ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗ ಚೈತನ್ಯ-ಶೋಭಿತಾ ಧುಲಿಪಾಲ; ಅಕ್ಕಿನೇನಿ ಕುಟುಂಬದ ಮದುವೆಗೆ ಹಾಜರಾದ ಅತಿಥಿಗಳಿವರು
ಕನ್ನಡ ಸುದ್ದಿ  /  ಮನರಂಜನೆ  /  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗ ಚೈತನ್ಯ-ಶೋಭಿತಾ ಧುಲಿಪಾಲ; ಅಕ್ಕಿನೇನಿ ಕುಟುಂಬದ ಮದುವೆಗೆ ಹಾಜರಾದ ಅತಿಥಿಗಳಿವರು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗ ಚೈತನ್ಯ-ಶೋಭಿತಾ ಧುಲಿಪಾಲ; ಅಕ್ಕಿನೇನಿ ಕುಟುಂಬದ ಮದುವೆಗೆ ಹಾಜರಾದ ಅತಿಥಿಗಳಿವರು

ಟಾಲಿವುಡ್‌ ನಟ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧುಲಿಪಾಲ ಮದುವೆಯಾಗಿದ್ದಾರೆ. ಅಕ್ಕಿನೇನಿ ಕುಟುಂಬದ ವಿವಾಹ ಸಮಾರಂಭ ಹೈದರಾಬಾದ್‌ನಲ್ಲಿ ನಡೆಯಿತು. ಸೀಮಿತ ಸಂಖ್ಯೆಯ ಅತಿಥಿಗಳು ಭಾಗವಹಿಸಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗ ಚೈತನ್ಯ-ಶೋಭಿತಾ ಧುಲಿಪಾಲ; ಮದುವೆಗೆ ಹಾಜರಾದ ಅತಿಥಿಗಳಿವರು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗ ಚೈತನ್ಯ-ಶೋಭಿತಾ ಧುಲಿಪಾಲ; ಮದುವೆಗೆ ಹಾಜರಾದ ಅತಿಥಿಗಳಿವರು

ಅಕ್ಕಿನೇನಿ ಕುಟುಂಬದ ಅಕ್ಕರೆಯ ಕುಡಿ ಅಕ್ಕಿನೇನಿ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್‌ 4ರ ಬುಧವಾರ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಬುಧವಾರ ರಾತ್ರಿ 8.13ರ ಶುಭಮುಹೂರ್ತದಲ್ಲಿ ನಾಗ ಚೈತನ್ಯ ಅವರು ಶೋಭಿತಾ ಧುಲಿಪಾಲ ಕುತ್ತಿಗೆಗೆ ಮೂರು ಗಂಟು ಹಾಕಿದ್ದಾರೆ. ಹಿಂದೂ ಸಂಪ್ರದಾಯದಂತೆ ನಡೆದ ಮದುವೆ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು.

ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ, ಮಾಜಿ ಸಂಸದ ಸುಬ್ಬಿರಾಮಿ ರೆಡ್ಡಿ, ತಾಂಡೇಲ್ ಚಲನಚಿತ್ರ ನಿರ್ದೇಶಕ ಚಂದು ಮೊಂಡೆಟಿ, ಸುಹಾಸಿನಿ, ನಿರ್ದೇಶಕ ಕಲ್ಯಾಣ್ ಕೃಷ್ಣ, ಅಲ್ಲು ಅರವಿಂದ್ ದಂಪತಿ, ಕೀರವಾಣಿ, ಚಾಮುಂಡೇಶ್ವರಿನಾಥ್ ಮತ್ತು ಇತರರು ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗಳನ್ನು ಆಶೀರ್ವದಿಸಿದ್ದಾರೆ.

ಮದುವೆಗೆ ಸೀಮಿತ ಸಂಖ್ಯೆಯ ಸಂಬಂಧಿಕರು ಮತ್ತು ಆಪ್ತ ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿತ್ತು. ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆಗಾಗಿ ವಿಶೇಷ ಸೆಟ್ ಹಾಕಲಾಗಿತ್ತು. ದಿವಂಗತ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪ್ರತಿಮೆಯ ಮುಂದೆ ಸೆಟ್ ನಿರ್ಮಿಸಲಾಗಿತ್ತು. ಅಕ್ಕಿನೇನಿ ಮತ್ತು ಧುಲಿಪಾಲ ಕುಟುಂಬ ಸದಸ್ಯರೊಂದಿಗೆ ದಗ್ಗುಬಾಟಿ ಕುಟುಂಬ ಕೂಡಾ ವಿವಾಹ ಸಮಾರಂಭದಲ್ಲಿ ಭಾಗಿಯಾಗಿತ್ತು.

ನಾಗ ಚೈತನ್ಯ ಮತ್ತು ಶೋಭಿತಾ ವೃತ್ತಿಬದುಕು

ನಾಗ ಚೈತನ್ಯ ಅಭಿನಯದ ತಾಂಡೇಲ್ ಚಿತ್ರ ಮುಂದಿನ ವರ್ಷ ಫೆಬ್ರವರಿಯಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಚಿತ್ರದಲ್ಲಿ ನಾಗ ಚೈತನ್ಯ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಮತ್ತೊಂದೆಡೆ, ಶೋಭಿತಾ ಹೆಚ್ಚಾಗಿ ಬಾಲಿವುಡ್ ಮತ್ತು ವೆಬ್ ಸೀರೀಸ್‌ಗಳಲ್ಲಿ ನಟಿಸುತ್ತಿದ್ದಾರೆ. ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ಈ ಜೋಡಿ, ಈ ವರ್ಷದ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

ಅಕ್ಕಿನೇನಿ ಕುಟುಂಬದಲ್ಲಿ ಶೀಘ್ರದಲ್ಲೇ ಮತ್ತೊಂದು ಮದುವೆ ಕೂಡಾ ನಡೆಯಲಿದೆ. ಅಖಿಲ್ ಅಕ್ಕಿನೇನಿ ಕೂಡ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರ ಮದುವೆ ಕೂಡಾ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆಯುವ ಸಾಧ್ಯತೆಯಿದೆ.

Whats_app_banner