Tollywood News: ಕ್ಲಿನ್ ಕಾರಾ ಕೊನಿಡೇಲ, ಮಗುವಿಗೆ ಕ್ರಿಶ್ಚಿಯನ್ ಹೆಸರು ಇಟ್ಟಿದ್ದೀರ ಎಂದವರಿಗೆ ಅರ್ಥ ವಿವರಿಸಿದ ರಾಮ್ ಚರಣ್ ಫ್ಯಾನ್ಸ್
ಕೊನಿಡೇಲ ಕುಟುಂಬ ಮಗುವಿನ ನಾಮಕರಣ ಮಾಡಿದ್ದಾರೆ. ಮಗುವಿಗೆ ''ಕ್ಲಿನ್ ಕಾರಾ ಕೊನಿಡೇಲ'' ಎಂದು ಚಿರಂಜೀವಿ ಕುಟುಂಬ ಹೆಸರಿಟ್ಟಿದೆ. ಮಗುವಿನ ಹೆಸರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ. ಮಗುವಿಗೆ ಶುಭ ಕೋರಿದವರು ಕೆಲವು ಮಂದಿ ಆದರೆ, ಹಿಂದೂಗಳಾಗಿ ಕ್ರಿಶ್ಚಿಯನ್ ಹೆಸರು ಇಟ್ಟಿದ್ದೀರ ಎಂದು ಬೇಸರ ಮಾಡಿಕೊಂಡವರು ಹಲವು ಜನ.
ಟಾಲಿವುಡ್ ಸ್ಟಾರ್ ಚಿರಂಜೀವಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಜೂನ್ 20 ಬೆಳಗ್ಗೆ ಉಪಾಸನಾ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕೊನಿಡೇಲ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿರುವುದಕ್ಕೆ ಅಭಿಮಾನಿಗಳು ಬಹಳ ಸಂಭ್ರಮಿಸುತ್ತಿದ್ದಾರೆ.
ರಾಮ್ ಚರಣ್ ಹಾಗೂ ಉಪಾಸನಾ ಅವರದ್ದು ಲವ್ ಮ್ಯಾರೇಜ್. ಕೆಲವು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಜೋಡಿ 14 ಜೂನ್ 2012 ರಲ್ಲಿ ಗುರುಹಿರಿಯರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಮದುವೆ ಆಗಿದ್ದರು. ಮದುವೆ ಆಗಿ ಇಷ್ಟು ವರ್ಷಗಳಾಗಿವೆ ಯಾವಾಗ ಗುಡ್ ನ್ಯೂಸ್ ಹೇಳುತ್ತೀರ ಎಂದು ಅಭಿಮಾನಿಗಳು ಆಗ್ಗಾಗ್ಗೆ ಕೇಳುತ್ತಲೇ ಇದ್ದರು. ಇದು ಕೊನಿಡೇಲ ಕುಟುಂಬಕ್ಕೆ ಕಿರಿಕಿರಿಯಾಗಿದ್ದೂ ಉಂಟು. ಇದು ನಮ್ಮ ವೈಯಕ್ತಿಕ ವಿಚಾರ ಎಂದು ಉಪಾಸನಾ ಕೂಡಾ ಅನೇಕ ಇಂಟರ್‌ವ್ಯೂಗಳಲ್ಲಿ ಹೇಳಿಕೊಂಡಿದ್ದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಮ್‌ಚರಣ್, ಉಪಾಸನಾ ತಂದೆ ತಾಯಿ ಆಗುತ್ತಿರುವ ಶುಭ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಜೂನ್ 20 ಮಂಗಳವಾರ ಉಪಾಸನಾ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಕೊನಿಡೇಲ ಕುಟುಂಬ ಮಗುವಿನ ನಾಮಕರಣ ಕೂಡಾ ಮಾಡಿದ್ದಾರೆ. ಮಗುವಿಗೆ ''ಕ್ಲಿನ್ ಕಾರಾ ಕೊನಿಡೇಲ'' ಎಂದು ಚಿರಂಜೀವಿ ಕುಟುಂಬ ಹೆಸರಿಟ್ಟಿದೆ. ಮಗುವಿನ ಹೆಸರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ. ಮಗುವಿಗೆ ಶುಭ ಕೋರಿದವರು ಕೆಲವು ಮಂದಿ ಆದರೆ, ಹಿಂದೂಗಳಾಗಿ ಕ್ರಿಶ್ಚಿಯನ್ ಹೆಸರು ಇಟ್ಟಿದ್ದೀರ ಎಂದು ಬೇಸರ ಮಾಡಿಕೊಂಡವರು ಹಲವು ಜನ.
ಆದರೆ ಸ್ವತ: ಉಪಾಸನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಗುವಿನ ಹೆಸರಿನ ಅರ್ಥವನ್ನು ವಿವರಿಸಿದ್ದಾರೆ. ಜೊತೆಗೆ ಚಿರಂಜೀವಿ, ರಾಮ್‌ಚರಣ್ ಅಭಿಮಾನಿಗಳು ಕೂಡಾ ಕ್ರಿಶ್ಚಿಯನ್ ಹೆಸರು ಎಂದವರಿಗೆ ಅರ್ಥ ವಿವರಿಸುವ ಮೂಲಕ ಬಾಯಿ ಮುಚ್ಚಿಸಿದ್ದಾರೆ. ''ಕ್ಲಿನ್ ಕಾರಾ ಕೊನಿಡೇಲ, ಲಲಿತಾ ಸಹಸ್ರನಾಮದಿಂದ ಮಗುವಿನ ಹೆಸರನ್ನು ಆರಿಸಲಾಗಿದೆ. ಈ ಹೆಸರು ಆಧ್ಯಾತ್ಮಿಕ ಜಾಗೃತಿಯನ್ನು ತರುವ ಪರಿವರ್ತಕ ಹಾಗೂ ಶುದ್ಧೀಕರಿಸುವ ಶಕ್ತಿಯನ್ನು ಸೂಚಿಸುತ್ತದೆ'' ಎಂದು ಬರೆದುಕೊಂಡಿದ್ದಾರೆ.
ಮಗುವಿನ ಹೆಸರನ್ನು ಲಲಿತಾ ಸಹಸ್ರನಾಮದಿಂದ ಆರಿಸಿಕೊಳ್ಳಲಾಗಿದೆ ಎಂದು ತಿಳಿದವರು ಸಂತೋಷ ವ್ಯಕ್ತಪಡಿಸಿದ್ದಾರೆ. ಎಷ್ಟೇ ದೊಡ್ಡ ಸ್ಟಾರ್‌ಗಳಾದರೂ ನಮ್ಮ ಸಂಸ್ಕೃತಿ ಮರೆತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಗುವಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುತ್ತಿದ್ದಾರೆ.