ನಾಳೆಗೆ ನಾವು ಇರ್ತಿವೋ ಇಲ್ಲವೋ ಗೊತ್ತಿಲ್ಲ! ಅಪಘಾತದಿಂದ ಚೇತರಿಸಿಕೊಂಡ ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು-tollywood news actress rashmika mandanna reveals she had a minor accident shares emotional note on social media mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನಾಳೆಗೆ ನಾವು ಇರ್ತಿವೋ ಇಲ್ಲವೋ ಗೊತ್ತಿಲ್ಲ! ಅಪಘಾತದಿಂದ ಚೇತರಿಸಿಕೊಂಡ ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು

ನಾಳೆಗೆ ನಾವು ಇರ್ತಿವೋ ಇಲ್ಲವೋ ಗೊತ್ತಿಲ್ಲ! ಅಪಘಾತದಿಂದ ಚೇತರಿಸಿಕೊಂಡ ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು

ಕಳೆದ ಒಂದು ತಿಂಗಳಿಂದ ಸೋಷಿಯಲ್‌ ಮೀಡಿಯಾದಿಂದ ದೂರವೇ ಉಳಿದಿದ್ದ ನಟಿ ರಶ್ಮಿಕಾ ಮಂದಣ್ಣ, ಇದೀಗ ಅಚ್ಚರಿಯ ಪೋಸ್ಟ್‌ ಹಾಕಿ ಎಲ್ಲರನ್ನು ಅರೇ ಕ್ಷಣ ಶಾಕ್‌ಗೆ ತಳ್ಳಿದ್ದಾರೆ. ಸಣ್ಣ ಅಪಘಾತವಾಗಿದ್ದರಿಂದ ನಾನು ಮನೆಯಿಂದಲೂ ಹೊರಬಂದಿಲ್ಲ ಎಂದಿದ್ದಾರೆ ರಶ್ಮಿಕಾ.

ನಾಳೆಗೆ ನಾವು ಇರ್ತಿವೋ ಇಲ್ಲವೋ ಗೊತ್ತಿಲ್ಲ! ಅಪಘಾತದಿಂದ ಚೇತರಿಸಿಕೊಂಡ ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು
ನಾಳೆಗೆ ನಾವು ಇರ್ತಿವೋ ಇಲ್ಲವೋ ಗೊತ್ತಿಲ್ಲ! ಅಪಘಾತದಿಂದ ಚೇತರಿಸಿಕೊಂಡ ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು

Rashmika Mandanna on Accident: ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2: ರೂಲ್' ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಅದರ ಜತೆಗೆ ರೇನ್‌ಬೋ, ಕುಬೇರ ಸೇರಿ ಇನ್ನೂ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿಯೂ ಸದಾ ಸಕ್ರಿಯರಿರುವ ನಟಿ ರಶ್ಮಿಕಾ, ಕಳೆದ ಒಂದು ತಿಂಗಳಿಂದ ಅದರಿಂದ ದೂರವೇ ಉಳಿದಿದ್ದರು. ಅದಕ್ಕೆ ಕಾರಣ; ಆಕ್ಸಿಡೆಂಟ್‌!

ಹೌದು, ನಟಿ ರಶ್ಮಿಕಾ ಮಂದಣ್ಣಗೆ ಕಳೆದ ತಿಂಗಳು ಒಂದು ಸಣ್ಣ ಅಪಘಾತವಾಗಿತ್ತು. ಆ ಒಂದು ಕಾರಣಕ್ಕೆ ಸೋಷಿಯಲ್‌ ಮೀಡಿಯಾದಿಂದ ದೂರವೇ ಉಳಿದಿದ್ದರು ರಶ್ಮಿಕಾ. ಶೂಟಿಂಗ್‌ಗೂ ಬ್ರೇಕ್‌ ಹಾಕಿದ್ದ ರಶ್ಮಿಕಾ, ಮನೆಯಲ್ಲಿಯೇ ಕಾಲ ಕಳೆದಿದ್ದಾರೆ. ಇದೀಗ ಆ ಅಪಘಾತದ ಬಗ್ಗೆ ಸುದೀರ್ಘ ಬರಹವೊಂದನ್ನು ಪೋಸ್ಟ್‌ ಮಾಡುವ ಮೂಲಕ ಮತ್ತೆ ಆಗಮಿಸಿದ್ದಾರೆ. ಹೀಗಿದೆ ರಶ್ಮಿಕಾ ಮಾತುಗಳು.

ಮನೆಯಲ್ಲಿಯೇ ಇದ್ದೇನೆ..

ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಇದ್ದೇನೆ ಎಂದು ರಶ್ಮಿಕಾ ಮಂದಣ್ಣ ಫೋಟೋ ಸಮೇತ ಪೋಸ್ಟ್‌ ಹಂಚಿಕೊಂಡಿದ್ದಾರೆ. “ಕೆಲ ದಿನಗಳಿಂದ ನಾನು ಎಲ್ಲೂ ಹೊರಗೆ ಬಂದಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿಯೂ ಸಕ್ರಿಯವಾಗಿಲ್ಲ. ಇದಕ್ಕೆ ಕಾರಣ; ಒಂದು ಸಣ್ಣ ಆಕ್ಸಿಡೆಂಟ್‌. ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ. ವೈದ್ಯರು ಹೇಳಿದಂತೆ ನಾನು ಮನೆಯಲ್ಲಿಯೇ ರೆಸ್ಟ್‌ನಲ್ಲಿದ್ದೇನೆ ಎಂದು ರಶ್ಮಿಕಾ ಪೋಸ್ಟ್ ಮಾಡಿದ್ದಾರೆ. ಈಗ ನಾನು ಚೆನ್ನಾಗಿದ್ದೇನೆ ಎಂದೂ ಹೇಳಿದ್ದಾರೆ.

ನಾಳೆ ಇದೆಯೋ ಇಲ್ಲವೋ ಗೊತ್ತಿಲ್ಲ

ನಾಳೆ ಇದೆಯೋ ಇಲ್ಲವೋ ಗೊತ್ತಿಲ್ಲ, ದಿನವೂ ಖುಷಿಯಿಂದ ಇರಬೇಕು ಎಂದು ರಶ್ಮಿಕಾ ಮಂದಣ್ಣ ಭಾವುಕರಾಗಿ ಬರೆದುಕೊಂಡಿದ್ದಾರೆ. "ಯಾವಾಗಲೂ ನಿಮ್ಮ ಬಗ್ಗೆ ಕಾಳಜಿ ವಹಿಸಲು ಆದ್ಯತೆ ನೀಡಿ. ಏಕೆಂದರೆ ಜೀವನವು ತುಂಬಾ ಸೂಕ್ಷ್ಮ. ಕ್ಷಣಿಕ. ನಮಗೆ ನಾಳೆ ಇದೆಯೋ ಇಲ್ಲವೋ ಗೊತ್ತಿಲ್ಲ. ಹಾಗಾಗಿಯೇ ಪ್ರತಿದಿನವೂ ಸಂತೋಷದಿಂದ ಇರಬೇಕು. ಈ ನಡುವೆ ನಾನು ಮನೆಯಲ್ಲಿ ಹೆಚ್ಚೆಚ್ಚು ಲಡ್ಡುಗಳನ್ನೇ ತಿನ್ನುತ್ತಿದ್ದೇನೆ" ಎಂದೂ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ರಶ್ಮಿಕಾ ಅವರ ಈ ಪೋಸ್ಟ್‌ಗೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಚೇತರಿಕೆಗಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಪ್‌ಕಮಿಂಗ್‌ ಸಿನಿಮಾಗಳು

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅಭಿನಯದ ಪುಷ್ಪ 2: ದಿ ರೂಲ್ ಡಿಸೆಂಬರ್ 6 ರಂದು ಬಿಡುಗಡೆಯಾಗಲಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಭಾರೀ ಕ್ರೇಜ್ ಇದೆ. ಧನುಷ್ ಮತ್ತು ನಾಗಾರ್ಜುನ ಮುಖ್ಯ ಭೂಮಿಕೆಯಲ್ಲಿರುವ ಕುಬೇರ ಚಿತ್ರದಲ್ಲಿಯೂ ರಶ್ಮಿಕಾ ನಾಯಕಿ. ಶೇಖರ್ ಕಮ್ಮುಲ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಾಯಕಿ ಪ್ರಧಾನ ದಿ ಗರ್ಲ್‌ಫ್ರೆಂಡ್ ಸಿನಿಮಾದಲ್ಲಿಯೂ ರಶ್ಮಿಕಾ ನಟಿಸಿದ್ದಾರೆ.

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ಸಿಕಂದರ್ ಚಿತ್ರದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ. ವಿಕ್ಕಿ ಕೌಶಲ್ ಜೊತೆ ಚಾವಾ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 6ಕ್ಕೆ ಬಿಡುಗಡೆಯಾಗಲಿದೆ. ಈ ಐತಿಹಾಸಿಕ ಮಹಾಕಾವ್ಯವನ್ನು ನಿರ್ದೇಶಕ ಲಕ್ಷ್ಮಣ್ ಉತೇಕರ್ ನಿರ್ದೇಶಿಸಿದ್ದಾರೆ. ತೆಲುಗಿನ ರೇನ್‌ಬೋ ಸಿನಿಮಾದಲ್ಲೂ ರಶ್ಮಿಕಾ ಇದ್ದಾರೆ. ಒಟ್ಟಾರೆ ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಬಿಜಿಯಾಗಿದ್ದಾರೆ.

mysore-dasara_Entry_Point