ಪುಷ್ಪ 2 ಆಯ್ತು, ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು? ಈ ಚಿತ್ರಕ್ಕೆ ಹೊಸ ಬಾಡಿ ಲ್ಯಾಂಗ್ವೇಜ್ ಬೇಕಂತೆ
Allu Arjun Upcoming Movie: ಪುಷ್ಪ 2 ಸಿನಿಮಾ ಪ್ರಾಜೆಕ್ಟ್ ಮುಗೀತು. ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು? ಈ ಸಂದೇಹಕ್ಕೆ ಈಗ ಉತ್ತರ ದೊರಕಿದೆ. 2020ರಿಂದ ಅಲ್ಲು ಅರ್ಜುನ್ ನಿರ್ದೇಶಕ ಸುಕುಮಾರ್ ಜತೆಗೆ ಇದ್ದರು. ಇದೀಗ ತನ್ನ ಮುಂದಿನ ಪ್ರಾಜೆಕ್ಟ್‌ಗಾಗಿ ತ್ರಿವಿಕ್ರಮ್ ಶ್ರೀನಿವಾಸ್ ಜತೆ ಕೆಲಸ ಮಾಡಲಿದ್ದಾರಂತೆ.
ಪುಷ್ಪ 2 ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಈ ಸಿನಿಮಾದಲ್ಲಿ ನಟಿಸಿರುವ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಎಲ್ಲರಲ್ಲಿಯೂ ಇರಬಹುದು. 2020ರಿಂದ ಅಲ್ಲು ಅರ್ಜುನ್ ತನ್ನ ಬದುಕನ್ನು ಪುಷ್ಪ ಸಿನಿಮಾಕ್ಕಾಗಿ ಮೀಸಲಿಟ್ಟಿದ್ದರು. 2021ರಲ್ಲಿ ಬಿಡುಗಡೆಯಾದ ಪುಷ್ಪ: ದಿ ರೈಸ್ ಮತ್ತು 2024ರಲ್ಲಿ ಬಿಡುಗಡೆಯಾದ ಪುಷ್ಪ 2: ದಿ ರೂಲ್ ಮೂಲಕ ಸಿನಿಮಾ ರಂಗದಲ್ಲಿ ಹೊಸ ಛಾಪು ಮೂಡಿಸಿದ್ದರು. ಈ ಸಮಯದಲ್ಲಿ ಬೇರೆ ಸಿನಿಮಾಗಳಲ್ಲಿ ನಟಿಸುವ ಆಫರ್‌ಗಳಿದ್ದವು. ಆದರೆ, ಈ ಎರಡು ಪ್ರಾಜೆಕ್ಟ್ ಮುಗಿಯದೆ ಇವರು ಬೇರೆ ಲುಕ್‌ನಲ್ಲಿ ಕಾಣಿಸುವಂತೆ ಇರಲಿಲ್ಲ. ಇದೀಗ ತನ್ನ ಪುಷ್ಪರಾಜ್ ಅವತಾರದಿಂದ ಹೊರಬರಲಿದ್ದಾರೆ.
ಅಲ್ಲು ಅರ್ಜುನ್ ಮುಂದಿನ ಸಿನಿಮಾ
ಇತ್ತೀಚೆಗೆ ಎಂ9 ಜತೆಗಿನ ಸಂದರ್ಶನದಲ್ಲಿ ನಿರ್ಮಾಪಕ ನಾಗ ವಂಶಿ ಅವರು ಅಲ್ಲು ಅರ್ಜುನ್‌ನ ಮುಂಬರುವ ಪ್ರಾಜೆಕ್ಟ್ ಕುರಿತು ಮಾತನಾಡಿದ್ದರು. ಅಲ್ಲು ಅರ್ಜುನ್‌ನ ಮುಂದಿನ ಸಿನಿಮಾ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜತೆಗಿರಲಿದೆ ಎಂದಿದ್ದರು. ತನ್ನ ಹೊಸ ಸಿನಿಮಾದಲ್ಲಿ ತನ್ನ ದೇಹ ಭಾಷೆ ಹೇಗಿರಲಿದೆ? ತನ್ನ ಪಾತ್ರ ಹೇಗಿರಲಿದೆ? ಎಂದು 2025ರ ಬೇಸಿಗೆಯ ನಂತರ ನಟ ಅಲ್ಲು ಅರ್ಜುನ್ ತಿಳಿಸಬಹುದು ಎಂದು ನಾಗ ವಂಶಿ ಹೇಳಿದ್ದಾರೆ.
"ನಾವು ಈಗಾಗಲೇ ಸಿನಿಮಾದ ಚಿತ್ರಕಥೆಯನ್ನು ಬಹುತೇಕ ಪೂರ್ಣಗೊಳಿಸಿದ್ದೇವೆ. ಒಮ್ಮೆ, ಬನ್ನಿ (ಅರ್ಜುನ್) ಬಿಡುವಾದರೆ ಅವರು ತ್ರಿವಿಕ್ರಮ್‌ರನ್ನು ಭೇಟಿಯಾಗಲಿದ್ದಾರೆ. ಈ ಸಿನಿಮಾಕ್ಕಾಗಿ ಇವರ ದೇಹ ಭಾಷೆ ಮತ್ತು ತೆಲುಗು ಉಪಭಾಷೆಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕಿದೆ. ಇದಕ್ಕಾಗಿ ಸಾಕಷ್ಟು ಕೆಲಸ ಮಾಡಬೇಕಿದೆ. ಈ ಸಿನಿಮಾದ ಶೂಟಿಂಗ್ ಮುಂದಿನ ವರ್ಷ ಬೇಸಿಗೆಯಲ್ಲಿ ಆರಂಭವಾಗಬಹುದು. ಈ ಸಿನಿಮಾ ಪೂರ್ಣಗೊಳ್ಳಲು ಎರಡು ವರ್ಷ ಬೇಕಾಗಬಹುದು. ಇದಕ್ಕಾಗಿ ಸಾಕಷ್ಟು ವಿಎಫ್‌ಎಕ್ಸ್ ಕೆಲಸಗಳೂ ಆಗಬೇಕಿದೆ. ಇದಕ್ಕಾಗಿ ನಾವು ವಿಶೇಷ ಸೆಟ್ ಕೂಡ ಹಾಕಬೇಕಿದೆ" ಎಂದು ನಾಗ ವಂಶಿ ಮಾಹಿತಿ ನೀಡಿದ್ದಾರೆ.
ಇದು ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಜತೆಯಾಗಿ ಕೆಲಸ ಮಾಡುವ ನಾಲ್ಕನೇ ಸಿನಿಮಾವಾಗಲಿದೆ. ಇದಕ್ಕೂ ಮೊದಲು ಇವರಿಬ್ಬರು ಜುಲಾಯಿ (2012), ಸನ್ ಆಫ್ ಸತ್ಯಮೂರ್ತಿ (2025) ಮತ್ತು ಅಲಾ ವೈಕುಂಠಪುರುಮುಲೋ ಸಿನಿಮಾಗಳಲ್ಲಿ ಜತೆಯಾಗಿ ಕಾರ್ಯನಿರ್ವಹಿಸಿದ್ದರು. 2023ರ ಜುಲೈ ತಿಂಗಳಲ್ಲಿ ಅರ್ಜುನ್ ಮತ್ತು ತ್ರಿವಿಕ್ರಮ್ ಜತೆಯಾಗಿ ಮಾಡುವ ಸಿನಿಮಾದ ಕುರಿತು ಘೋಷಿಸಲಾಗಿತ್ತು. ಈ ಸಿನಿಮಾವನ್ನು ಗೀತಾ ಆರ್ಟ್ಸ್, ಹರಿಕಾ ಮತ್ತು ಹಸಿನೇ ಕ್ರಿಯಷನ್ಸ್ ನಿರ್ಮಾಣ ಮಾಡಲಿದೆ. ಈ ಸಿನಿಮಾದ ಘೋಷಣೆ ಸಂದರ್ಭದಲ್ಲಿ "ಈ ಬಾರಿ ದೊಡ್ಡಮಟ್ಟದಲ್ಲಿ ಇರಲಿದೆ" ಎಂಬ ಸೂಚನೆ ನೀಡಲಾಗಿತ್ತು. ಹೀಗಾಗಿ, ಈ ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚಾಗಿದೆ.
ಇತ್ತೀಚೆಗೆ ಬಾಲಕೃಷ್ಣ ಟಾಕ್‌ಶೋನಲ್ಲಿ ಅರ್ಜುನ್ ಮಾತನಾಡಿದ್ದರು. "ನಾನು ಪುಷ್ಪ ಸಿನಿಮಾಕ್ಕಾಗಿ ಹಲವು ವರ್ಷಗಳನ್ನು ಡೆಡಿಕೇಷನ್ ಮಾಡಿದ್ದೇನೆ. ನಾನು ಇನ್ನು ಮುಂದೆ ವರ್ಷಕ್ಕೆ ಎರಡು ಸಿನಿಮಾ ಮಾಡಬೇಕೆಂದುಕೊಂಡಿರುವೆ" ಎಂದು ಅಲ್ಲು ಅರ್ಜುನ್ ಹೇಳಿದ್ದರು.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope