ಯುವ ನಟಿ ಅಂಜಲಿ ಜತೆ ನಂದಮೂರಿ ಬಾಲಕೃಷ್ಣ ಅನುಚಿತ ವರ್ತನೆ; ಮದ್ಯಪಾನ ಮಾಡಿ ವೇದಿಕೆಗೆ ಬಂದ್ರ ಬಾಲಯ್ಯ
ಕನ್ನಡ ಸುದ್ದಿ  /  ಮನರಂಜನೆ  /  ಯುವ ನಟಿ ಅಂಜಲಿ ಜತೆ ನಂದಮೂರಿ ಬಾಲಕೃಷ್ಣ ಅನುಚಿತ ವರ್ತನೆ; ಮದ್ಯಪಾನ ಮಾಡಿ ವೇದಿಕೆಗೆ ಬಂದ್ರ ಬಾಲಯ್ಯ

ಯುವ ನಟಿ ಅಂಜಲಿ ಜತೆ ನಂದಮೂರಿ ಬಾಲಕೃಷ್ಣ ಅನುಚಿತ ವರ್ತನೆ; ಮದ್ಯಪಾನ ಮಾಡಿ ವೇದಿಕೆಗೆ ಬಂದ್ರ ಬಾಲಯ್ಯ

Nandamuri Balakrishna pushes Actress Anjali: ಗ್ಯಾಂಗ್ಸ್‌ ಆಫ್‌ ಗೋದಾವರಿ ಸಿನಿಮಾಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ತೆಲುಗಿನ ಖ್ಯಾತ ನಟ, ರಾಜಕಾರಣಿ ನಂದಮೂರಿ ಬಾಲಕೃಷ್ಣ ಯುವ ನಟಿ ಅಂಜಲಿಯನ್ನು ಪಕ್ಕಕ್ಕೆ ತಳ್ಳಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಯುವ ನಟಿ ಅಂಜಲಿ ಜತೆ ನಂದಮೂರಿ ಬಾಲಕೃಷ್ಣ ಅನುಚಿತ ವರ್ತನೆ
ಯುವ ನಟಿ ಅಂಜಲಿ ಜತೆ ನಂದಮೂರಿ ಬಾಲಕೃಷ್ಣ ಅನುಚಿತ ವರ್ತನೆ

ಬೆಂಗಳೂರು: ಗ್ಯಾಂಗ್ಸ್‌ ಆಫ್‌ ಗೋದಾವರಿ ಸಿನಿಮಾಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ತೆಲುಗಿನ ಖ್ಯಾತ ನಟ, ರಾಜಕಾರಣಿ ನಂದಮೂರಿ ಬಾಲಕೃಷ್ಣ ಯುವ ನಟಿ ಅಂಜಲಿಯನ್ನು ಪಕ್ಕಕ್ಕೆ ತಳ್ಳಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ಸಂದರ್ಭ ವೇದಿಕೆಯಲ್ಲಿದ್ದ ಅಂಜಲಿ ನಕ್ಕರೂ ಸೋಷಿಯಲ್‌ ಮೀಡಿಯಾದಲ್ಲಿ ಹಿರಿಯ ನಟನ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಚಲನಚಿತ್ರರಂಗದ ಯುವ ಕಲಾವಿದರನ್ನು ಈ ರೀತಿ ನಡೆಸಿಕೊಳ್ಳುವುದೇ? ಎಂದು ಪ್ರಶ್ನಿಸಿದ್ದಾರೆ. ಇದು ಅಸಭ್ಯ ಮತ್ತು ಅಗೌರವದ ವರ್ತನೆ ಎಂದು ನೆಟ್ಟಿಗರು ಕ್ರೋಧ ವ್ಯಕ್ತಪಡಿಸಿದ್ದಾರೆ. ಸಿನಿಮಾ ನಿರ್ಮಾಪಕ ಹನ್ಸಲ್‌ ಮೆಹ್ತಾ ಅವರು ಈ ವಿಡಿಯೋವನ್ನು ಹಂಚಿಕೊಂಡು "ಯಾರಿವನು ಕೊಳಕ" ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಏನಿದು ಘಟನೆ?

ವೈರಲ್‌ ಆಗಿರುವ ಸಂಕ್ಷಿಪ್ತ ವಿಡಿಯೋದಲ್ಲಿ ಸ್ಟೇಜ್‌ನ ಮಧ್ಯ ಭಾಗಕ್ಕೆ ಬಾಲಯ್ಯ (ನಂದಮೂರಿ ಬಾಲಕೃಷ್ಣ) ಆಗಮಿಸುತ್ತಾರೆ. ಅಲ್ಲಿ ನಟಿ ನೇಹಾ ಶೆಟ್ಟಿ ಮತ್ತು ಅಂಜಲಿ ಇರುತ್ತಾರೆ. ಅಂಜಲಿಯನ್ನು ಪಕ್ಕಕ್ಕೆ ಹೋಗುವಂತೆ ಬಾಲಯ್ಯ ಹೇಳುತ್ತಾರೆ. ಈ ಸಮಯದಲ್ಲಿ ಅಂಜಲಿಯನ್ನು ಜೋರಾಕ್ಕೆ ಪಕ್ಕಕ್ಕೆ ತಳ್ಳಿದ್ದಾರೆ. ವೇದಿಕೆಯ ಕೆಳಗಿದ್ದವರು ಈ ಸಂದರ್ಭ ತಮಾಷೆಯೆಂಬಂತೆ ಜೋರಾಗಿ ಹೋ ಅಂದಿದ್ದಾರೆ. ನಟಿ ಅಂಜಲಿ ಕೂಡ ಜೋರಾಗಿ ನಕ್ಕಿದ್ದಾರೆ. ವೈರಲ್‌ ಆಗಿರುವ ವಿಡಿಯೋದ ಪೂರ್ಣ ವಿಡಿಯೋದಲ್ಲಿ ತಕ್ಷಣ ಬಾಲಯ್ಯ ಅಂಜಲಿಯಲ್ಲಿ ತಮಾಷೆ ಮಾತನಾಡುತ್ತಿರುವ ದೃಶ್ಯವೂ ಇದೆ.

ವಿಕಾಸ್‌ ಸೇನ್‌ ಅವರ ಗ್ಯಾಂಗ್ಸ್‌ ಆಫ್‌ ಗೋದಾವರಿ ಸಿನಿಮಾದ ಬಿಡುಗಡೆ ಪೂರ್ವ ಕಾರ್ಯಕ್ರಮಕ್ಕೆ ಬಾಲಯ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಗೆ ಬಂದು ಮಾತನಾಡುವಂತೆ ಇವರಿಗೆ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ಸಿನಿಮಾ ತಂಡವು ಬಾಲಯ್ಯರ ಜತೆ ಫೋಟೋ ತೆಗೆದುಕೊಳ್ಳಲು ಬಯಸಿತು. ವೇದಿಕೆಯ ಮಧ್ಯಭಾಗಕ್ಕೆ ಬಂದ ನಂದಮೂರಿ ಬಾಲಕೃಷ್ಣ ಅವರು ಅಲ್ಲಿದ್ದ ಅಂಜಲಿಯನ್ನು ಪಕ್ಕಕ್ಕೆ ಸರಿಯುವಂತೆ ಹೇಳಿ ತಳ್ಳಿದ್ದಾರೆ.

ಸಿನಿಮಾ ನಿರ್ದೇಶಕ ಹನ್ಸಲ್‌ ಮೆಹ್ತಾ ಅವರು ಈ ವಿಡಿಯೋವನ್ನು ಹಂಚಿಕೊಂಡು ಯಾರಿವನು ಕೊಳಕ ಎಂದು ಟ್ವೀಟ್‌ ಮಾಡಿದ್ದಾರೆ.

ಬಾಲಯ್ಯ ಅವರು ಅಂಜಲಿಯನ್ನು ತಳ್ಳಿರುವುದನ್ನು ನೋಡಿ ನೇಹಾ ಶೆಟ್ಟಿಗೆ ಆಘಾತವಾಗಿದೆ. ಆದರೆ, ಆ ಸಂದರ್ಭದಲ್ಲಿ ಆಘಾತವಾದರೂ ತೋರ್ಪಡಿಸಿದೆ ಅಂಜಲಿ ಜೋರಾಗಿ ನಕ್ಕಿದ್ದಾರೆ. ಪೂರ್ಣ ವಿಡಿಯೋದಲ್ಲಿ ಅಂಜಲಿಯನ್ನು ತಳ್ಳಿದ ಬಳಿಕ ಬಾಲಯ್ಯ ಅಂಜಲಿಗೆ ಹೈ ಫೈವ್‌ ನೀಡಿ ಏನೂ ನಡೆದೇ ಇಲ್ಲವೆಂಬಂತೆ ವರ್ತಿಸಿದ್ದಾರೆ. ನೆಟ್ಟಿಗರು ಬಾಲಯ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವೇದಿಕೆಯ ಮೇಲೆ ಈ ರೀತಿ ವರ್ತಿಸುವವರು ನಿಜ ಜೀವನದಲ್ಲಿ ಹೇಗೆ ಇರಬಹುದು ಎಂದು ಕಾಮೆಂಟ್‌ ಮಾಡಿದ್ದಾರೆ.

ಪೂರ್ಣ ವಿಡಿಯೋ ಇಲ್ಲಿದೆ ನೋಡಿ

ಕುಡಿದು ಟೈಟಾಗಿದ್ರ ಬಾಲಯ್ಯ

ಕೆಲವು ನೆಟ್ಟಿಗರು ನಂದಮೂರಿ ಬಾಲಕೃಷ್ಣ ಕುಳಿತಿದ್ದ ಚೇರ್‌ ಪಕ್ಕದಲ್ಲಿ ಇದ್ದ ನೀರಿನ ಬಾಟಮ್‌ ಮರೆಯಲಿ ಮದ್ಯ ಮಿಕ್ಸ್‌ ಮಾಡಿಟ್ಟಿರುವುದನ್ನು ಗುರುತಿಸಿದ್ದಾರೆ. ಬಾಲಯ್ಯ ಕುಡಿದು ವೇದಿಕೆಯಲ್ಲಿ ಹೀಗೆ ವರ್ತಿಸಿದ್ದಾರೆ ಎನ್ನುತ್ತಿದ್ದಾರೆ.

Whats_app_banner