ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಮದುವೆ; ಹಬ್ಬಿರುವ 'ಆ ಸುದ್ದಿ' ನಿಜವಲ್ಲ ಎಂದ ಅಕ್ಕಿನೇನಿ ತಂಡ
ಕನ್ನಡ ಸುದ್ದಿ  /  ಮನರಂಜನೆ  /  ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಮದುವೆ; ಹಬ್ಬಿರುವ 'ಆ ಸುದ್ದಿ' ನಿಜವಲ್ಲ ಎಂದ ಅಕ್ಕಿನೇನಿ ತಂಡ

ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಮದುವೆ; ಹಬ್ಬಿರುವ 'ಆ ಸುದ್ದಿ' ನಿಜವಲ್ಲ ಎಂದ ಅಕ್ಕಿನೇನಿ ತಂಡ

ಟಾಲಿವುಡ್‌ ಹೀರೋ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಮದುವೆಗೆ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಮದುವೆಯ ವಿಡಿಯೋ ಹಕ್ಕುಗಳನ್ನು ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಬೆನ್ನಲ್ಲೇ, ಅಕ್ಕಿನೇನಿ ತಂಡವು ಸ್ಪಷ್ಟನೆ ನೀಡಿದೆ.

ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಮದುವೆ; ಹಬ್ಬಿರುವ 'ಆ ಸುದ್ದಿ' ನಿಜವಲ್ಲ ಎಂದ ಅಕ್ಕಿನೇನಿ ತಂಡ
ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಮದುವೆ; ಹಬ್ಬಿರುವ 'ಆ ಸುದ್ದಿ' ನಿಜವಲ್ಲ ಎಂದ ಅಕ್ಕಿನೇನಿ ತಂಡ

ಟಾಲಿವುಡ್ ನಟ ಅಕ್ಕಿನೇನಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿರುವ ಈ ಜೋಡಿ, ಆಗಸ್ಟ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಎರಡೂ ಕುಟುಂಬಗಳು ಅದ್ಧೂರಿ ಮದುವೆಗೆ ಸಿದ್ದತೆ ನಡೆಸುತ್ತಿವೆ. ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಮದುವೆಯು ಡಿಸೆಂಬರ್ 4ರಂದು ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆಯಲಿದೆ. ಈ ವಿವಾಹ ಸಮಾರಂಭಕ್ಕಾಗಿಯೇ ವಿಶೇಷ ಸೆಟ್ ನಿರ್ಮಿಸಲಾಗಿದೆ. ಅಕ್ಕಿನೇನಿ ಕುಟುಂಬದ ಮನೆ ಮಗನ ಮದುವೆಗೆ ಅತಿಥಿಗಳಿಗೆ ಆಹ್ವಾನ ಕಳುಹಿಸಲಾಗಿದೆ.

ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ವಿವಾಹ ಸಮಾರಂಭಕ್ಕೆ ಕೆಲವೊಂದು ನಿರ್ಬಂಧಗಳಿರುವ ಸಾಧ್ಯತೆಯಿದೆ. ಮದುವೆ ಸಮಾರಂಭದ ಯಾವುದೇ ಫೋಟೋ ಮತ್ತು ವಿಡಿಯೋಗಳು ಬಹಿರಂಗ ಆಗುವ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ಮದುವೆಯ ವಿಡಿಯೊ ಹಕ್ಕುಗಳನ್ನು ಬರೋಬ್ಬರಿ 50 ಕೋಟಿ ರೂ.ಗೆ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್ ಖರೀದಿಸಿದೆ ಎಂದು ಹಲವು ವರದಿಗಳು ಹೇಳಿವೆ. ಆದರೆ, ಈ ರೀತಿಯ ಯಾವುದೇ ನಿರ್ಧಾರಗಳನ್ನು ಕುಟುಂಬ ಮಾಡಿಲ್ಲ ಎಂದು ಅಕ್ಕಿನೇನಿ ತಂಡ ಪ್ರತಿಕ್ರಿಯೆ ನೀಡಿದೆ. ಈ ಕುರಿತು ಈಟಿವಿ ಭಾರತ್‌ ವರದಿ ಮಾಡಿದೆ.

ಈ ಹಿಂದೆ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ವಿವಾಹದ ವಿಡಿಯೋ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಖರೀದಿಸಿತ್ತು. ಇದೀಗ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ವಿವಾಹ ಸಮಾರಂಭದ ವಿಡಿಯೋ ಒಟಿಟಿ ವೇದಿಕೆಯಲ್ಲಿ ಮಾತ್ರ ಲಭ್ಯವಿರಲಿದೆ ಎಂಬ ಸುದ್ದಿ ಇದೆ. ಆದರೆ, ಈ ರೀತಿ ಪ್ರಚಾರ ಆಗಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಹೆಚ್ಚು ಅದ್ಧೂರಿತನ ಇಲ್ಲದೆ ಸರಳವಾಗಿ ಮದುವೆ ಮಾಡಿಕೊಳ್ಳುವ ಇರಾದೆ ನವ ಜೋಡಿಗೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಆಪ್ತರಿಗೆ ಮಾತ್ರ ಆಹ್ವಾನ

ನೆಟ್‌ಫ್ಲಿಕ್ಸ್‌ಗೆ ವಿವಾಹದ ಹಕ್ಕುಗಳನ್ನು ನೀಡಿರುವ ಅಕ್ಕಿನೇನಿ ಕುಟುಂಬವು, ಮದುವೆ ಸಮಾರಂಭಕ್ಕೆ ಕಡಿಮೆ ಸಂಖ್ಯೆಯಲ್ಲಿ ಆಪ್ತರನ್ನು ಆಹ್ವಾನಿಸಿದೆ. ಹೀಗಾಗಿ ಆಪ್ತ ಸ್ನೇಹಿತರು ಮತ್ತು ಅತಿಥಿಗಳನ್ನು ಮಾತ್ರ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ವಿಡಿಯೋ ಹಕ್ಕುಗಳು ಮಾರಾಟ ಆಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ಕೂಡಾ ವರದಿ ಮಾಡಿದೆ.

ಈ ಹಿಂದೆ ನಾಗಚೈತನ್ಯ ಅವರು, ನಟಿ ಸಮಂತಾ ಅವರನ್ನು ವಿವಾಹವಾಗಿದ್ದರು. ವಿವಾಹ ಸಮಾರಂಭದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಆದರೆ, ಮದುವೆ ಬಳಿಕ ಈ ಜೋಡಿ ದೂರವಾದರು.

ಅಖಿಲ್ ಅಕ್ಕಿನೇನಿ ವಿವಾಹ ನಿಶ್ಚಿತಾರ್ಥ

ಅಕ್ಕಿನೇನಿ ಕುಟುಂಬದಲ್ಲಿ ಈಗ ಮದುವೆ ಖುಷಿ ಮನೆ ಮಾಡಿದೆ. ನಾಗ ಚೈತನ್ಯ ಜೊತೆಗೆ ಮತ್ತೊಂದು ಮದುವೆ ಕೂಡಾ ಶೀಘ್ರದಲ್ಲೇ ನಡೆಯಲಿದೆ. ಝೈನಾಬ್ ರೌಜಿ ಅವರೊಂದಿಗೆ ಅಖಿಲ್ ಅಕ್ಕಿನೇನಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕುರಿತು ತಂದೆ ನಾಗಾರ್ಜುನ ಅಕ್ಕಿನೇನಿ ಮಂಗಳವಾರ ಅಧಿಕೃತವಾಗಿ ಘೋಷಿಸಿದ್ದಾರೆ.

ಝೈನಾಬ್ ಅವರು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಪರಿಚಿತರು. ಕಳೆದ ಎರಡು ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಿದ್ದರು. ಹೀಗಾಗಿ ಕುಟುಂಬ ಸದಸ್ಯರು ಇದಕ್ಕೆ ಒಪ್ಪಿ ಮದುವೆ ನಿಶ್ಚಯ ಮಾಡಿದ್ದಾರೆ.

Whats_app_banner