Ramcharan on Kohli Biopic: ‘ನೋಡೋಕೆ ಕೊಹ್ಲಿಯನ್ನೇ ಹೋಲುತ್ತೇನೆ, ಬಯೋಪಿಕ್ ಸಿಕ್ಕರೆ ಬಿಡೋ ಮಾತೇ ಇಲ್ಲ..’ ರಾಮ್‌ಚರಣ್ ಬಿಚ್ಚು ಮಾತು..
ನಟ ರಾಮ್‌ಚರಣ್ ತೇಜ ಕ್ರೀಡೆ ಆಧರಿತ ಸಿನಿಮಾದಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕೊಹ್ಲಿ ಬಯೋಪಿಕ್ ಸಿಕ್ಕರೆ ಬಿಡೋ ಮಾತೇ ಇಲ್ಲ ಎಂದಿದ್ದಾರೆ.
Ramcharan on Kohli Biopic: ‘ಆರ್‌ಆರ್‌ಆರ್’ ಸಿನಿಮಾದ ನಾಟು ನಾಟು ಹಾಡಿಗೆ ಇತ್ತೀಚೆಗಷ್ಟೇ ಆಸ್ಕರ್ ಗರಿ ಸಿಕ್ಕಿದೆ. ಆ ಖುಷಿಯ ಅಲೆಯಲ್ಲಿಯೇ ಇಡೀ ಚಿತ್ರತಂಡ ತೇಲುತ್ತಿದೆ. ಅಭಿಮಾನಿಗಳಿಂದಲೂ ಅಪಾರ ಪ್ರೀತಿಯನ್ನು ಪಡೆದುಕೊಳ್ಳುತ್ತಿದೆ ಈ ತಂಡ. ಹೀಗಿರುವಾಗಲೇ ನಟ ರಾಮ್‌ಚರಣ್ ಇದೀಗ ತಮ್ಮ ಮನದ ಬಯಕೆಯನ್ನು ಹೇಳಿಕೊಂಡಿದ್ದಾರೆ.
ಟ್ರೆಂಡಿಂಗ್ ಸುದ್ದಿ
ನಟ ರಾಮ್‌ಚರಣ್‌ಗೆ ಮೊದಲಿಂದಲೂ ಕ್ರೀಡೆ ಆಧರಿತ ಸಿನಿಮಾಗಳೆಂದರೆ ಇಷ್ಟ. ತೆರೆಮೇಲೆ ತಾವೂ ಒಬ್ಬ ಕ್ರೀಡಾಪಟುವಾಗಿ ಕಾಣಿಸಿಕೊಳ್ಳಬೇಕೆಂಬ ಬಯಕೆಯೂ ರಾಮ್‌ಚರಣ್‌ಗಿದೆ. ಆ ಆಸೆಯ ಬಗ್ಗೆ ಮೊದಲ ಸಲ ತುಟಿ ಬಿಚ್ಚಿದ್ದಾರೆ ರಾಮ್‌ಚರಣ್. ಚಾನ್ಸ್ ಸಿಕ್ಕರೆ ಕೊಹ್ಲಿ ಬಯೋಪಿಕ್ ಮಾಡುವೆ ಎಂದಿದ್ದಾರೆ.
ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಗಿಸಿ ಅಮೆರಿಕದಿಂದ ನೇರವಾಗಿ ದೆಹಲಿಗೆ ಬಂದಿಳಿದ ರಾಮ್‌ಚರಣ್, ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅದಾದ ಬಳಿಕ ಮಾಧ್ಯಮಗಳಿಗೆ ಎದುರಾದರು. ಯಾವ ಥರದ ಸಿನಿಮಾ ಮಾಡಬೇಕೆಂಬ ಆಸೆ ನಿಮ್ಮದು ಎಂಬ ಪ್ರಶ್ನೆಗೆ ಉತ್ತರಿಸಿದ ರಾಮ್‌ಚರಣ್, ಕ್ರೀಡೆ ಆಧರಿತ ಸಿನಿಮಾ ಮಾಡುವ ಬಯಕೆ ಇದೆ. ಅದು ತುಂಬ ದಿನಗಳಿಂದ ಬಾಕಿ ಉಳಿಯುತ್ತಲೇ ಬರುತ್ತಿದೆ ಎಂದರು.
ಮರುಕ್ಷಣವೇ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುತ್ತೀರಾ? ಎಂದರೆ, ಮರುಮಾತಿಲ್ಲದೆ, "ಅವಕಾಶ ಸಿಕ್ಕರೆ ಖಂಡಿತವಾಗಿಯೂ ನಟಿಸುತ್ತೇನೆ. ಏಕೆಂದರೆ ಕೊಹ್ಲಿ ಅವರದ್ದು ಸ್ಫೂರ್ತಿ ನೀಡುವ ವ್ಯಕ್ತಿತ್ವ. ನಾನೂ ನೋಡಲು ಕೊಹ್ಲಿ ಅವರನ್ನು ಹೋಲುತ್ತೇನೆ. ಛಾನ್ಸ್ ಸಿಕ್ಕರೆ ಬಿಡೋ ಮಾತೇ ಇಲ್ಲ ಎಂದಿದ್ದಾರೆ.
ಗೃಹ ಸಚಿವರನ್ನು ಭೇಟಿ ಮಾಡಿದ ರಾಮ್‌ಚರಣ್..
ಆರ್‌ಆರ್‌ಆರ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ರಾಮ್‌ಚರಣ್ ತೇಜ ಮತ್ತು ಮೆಗಾಸ್ಟಾರ್ ಚಿರಂಜೀವಿ. ದೆಹಲಿಯ ಅವರ ಕಚೇರಿಗೆ ತೆರಳಿದ ರಾಮ್‌ಚರಣ್‌ಗೆ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಈ ವೇಳೆ ಕೆಲ ಹೊತ್ತು ಸಿನಿಮಾ ಆಗುಹೋಗುಗಳ ಬಗ್ಗೆಯೂ ಮಾತನಾಡಿದ್ದಾರೆ.
ಸಿನಿಮಾ ಸಂಬಂಧಿ ಈ ಸುದ್ದಿಗಳನ್ನೂ ಓದಿ
Divya Shridhar: ಹೆರಿಗೆ ಹತ್ತಿರ ಬಂದರೂ ಕೆಲಸ ಮಾಡುತ್ತಿದ್ದೇನೆ, ಆರ್ಥಿಕ ಸಮಸ್ಯೆ ಇದೆ... ನೋವು ಹಂಚಿಕೊಂಡ 'ಆಕಾಶ ದೀಪ' ನಟಿ
ಪ್ರೀತಿಸಿದ ವ್ಯಕ್ತಿಯನ್ನು ನಂಬಿ ಮದುವೆಯಾಗಿ ಮೋಸ ಹೋದ ಎಷ್ಟೋ ಜನರಿದ್ದಾರೆ. ಇತ್ತೀಚೆಗೆ ನಟಿ ರಾಖಿ ಸಾವಂತ್ ಕೂಡಾ ತಾವು ಪ್ರೀತಿಸಿ ಮದುವೆಯಾಗಿದ್ದ ಆದಿಲ್ ಖಾನ್ ದುರಾನಿಯಿಂದ ಮೋಸ ಹೋಗಿದ್ದರು. ಈ ವಿಚಾರ ದೊಡ್ಡ ಸುದ್ದಿಯಾಗಿತ್ತು. ಕೆಲವು ದಿನಗಳ ಹಿಂದೆ ಕನ್ನಡ ಮೂಲದ ನಟಿ ದಿವ್ಯಾ ಶ್ರೀಧರ್ ಕೂಡಾ ತಾವು ತಮಿಳು ನಟನಿಂದ ಮೋಸ ಹೋದ ನೋವನ್ನು ಹೊರ ಹಾಕಿದ್ದರು. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ
Vaishnavi Gowda Mother: ವೈಷ್ಣವಿ ಗೌಡ ತಾಯಿ ಈಗ ಅಡ್ವೊಕೇಟ್... ಅಮ್ಮನ ಸಾಧನೆಯನ್ನು ಕೊಂಡಾಡಿದ ಮಗಳು!
'ಅಗ್ನಿಸಾಕ್ಷಿ' ಖ್ಯಾತಿಯ ವೈಷ್ಣವಿ ಗೌಡ ಕೆಲವು ದಿನಗಳ ಹಿಂದೆ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದರು. ಇದೀಗ ಆ ಬೇಸರದಿಂದ ಹೊರ ಬರುತ್ತಿರುವ ವೈಷ್ಣವಿ ಮೊದಲಿನಂತೆ ತಮ್ಮ ಯೂಟ್ಯೂಬ್, ಧಾರಾವಾಹಿ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ವೈಷ್ಣವಿ ತಾಯಿ ವಕೀಲೆಯಾಗಿ ಪ್ರಮೋಷನ್ ಪಡೆದಿದ್ದು ಈ ಸಂತೋಷದ ವಿಚಾರವನ್ನು ಸ್ವತ: ವೈಷ್ಣವಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ