ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡದ ಜೋಶ್‌ ಸಿನಿಮಾ ನಟಿ ಪೂರ್ಣಾ ಜತೆಗಿನ ‘ಆ’ ಸಂಬಂಧದ ಬಗ್ಗೆ ಮೌನ ಮುರಿದ ಬಹುಭಾಷಾ ನಟ, ನಿರ್ದೇಶಕ ರವಿಬಾಬು

ಕನ್ನಡದ ಜೋಶ್‌ ಸಿನಿಮಾ ನಟಿ ಪೂರ್ಣಾ ಜತೆಗಿನ ‘ಆ’ ಸಂಬಂಧದ ಬಗ್ಗೆ ಮೌನ ಮುರಿದ ಬಹುಭಾಷಾ ನಟ, ನಿರ್ದೇಶಕ ರವಿಬಾಬು

ನಟ, ನಿರ್ದೇಶಕ ರವಿ ಬಾಬು ಮತ್ತು ಬಹುಭಾಷಾ ನಟಿ ಪೂರ್ಣಾ ನಡುವೆ ಬೇರೆ ಸಂಬಂಧ ಇದೇ ಎಂಬ ಸುದ್ದಿ ಈ ಹಿಂದೆ ಟಾಲಿವುಡ್‌ ಅಂಗಳದಲ್ಲಿ ಸದ್ದು ಮಾಡಿತ್ತು. ಅದಕ್ಕೆ ಬಗೆಬಗೆ ರೆಕ್ಕೆಪುಕ್ಕ ಕಟ್ಟಿ ವದಂತಿ ಸೃಷ್ಟಿಸಲಾಗಿತ್ತು. ಇದೀಗ ಆ ಘಟನೆ ಬಗ್ಗೆ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ ರವಿಬಾಬು.

ಕನ್ನಡದ ಜೋಶ್‌ ಸಿನಿಮಾ ನಟಿ ಪೂರ್ಣಾ ಜತೆಗಿನ ‘ಆ’ ಸಂಬಂಧದ ಬಗ್ಗೆ ಮೌನ ಮುರಿದ ಬಹುಭಾಷಾ ನಟ, ನಿರ್ದೇಶಕ ರವಿಬಾಬು
ಕನ್ನಡದ ಜೋಶ್‌ ಸಿನಿಮಾ ನಟಿ ಪೂರ್ಣಾ ಜತೆಗಿನ ‘ಆ’ ಸಂಬಂಧದ ಬಗ್ಗೆ ಮೌನ ಮುರಿದ ಬಹುಭಾಷಾ ನಟ, ನಿರ್ದೇಶಕ ರವಿಬಾಬು

Ravi babu about Poorna: ಸಿನಿಮಾರಂಗದಲ್ಲಿ ಇಲಿ ಹೋದರೆ ಹುಲಿ ಹೋಯ್ತು ಎಂಬ ಮಾತು ಇಂದು ನಿನ್ನೆಯದೇನಲ್ಲ. ಅಲ್ಲಿನ ಸಣ್ಣ ಸಣ್ಣ ಬದಲಾವಣೆ, ಬೆಳವಣಿಗೆ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾದ ಉದಾಹರಣೆಗಳು ಸಾಕಷ್ಟಿವೆ. ಅದರಲ್ಲೂ ನಟ ನಟಿಯರ ನಡುವಿನ ಆಪ್ತತೆಗೆ ರೆಕ್ಕೆ ಪುಕ್ಕ ಕಟ್ಟಿ ಬೇರೆ ಸಂಬಂಧ ಕಲ್ಪಿಸಿದ ಘಟನೆಗಳೂ ನಡೆದಿವೆ. ಇದೀಗ ಸೋಷಿಯಲ್‌ ಮೀಡಿಯಾ ಜಮಾನ. ಈ ಸಮಯದಲ್ಲಿ ಅದರ ಪರಿಣಾಮ ತುಸು ಜಾಸ್ತಿಯೇ! ಹೀಗೆ ಹರಿದಾಡಿದ ವದಂತಿಗಳಿಗೆ ಕೆಲವರು ಸ್ಪಷ್ಟನೆ ನೀಡಿದರೆ, ಇನ್ನು ಕೆಲವರು ಅದರಿಂದ ದೂರ ಉಳಿಯುವುದಕ್ಕೆ ನಿರ್ಧರಿಸಿರುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಆ ಪೈಕಿ ಬಹುಭಾಷಾ ನಟಿ ಪೂರ್ಣಾ ಸಹ ಚಿತ್ರೋದ್ಯಮದಲ್ಲಿ ಸಕ್ರಿಯರಾಗಿದ್ದಾಗ, ಯಶಸ್ಸಿನ ಉತ್ತುಂಗದಲ್ಲಿದ್ದಾಗ ಸಾಕಷ್ಟು ಗಾಸಿಪ್‌ಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಬಹುಭಾಷಾ ನಟ ಮತ್ತು ನಿರ್ದೇಶಕ ರವಿಬಾಬು ಮತ್ತು ಪೂರ್ಣಾ ನಡುವೆ ಏನೋ ನಡೆಯುತ್ತಿದೆ. ಅವರಿಬ್ಬರು ಸಂಬಂಧದಲ್ಲಿದ್ದಾರೆ ಎಂದೇ ಸಾಕಷ್ಟು ಪುಕಾರಗಳು ಟಾಲಿವುಡ್‌ ಅಂಗಳದಲ್ಲಿ ಹರಿದಾಡಿ ಗಾಸಿಪ್‌ ಪ್ರಿಯರಿಗೆ ಹಬ್ಬದೂಟ ಹಾಕಿಸಿದ್ದವು. ಅದರಲ್ಲೂ ಇವರಿಬ್ಬರ ನಡುವೆ ತಳಬುಡವಿಲ್ಲದ ಪುಕಾರು ಹಬ್ಬಿದ್ದಕ್ಕೆ ಕಾರಣ; ಈ ಜೋಡಿ ಒಟ್ಟಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದು.

ಈ ವದಂತಿ ಹಬ್ಬಲು ಹೀಗಿದೆ ಕಾರಣ..

ಕೇವಲ ನಟನಾಗಿ ಮಾತ್ರವಲ್ಲದೆ ನಿರ್ದೇಶಕರಾಗಿಯೂ ರವಿಬಾಬು ಗುರುತಿಸಿಕೊಂಡಿದ್ದಾರೆ. 2002ರಲ್ಲಿ ಅಲ್ಲರಿ ಸಿನಿಮಾ ಮೂಲಕ ಡೈರೆಕ್ಟರ್‌ ಕ್ಯಾಪ್‌ ಧರಿಸಿದ ಅವರು, ಅದಾದ ಮೇಲೆ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದರು. ಅಮ್ಮಾಯಿಲೋ ಅಬ್ಬಾಯಿಲೋ, ಸೊಗ್ಗಾಡು, ಪಾರ್ಟಿ, ಅನಸುಯಾ, ನಚವುಲೆ, ಅಮರಾವತಿ ಸೇರಿ ಹಲವು ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ನಡುವೆ ಅವುನು, ಲಡ್ಡುಬಾಬು ಮತ್ತು ಅವುನು 2 ಚಿತ್ರದಲ್ಲಿ ಪೂರ್ಣಾ ಅವರನ್ನೇ ನಾಯಕಿಯನ್ನಾಗಿಸಿ ಚಿತ್ರ ನಿರ್ದೇಶಿಸಿದ್ದರು ರವಿ ಬಾಬು. ಹೀಗೆ ಬ್ಯಾಕ್‌ ಟು ಬ್ಯಾಕ್‌ ಒಟ್ಟಿಗೆ ಕೆಲಸ ಮಾಡಿದ್ದೇ ತಡ ಈ ಜೋಡಿಯ ನಡುವೆ ಬೇರೆಯದೇ ಸಂಬಂಧ ಇದೆ ಎಂಬ ಸುದ್ದಿ ಹೊರಬಿದ್ದಿತ್ತು.

ವಾಸ್ತವ ಸ್ಥಿತಿ ಬೇರೆ ಇದೆ..

ಇದೀಗ ಅಂದಿನ ಈ ಘಟನೆ ಬಗ್ಗೆಯೇ ರವಿಬಾಬು ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಮೂರು ಸಿನಿಮಾಗಳಲ್ಲಿ ಸತತವಾಗಿ ಕೆಲಸ ಮಾಡಿದ್ದರಿಂದ ನಮ್ಮ ನಡುವೆ ಬೇರೆ ಏನೋ ನಡೆಯುತ್ತಿದೆ ಎಂಬ ಗುಲ್ಲು ಟಾಲಿವುಡ್‌ ಅಂಗಳದಲ್ಲಿ ಕೇಳಿಬಂದಿತು. ಮದುವೆಯಾದರೂ, ಅವರ ಜತೆಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಸುದ್ದಿ ನನ್ನ ಕಿವಿಗೂ ಬಿದ್ದವು. ಮೇಲಾಗಿ ಅದೇ ವಿಚಾರವನ್ನು ಮಾಧ್ಯಮಗಳು ಹೆಚ್ಚು ಬಿತ್ತರಿಸುತ್ತಿದ್ದವು. ಎಲ್ಲೋ ಕೇರಳದಲ್ಲಿ ಹುಟ್ಟಿ ನನ್ನ ಜೊತೆ ಅನಗತ್ಯವಾಗಿ ನಂಟು ಹಾಕಿಕೊಂಡಿದ್ದಾಳೆ ಎಂದೂ ಸುದ್ದಿ ಮಾಡಲಾಗಿತ್ತು. ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ" ಎಂದಿದ್ದಾರೆ ರವಿಬಾಬು.

ಸಂಬಂಧವಿದೆ ಅದು ಆ ಸಂಬಂಧವಲ್ಲ..

"ನನ್ನ ಸಿನಿಮಾ ಕಥೆಗೆ ಮತ್ತು ಪಾತ್ರಕ್ಕೆ ಹೊಂದಿಕೆಯಾಗುವ ನಾಯಕಿಯರನ್ನೇ ನಿರ್ದೇಶಕನಾದವನು ಆಯ್ಕೆ ಮಾಡುತ್ತಾನೆ. ನಾನೂ ಸಹ ನನ್ನ ಸಿನಿಮಾಕ್ಕೆ ಪೂರ್ಣ ಪರಿಪೂರ್ಣ ಅನ್ನೋ ವಿಧದಲ್ಲಿ ಅವರನ್ನು ಆಯ್ಕೆ ಮಾಡಿಕೊಂಡೆ. ನಟನೆ ಮತ್ತು ಕೆಲಸದ ವಿಚಾರದಲ್ಲಿ ಪೂರ್ಣ ತುಂಬ ಕಟ್ಟುನಿಟ್ಟು. ತುಂಬಾ ಪರಿಶ್ರಮಿ, ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಾರೆ. ಹಾಗಿರುವಾಗ ನನ್ನ ಸಿನಿಮಾದ ಸಹ ಕಲಾವಿದರ ಜತೆಗೆ ನಾನು ಆ ಪ್ರೀತಿಯನ್ನು ಹೊಂದಿರಲೇಬೇಕು. ಆ ಪ್ರೀತಿಗೆ ಬೇರೆ ಸಂಬಂಧ ಕಲ್ಪಿಸಬಾರದು. ನನ್ನ ಮತ್ತೆ ಅವರ ನಡುವೆ ಯಾವುದೇ ಸಂಬಂಧವಿಲ್ಲ" ಎಂದು ನಟ ರವಿಬಾಬು ಸ್ಪಷ್ಟಪಡಿಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024