Game Changer: ಗೇಮ್ ಚೇಂಜರ್ ಫಸ್ಟ್ ರಿವ್ಯೂ ಇಲ್ಲಿದೆ; ಗ್ಲೋಬಲ್ ಸ್ಟಾರ್‌ ರಾಮ್ ಚರಣ್‌ ಸಿನಿಮಾ ಹೀಗಿದೆಯಂತೆ
ಕನ್ನಡ ಸುದ್ದಿ  /  ಮನರಂಜನೆ  /  Game Changer: ಗೇಮ್ ಚೇಂಜರ್ ಫಸ್ಟ್ ರಿವ್ಯೂ ಇಲ್ಲಿದೆ; ಗ್ಲೋಬಲ್ ಸ್ಟಾರ್‌ ರಾಮ್ ಚರಣ್‌ ಸಿನಿಮಾ ಹೀಗಿದೆಯಂತೆ

Game Changer: ಗೇಮ್ ಚೇಂಜರ್ ಫಸ್ಟ್ ರಿವ್ಯೂ ಇಲ್ಲಿದೆ; ಗ್ಲೋಬಲ್ ಸ್ಟಾರ್‌ ರಾಮ್ ಚರಣ್‌ ಸಿನಿಮಾ ಹೀಗಿದೆಯಂತೆ

Game changer Movie first Review: ರಾಮ್ ಚರಣ್ ಅಭಿನಯದ 'ಗೇಮ್ ಚೇಂಜರ್' ಚಿತ್ರದ ಮೊದಲ ವಿಮರ್ಶೆ ಬಿಡುಗಡೆಯಾಗಿದೆ. ದಕ್ಷಿಣ ಭಾರತದ ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಸಾಗರೋತ್ತರ ಸೆನ್ಸಾರ್ ಮಂಡಳಿಯ ವಿಮರ್ಶೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಗೇಮ್ ಚೇಂಜರ್ ಫಸ್ಟ್ ರಿವ್ಯೂ ಇಲ್ಲಿದೆ
ಗೇಮ್ ಚೇಂಜರ್ ಫಸ್ಟ್ ರಿವ್ಯೂ ಇಲ್ಲಿದೆ

ಗೇಮ್ ಚೇಂಜರ್ ಮೊದಲ ವಿಮರ್ಶೆ: ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಈಗಾಗಲೇ ಪ್ರಚಾರ ಜೋರಾಗಿ ನಡೆಯುತ್ತಿದ್ದು, ರಾಮ್‌ ಚರಣ್ ಅಭಿಮಾನಿಗಳು ತುಂಬಾ ಕುತೂಹಲ ಇಟ್ಟುಕೊಂಡಿದ್ದಾರೆ. ಹೀಗಿರುವಾಗ ದಕ್ಷಿಣದ ಸ್ಟಾರ್ ನಿರ್ದೇಶಕ ಶಂಕರ್ ನಿರ್ದೇಶನದ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಚಿತ್ರದ ವಿಮರ್ಶೆ ಹೊರಬಂದಿದೆ. ಗೇಮ್ ಚೇಂಜರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಕಿಯಾರಾ ಅಡ್ವಾಣಿ ಎರಡನೇ ಬಾರಿಗೆ ರಾಮ್ ಚರಣ್ ಜತೆ ನಟಿಸಿದ್ದಾರೆ.

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ಜೀ ಸ್ಟುಡಿಯೋಸ್ ಮತ್ತು ದಿಲ್ ರಾಜು ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಸಿರೀಶ್ ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಗೇಮ್ ಚೇಂಜರ್ ಚಿತ್ರವನ್ನು ನಿರ್ಮಿಸಿದ್ದಾರೆ. ಈಗಾಗಲೇ ಬಿಡುಗಡೆಯಾದ ಗೇಮ್ ಚೇಂಜರ್ ಟ್ರೈಲರ್, ಪೋಸ್ಟ್, ಟೀಸರ್ ಮತ್ತು ಹಾಡುಗಳು ಸೂಪರ್ ಹಿಟ್ ಆಗಿವೆ. ಗೇಮ್ ಚೇಂಜರ್ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಮೂರನೇ ಅತಿ ಹೆಚ್ಚು ವೀಕ್ಷಣೆ ಪಡೆದ ಟಾಲಿವುಡ್ ಟ್ರೈಲರ್ ಆಗಿದೆ.

ಜನವರಿ 10ರಂದು ಬಿಡುಗಡೆ

ಗೇಮ್ ಚೇಂಜರ್ ಚಿತ್ರದ ಟ್ರೈಲರ್ ಯೂಟ್ಯೂಬ್‌ನಲ್ಲಿ ವೈರಲ್ ಆಗುತ್ತಿದೆ. ಜನವರಿ 10 ರಂದು ಸಂಕ್ರಾಂತಿ ಉಡುಗೊರೆಯಾಗಿ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಗೇಮ್ ಚೇಂಜರ್ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ, ಗೇಮ್ ಚೇಂಜರ್‌ನ ಮೊದಲ ವಿಮರ್ಶೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಗೇಮ್ ಚೇಂಜರ್ ಚಿತ್ರದ ಸೆನ್ಸಾರ್ ವಿದೇಶದಲ್ಲಿ ಪೂರ್ಣಗೊಂಡಿದೆ.

ಗೇಮ್ ಚೇಂಜರ್ ಫಸ್ಟ್ ರಿವ್ಯೂ

ಸಾಗರೋತ್ತರ ಸೆನ್ಸಾರ್ ಮಂಡಳಿಯ ಸದಸ್ಯರಲ್ಲಿ ಒಬ್ಬರಾದ, ದಕ್ಷಿಣ ಭಾರತದ ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಇತ್ತೀಚೆಗೆ ಟ್ವಿಟರ್‌ನಲ್ಲಿ ಗೇಮ್‌ ಚೇಂಜರ್‌ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಸಾಗರೋತ್ತರ ಸೆನ್ಸಾರ್‌ ಮಂಡಳಿಯಲ್ಲಿ ಚಿತ್ರವನ್ನು ವೀಕ್ಷಿಸಿದ ಉಮೈರ್ ಸಂಧು, ಗೇಮ್ ಚೇಂಜರ್ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಅವರು ಎಕ್ಸ್ ನಲ್ಲಿ ಹಲವಾರು ಟ್ವೀಟ್ ಗಳನ್ನು ಮಾಡಿದ್ದಾರೆ.

ಚಲನಚಿತ್ರ ನೋಡುವುದು ಚಿತ್ರಹಿಂಸೆ

“ಶಂಕರ್ ಮತ್ತು ರಾಮ್ ಚರಣ್ ಅವರ ಚಿತ್ರ ನೋಡಲೇಬೇಕಾದ ಚಿತ್ರವಲ್ಲ. ಎಲ್ಲಾ ಪ್ರಮುಖ ನಟರ ನಟನೆ ಕೂಡ ಕಳಪೆಯಾಗಿದೆ. ಹಳೆಯ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳು ನೀರಸ ಎನಿಸುತ್ತದೆ. ರಾಮ್ ಚರಣ್ ಅಭಿಮಾನಿಗಳೇ ಸಾರಿ. ಈ ಚಿತ್ರ ನೋಡುವುದು ಚಿತ್ರಹಿಂಸೆ” ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ. ಅವರು ಕೇವಲ 2-ಸ್ಟಾರ್ ರೇಟಿಂಗ್ ನೀಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ "ನಿರ್ದೇಶಕ ಶಂಕರ್ ಖಂಡಿತವಾಗಿಯೂ ಚಿತ್ರರಂಗದಿಂದ ನಿವೃತ್ತರಾಗಬೇಕು. ನಿಮ್ಮ 80 ಮತ್ತು 90ರ ದಶಕದ ಕೆಟ್ಟ ರಾಜಕೀಯ ಚಲನಚಿತ್ರಗಳನ್ನು ನೋಡಿ ನಾವು ಸುಸ್ತಾಗಿದ್ದೇವೆ. ಮೊದಲು ಇಂಡಿಯನ್ 2 ಈಗ ಗೇಮ್ ಚೇಂಜರ್. ನೀವು ಜನರಿಗೆ ಚಿತ್ರಹಿಂಸೆ ನೀಡುತ್ತಿರುವ ನಿರ್ದೇಶಕ. ನಿಮ್ಮನ್ನು ಬ್ಯಾನ್ ಮಾಡಬೇಕು. ನೀವು ಕಮಲ್ ಹಾಸನ್ ಮತ್ತು ರಾಮ್ ಚರಣ್ ಅವರ ವೃತ್ತಿಜೀವನವನ್ನೇ ಹಾಳು ಮಾಡಿದ್ದೀರಿ" ಎಂದು ಉಮೈರ್ ಸಂಧು ಬರೆದಿದ್ದಾರೆ.

"ಗೇಮ್ ಚೇಂಜರ್ ಟ್ರೈಲರ್ ಭಯಬೀಳಿಸುವಂತಿದೆ, ಕೆಟ್ಟದಾಗಿದೆ. ಇನ್ನು ಚಿತ್ರ ಹೇಗಿರುತ್ತದೆ ಎಂದು ನೀವೇ ಊಹಿಸಬಹುದು. ನಾನು ಗೇಮ್ ಚೇಂಜರ್ ಸೆನ್ಸರ್ ಸ್ಕ್ರೀನಿಂಗ್ ನಲ್ಲಿ ಮಲಗಿಬಿಟ್ಟೆ. ವರ್ಸ್ಟ್‌ ಸಿನಿಮಾ ನೈಟೀಸ್‌ ಕಿಡ್ಸ್‌ ಫಿಲ್ಮ್ಂ" ಎಂದು ಉಮೈರ್ ಸಂಧು ಮತ್ತೊಂದು ಪೋಸ್ಟ್ನಲ್ಲಿ ಗೇಮ್ ಚೇಂಜರ್ ಬಗ್ಗೆ ನಕಾರಾತ್ಮಕ ವಿಮರ್ಶೆ ಬರೆದಿದ್ದಾರೆ.

ನಾಯಕ, ನಾಯಕಿಯರು ಮತ್ತು ನಟರ ಬಗ್ಗೆ ಅನೇಕ ರೀತಿಯಲ್ಲಿ ನಕಾರಾತ್ಮಕ ಟೀಕೆಗಳನ್ನು ಮಾಡುವ ವಿಮರ್ಶಕ ಉಮೈರ್ ಸಂಧು ಅವರ ವಿಮರ್ಶೆಗಳು ಕೆಲವೊಮ್ಮೆ ಸರಿಯಾಗಿರುತ್ತವೆ ಮತ್ತು ಕೆಲವೊಮ್ಮೆ ವ್ಯತಿರಿಕ್ತವಾಗಿರುತ್ತವೆ. ಆದರೂ ಅವರು ಖ್ಯಾತಿಯಿಗಾಗಿ ಇಂತಹ ನೆಗಟಿವ್ ವಿಮರ್ಶೆ ನೀಡುತ್ತಾರೆ. ಗೇಮ್‌ ಚೇಂಜರ್ ವಿಮರ್ಷೆ ಕೂಡ ಅದೇ ರೀತಿ ಎಂದು ಅಭಿಮಾನಿಗಳು ಹೇಳಿದ್ದಾರೆ.

Whats_app_banner