ಕನ್ನಡ ಸುದ್ದಿ  /  ಮನರಂಜನೆ  /  ಪ್ರಭಾಸ್‌ ನಟನೆಯ ಕಲ್ಕಿ 2898 Ad ಚಿತ್ರವನ್ನು ಏಕೆ ನೋಡಬೇಕು? ಭಾರತೀಯರಿಗಿದು ಗರ್ವದ ವಿಷಯ! ಹೀಗಿವೆ ಪಂಚ ಕಾರಣಗಳು

ಪ್ರಭಾಸ್‌ ನಟನೆಯ ಕಲ್ಕಿ 2898 AD ಚಿತ್ರವನ್ನು ಏಕೆ ನೋಡಬೇಕು? ಭಾರತೀಯರಿಗಿದು ಗರ್ವದ ವಿಷಯ! ಹೀಗಿವೆ ಪಂಚ ಕಾರಣಗಳು

ಕಲ್ಕಿ 2898 ಎಡಿ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿದೆ. ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ರಿಲೀಸ್‌ ಆಗಿ ಮೆಚ್ಚುಗೆ ಪಡೆಯುತ್ತಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಭಾರತೀಯರಿಗೇಕೆ ವಿಶೇಷ? ಏಕೆ ಈ ಸಿನಿಮಾ ನೋಡಬೇಕು? ಇಲ್ಲಿದೆ ಐದು ಅಂಶಗಳು.

ಪ್ರಭಾಸ್‌ ನಟನೆಯ Kalki 2898 AD ಚಿತ್ರವನ್ನು ಏಕೆ ನೋಡಬೇಕು? ಭಾರತೀಯರಿಗಿದು ಗರ್ವದ ವಿಷಯ! ಹೀಗಿವೆ ಪಂಚ ಕಾರಣಗಳು
ಪ್ರಭಾಸ್‌ ನಟನೆಯ Kalki 2898 AD ಚಿತ್ರವನ್ನು ಏಕೆ ನೋಡಬೇಕು? ಭಾರತೀಯರಿಗಿದು ಗರ್ವದ ವಿಷಯ! ಹೀಗಿವೆ ಪಂಚ ಕಾರಣಗಳು

Kalki 2828 AD: ನಾಗ್ ಅಶ್ವಿನ್ ಪೌರಾಣಿಕ ಮಿಶ್ರಿತ ವೈಜ್ಞಾನಿಕ ಮತ್ತು ಕಾಲ್ಪನಿಕ ಪರಿಕಲ್ಪನೆಯ 'ಕಲ್ಕಿ 2898 AD' ಸಿನಿಮಾ ಚಿತ್ರಮಂದಿರದಲ್ಲಿ ಧೂಳೆಬ್ಬಿಸುತ್ತಿದೆ. ಪ್ರಭಾಸ್, ಕಮಲ್ ಹಾಸನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಸೇರಿದಂತೆ ದೊಡ್ಡ ತಾರಾಬಳಗವನ್ನೇ ಹೊಂದಿರುವ ಈ ಸಿನಿಮಾ ನೋಡುಗರಿಂದ ಮೆಚ್ಚುಗೆ ಪಡೆಯುವುದರ ಜತೆಗೆ ಹೊಸ ಲೋಕಕ್ಕೆ ಕರೆದೊಯ್ದಿದೆ. ಈ ನಡುವೆ ಈ ಸಿನಿಮಾ ಭಾರತೀಯರ ಪಾಲಿಗೇಕೆ ವಿಶೇಷ? ಅಷ್ಟಕ್ಕೂ ಈ ಚಿತ್ರವನ್ನು ನಾವೇಕೆ ಕಣ್ತುಂಬಿಕೊಳ್ಳಬೇಕು? ಇಲ್ಲಿದೆ 5 ಪ್ರಮುಖ ಅಂಶಗಳು.

  • 1 ವಿಶಿಷ್ಟ ಪರಿಕಲ್ಪನೆ

ಕಲ್ಕಿ ಸಿನಿಮಾ ಇತರೆ ಸಿನಿಮಾಗಳಂತೆ ಸಾಮಾನ್ಯ ಚಿತ್ರವಲ್ಲ. ಇದು ಭವಿಷ್ಯದ ಕಥೆ ಹೇಳುವ ಸಿನಿಮಾ. ಫ್ಯೂಚರಿಸ್ಟಿಕ್ ಯುಗದಲ್ಲಿಯೇ ಮೂಡಿದ ಕಥೆ. ಇದಕ್ಕೆ ಪೌರಾಣಿಕ ಟಚ್‌ ಈ ಸಿನಿಮಾದಲ್ಲಿ ನೀಡಿದ್ದಾರೆ ನಿರ್ದೇಶಕರು. ಪುರಾಣದ ಜೊತೆಗೆ ವೈಜ್ಞಾನಿಕ ಅಂಶಗಳನ್ನು ಮಿಶ್ರಣ ಮಾಡುವ ಮೂಲಕ, ಪ್ರೇಕ್ಷಕನಿಗೆ ಹೊಸ ಅನುಭವದ ಹೂರಣವೇ ಇಲ್ಲಿ ದಕ್ಕಲಿದೆ. ಈ ವರೆಗಿನ ಭಾರತೀಯ ಸಿನಿಮಾಗಳಲ್ಲಿಯೇ ಈ ಚಿತ್ರ ಹೊಸತು. ಹಾಲಿವುಡ್‌ ರೇಂಜಿನಲ್ಲಿ ಸಿದ್ಧವಾದ ಸೌತ್‌ ಇಂಡಿಯನ್‌ ಸಿನಿಮಾ ಎಂಬ ಖ್ಯಾತಿಯೂ ಕಲ್ಕಿಗಿದೆ.

ಟ್ರೆಂಡಿಂಗ್​ ಸುದ್ದಿ

  • 2 ಮೇಳೈಸಿದ ಗ್ರಾಫಿಕ್ಸ್‌..

ಫ್ಯಾಂಟಸಿ ಸಿನಿಮಾಕ್ಕೆ ವಿಎಫ್‌ಎಕ್ಸ್‌ ಎಂಬುದು ತಾಯಿ ಬೇರಿನ ರೀತಿ ಕೆಲಸ ಮಾಡುತ್ತದೆ. ಕಲ್ಕಿ ಚಿತ್ರದಲ್ಲಿಯೂ ಆ ವಿಎಫ್‌ಎಕ್ಸ್‌ ಮತ್ತು ಗ್ರಾಫಿಕ್ಸ್‌ ತಂತ್ರಜ್ಞಾನವೇ ಹೈಲೈಟ್. ನೂರಾರು ಕೋಟಿ ವೆಚ್ಚವನ್ನು ಬರೀ ಗ್ರಾಫಿಕ್ಸ್‌ಗೆ ನೀರಿನಂತೆ ಸುರಿದಿದ್ದಾರೆ ಚಿತ್ರದ ನಿರ್ಮಾಪಕರು. ಅದರ ಪರಿಣಾಮವಾಗಿಯೇ ಎಲ್ಲಿಯೂ ಅಸಹಜ ಎನಿಸದೇ, ನೈಜತೆಯಲ್ಲಿಯೇ ಸಿನಿಮಾ ಮೂಡಿಬಂದಿದೆ. ನಿರ್ದೇಶಕ ನಾಗ್‌ ಅಶ್ವಿನ್‌ ಅವರ ಕುಶಲತೆಯೂ ಇಲ್ಲಿ ವರ್ಕೌಟ್‌ ಆಗಿದೆ.

  • 3 ನಿರ್ದೇಶಕರ ದೂರದೃಷ್ಟಿ

ಸಣ್ಣ ಎಳೆಯನ್ನು ದೊಡ್ಡ ಕ್ಯಾನ್ವಾಸ್‌ನಲ್ಲಿ ಹೇಗೆ ಕಟ್ಟಿಕೊಡಬಹುದು ಎಂಬುದಕ್ಕೆ ಕಲ್ಕಿ ಚಿತ್ರವೇ ಉದಾಹರಣೆ. ಇತಿಹಾಸದ ಎಳೆಯ ಜತೆಗೆ ಕಾಣದ ಭವಿಷ್ಯವನ್ನೇ ಊಹಿಸಿಕೊಂಡು, ಅದರ ಸುತ್ತ ಕಾಲ್ಪನಿಕ ಕಥೆಯನ್ನು ಹೆಣೆದು ತೆರೆಮೇಲೆ ತಂದಿದ್ದಾರೆ ನಿರ್ದೇಶಕ ನಾಗ್‌ ಅಶ್ವಿನ್. ನಿರ್ದೇಶಕರ ಆಸೆ ಮತ್ತು ಕನಸುಗಳಿಗೆ ಚಿತ್ರದಲ್ಲಿನ ಪ್ರತಿ ಪಾತ್ರಧಾರಿಗಳಿಂದ ಅದೇ ಮಟ್ಟದ ಶ್ರಮ ಸಂದಾಯವಾಗಿದೆ. ತಂತ್ರಜ್ಞರ ಕೊಡುಗೆಯೂ ಇಲ್ಲಿ ಅಪಾರ. ಇದೆಲ್ಲದರ ಜತೆಗೆ ಭಾರತೀಯ ಸಿನಿಮಾ ಪ್ರೇಕ್ಷಕನಿಗೂ ಈ ಸಿನಿಮಾ ಹೊಸ ಅನುಭವದ ಜತೆಗೆ ಹೊಸ ಭರವಸೆ ಮೂಡಿಸಲಿದೆ.

  • 4 ಮಹಾಕಾವ್ಯದ ದೃಶ್ಯವೈಭವ

'ಕಲ್ಕಿ 2898 AD' ಸಿನಿಮಾ ಸಿನಿಮಾ ಪ್ರೇಕ್ಷಕನಿಗೆ ಒಂದು ಮಹಾಕಾವ್ಯದಂತಿದೆ. ನೋಡುಗನ ಊಹೆಗೂ ಮೀರಿದ ದೃಶ್ಯ ವೈಭವಗಳನ್ನು ತೆರೆಮೇಲೆ ತಂದಿದ್ದಾರೆ ನಿರ್ದೇಶಕರು. 600 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ದೊಡ್ಡ ಸ್ಟಾರ್‌ ಬಳಗದ ಜತೆಗೆ ಅಷ್ಟೇ ದೊಡ್ಡ ಕ್ಯಾನ್ವಾಸ್‌ನಲ್ಲಿ ಮಹಾಕಾವ್ಯವನ್ನು ಕಟ್ಟಿಕೊಟ್ಟ ನಿರ್ದೇಶಕರ ಕೌಶಲಕ್ಕೂ ಇಲ್ಲಿ ಪೂರ್ಣಾಂಕ ಸಿಗಲೇಬೇಕಿದೆ.

  • 5 ಸ್ಟಾರ್‌ ತಾರಾಬಳಗ

ಚಿತ್ರದಲ್ಲಿ ಪ್ರಭಾಸ್, ಕಮಲ್ ಹಾಸನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಖಡಕ್‌ ಖಳನಾಗಿ ಕಮಲ್‌ ಹಾಸನ್‌ ಕಾಣಿಸಿಕೊಂಡರೆ, ಗರ್ಭಿಣಿಯಾಗಿ ದೀಪಿಕಾ ಪಡುಕೋಣೆ, ಅಶ್ವತ್ಥಾಮನಾಗಿ ಅಮಿತಾಬ್‌ ಬಚ್ಚನ್‌ ಮಿಂಚು ಹರಿಸುತ್ತಾರೆ. ಇವರೆಲ್ಲರ ಸಮ್ಮಿಶ್ರದ ಪ್ರತಿಫಲವಾಗಿಯೇ ಕಲ್ಕಿ ಸಿನಿಮಾ ಅವತಾರವೆತ್ತಿದೆ.

ಪ್ರಭಾಸ್-ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ ಸಿನಿಮಾದ ಸಮಗ್ರ ಮಾಹಿತಿ ಇಲ್ಲಿದೆ

kannada.hindustantimes.com/topic/kalki-2898-ad-movie