Rashmika Mandanna: ಕಾವ್ಯಾತ್ಮಕ ಪದಗಳಿಂದ ‘ಗರ್ಲ್‌ಫ್ರೆಂಡ್’ ಬಗ್ಗೆ ಕೊನೆಗೂ ಬಾಯ್ಬಿಟ್ಟ ವಿಜಯ್ ದೇವರಕೊಂಡ
The Girlfriend Teaser: ರಶ್ಮಿಕಾ ಮಂದಣ್ಣ ಅಭಿನಯದ ದಿ ಗರ್ಲ್‌ಫ್ರೆಂಡ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ವಿಜಯ್ ದೇವರಕೊಂಡ ಅವರ ಧ್ವನಿಯಲ್ಲಿ ಟೀಸರ್ ಮೂಡಿಬಂದಿದೆ. ಇನ್ನೇನು ಶೀಘ್ರದಲ್ಲಿಯೇ ಈ ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಣೆ ಆಗಲಿದೆ.
The Girlfriend Teaser: ಗರ್ಲ್‌ಫ್ರೆಂಡ್ ಟೀಸರ್‌ಅನ್ನು ಬಾಯ್‌ಫ್ರೆಂಡ್ ಬಿಡುಗಡೆ ಮಾಡಿದ್ದಾರೆ! ಅಂದರೆ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮುಂಬರುವ ಚಿತ್ರ ದಿ ಗರ್ಲ್‌ಫ್ರೆಂಡ್ ಸಿನಿಮಾದ ಟೀಸರ್ ಇದೀಗ ರಿಲೀಸ್ ಆಗಿದೆ. ಸೋಮವಾರ (ಡಿ. 9) ವಿಜಯ್ ದೇವರಕೊಂಡ ಬಿಡುಗಡೆ ಮಾಡಿದ್ದಾರೆ. ಬರೀ ರಿಲೀಸ್ ಮಾಡಿ ಶುಭಕೋರಿಲ್ಲ, ಆ ಒಂದೂವರೆ ನಿಮಿಷದ ಟೀಸರ್‌ಗೆ ತಮ್ಮದೇ ಧ್ವನಿಯನ್ನು ನೀಡಿದ್ದಾರೆ ವಿಜಯ್.
ದಿ ಗರ್ಲ್‌ಫ್ರೆಂಡ್ ಚಿತ್ರದ ಟೀಸರ್ ರಿಲೀಸ್
ಒಂದೂವರೆ ನಿಮಿಷದ ಟೀಸರ್‌ನಲ್ಲಿ ಪಿಕ್ ಅಪ್ ಲೈನ್ ಇಲ್ವೇ ಇಲ್ಲ.. ನಾನು ಬೀಳುವುದೇ ಇಲ್ಲ.. ಎಂದು ರಶ್ಮಿಕಾ ಮಂದಣ್ಣ ಡೈಲಾಗ್ ಹೇಳಿದ್ದಾರೆ. ಇಡೀ ಟೀಸರ್‌ನಲ್ಲಿ ಇದೊಂದೇ ಮಾತು ಅವರ ಬಾಯಿಂದ ಬಂದಿದ್ದು. ಇನ್ನುಳಿದಂತೆ, ವಿಜಯ್ ದೇವರಕೊಂಡ ಅವರ ಕಾವ್ಯಾತ್ಮಕ ಧ್ವನಿಯ ಮೂಲಕ ಇಡೀ ಟೀಸರ್ ಅನ್ನು ವರ್ಣನೆ ಮಾಡಿದ್ದಾರೆ.
ರಾಹುಲ್ ರವೀಂದ್ರನ್ ನಿರ್ದೇಶನದ ದಿ ಗರ್ಲ್‌ಫ್ರೆಂಡ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಬಿಟ್ಟು ಬೇರೆ ಯಾರ ಮುಖವೂ ಕಾಣಿಸದು. ಅಂದರೆ, ಈ ಸಿನಿಮಾ ಸಂಪೂರ್ಣ ಅವರನ್ನೇ ಕೇಂದ್ರಿಕರಿಸಿದೆ. ಅವರ ಮುಖದ ಬಗೆಬಗೆ ಹಾವಭಾವಗಳನ್ನು ಟೀಸರ್‌ನಲ್ಲಿ ಸೆರೆಹಿಡಿದು ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕರು.
ಟೀಸರ್ ಗಮನಿಸಿದರೆ ಈ ಸಿನಿಮಾ ಸಂಪೂರ್ಣ ಯುವ ಪೀಳಿಗೆ ಸಲುವಾಗಿಯೇ ಮಾಡಿದಂತಿದೆ. ಕಾಲೇಜು, ಹಾಸ್ಟೆಲ್ಲು, ಪ್ರೀತಿ, ಪ್ರೇಮ, ಕ್ರಷ್ ಹೀಗೆ ಎಲ್ಲವನ್ನೂ ಈ ಟೀಸರ್‌ನಲ್ಲಿ ನಿರ್ದೇಶಕರು ತೋರಿಸಿದ್ದಾರೆ. ದೃಶ್ಯಗಳ ಹೆಣಿಗೆಗೆ ಅಚ್ಚುಕಟ್ಟಾದ ಹಿನ್ನೆಲೆ ಧ್ವನಿಯ ಟಚ್ ಕೊಟ್ಟಿದ್ದಾರೆ ವಿಜಯ್ ದೇವರಕೊಂಡ. ಕಥಾನಾಯಕಿಯ ಗುಣಗಾನ ಟೀಸರ್‌ನಲ್ಲಿ ಕಂಡರೂ, ಕಥೆ ಏನು ಎಂಬ ಸುಳಿವು ನೀಡದೇ, ಕುತೂಹಲದಲ್ಲಿಟ್ಟಿದ್ದಾರೆ.
ಗರ್ಲ್‌ಫ್ರೆಂಡ್ ಸಿನಿಮಾ ಬಗ್ಗೆ
ಗರ್ಲ್ ಫ್ರೆಂಡ್ ಚಿತ್ರವನ್ನು ನಟ ಮತ್ತು ನಿರ್ದೇಶಕ ರಾಹುಲ್ ರವೀಂದ್ರನ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ಗುರುತಿಸಿಕೊಂಡು, ಸದ್ಯ ತೆಲುಗಿನಲ್ಲಿ ಖ್ಯಾತಿ ಪಡೆದುಕೊಂಡಿರುವ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಅನು ಎಮ್ಯಾನುಯೆಲ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರವಿಂದ್ ಈ ಚಿತ್ರವನ್ನು ಪ್ರಸೆಂಟ್ ಮಾಡಿದರೆ, ಹೆಶಾಮ್ ಅಬ್ದುಲ್ ವಹಾಬ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಟೀಸರ್ ನಲ್ಲಿಯೇ ಮತ್ತೊಮ್ಮೆ ಮೆಲೋಡಿಯಿಂದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ದಿ ಗರ್ಲ್ ಫ್ರೆಂಡ್ ಚಿತ್ರದ ಬಿಡುಗಡೆಯ ದಿನಾಂಕ ಇನ್ನೇನು ಶೀಘ್ರದಲ್ಲೇ ಘೋಷಿಸಲಾಗುವುದು. ಸದ್ಯ ಪುಷ್ಪ 2 ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಪಡೆದ ರಶ್ಮಿಕಾ ಮಂದಣ್ಣ, ಗರ್ಲ್‌ಫ್ರೆಂಡ್ ಚಿತ್ರದೊಂದಿಗೆ ಬರಲಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿ ಚಾವಾ ಚಿತ್ರದಲ್ಲೂ ನಟಿಸುತ್ತಿದ್ದಾರೆ.