ಕೀರ್ತಿ ಸುರೇಶ್ ತಾಯಿ ಕೂಡಾ ಜನಪ್ರಿಯ ನಟಿ; ಮಲಯಾಳಂ-ತಮಿಳು ಮಾತ್ರವಲ್ಲ, ತೆಲುಗು ಸಿನಿಮಾಗಳಲ್ಲೂ ಮೇನಕಾ ಮೇರುನಟಿ
ಕನ್ನಡ ಸುದ್ದಿ  /  ಮನರಂಜನೆ  /  ಕೀರ್ತಿ ಸುರೇಶ್ ತಾಯಿ ಕೂಡಾ ಜನಪ್ರಿಯ ನಟಿ; ಮಲಯಾಳಂ-ತಮಿಳು ಮಾತ್ರವಲ್ಲ, ತೆಲುಗು ಸಿನಿಮಾಗಳಲ್ಲೂ ಮೇನಕಾ ಮೇರುನಟಿ

ಕೀರ್ತಿ ಸುರೇಶ್ ತಾಯಿ ಕೂಡಾ ಜನಪ್ರಿಯ ನಟಿ; ಮಲಯಾಳಂ-ತಮಿಳು ಮಾತ್ರವಲ್ಲ, ತೆಲುಗು ಸಿನಿಮಾಗಳಲ್ಲೂ ಮೇನಕಾ ಮೇರುನಟಿ

ಕೀರ್ತಿ ಸುರೇಶ್ ಅವರ ತಾಯಿ ಮೇನಕಾ ಸುರೇಶ್, 1980ರ ದಶಕದಲ್ಲಿ ಮಲಯಾಳಂನಲ್ಲಿ ಅಗ್ರ ನಾಯಕಿಯಾಗಿದ್ದರು. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದ ಮೇನಕಾ, ತೆಲುಗಿನಲ್ಲಿಯೂ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ.

ಕೀರ್ತಿ ಸುರೇಶ್ ತಾಯಿ ಕೂಡಾ ಜನಪ್ರಿಯ ನಟಿ; ತೆಲುಗು ಸಿನಿಮಾಗಳಲ್ಲೂ ಮೇನಕಾ ಮೇರುನಟಿ
ಕೀರ್ತಿ ಸುರೇಶ್ ತಾಯಿ ಕೂಡಾ ಜನಪ್ರಿಯ ನಟಿ; ತೆಲುಗು ಸಿನಿಮಾಗಳಲ್ಲೂ ಮೇನಕಾ ಮೇರುನಟಿ

ದಕ್ಷಿಣ ಭಾರತದ ಪ್ರಸಿದ್ಧ ನಟಿ ಕೀರ್ತಿ ಸುರೇಶ್, ತೆಲುಗು ಮತ್ತು ತಮಿಳು ಭಾಷೆಗಳ ಟಾಪ್‌ ನಾಯಕಿಯರಲ್ಲಿ ಒಬ್ಬರು. ಹಲವು ಉನ್ನತ ಪಾತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಅವರು, ಪ್ರಾಮುಖ್ಯತೆ ಇರುವ ಸೀಮಿತ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಗ್ಲಾಮರಸ್‌ ಪಾತ್ರಗಳಿಂದ ದೂರವಿದ್ದರೂ ಸ್ಟಾರ್‌ಡಮ್ ಗಳಿಸಬಹುದು ಎಂಬುದನ್ನು ತಮ್ಮ ನಟನೆಯಿಂದಲೇ ಸಾಬೀತುಪಡಿಸಿದ್ದಾರೆ. ಮಹಾನಟಿ ಚಿತ್ರದ ನಟನೆಗೆ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಅವರು, ಮಹಿಳಾ ಪ್ರಾಧಾನ್ಯತೆಯ ಚಿತ್ರಗಳಲ್ಲಿ ನಟಿಸಿ ಯಶಸ್ಸು ಗಳಿಸುತ್ತಿದ್ದಾರೆ.

ಕೀರ್ತಿ ಸುರೇಶ್ ಅವರ ಪೋಷಕರು ಕೂಡಾ ಸಿನಿಮಾ ಕ್ಷೇತ್ರದ ಹಿನ್ನೆಲೆ ಹೊಂದಿದ್ದಾರೆ. ಕೀರ್ತಿ ತಾಯಿ ಮೇನಕಾ ಸುರೇಶ್‌, ಮಲಯಾಳಂನಲ್ಲಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 1980ರ ದಶಕದಲ್ಲಿ, ಅವರು ಮಾಲಿವುಡ್‌ನ ಜನಪ್ರಿಯ ಹೀರೋಯಿನ್‌ ಆಗಿದ್ದಾರೆ. ಅಲ್ಲದೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿ ಎಂಬ ದಾಖಲೆಯನ್ನು ಕೂಡಾ ನಿರ್ಮಿಸಿದ್ದರು. ಮಲಯಾಳಂ ಮಾತ್ರವಲ್ಲದೆ ತಮಿಳಿನಲ್ಲಿಯೂ ನಟಿಸಿದ್ದಾರೆ. ಪ್ರಖ್ಯಾತ ನಟ ಶಿವಾಜಿ ಗಣೇಶನ್ ಅವರಂತಹ ಸ್ಟಾರ್‌ಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಮಲಯಾಳಂ ಮತ್ತು ತಮಿಳಿನಲ್ಲಿ ಬಿಡುವಿಲ್ಲದ ನಟಿ ಎಂದು ಕರೆಯಲ್ಪಡುತ್ತಿದ್ದ ಮೇನಕಾ, ತೆಲುಗಿನಲ್ಲಿಯೂ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿರಂಜೀವಿ ಅವರ ಪುನ್ನಮಿನಾಗು ಅವುಗಳಲ್ಲಿ ಒಂದಾಗಿದೆ. ಈ ಚಿತ್ರದ ಮೂಲಕ ಮೇನಕಾ ಟಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಎವಿಎಂ ಪ್ರೊಡಕ್ಷನ್ಸ್ ನಿರ್ಮಿಸಿದ ಪುನ್ನಮಿನಾಗು ಚಿತ್ರದಲ್ಲಿ ಮೇನಕಾ ಮತ್ತು ರತಿ ಅಗ್ನಿಹೋತ್ರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಚಿರಂಜೀವಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸುಬ್ಬರಾವುಕು ಕೋಪಂ ವಚ್ಚಿಂದಿ

ಪುನ್ನಮಿನಾಗು ಬಿಡುಗಡೆಯಾಗಿ ಎರಡು ವರ್ಷಗಳ ನಂತರ, ಮೇನಕಾ ಸುಬ್ಬರಾವುಕು ಕೋಪಂ ವಚ್ಚಿಂದಿ ಚಿತ್ರದ ನಾಯಕಿಯಾಗಿ ತೆರೆ ಮುಂದೆ ಬಂದರು. ಧವಳ ಸತ್ಯಂ ನಿರ್ದೇಶನದ ಈ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ.

ಇಂದ್ರಧನುಷ್

ಇದಾಗಿ ಆರು ವರ್ಷಗಳ ನಂತರ 1988ರಲ್ಲಿ, ರಾಜಶೇಖರ್ ಮತ್ತು ಜೀವಿತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ ಇಂದ್ರಧನುಷ್ ಚಿತ್ರದಲ್ಲಿ ಮೇನಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ತೆಲುಗಿನಲ್ಲಿ ಇದು ಅವರ ಕೊನೆಯ ಚಿತ್ರವಾಗಿತ್ತು. ಆ ನಂತರ ಟಾಲಿವುಡ್‌ನಲ್ಲಿ ಕೀರ್ತಿ ಸುರೇಶ್ ತಾಯಿ ಕಾಣಿಸಿಕೊಂಡಿಲ್ಲ.

ಜಿ ಸುರೇಶ್ ಕುಮಾರ್ ಜತೆಗೆ ಮದುವೆ

ಮೇನಕಾ ಅವರು ನಾಯಕಿಯಾಗಿ ಉನ್ನತ ಸ್ಥಾನದಲ್ಲಿದ್ದ ಸಮಯದಲ್ಲಿ ಮಲಯಾಳಂ ಜನಪ್ರಿಯ ನಿರ್ಮಾಪಕ ಜಿ ಸುರೇಶ್ ಕುಮಾರ್ ಅವರನ್ನು ವಿವಾಹವಾದರು. ಮದುವೆಯ ನಂತರ ಚಲನಚಿತ್ರಗಳಿಂದ ದೂರ ಉಳಿದಿದ್ದಾರೆ. ಇದೀಗ ಅವರ ಮಗಳು ಅಮ್ಮನ ಹೆಸರನ್ನು ಇನ್ನಷ್ಟು ಬೆಳೆಸಿದ್ದಾರೆ.

ಕೀರ್ತಿ ಸುರೇಶ್ ಶೀಘ್ರದಲ್ಲೇ ತಮ್ಮ ಗೆಳೆಯ ಆಂಟನಿ ಅವರನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿಗಳಿವೆ.

Whats_app_banner