ಕನ್ನಡ ಸುದ್ದಿ  /  Entertainment  /  Tollywood News Aditi Rao Hydari Weds Actor Siddharth, They Married In Wanaparthy Temple Say Reports Pcp

Siddharth Wedding: ಸದ್ದಿಲ್ಲದೆ ನಡೆದ ಸಿದ್ಧಾರ್ಥ್‌ ಅದಿತಿ ರಾವ್‌ ಹೈದರಿ ಶುಭವಿವಾಹ; ಪದ್ಮಾವತಿ ನಟಿಗೆ ತಾಳಿ ಕಟ್ಟಿದ ಸಿದ್ದು

Aditi Rao Hydari and Siddharth Wedding: ಜನಪ್ರಿಯ ನಟ ಸಿದ್ಧಾರ್ಥ್‌ ಮತ್ತು ನಟಿ ಅದಿತಿ ರಾವ್‌ ಹೈದರಿ ವಿವಾಹ ಕಾರ್ಯಕ್ರಮ ಇಂದು ನಡೆದಿದೆ ಎಂದು ವರದಿಗಳು ತಿಳಿಸಿವೆ. ತೆಲಂಗಾಣದ ಶ್ರೀರಂಗಪುರ್‌ನ ರಂಗನಾಥ ಸ್ವಾಮಿ ದೇಗುಲದ ಮಂಟಪದಲ್ಲಿ ಇವರ ವಿವಾಹ ನಡೆದಿದೆ ಎನ್ನಲಾಗಿದೆ.

ಸಿದ್ಧಾರ್ಥ್‌ ಅದಿತಿ ರಾವ್‌ ಹೈದರಿ ಶುಭವಿವಾಹ
ಸಿದ್ಧಾರ್ಥ್‌ ಅದಿತಿ ರಾವ್‌ ಹೈದರಿ ಶುಭವಿವಾಹ

ಬೆಂಗಳೂರು: ಜನಪ್ರಿಯ ನಟ ಸಿದ್ಧಾರ್ಥ್‌ ಮತ್ತು ನಟಿ ಅದಿತಿ ರಾವ್‌ ಹೈದರಿ ಇಂದು ಗುಟ್ಟಾಗಿ ವಿವಾಹವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಶ್ರೀರಂಗಪುರ್‌ನ ರಂಗನಾಥ ಸ್ವಾಮಿ ದೇಗುಲದ ಮಂಟಪದಲ್ಲಿ ಇವರ ಶುಭವಿವಾಹ ನಡೆದಿದೆ. ಇದು ತೆಲಂಗಾಣದ ವಾನಪಾರ್ಥಿ ಜಿಲ್ಲೆಯಲ್ಲಿರುವ ದೇವಾಲಯ. ಆದರೆ, ತಮ್ಮ ವಿವಾಹದ ಕುರಿತು ಸಿದ್ಧಾರ್ಥ್‌ ಮತ್ತು ಅದಿತಿ ಇನ್ನೂ ಅಧಿಕೃತವಾಗಿ ವಿವರ ನೀಡಿಲ್ಲ.

ಕಳೆದ ಹಲವು ಸಮಯದಿಂದ ಡೇಟಿಂಗ್‌ನಲ್ಲಿದ್ದ ಸಿದ್ಧಾರ್ಥ್‌ ಮತ್ತು ಆದಿತಿ ರಾವ್‌ ಹೈದರಿಯವರು ಇದೀಗ ವಿವಾಹವಾಗಿದ್ದಾರೆ ಎಂದು ಖಚಿತ ಮಾಹಿತಿ ಆಧರಿಸಿ ವರದಿಗಳು ತಿಳಿಸಿವೆ. ಈ ಮದುವೆ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ಮತ್ತು ದಂಪತಿಯ ಆಪ್ತರು ಮಾತ್ರ ಭಾಗವಹಿಸಿದ್ದಾರೆ ಎನ್ನಲಾಗಿದೆ. ಪದ್ಮವತಿ ನಟಿ ಮತ್ತು ರಂಗ್‌ ದೆ ಬಸಂತಿ ನಟ ವಿವಾಹ ಕಾರ್ಯಕ್ರಮ ಕೊನೆಯವರೆಗೂ ಸೀಕ್ರೆಟ್‌ ಆಗಿಯೇ ಇತ್ತು. ಇವರಿಬ್ಬರು ತಮ್ಮ ವೈಯಕ್ತಿಕ ಬದುಕಿನ ಕುರಿತು ಎಲ್ಲೂ ಪ್ರಚಾರವಾಗದಂತೆ ಎಚ್ಚರವಹಿಸಿದ್ದರು.

ನಟ ಸಿದ್ಧಾರ್ಥ್‌ ಮತ್ತು ಅದಿತಿಗೆ ಇದು ಎರಡನೇ ವಿವಾಹ. ಕಳೆದ ಹಲವು ವರ್ಷಗಳಿಂದ ಲಿವ್‌ ಇನ್‌ ರಿಲೆಷನ್‌ನಲ್ಲಿದ್ದ ಇವರಿಬ್ಬರು ಇಂದು ವಿವಾಹವಾಗಿದ್ದಾರೆ. ಬುಧವಾರ ಮುಂಜಾನೆ ಇವರ ವಿವಾಹ ಅತ್ಯಂತ ಸರಳವಾಗಿ ನಡೆದಿದೆ. ತಮ್ಮ ಮದುವೆ ಕಾರ್ಯಕ್ರಮದ ಕುರಿತು ಇವರಿಬ್ಬರೂ ಎಲ್ಲೂ ಮಾಹಿತಿ ನೀಡಿರಲಿಲ್ಲ. ಸೋಷಿಯಲ್‌ ಮೀಡಿಯಾದಲ್ಲೂ ಅಪ್‌ಡೇಟ್‌ ನೀಡಿರಲಿಲ್ಲ.

ಅದಿತಿ ಮತ್ತು ಸಿದ್ಧಾರ್ಥ್‌ ಮೊದಲ ಬಾರಿ ಮಹಾ ಸಮುದ್ರಂ ಸಿನಿಮಾದ ಶೂಟಿಂಗ್‌ ವೇಳೆ ಭೇಟಿಯಾಗಿದ್ದರು. ಈ ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು. ಕಳೆದ ಒಂದು ವರ್ಷ ಇವರಿಬ್ಬರು ಸಹಜೀವನ ನಡೆಸುತ್ತಿದ್ದರು. ಇದೀಗ ತಮ್ಮ ಸಂಬಂಧಕ್ಕೆ ಮದುವೆಯ ಮುದ್ರೆ ಒತ್ತಿದ್ದಾರೆ. ಸಿದ್ಧಾರ್ಥ್‌ಗೆ ಇದು ಎರಡನೇ ವಿವಾಹ. 2003ರಲ್ಲಿ ಮೇಘನಾ ಜತೆ ವಿವಾಹವಾಗಿದ್ದರು. ಆದರೆ, ಮೂರು ವರ್ಷದಲ್ಲಿ ಅಂದರೆ 2006ರಲ್ಲಿ ದೂರಾಗಿದ್ದರು. 2007ರಲ್ಲಿ ಡಿವೋರ್ಸ್‌ ನೀಡಿದ್ದರು. ಸಿದ್ಧಾರ್ಥ್‌ಗೆ ಸಾರಾ ಆಲಿ ಖಾನ್‌ ಜತೆಗೂ ಸಂಬಂಧ ಇದೆ ಎಂಬ ವದಂತಿ ಇತ್ತು.

ಇದೇ ರೀತಿ ನಟಿ ಅದಿತಿ ರಾವ್‌ ಹೈದರಿಗೂ ಇದು ಎರಡನೇ ವಿವಾಹ. ಇವರು ಅಮಿರ್‌ ಖಾನ್‌ರ ಮಾಜಿ ಪತ್ನಿ ಕಿರಣ್‌ ರಾವ್‌ ಅವರ ಹತ್ತಿರದ ಸಂಭಂಧಿ ಎನ್ನಲಾಗಿದೆ. ಅದಿತಿಗೆ 23ನೇ ವಯಸ್ಸಿನಲ್ಲಿ ವಕೀಲ, ನಟ ಸತ್ಯದೀಪ್‌ ಮಿಶ್ರಾ ಜತೆ ಮದುವೆಯಾಗಿತ್ತು. 2013ರಲ್ಲಿ ಇವರಿಬ್ಬರು ದೂರವಾಗಿದ್ದರು. ಅಂದಹಾಗೆ, ಸತ್ಯದೀಪ್‌ ಮಿಶ್ರಾ ಅವರು ಈಗಾಗಲೇ ಎರಡನೇ ವಿವಾಹವಾಗಿದ್ದಾರೆ.

ನಟ ಸಿದ್ಧಾರ್ಥ್‌ ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಬರವಣಿಗೆ, ಸಿನಿಮಾ ನಿರ್ಮಾಣ, ಹಿನ್ನೆಲೆ ಗಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚೆಗೆ ಇವರ ನಟನೆಯ ಚಿತ್ತಾ ಸಿನಿಮಾ ಬಿಡುಗಡೆಯಾಗಿತ್ತು. ಇಂಡಿಯನ್‌ 2 ಇವರ ಮುಂಬರುವ ಸಿನಿಮಾ. ಟಕ್ಕರ್‌, ಮಹಾ ಸಮುದ್ರಂ, ಅರುವಂ, ಶಿವಪ್ಪು ಮಂಜಲ್‌ ಪಚೈ, ಕಮರಾ ಕಮಾರ ಸಂಭವಂ, ಅವಲ್‌ ದಿ ಹೌಶ್‌ ನೆಕ್ಸ್ಟ್‌ ಡೋರ್‌, ಜಿಲ್‌ ಜಂಕ್‌ ಜಕ್‌, ಅರಮಣೈ 2, ಎನ್ನಕ್ಕುಲ್‌ ಒರುವಂ, ಜಿಗರ್‌ಥಂಡ, ಬಾದಶಾ, ಮಿಡ್‌ನೈಟ್‌ ಚಿಲ್ಡ್ರನ್‌, ಓ ಮೈ ಫ್ರೆಂಡ್‌, ಆಟ, ಬೊಮ್ಮರಿಲು ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಿದ್ಧಾರ್ಥ್‌ ನಟಿಸಿದ್ದಾರೆ.

IPL_Entry_Point