ಕನ್ನಡ ಸುದ್ದಿ  /  Photo Gallery  /  Tollywood Both Of Us Are Still Physically Fit To Have Children But Naresh And Pavitra Lokesh Talked About Children Mnk

Pavitra Lokesh: ನಮಗೇನಾಗಿದೆ, ನಾವಿಬ್ಬರೂ ದೈಹಿಕವಾಗಿ ಮಕ್ಕಳನ್ನು ಪಡೆಯಲು ಈಗಲೂ ಫಿಟ್‌ ಆಗಿದ್ದೇವೆ!; ಪವಿತ್ರಾ ಲೋಕೇಶ್‌- ನರೇಶ್‌ ನೇರ ಮಾತು

  • Pavitra Lokesh: ಮಳ್ಳಿ ಪೆಳ್ಳಿ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಪ್ರಚಾರದಲ್ಲಿ ಬಿಜಿಯಾಗಿರುವ 44 ವರ್ಷದ ಪವಿತ್ರಾ ಲೋಕೇಶ್ ಮತ್ತು 63 ವರ್ಷದ ನರೇಶ್‌, ಮಕ್ಕಳನ್ನು ಮಾಡಿಕೊಳ್ಳುವ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ್ದಾರೆ.‌ ಅವರ ಆ ಬಿಚ್ಚು ಮಾತು ಹೀಗಿದೆ.

ವಿವಾದವನ್ನೇ ಬಂಡವಾಳವಾಗಿಸಿಕೊಂಡು, ಆ ಏರಿಳಿತಗಳನ್ನೇ ಕಥೆಯನ್ನಾಗಿಸಿಕೊಂಡು ತೆಲುಗಿನಲ್ಲಿ ಮೂಡಿ ಬಂದ ಚಿತ್ರ ಮಳ್ಳಿ ಪೆಳ್ಳಿ. ಕನ್ನಡದಲ್ಲಿ ಮತ್ತೆ ಮದುವೆ ಹೆಸರಿನಲ್ಲಿ ಕಳೆದ ವಾರವಷ್ಟೇ (ಮೇ 26) ಈ ಸಿನಿಮಾ ಬಿಡುಗಡೆ ಆಗಿದೆ. (Twitter/ @ItsActorNaresh)
icon

(1 / 7)

ತೆಲುಗಿನ ಖ್ಯಾತ ನಟ, ನಿರ್ಮಾಪಕ ನರೇಶ್‌ ಮತ್ತು ಬಹುಭಾಷಾ ನಟಿ ಪವಿತ್ರಾ ಲೋಕೇಶ್‌ ಜೋಡಿಯ ರಿಯಲ್‌ ಬದುಕಿನ ಪ್ರಹಸನವೇ ಈ ಸಿನಿಮಾ. ಎಲ್ಲೆಡೆಯಿಂದ ಮೆಚ್ಚುಗೆ ಪಡೆದುಕೊಂಡಿರುವ ಮಳ್ಳಿ ಪೆಳ್ಳಿ ಚಿತ್ರ ಆಂಧ್ರ ಮತ್ತು ತೆಲಂಗಾಣದಲ್ಲಿ ಕಲೆಕ್ಷನ್‌ ವಿಚಾರದಲ್ಲಿ ಮುಂದಿದೆ. (Twitter/ @ItsActorNaresh)
icon

(2 / 7)

ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ಮದುವೆಯಾಗಿಲ್ಲ. ಆದರೆ, ನಾವಿಬ್ಬರೂ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದೇವೆ ಎಂದು ಸ್ವತಃ ನಟ ನರೇಶ್‌ ಈ ಹಿಂದೆಯೇ ಹೇಳಿದ್ದಾರೆ. ಸಿನಿಮಾ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಗಳನ್ನು ಹರಿದಾಡಿದ ಗಾಸಿಪ್‌ಗಳಿಗೆ ಅವರು ಉತ್ತರ ನೀಡಿದ್ದಾರೆ. (Twitter/ @ItsActorNaresh)
icon

(3 / 7)

ಇದೀಗ ಸಿನಿಮಾ ಬಿಡುಗಡೆ ಆಗಿದೆ. ಹೀಗಿರುವಾಗ ಇದೇ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ವೇಳೆ, ಮಕ್ಕಳು ಮಾಡಿಕೊಳ್ಳಬೇಕೆಂಬ ಬಗ್ಗೆಯೂ ಈ ಜೋಡಿ ಬಿಚ್ಚು ಮನಸ್ಸಿನಿಂದ ಹೇಳಿಕೊಂಡಿದೆ. (Twitter/ @ItsActorNaresh)
icon

(4 / 7)

ತೆಲುಗಿನ ಐ‌ ಡ್ರೀಮ್ ಟಾಕೀಸ್‌ (IDream Telugu Movies) ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನಟ ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ತಮಗೂ ಮಕ್ಕಳು ಮಾಡಿಕೊಳ್ಳಬೇಕು ಎಂಬ ಆಸೆ ಇದೆ, ನಮಗೂ ಮಕ್ಕಳೆಂದರೆ ಇಷ್ಟ ಎಂದಿದ್ದಾರೆ. (Twitter/ @ItsActorNaresh)
icon

(5 / 7)

ಮೊದಲಿಗೆ ಸಂದರ್ಶಕನ ಪ್ರಶ್ನೆಗೆ ಉತ್ತರ ನೀಡದ ಪವಿತ್ರಾ ಲೋಕೇಶ್‌, ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದರು. ಪ್ರಪಂಚದಲ್ಲಿ ಎಷ್ಟೋ ಮಕ್ಕಳಿಗೆ ಪೋಷಕರಿಲ್ಲ. ಈ ಸಂದರ್ಭದಲ್ಲಿ ನಮಗೆ ಮಕ್ಕಳನ್ನು ಮಾಡಿಕೊಳ್ಳುವ ಔಚಿತ್ಯಾವಾದರೂ ಏನಿದೆ, ಆ ಮಕ್ಕಳನ್ನು ಸಮಾಜಕ್ಕೆ ನೀಡುವ ಅವಶ್ಯಕತೆ ಏನಿದೆ ಎಂದು ಹೇಳಿದ್ದಾರೆ. (Twitter/ @ItsActorNaresh)
icon

(6 / 7)

ನಿರೂಪಕನ ಪ್ರಶ್ನೆಗೆ ಉತ್ತರಿಸಿದ ನರೇಶ್‌, ನಾವಿಬ್ಬರೂ ದೈಹಿಕವಾಗಿ ಮಕ್ಕಳನ್ನು ಪಡೆಯಲು ಅರ್ಹರಿದ್ದೇವೆ, ಪುರುಷನಾಗಿ ನಾನು ಫರ್ಫೆಕ್ಟ್‌ ಆಗಿದ್ದೇನೆ. ಮಹಿಳೆಯಾಗಿ ಅವರೂ ಸರಿಯಾಗಿದ್ದಾರೆ. ಆದರೆ, ಈಗ ಇರುವವರೆಲ್ಲ ನಮ್ಮ ಮಕ್ಕಳೇ ಅಲ್ಲವೇ. ನಾವೀಗ ಆರಾಮವಾಗಿದ್ಧೇವೆ ಎಂದಿದ್ದಾರೆ. (Twitter/ @ItsActorNaresh)
icon

(7 / 7)

IPL_Entry_Point

ಇತರ ಗ್ಯಾಲರಿಗಳು