ಅಪ್ಪನ 2ನೇ ಪತ್ನಿ ಮಗ,3ನೇ ಪತ್ನಿ ಮಗನೊಂದಿಗೆ ನಾನು ಚೆನ್ನಾಗಿದ್ದೇನೆ; ನರೇಶ್ ಮೊದಲ ಪುತ್ರ ನವೀನ್
ತೇಜ ಹಾಗೂ ರಣವೀರ್ ಇಬ್ಬರೊಂದಿಗೂ ನಾನು ಚೆನ್ನಾಗಿದ್ದೇನೆ. ಇಬ್ಬರೂ ಆಗ್ಗಾಗ್ಗೆ ನನ್ನನ್ನು ಭೇಟಿ ಮಾಡುತ್ತಾರೆ, ನವೀನಣ್ಣ ನವೀನಣ್ಣ ಎಂದು ಹಿಂದೆ ತಿರುಗುತ್ತಾರೆ. ಅವನು ಮೊದಲ ಹೆಂಡತಿ ಮಗ, ಇವನು ಎರಡನೇ ಹೆಂಡತಿ ಮಗ ಎಂಬ ಬೇಧ ನನಗಿಲ್ಲ, ಅದರಲ್ಲಿ ಅವರದ್ಧೇನೂ ತಪ್ಪಿಲ್ಲ, ನಾವೆಲ್ಲರೂ ಒಂದೇ ಫ್ಯಾಮಿಲಿ'' ಎಂದು ನವೀನ್ ಉತ್ತರಿಸಿದ್ದಾರೆ.
ಪವಿತ್ರಾ ಲೋಕೇಶ್ ಹಾಗೂ ನರೇಶ್ ನಡುವಿನ ಸಂಬಂಧ ಈಗ ಎಲ್ಲರಿಗೂ ತಿಳಿದಿದೆ. ಮೊದಲೆಲ್ಲಾ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಈ ಜೋಡಿ ಈಗ ಸಾರ್ವಜನಿಕವಾಗಿ ಕೈ ಕೈ ಹಿಡಿದುಕೊಂಡೇ ಓಡಾಡುತ್ತಿದ್ದಾರೆ. ಯಾರಿಗೆ ಏಕೆ ಹೆದರಬೇಕು? ಹಿಂದೆ ರಾಜಾನುರಾಜರೇ ಬಹುಪತ್ನಿತ್ವ ಅನುಸರಿಸುವಾಗ ನಾನು ಏಕೆ ಮಾಡಬಾರದು? ಎಂದು ಒಮ್ಮೆ ನರೇಶ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದರು.
ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ, ಆಕಾಶ ತಲೆ ಕೆಳಕಾದರೂ ನಾನು ನರೇಶ್‌ಗೆ ಡಿವೋರ್ಸ್ ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಈ ನಡುವೆ ನರೇಶ್ ಹಾಗೂ ಪವಿತ್ರಾ ಸಂಬಂಧದ ಬಗ್ಗೆ ಅವರ ಮೊದಲ ಮಗ ನವೀನ್ ಮಾತನಾಡಿದ್ದರು. ತಂದೆಯ ಸಂಬಂಧವನ್ನು ಆತ ಕೂಡಾ ಒಪ್ಪಿಕೊಂಡಿದ್ದರು. ಪವಿತ್ರಾ ಲೋಕೇಶ್ ಬಹಳ ಒಳ್ಳೆಯವರು, ಅವರು ನನಗೆ ಊಟ ಕಳಿಸುತ್ತಾರೆ, ಅವರನ್ನು ನಾನು ಪವಿತ್ರಾ ಎಂದೇ ಕರೆಯುತ್ತೇನೆ. ನಾವೂ ಕೆಲವೊಂದು ವಿಚಾರಗಳಲ್ಲಿ ತಪ್ಪು ಮಾಡಿದ್ದೇವೆ. ಅಪ್ಪನೂ ಮಾಡಿದ್ದಾರೆ. ಅವರಿಬ್ಬರೂ ಚೆನ್ನಾಗಿದ್ದರೆಂದರೆ ಬಿಟ್ಟುಬಿಡಿ ಎಂದಿದ್ದರು. ಇದೀಗ ನವೀನ್ ಆಸ್ತಿ ಬಗ್ಗೆ ಮಾತನಾಡಿದ್ದಾರೆ.
ಪವಿತ್ರಾ ಒಳ್ಳೆಯವರು
ಬುಧವಾರ ತೆಲುಗಿನ ಸುಮನ್ ಟಿವಿಗೆ ನೀಡಿದ ಸಂದರ್ಶನದಲ್ಲಿ ನವೀನ್ ಪವಿತ್ರಾ ಲೋಕೇಶ್, ತಂದೆ ನರೇಶ್ ಹಾಗೂ ಆಸ್ತಿ ಬಗ್ಗೆ ಮಾತನಾಡಿದ್ದಾರೆ. ಪವಿತ್ರಾ ಲೋಕೇಶ್ ನಿಮ್ಮ ತಂದೆಯ ಆಸ್ತಿ ನೋಡಿ ಅವರ ಹಿಂದೆ ಬಿದ್ದಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಇದಕ್ಕೆ ನೀವು ಏನು ಹೇಳುತ್ತೀರ? ಎಂಬ ಪ್ರಶ್ನೆಗೆ ಉತ್ತರಿಸಿದ ನವೀನ್, ''ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೆ ನನಗೆ ತಿಳಿದಿರುವ ಪ್ರಕಾರ ಪವಿತ್ರಾ ಬಹಳ ಒಳ್ಳೆಯವರು. ಆಗ್ಗಾಗ್ಗೆ ಮಾತನಾಡುತ್ತೇವೆ, ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಮನೆಗೆ ಊಟ ಕಳಿಸುತ್ತಾರೆ, ಆಕೆ ಬಹಳ ಜೆನ್ಯೂನ್ ಲೇಡಿ. ನೀವು ಹೇಳಿದಂತೆ ಆಕೆ ಆಸ್ತಿಗಾಗಿ ಅಪ್ಪನ ಜೊತೆ ಇದ್ದಾರೆ ಅಂತ ನನಗೆ ಅನ್ನಿಸುತ್ತಿಲ್ಲ. ಒಂದು ವೇಳೆ ಇದ್ದರೂ ನನಗೆ ಅವನೆಲ್ಲಾ ಇನ್ವೆಷ್ಟಿಗೇಷನ್ ಮಾಡಲು ಸಮಯ ಇಲ್ಲ. ಅವರಿಬ್ಬರ ವಿಚಾರದಲ್ಲಿ ನಾನೂ ಏನೂ ಮಾಡಲು ಸಾಧ್ಯವಿಲ್ಲ, ಮಹೇಶ್ ಬಾಬು ಕೂಡಾ ಏನೂ ಮಾಡಲು ಸಾಧ್ಯವಿಲ್ಲ'' ಎಂದಿದ್ದಾರೆ.
ಅಪ್ಪನೇ ಆಸ್ತಿ ನೋಡಿಕೊಳ್ಳಲಿ
ಆಸ್ತಿ ವಿಚಾರದ ಪ್ರಶ್ನೆಗೆ ಉತ್ತರಿಸಿದ ನವೀನ್, ''ಹೌದು ಸದ್ಯಕ್ಕೆ ಎಲ್ಲಾ ಆಸ್ತಿ ಡ್ಯಾಡಿ ಹೆಸರಿನಲ್ಲಿದೆ. ಅವರಿಗೆ ನಾನು ಸಪೋರ್ಟ್ ಮಾಡುತ್ತೇನೆ. ನನಗೆ ಹಣಕಾಸಿನ ವಿಚಾರವನ್ನು ನಿಭಾಯಿಸುವುದು ಕಷ್ಟ, ಈಗ ಅವರೇ ಮ್ಯಾನೇಜ್ ಮಾಡುತ್ತಿದ್ದಾರೆ. ಅವರ ರಿಟೈರ್ಡ್ ಸಮಯದಲ್ಲಿ ಹೇಗಿದ್ದರೂ ನಾನೇ ನೋಡಿಕೊಳ್ಳಬೇಕು. ಆಸ್ತಿಯನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದು ಅಪ್ಪನಿಗೆ ಗೊತ್ತು. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ. ಆಸ್ತಿ ವಿಚಾರಕ್ಕೆ ಅದನ್ನು ಹಾಳು ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ. ಒಂದು ವೇಳೆ ಎಲ್ಲಾ ಆಸ್ತಿಯನ್ನು ನನಗೆ ಒಪ್ಪಿಸಿದರೆ ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನನ್ನದು'' ಎಂದು ನವೀನ್ ಆಸ್ತಿ ವಿಚಾರವಾಗಿ ಮಾತನಾಡಿದ್ದಾರೆ.
ಅಪ್ಪನ ಉಳಿದ ಇಬ್ಬರ ಪತ್ನಿಯರ ಮಕ್ಕಳೊಂದಿಗೆ ಚೆನ್ನಾಗಿದ್ದೇನೆ
ನರೇಶ್ ಎರಡನೇ ಪತ್ನಿಗೆ ಒಬ್ಬ ಮಗ, ಮೂರನೇ ಪತ್ನಿಗೂ ಮಗ ಇದ್ದಾರೆ, ನಿಮ್ಮ ತಂದೆ ನಂತರ ನೀವೇ ಅವರಿಗೆ ಅಣ್ಣ ಹಾಗೂ ತಂದೆ ಸ್ಥಾನದಲ್ಲಿ ನಿಲ್ಲುತ್ತೀರ, ನಿಮ್ಮ ಹಾಗೂ ಅವರ ಬಾಂಡಿಂಗ್ ಹೇಗಿದೆ ಎಂದು ನಿರೂಪಕ ಕೇಳಿದ ಪ್ರಶ್ನೆಗೆ ''ತೇಜ ಹಾಗೂ ರಣವೀರ್ ಇಬ್ಬರೊಂದಿಗೂ ನಾನು ಚೆನ್ನಾಗಿದ್ದೇನೆ. ಇಬ್ಬರೂ ಆಗ್ಗಾಗ್ಗೆ ನನ್ನನ್ನು ಭೇಟಿ ಮಾಡುತ್ತಾರೆ, ನವೀನಣ್ಣ ನವೀನಣ್ಣ ಎಂದು ಹಿಂದೆ ತಿರುಗುತ್ತಾರೆ. ಅವನು ಮೊದಲ ಹೆಂಡತಿ ಮಗ, ಇವನು ಎರಡನೇ ಹೆಂಡತಿ ಮಗ ಎಂಬ ಬೇಧ ನನಗಿಲ್ಲ, ಅದರಲ್ಲಿ ಅವರದ್ಧೇನೂ ತಪ್ಪಿಲ್ಲ, ನಾವೆಲ್ಲರೂ ಒಂದೇ ಫ್ಯಾಮಿಲಿ'' ಎಂದು ನವೀನ್ ಉತ್ತರಿಸಿದ್ದಾರೆ.
ಆಸ್ತಿ ವಿಚಾರ, ಸಹೋದರರ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದನ್ನು ಕೇಳಿ ನೆಟಿಜನ್ಸ್ ನವೀನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.