ಪುಷ್ಪ-2 ಚಿತ್ರಕ್ಕೆ ಪ್ರೇಕ್ಷಕನ ಬಹುಪರಾಕ್; ರಾಷ್ಟ್ರಪ್ರಶಸ್ತಿ ಭರವಸೆಯಲ್ಲಿ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ
ಕನ್ನಡ ಸುದ್ದಿ  /  ಮನರಂಜನೆ  /  ಪುಷ್ಪ-2 ಚಿತ್ರಕ್ಕೆ ಪ್ರೇಕ್ಷಕನ ಬಹುಪರಾಕ್; ರಾಷ್ಟ್ರಪ್ರಶಸ್ತಿ ಭರವಸೆಯಲ್ಲಿ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

ಪುಷ್ಪ-2 ಚಿತ್ರಕ್ಕೆ ಪ್ರೇಕ್ಷಕನ ಬಹುಪರಾಕ್; ರಾಷ್ಟ್ರಪ್ರಶಸ್ತಿ ಭರವಸೆಯಲ್ಲಿ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

‘ಪುಷ್ಪ–2 ದಿ ರೂಲ್‌‘ ಸಿನಿಮಾ ಬಿಡುಗಡೆಯಾಗಿದೆ. ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಅಭಿಯನದ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಮಾತ್ರವಲ್ಲ ಭಾರತ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಡುವೆ ತಮ್ಮ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಸಿಗುವ ಭರವಸೆಯಲ್ಲಿದ್ದಾರೆ ನ್ಯಾಷನಲ್ ಕ್ರಷ್‌.

ಪುಷ್ಪ–2
ಪುಷ್ಪ–2

ಸ್ಟೈಲಿಷ್‌ ಸ್ಟಾರ್‌ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಷ್ ಖ್ಯಾತಿಯ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ–2 ದಿ ರೂಲ್ಸ್‘ ಸಿನಿಮಾ ಇಂದು (ಡಿಸೆಂಬರ್‌ 5) ಬಿಡುಗಡೆಯಾಗಿದೆ. ಮೊದಲ ದಿನದಲ್ಲೇ 250 ಕೋಟಿಗೂ ಹೆಚ್ಚು ಗಳಿಸುವ ನಿರೀಕ್ಷೆ ಹುಟ್ಟು ಹಾಕಿದೆ ಈ ಸಿನಿಮಾ. ಇದು ಟಾಲಿವುಡ್ ಮಾತ್ರವಲ್ಲ ಭಾರತ ಚಿತ್ರರಂಗದಲ್ಲೇ ಇತಿಹಾಸ ಸೃಷ್ಟಿಸುವ ಸಿನಿಮಾವಾಗಲಿದೆ ಎಂದು ವಿಮರ್ಶಕರು ಭವಿಷ್ಯ ನುಡಿಯುತ್ತಿದ್ದಾರೆ. ಸುಕುಮಾರ್ ನಿರ್ದೇಶನದ ಈ ಸಿನಿಮಾ ಪ್ರಿ ಬುಕ್ಕಿಂಗ್‌ ಮೂಲಕವೇ ದಾಖಲೆ ಬರೆದಿತ್ತು. 

ಪುಷ್ಪ ಪ್ರೀಕ್ವೆಲ್‌ ಅಪಾರ ಜನ ಮನ್ನಣೆ ಪಡೆದ ಸಿನಿಮಾವಾಗಿತ್ತು. ಈ ಸಿನಿಮಾದಲ್ಲಿನ ಅಭಿನಯಕ್ಕಾಗಿ ನಾಯಕ ಅಲ್ಲು ಅರ್ಜುನ್‌ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದರು. ಇದೀಗ ಪುಷ್ಪ–2 ಸಿನಿಮಾ ಕೂಡ ಬಿಡುಗಡೆಯಾಗಿದ್ದು, ರಶ್ಮಿಕಾ ಮಂದಣ್ಣ ಈ ಸಿನಿಮಾದ ತಮ್ಮ ಅಭಿಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆಯುವ ಭರವಸೆ ವ್ಯಕ್ತಪಡಿಸಿದ್ದಾರೆ. ಶ್ರೀವಲ್ಲಿ ಪಾತ್ರದ ಮೂಲಕ ಮಿಂಚಲಿದ್ದಾರೆ ರಶ್ಮಿಕಾ. ಪ್ರಿಕ್ವೆಲ್‌ನಲ್ಲೂ ಶ್ರೀವಲ್ಲಿ ಎಂಬ ಹಳ್ಳಿ ಹುಡುಗಿಯ ಪಾತ್ರದಲ್ಲಿ ಸೂಪರ್ ಆಗಿ ನಟಿಸಿದ್ದರು ಕೊಡಗಿನ ಬೆಡಗಿ. 

ಇತ್ತೀಚೆಗೆ ಗೋವಾದಲ್ಲಿ ನಡೆದಿದ್ದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಭಾಗವಹಿಸಿದ್ದ ಅವರು ಸಿನಿಮಾದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ನಿರ್ದೇಶಕ ಸುಕುಮಾರ್, ನಾಯಕ ಅಲ್ಲು ಅರ್ಜುನ್ ಹಾಗೂ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದಿದ್ದರು. 

‘ತಂಡ ಎಲ್ಲರೂ ಕೊನೆಯ ಹಂತದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಾನು ಚಲನಚಿತ್ರವನ್ನು ಪ್ರತಿನಿಧಿಸಲು ಇಲ್ಲಿದ್ದೇನೆ ಮತ್ತು ನಾನು ಒಳ್ಳೆಯ ಕೆಲಸವನ್ನು ಮಾಡುತ್ತೇನೆ ಎಂದು ನಾನು ಭಾವಿಸುತ್ತೇನೆ‘ ಎಂದು ಅವರು ಹೇಳಿಕೊಂಡಿದ್ದರು. ಈ ನಡುವೆ ಪುಷ್ಪ–2 ಸಿನಿಮಾಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ನಿರೀಕ್ಷಿಸಬಹುದು ಎಂದು ಆಕೆ ಭರವಸೆಯ ಮಾತುಗಳನ್ನು ಹೇಳಿದ್ದರು. ಇದರೊಂದಿಗೆ ಎಂದಿನಂತೆ ತಮ್ಮ ಬೆರಳುಗಳಲ್ಲಿ ಹಾರ್ಟ್ ಸಿಂಬಲ್ ತೋರಿಸಿ ಖುಷಿ ವ್ಯಕ್ತಪಡಿಸಿದ್ದಾರೆ.

ಸುಕುಮಾರ್ ನಿರ್ದೇಶನದ ಪುಷ್ಪಾ 2 ದಿ ರೂಲ್ಸ್ ಸಿನಿಮಾವು ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ಬೆಂಗಾಲಿ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಪುಷ್ಪ ‌‍ಪ್ರಿಕ್ವೆಲ್ 2021ರಲ್ಲಿ ಬಿಡುಗಡೆಯಾಗಿತ್ತು. 

Whats_app_banner