್ತಿರಬಹುದು" ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

 

"ಆತ ಹೇಳುತ್ತಿರುವುದು ಇಷ್ಟೇ. ಟಿಕೆಟ್‌ ಖರೀದಿಸಿ. ಸಿನಿಮಾ ನೋಡಿ. ಚೆನ್ನಾಗಿಲ್ಲದೆ ಇದ್ದರೆ ಬಾಯಿ ಮುಚ್ಚಿಕೊಂಡಿರಿ. ನನ್ನ ಪ್ರಕಾರ ಯಾರೂ ಕೂಡ ಈ ಸಿನಿಮಾ ನೋಡಲು ಹೋಗಬಾರದು. ಇದು ತೆಲುಗು ಸಿನಿಮಾ ಕ್ಷೇತ್ರದ ಪ್ಲಾಪ್‌ ಸಿನಿಮಾವಾಗಲಿ" ಎಂದು ಇನ್ನೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ, ಈ ಸಿನಿಮಾದ ಕುರಿತು ರಘು ಬಾಬು ನೀಡಿದ ಹೇಳಿಕೆಗೆ ವೈವಿಧ್ಯಮಯ ಕಾಮೆಂಟ್‌ಗಳು ಹರಿದಾಡುತ್ತಿವೆ.

ಕಣ್ಣಪ್ಪ ಚಿತ್ರದಲ್ಲಿ ವಿಷ್ಣು ಮಂಚು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್ ಮತ್ತು ಮೋಹನ್ ಲಾಲ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಕೂಡ ನಟಿಸುತ್ತಿದ್ದಾರೆ. ಶರತ್‌ಕುಮಾರ್, ಮುಖೇಶ್ ರಿಷಿ, ಬ್ರಹ್ಮಾಜಿ, ಬ್ರಹ್ಮಾನಂದಂ, ಅರ್ಪಿತ್ ರಂಕಾ, ಪ್ರೀತಿ ಮುಕುಂದನ್, ಐಶ್ವರ್ಯ ಭಾಸ್ಕರನ್, ದೇವರಾಜ್, ಸಂಪತ್ ರಾಮ್, ಶಿವ ಬಾಲಾಜಿ ಮುಂತಾದವರು ಇದ್ದಾರೆ. ಸ್ಟೀಫನ್ ದೇವಸ್ಸಿ ಸಂಗೀತವಿದೆ. ಶೆಲ್ಡನ್ ಚೌ ಛಾಯಾಗ್ರಹಣವಿದೆ. ಈ ಚಿತ್ರವನ್ನು ಸುಮಾರು 100 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಚಿತ್ರ ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹೆಸರಾಂತ ಹಾಲಿವುಡ್ ಛಾಯಾಗ್ರಾಹಕ ಶೆಲ್ಡನ್ ಚೌ ಅವರು ನ್ಯೂಜಿಲೆಂಡ್‌ನ ರಮಣೀಯ ಪ್ರದೇಶಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

ಮುಖೇಶ್‌ ಕುಮಾರ್‌ ಸಿಂಗ್‌ ನಿರ್ದೇಶನದ ಕಣ್ಣಪ್ಪ ಸಿನಿಮಾವು ಏಪ್ರಿಲ್‌ 25ರಂದು ಬಿಡುಗಡೆಯಾಗಲಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner