ನಾಗ ಚೈತನ್ಯ- ಶೋಭಿತಾ ಧೂಳಿಪಾಲ ಮದುವೆ ದಿನಾಂಕ, ಸ್ಥಳ ಬಹಿರಂಗ; ಅಕ್ಕಿನೇನಿ ಕುಟುಂಬದ ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿ
Naga Chaitanya Sobhita Dhulipala marriage date: ಕೊನೆಗೂ ಟಾಲಿವುಡ್ ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ ಮದುವೆ ದಿನಾಂಕ ಖಚಿತಗೊಂಡಿದೆ. ಅಕ್ಕಿನೇನಿ ನಾಗ ಚೈತನ್ಯ ಮತ್ತು ಶೋಭಿತಾ ನಿಶ್ಚಿತಾರ್ಥ ಮಾಡಿಕೊಂಡಾಗಿನಿಂದಲೂ ಅವರ ಮದುವೆ ದಿನಾಂಕ ಮತ್ತು ಸ್ಥಳದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
Naga Chaitanya Sobhita Dhulipala marriage date: ಟಾಲಿವುಡ್ ಹೀರೋ ಅಕ್ಕಿನೇನಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಮದುವೆಯ ಸ್ಥಳ ಮತ್ತು ಸಮಯವನ್ನು ಅವರ ಕುಟುಂಬ ಸದಸ್ಯರು ಅಂತಿಮಗೊಳಿಸಿದ್ದಾರೆ. ಸುಮಾರು ಎರಡು ವರ್ಷಗಳಿಂದ ಡೇಟಿಂಗ್ ನಲ್ಲಿದ್ದ ಜೋಡಿ ಇದೇ ಆಗಸ್ಟ್ 9ರಂದು ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರಿಬ್ಬರ ಮದುವೆ ಯಾವಾಗ ಎಂದು ಅಂದಿನಿಂದ ಎಲ್ಲರೂ ಚರ್ಚಿಸುತ್ತಿದ್ದರು. ಈಗ ಮದುವೆ ಸ್ಥಳ ಮತ್ತು ದಿನಾಂಕದ ಕುರಿತು ಮಾಹಿತಿ ಬಹಿರಂಗಗೊಂಡಿದೆ. ಕೊನೆಯ ಕ್ಷಣದವರೆಗೂ ನಿಶ್ಚಿತಾರ್ಥವನ್ನು ಗೌಪ್ಯವಾಗಿಟ್ಟಿದ್ದ ಅಕ್ಕಿನೇನಿ ಮತ್ತು ಧೂಳಿಪಾಲ ಕುಟುಂಬಸ್ಥರು ಮದುವೆ ಸ್ಥಳವನ್ನೂ ಗೌಪ್ಯವಾಗಿಟ್ಟಿದ್ದರು.
ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆ
ನಾಗ ಚೈತನ್ಯ ಮತ್ತು ಶೋಭಿತಾ ಅವರ ಶುಭವಿವಾಹವು ತೆಲಂಗಾಣದ ಪ್ರಸಿದ್ಧ ದೇವಸ್ಥಾನದಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಬಳಿಕ, ಇವರಿಬ್ಬರು ಡೆಸ್ಟಿನೇಷನ್ ವೆಡ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಬಂದ ಲೇಟೆಸ್ಟ್ ಅಪ್‌ಡೇಟ್ ಪ್ರಕಾರ ಡಿಸೆಂಬರ್ 4 ರಂದು ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅಕ್ಕಿನೇನಿ ನಾಗಾರ್ಜುನ ಮದುವೆಯಾಗಲು ನಿರ್ಧರಿಸಿದ್ದಾರಂತೆ.
ಅನ್ನಪೂರ್ಣ ಸ್ಟುಡಿಯೋಸ್ ಅಕ್ಕಿನೇನಿ ಕುಟುಂಬಕ್ಕೆ ಭಾವನಾತ್ಮಕವಾಗಿಯೂ ನಂಟಿದೆ. ಆ ಸ್ಟುಡಿಯೋಗಳಲ್ಲಿ ಈಗಾಗಲೇ ಅಣ್ಣಾರ್ ಅವರಿಗೆ ಗೌರವ ಸಲ್ಲಿಸಲು ಪ್ರತಿಮೆ ಸ್ಥಾಪಿಸಲಾಗಿದೆ. ಹಾಗಾಗಿ ಅನ್ನಪೂರ್ಣ ಸ್ಟುಡಿಯೋದಲ್ಲಿ ಮದುವೆಯಾದರೆ ಅಜ್ಜನ ಆಶೀರ್ವಾದವೂ ಸಿಗುತ್ತದೆ ಎಂದು ಅಕ್ಕಿನೇನಿ ನಾಗ ಚೈತನ್ಯ ಹೇಳಿದ್ದಾರಂತೆ.
ನಾಗ ಚೈತನ್ಯ- ಶೋಭಿತಾ ಧೂಳಿಪಾಲ ಮದುವೆ ದಿನಾಂಕ
ಡಿಸೆಂಬರ್ 4ರಂದು ದಿನಾಂಕವನ್ನೂ ಅಂತಿಮಗೊಳಿಸಲಾಗಿದೆ. ಆದರೆ, ಮದುವೆ ಮುಹೂರ್ತ ಬೆಳಗ್ಗೆಯೋ ಸಂಜೆಯೋ ಎಂಬುದು ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ.
ಸಮಂತಾ ಜತೆ ಬ್ರೇಕಪ್
ಸಮಂತಾ ಮತ್ತು ನಾಗ ಚೈತನ್ಯ 2017ರಲ್ಲಿ ಮದುವೆಯಾಗಿದ್ದರು. 2021ರಲ್ಲಿ ಇವರಿಬ್ಬರು ಬ್ರೇಕಪ್ ಆಗಿದ್ದರು. ನಂತರ ನಾಗ ಚೈತನ್ಯ 2022ರಿಂದ ಶೋಭಿತಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಇಬ್ಬರು ತಮ್ಮ ರಜೆಯನ್ನು ಎಂಜಾಯ್ ಮಾಡುತ್ತಿರುವ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆದರೆ.. ಈ ಜೋಡಿ ಡೇಟಿಂಗ್ ವಿಚಾರವನ್ನು ಗೌಪ್ಯವಾಗಿಟ್ಟಿದ್ದರು. ಇದೇ ಕಾರಣಕ್ಕೆ ಸಮಂತಾ ಮತ್ತು ನಾಗ ಚೈತನ್ಯ ಬೇರೆಯಾಗಿದ್ದಾರ ಎಂದು ತಿಳಿದಿಲ್ಲ.
ನಾಗ ಚೈತನ್ಯ ಮತ್ತು ಶೋಭಿತಾ ಲವ್ ರಿಲೇಶನ್‌ಶಿಪ್‌ನಲ್ಲಿದ್ದಾರೆ, ಡೇಟ್ ಮಾಡುತ್ತಿದ್ದಾರೆ ಎಂದು ಸಾಕಷ್ಟು ಸುದ್ದಿಗಳಿಗೆ ಟಾಲಿವುಡ್ ಅಂಗಳದಲ್ಲಿ ರೆಕ್ಕೆ ಪುಕ್ಕ ಬಂದಿದ್ದವು. ಆದರೆ, ಆ ಸಂಬಂಧದ ಬಗ್ಗೆ ನಾಗಚೈತನ್ಯ ಆಗಲಿ, ಶೋಭಿತಾ ಆಗಲಿ ಸ್ಪಷ್ಟನೆ ನೀಡಿರಲಿಲ್ಲ. ಇತ್ತೀಚೆಗೆ ನಾಗ ಚೈತನ್ಯ- ಶೋಭಿತಾ ಧೂಳಿಪಾಲ ನಿಶ್ಚಿತಾರ್ಥವೇ ನಡೆದುಹೋಗಿತ್ತು. ಇದೀಗ ಡಿಸೆಂಬರ್ ತಿಂಗಳಲ್ಲಿ ಇವರಿಬ್ಬರು ಸಪ್ತಪದಿ ತುಳಿಯಲಿದ್ದಾರೆ.