Box Office Collection: ಸಂಕ್ರಾಂತಿಗೆ ಈ ಇಬ್ಬರಲ್ಲಿ ಯಾರಿಗೆ ಸಿಹಿ, ಯಾರಿಗೆ ಕಹಿ? ಗೇಮ್‌ ಚೇಂಜರ್-‌ ಡಾಕು ಮಹಾರಾಜ್‌ ಕಲೆಕ್ಷನ್‌ ರಿಪೋರ್ಟ್‌
ಕನ್ನಡ ಸುದ್ದಿ  /  ಮನರಂಜನೆ  /  Box Office Collection: ಸಂಕ್ರಾಂತಿಗೆ ಈ ಇಬ್ಬರಲ್ಲಿ ಯಾರಿಗೆ ಸಿಹಿ, ಯಾರಿಗೆ ಕಹಿ? ಗೇಮ್‌ ಚೇಂಜರ್-‌ ಡಾಕು ಮಹಾರಾಜ್‌ ಕಲೆಕ್ಷನ್‌ ರಿಪೋರ್ಟ್‌

Box Office Collection: ಸಂಕ್ರಾಂತಿಗೆ ಈ ಇಬ್ಬರಲ್ಲಿ ಯಾರಿಗೆ ಸಿಹಿ, ಯಾರಿಗೆ ಕಹಿ? ಗೇಮ್‌ ಚೇಂಜರ್-‌ ಡಾಕು ಮಹಾರಾಜ್‌ ಕಲೆಕ್ಷನ್‌ ರಿಪೋರ್ಟ್‌

Box Office Collection report: ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ್‌ ಮತ್ತು ರಾಮ್‌ ಚರಣ್‌ ಅವರ ಗೇಮ್‌ ಚೇಂಜರ್‌ ಸಿನಿಮಾಗಳು ಸಂಕ್ರಾಂತಿ ಹಬ್ಬದ ಖುಷಿ ಹೆಚ್ಚಿಸಿವೆ. ಪಾಸಿಟಿವ್‌ ಪ್ರತಿಕ್ರಿಯೆ ಪಡೆದ ಈ ಸಿನಿಮಾಗಳ ಈ ವರೆಗಿನ ಕಲೆಕ್ಷನ್‌ ಎಷ್ಟು, ಗೆದ್ದವರು ಯಾರು? ಇಲ್ಲಿದೆ ಮಾಹಿತಿ.

ಗೇಮ್‌ ಚೇಂಜರ್-‌ ಡಾಕು ಮಹಾರಾಜ್‌ ಕಲೆಕ್ಷನ್‌ ರಿಪೋರ್ಟ್‌
ಗೇಮ್‌ ಚೇಂಜರ್-‌ ಡಾಕು ಮಹಾರಾಜ್‌ ಕಲೆಕ್ಷನ್‌ ರಿಪೋರ್ಟ್‌

Daaku Maharaaja Vs Game Changer Box Office Collection: ಸಂಕ್ರಾಂತಿ ಹಬ್ಬದ ಪ್ರಯುಕ್ತ ಟಾಲಿವುಡ್‌ನಲ್ಲಿ ಬಿಡುಗಡೆ ಆಗಿವೆ ಸಾಲು ಸಾಲು ಸಿನಿಮಾಗಳು. ಆ ಪೈಕಿ ಶುಕ್ರವಾರ ಅಂದರೆ, ಜ. 10ರಂದು ರಾಮ್‌ ಚರಣ್‌ ತೇಜ ಅವರ ಗೇಮ್‌ ಚೇಂಜರ್‌ ಸಿನಿಮಾ ರಿಲೀಸ್‌ ಆದರೆ, ಜ. 12ರಂದು ಟಾಲಿವುಡ್‌ನ ಸ್ಟಾರ್‌ ನಟ ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ ಸಿನಿಮಾ ಬಿಡುಗಡೆ ಆಗಿತ್ತು. ಇಂದು ಇದೇ ಸಂಕ್ರಮಣದ ಪ್ರಯುಕ್ತ ವೆಂಕಟೇಶ್‌ ದಗ್ಗುಬಾಟಿ ನಟನೆಯ ಸಂಕ್ರಾಂತಿ ವಸ್ತುನ್ನಾಮ್‌ ಸಿನಿಮಾ ರಿಲೀಸ್‌ ಆಗಿದೆ. ಈ ಮೂರು ಸಿನಿಮಾಗಳಲ್ಲಿ ಗೇಮ್‌ಚಂಜರ್‌ ಮತ್ತು ಡಾಕು ಮಹಾರಾಜ್‌ ಸಿನಿಮಾ ಕಲೆಕ್ಷನ್‌ ಎಷ್ಟು? ಇಲ್ಲಿದೆ ವಿವರ.

ಶಂಕರ್‌ ನಿರ್ದೇಶನದಲ್ಲಿ ಮೂಡಿಬಂದ. ರಾಮ್‌ ಚರಣ್‌ ನಟನೆಯ ಬಹುಕೋಟಿ ವೆಚ್ಚದ ಗೇಮ್‌ ಚೇಂಜರ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವಂಥ ಕಮಾಯಿ ಮಾಡುತ್ತಿಲ್ಲ. ಸಿನಿಮಾ ಬಿಡುಗಡೆ ಆದ ದಿನವೇ ಪೈರಸಿ ಕಾಟದಿಂದ ಕಲೆಕ್ಷನ್‌ ಮೇಲೇಳಲಿಲ್ಲ. ಆಕ್ಯುಪೆನ್ಸಿ ವಿಚಾರದಲ್ಲಿ ಈ ಸಿನಿಮಾ ಶೇ 52ರಷ್ಟು ಕುಸಿತ ಕಂಡಿದೆ. ಇದೀಗ Sacnilk ವರದಿ ಪ್ರಕಾರ ಒಟ್ಟಾರೆ ನಾಲ್ಕು ದಿನದ ಕಲೆಕ್ಷನ್‌ ನೋಡಿದರೆ, ಜಾಗತಿಕವಾಗಿ 130.7 ಕೋಟಿ ಗಳಿಸಿದೆ ಗೇಮ್‌ ಚೇಂಜರ್‌ ಸಿನಿಮಾ. ಆದರೆ ಸಿನಿಮಾ ತಂಡ ಮಾತ್ರ ಮೊದಲ ದಿನವೇ 186 ಕೋಟಿ ಗಳಿಸಿದೆ ಎಂದು ಹೇಳಿತ್ತು. ಸೋಮವಾರ ಕೇವಲ 7.61 ಕೋಟಿ ಮಾತ್ರ ಗಳಿಸಿದೆ ಈ ಸಿನಿಮಾ.

ಡಾಕು ಮಹಾರಾಜ್‌ ಸಿನಿಮಾ ಲೆಕ್ಕಾಚಾರ ಹೇಗಿದೆ?

ತೆಲುಗಿನಲ್ಲಿ ಗಾಡ್‌ ಆಫ್‌ ಮಾಸ್‌ ಎಂದೇ ಕರೆಸಿಕೊಳ್ಳುವ ಬಾಲಕೃಷ್ಣ ಅಭಿನಯದ ಆಕ್ಷನ್ ಥ್ರಿಲ್ಲರ್ ಚಿತ್ರ ಡಾಕು ಮಹಾರಾಜ್ ಸಿನಿಮಾ, ಸಂಕ್ರಾಂತಿ ಉಡುಗೊರೆಯಾಗಿ ಜನವರಿ 12 ರಂದು ಬಿಡುಗಡೆ ಆಗಿತ್ತು. ಮೊದಲ ದಿನದಿಂದಲೇ ಪಾಸಿಟಿವ್‌ ಪ್ರತಿಕ್ರಿಯೆ ಪಡೆದ ಈ ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿಯೂ ಸದ್ದು ಮಾಡುತ್ತಿದೆ. Sacnilk ವರದಿ ಪ್ರಕಾರ ಮೊದಲ ದಿನ ವಿಶ್ವದಾದ್ಯಂತ 56 ಕೋಟಿ ಕಲೆಕ್ಷನ್‌ ಮಾಡಿದೆ. ಈ ಮೂಲಕ ಕಳೆದ ವರ್ಷದ ಅವರ ವೀರ ಸಿಂಹ ರೆಡ್ಡಿ ಸಿನಿಮಾದ ಕಲೆಕ್ಷನ್‌ (54 ಕೋಟಿ) ದಾಖಲೆ ಮುರಿದಿದೆ.

ಕುಸಿತ ಕಂಡ ಡಾಕು ಮಹಾರಾಜ್

ಡಾಕು ಮಹಾರಾಜ್‌ ಸಿನಿಮಾ ಎರಡನೇ ದಿನ ಕಲೆಕ್ಷನ್‌ನಲ್ಲಿ ಮಹಾ ಕುಸಿತ ಕಂಡಿದೆ. ಸೋಮವಾರ ಕೇವಲ 12 ಕೋಟಿ ಮಾತ್ರ ಬಾಚಿಕೊಂಡಿದೆ ಎಂದು ಸ್ಯಾಕ್ನಿಲ್‌ ವರದಿ ಮಾಡಿದೆ. ಮೊದಲ ದಿನಕ್ಕೆ ಹೋಲಿಕೆ ಮಾಡಿದರೆ ಅರ್ಧಕ್ಕೆ ಅರ್ಧದಷ್ಟು ಕಲೆಕ್ಷನ್‌ ಕುಸಿತ ಕಂಡಿದೆ. ಸರಿ ಸುಮಾರು 100 ಕೋಟಿ ಬಜೆಟ್‌ನಲ್ಲಿ ಡಾಕು ಮಹಾರಾಜ್‌ ಸಿನಿಮಾವನ್ನು ಸಿತಾರಾ ಎಂಟರ್ಟೈನ್‌ಮೆಂಟ್ಸ್‌ ಬ್ಯಾನರ್‌ನಲ್ಲಿ ನಾಗವಂಶಿ ನಿರ್ಮಾಣ ಮಾಡಿದ್ದಾರೆ. ಹಾಕಿದ ಬಂಡವಾಳ ರಿಕವರಿ ಆಗಲು ಮುಂದಿನ ಮೂರ್ನಾಲ್ಕು ದಿನಗಳೇ ಬೇಕಾಗಬಹುದು ಎಂದೂ ಹೇಳಲಾಗುತ್ತಿದೆ.

ಯಾವ ಒಟಿಟಿ ತೆಕ್ಕೆಗೆ ಡಾಕು ಸೇಲ್‌?

ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಡಾಕು ಮಹಾರಾಜ್‌ ಸಿನಿಮಾದ ಡಿಜಿಟಲ್‌ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ ಸಂಸ್ಥೆ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ ಎಂದು ಹೇಳಲಾಗುತ್ತಿದೆ. ಥಿಯೇಟರ್‌ ರನ್‌ ಮುಗಿದ ಬಳಿಕ ಅಂದರೆ ಫೆಬ್ರವರಿ ಮಾಸಾಂತ್ಯಕ್ಕೆ ಈ ಸಿನಿಮಾ ಒಟಿಟಿಗೆ ಬರುವ ಸಾಧ್ಯತೆ ಇದೆ. ಅಥವಾ ಅದಕ್ಕೂ ಮೊದಲೇ ಸ್ಟ್ರೀಮಿಂಗ್‌ ಆರಂಭಿಸಿದರೂ ಅಚ್ಚರಿಯಿಲ್ಲ. ಈ ಬಗ್ಗೆ ಒಟಿಟಿ ಸಂಸ್ಥೆಯೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

Whats_app_banner