ಈ ದೇಶದಲ್ಲಿ ಎನ್‌ಟಿಆರ್ ಚಿತ್ರಕ್ಕೆ ಏನ್ ಕ್ರೇಜ್ ಗುರೂ; ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಬಾಚಿಕೊಂಡ Jr NTR ದೇವರ ಸಿನಿಮಾ
Devara Telugu Movie: ಜೂನಿಯರ್ ಎನ್‌ಟಿಆರ್ ಮತ್ತು ಕೊರಟಾಲ ಶಿವ ಕಾಂಬಿನೇಷನ್‌ನ ದೇವರ ಸಿನಿಮಾ ಇದೀಗ ಬಿಡುಗಡೆ ಪೂರ್ವ, ಒಳ್ಳೆಯ ಕಮಾಯಿ ಮಾಡಿದೆ. ಭಾರತದ ಜತೆಗೆ ವಿದೇಶಗಳಲ್ಲೂ ದೇವರ ಬಿಡುಗಡೆ ಆಗುತ್ತಿರುವುದರಿಂದ ರಿಲೀಸ್‌ಗೂ ಮುನ್ನವೇ ಬೇರಾವ ಸಿನಿಮಾ ಮಾಡದ ರೆಕಾರ್ಡ್ ತನ್ನದಾಗಿಸಿಕೊಂಡಿದೆ.
Devara Pre Release Business: ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಇದೀಗ ದೇವರ ಸಿನಿಮಾ ಪ್ರಚಾರ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕವೇ ಹೈಪ್ ಕ್ರಿಯೆಟ್ ಮಾಡಿರುವ ಈ ಸಿನಿಮಾ ಸೆಪ್ಟೆಂಬರ್ 27ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಭಾರತ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಈ ಸಿನಿಮಾಕ್ಕೆ ಬೇಡಿಕೆ ಹೆಚ್ಚಿದ್ದು, ಅಲ್ಲಿಂದಲೂ ಕೋಟಿ ಕೋಟಿ ಆದಾಯ ಹರಿದು ಬರುತ್ತಿದೆ. ಆ ಪೈಕಿ ದೂರದ ಅಮೆರಿಕಾ ಒಂದರಲ್ಲಿಯೇ ದೇವರ ಸಿನಿಮಾ ಹೊಸ ದಾಖಲೆ ಬರೆದಿದೆ.
ದೇವರ ಸಿನಿಮಾ ಆಗಮನಕ್ಕೆ ಹೆಚ್ಚು ದಿನ ಉಳಿದಿಲ್ಲ. ಇನ್ನೆರಡು ವಾರಗಳು ಮಾತ್ರ ಬಾಕಿ ಇವೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ ಇದೀಗ ಬಿಡುಗಡೆ ಪೂರ್ವ, ಒಳ್ಳೆಯ ಕಮಾಯಿ ಮಾಡಿದೆ. ಭಾರತದ ಜತೆಗೆ ವಿದೇಶಗಳಲ್ಲೂ ದೇವರ ಬಿಡುಗಡೆ ಆಗುತ್ತಿರುವುದರಿಂದ ರಿಲೀಸ್‌ಗೂ ಮುನ್ನವೇ ರೆಕಾರ್ಡ್ ಸೃಷ್ಟಿಸುತ್ತಿದೆ. ಇತ್ತೀಚೆಗಿನ ಬಿಡುಗಡೆ ಆದ ಟ್ರೇಲರ್, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಅದರಂತೆ, ಈ ಸಿನಿಮಾ ಅಮೆರಿಕವೊಂದರಲ್ಲಿಯೇ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಮುಂಗಡ ಬುಕಿಂಗ್‌ನಿಂದಲೇ 8 ಕೋಟಿ ಕಮಾಯಿ
ಅಮೆರಿಕದಲ್ಲಿ ತೆಲುಗು ಸಿನಿಮಾಗಳಿಗೆ ಒಳ್ಳೆಯ ಬೇಡಿಕೆ ಇದೆ. ಮುಂಗಡ ಬುಕಿಂಗ್ ವಿಚಾರದಲ್ಲಿಯೂ ಈ ಸಿನಿಮಾ ಮುಂದಡಿ ಇರಿಸಿದೆ. ಈಗಾಗಲೇ ಅಮೆರಿಕಾದ 276 ಕಡೆಯಲ್ಲಿ ಅಡ್ವಾನ್ಸ್ ಬುಕಿಂಗ್ ಶುರುವಾಗಿದ್ದು, 32 ಸಾವಿರ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ. ಈ ಮುಂಗಡ ಟಿಕೆಟ್ ಮಾರಾಟದಿಂದಲೇ ಬರೋಬ್ಬರಿ 8 ಕೋಟಿ ಹಣವನ್ನು ಕಮಾಯಿ ಮಾಡಿದೆ ದೇವರ ಸಿನಿಮಾ.
ಹಾಲಿವುಡ್‌ನಲ್ಲಿ ದೇವರ ಪ್ರೀಮಿಯರ್
ಸೆಪ್ಟೆಂಬರ್ 26ರಂದು ಅಮೆರಿಕದ ಹಾಲಿವುಡ್‌ನ ಬಿಯಾಂಡ್ ಫೆಸ್ಟ್ ಥಿಯೇಟರ್‌ನಲ್ಲಿ ಸಂಜೆ 6:30ಕ್ಕೆ ದೇವರ ಸಿನಿಮಾ ಪ್ರೀಮಿಯರ್ ಆಗಲಿದೆ. ಈ ಸಿನಿಮಾ ವೀಕ್ಷಣೆಗೆ ಕೆಲವು ಹಾಲಿವುಡ್ ನಟ, ನಟಿಯರು ಆಗಮಿಸುತ್ತಿರುವುದು ವಿಶೇಷ. ಆರ್‌ಆರ್‌ಆರ್ ಸಿನಿಮಾ ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ಹಾಲಿವುಡ್ ಮಂದಿಗೂ ಜೂನಿಯರ್ ಎನ್‌ಟಿಆರ್ ಗೊತ್ತಿರುವ ಮುಖ. ಆ ಕಾರಣಕ್ಕೂ ಈ ಸಿನಿಮಾ ಹಾಲಿವುಡ್ ಅಂಗಳದಲ್ಲಿಯೂ ಸದ್ದು ಮಾಡಲಿದೆ ಎಂದೇ ಹೇಳಲಾಗುತ್ತಿದೆ.
ಬಹುತಾರಾಗಣದ, ಬಹುಕೋಟಿ ವೆಚ್ಚದ ಸಿನಿಮಾ
ದೇವರ ಸಿನಿಮಾ 2 ಭಾಗಗಳಾಗಿ ತಯಾರಾಗುತ್ತಿದೆ. ಮೊದಲ ಭಾಗ ಸೆಪ್ಟೆಂಬರ್ 27 ರಂದು ತೆರೆ ಕಾಣುತ್ತಿದೆ. ಚಿತ್ರವನ್ನು ಯುವಸುಧಾ ಆರ್ಟ್ಸ್, ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿ, ಸುಧಾಕರ್ ಮಿಕ್ಕಿಲಿನೇನಿ, ಕೋಸರಾಜು ಹರಿಕೃಷ್ಣ , ನಂದಮುರಿ ಕಲ್ಯಾಣ್ ರಾಮ್ ಜೊತೆ ಸೇರಿ ನಿರ್ಮಿಸಿದ್ದಾರೆ. ಸದ್ಯದ ಲೆಕ್ಕಾಚಾರಗಳ ಪ್ರಕಾರ ಈ ಚಿತ್ರದ ಬಜೆಟ್ ಬರೋಬ್ಬರಿ 300 ಕೋಟಿ ರೂಪಾಯಿ.
ಕೊರಟಾಲ ಶಿವ, ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಜ್ಯೂ ಎನ್‌ಟಿಆರ್, ಸೈಫ್ ಅಲಿ ಖಾನ್, ಜಾನ್ವಿ ಕಪೂರ್ ಜೊತೆಗೆ ಚಿತ್ರದಲ್ಲಿ ಪ್ರಕಾಶ್ ರಾಜ್, ಶ್ರೀಕಾಂತ್, ಮುರಳಿ ಶರ್ಮಾ ಹಾಗೂ ಇನ್ನಿತರರು ನಟಿಸಿದ್ದಾರೆ.