Agent OTT: ಒಂದೂವರೆ ವರ್ಷದ ಬಳಿಕ ಒಟಿಟಿಗೆ ಅಖಿಲ್ ಅಕ್ಕಿನೇನಿಯ ಏಜೆಂಟ್ ಸಿನಿಮಾ; ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಬದಲಾವಣೆ?
ಕನ್ನಡ ಸುದ್ದಿ  /  ಮನರಂಜನೆ  /  Agent Ott: ಒಂದೂವರೆ ವರ್ಷದ ಬಳಿಕ ಒಟಿಟಿಗೆ ಅಖಿಲ್ ಅಕ್ಕಿನೇನಿಯ ಏಜೆಂಟ್ ಸಿನಿಮಾ; ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಬದಲಾವಣೆ?

Agent OTT: ಒಂದೂವರೆ ವರ್ಷದ ಬಳಿಕ ಒಟಿಟಿಗೆ ಅಖಿಲ್ ಅಕ್ಕಿನೇನಿಯ ಏಜೆಂಟ್ ಸಿನಿಮಾ; ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಬದಲಾವಣೆ?

Agent OTT: ಟಾಲಿವುಡ್‌ ನಟ ಅಖಿಲ್ ಅಕ್ಕಿನೇನಿ ಅವರ ಏಜೆಂಟ್ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕದ ಕುರಿತು ಮತ್ತೊಂದು ಹೊಸ ಗಾಸಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋನಿ ಲಿವ್ ಹೊರತುಪಡಿಸಿ ಹೊಸ OTT ಮೂಲಕ ಈ ಚಿತ್ರವು ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

ಒಂದೂವರೆ ವರ್ಷದ ಬಳಿಕ ಒಟಿಟಿಗೆ ಅಖಿಲ್ ಅಕ್ಕಿನೇನಿಯ ಏಜೆಂಟ್ ಸಿನಿಮಾ
ಒಂದೂವರೆ ವರ್ಷದ ಬಳಿಕ ಒಟಿಟಿಗೆ ಅಖಿಲ್ ಅಕ್ಕಿನೇನಿಯ ಏಜೆಂಟ್ ಸಿನಿಮಾ

Agent OTT: ಅಖಿಲ್ ಅಕ್ಕಿನೇನಿ ನಟನೆಉ ಏಜೆಂಟ್ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡು ಒಂದೂವರೆ ವರ್ಷವಾಯ್ತು. ಇಂದಿಗೂ ಈ ಸಿನಿಮಾ ಒಟಿಟಿಗೆ ಆಗಮಿಸಿಲ್ಲ. ಈ ನಡುವೆ ಇದೇ ಸಿನಿಮಾ ತೆಲುಗಿನಲ್ಲಿ ಟಿವಿಯಲ್ಲಿ ಪ್ರಸಾರ ಕಾಣುವುದಕ್ಕೂ ಮುನ್ನ, ಹಿಂದಿ ಅವತರಣಿಕೆ ಈಗಾಗಲೇ ಟಿವಿಯಲ್ಲಿ ಪ್ರಸಾರ ಕಂಡಿದೆ. ಈ ನಡುವೆ ಈಗ ಇದೇ ಚಿತ್ರದ ಒಟಿಟಿ ಬಗ್ಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ.

ಏಜೆಂಟ್ ಚಿತ್ರದ ಒಟಿಟಿ ಹಕ್ಕುಗಳನ್ನು ಸೋನಿಲಿವ್ ಭಾರಿ ಬೆಲೆಗೆ ಪಡೆದುಕೊಂಡಿದೆ. ಈ ಚಿತ್ರವು ಥಿಯೇಟರ್‌ಗಳಲ್ಲಿ ಡಿಸಾಸ್ಟರ್ ಆಗಿ ಹೊರಹೊಮ್ಮಿದ್ದರಿಂದ, ಒಟಿಟಿ ಬಿಡುಗಡೆಯ ಮೇಲೆ ಪರಿಣಾಮ ಬೀರಿತು. ಒಂದು ವರ್ಷವಾದರೂ ಈ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಧೈರ್ಯ ಸೋನಿಲಿವ್‌ಗೆ ಸಾಧ್ಯವಾಗಲಿಲ್ಲ. ಹೀಗಿರುವಾಗಲೇ ಇತ್ತೀಚೆಗೆ ಏಜೆಂಟ್ ಒಟಿಟಿ ಬಿಡುಗಡೆಗೆ ಸಂಬಂಧಿಸಿದ ಅಡೆತಡೆಗಳಿಗೆ ಪುಲ್ ಸ್ಟಾಪ್ ಬಿದ್ದಿದೆ ಎಂದು ವರದಿಯಾಗಿದೆ. ಈ ಸಿನಿಮಾದ ಒಟಿಟಿ ಪ್ಲಾಟ್‌ಫಾರ್ಮ್ ಬದಲಾಗಿದೆ ಎನ್ನಲಾಗುತ್ತಿದೆ. ಸೋನಿ ಲಿವ್‌ನಿಂದ ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದೆಯಂತೆ.

ಯಾವ ಒಟಿಟಿಗೆ ಬರಲಿದೆ ಏಜೆಂಟ್‌?

ನವೆಂಬರ್ ತಿಂಗಳಿನಲ್ಲಿ ಅಮೆಜಾನ್ ಪ್ರೈಮ್ ಮೂಲಕ ಏಜೆಂಟ್ ಸಿನಿಮಾ ಒಟಿಟಿಗೆ ಬರುವ ಸಾಧ್ಯತೆ ಇದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಹೊಸ ಒಟಿಟಿ ಪ್ಲಾಟ್‌ಫಾರ್ಮ್ ಜೊತೆಗೆ ಏಜೆಂಟ್ ಒಟಿಟಿ ಬಿಡುಗಡೆಯ ಬಗ್ಗೆ ಇನ್ನೇನು ಶೀಘ್ರದಲ್ಲಿಯೇ ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಒಟಿಟಿ ಬಿಡುಗಡೆಗೂ ಮುನ್ನವೇ ಏಜೆಂಟ್ ಚಿತ್ರದ ತೆಲುಗು ಅವತರಣಿಕೆ ಪೈರಸಿ ಸೈಟ್‌ಗಳಲ್ಲಿ ಬಿಡುಗಡೆಯಾಗಿತ್ತು.

80 ಕೋಟಿ ಬಜೆಟ್; 30 ಕೋಟಿ ಕಲೆಕ್ಷನ್...

ಏಜೆಂಟ್ ಚಿತ್ರದಲ್ಲಿ ಅಖಿಲ್ ಎದುರು ನಾಯಕಿಯಾಗಿ ಸಾಕ್ಷಿ ವೈದ್ಯ ನಟಿಸಿದ್ದರು. ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ಪೈ ಆಕ್ಷನ್ ಥ್ರಿಲ್ಲರ್ ಜಾನರ್‌ನಲ್ಲಿ ತೆರೆಕಂಡ ಈ ಚಿತ್ರವನ್ನು ಸುರೇಂದರ್ ರೆಡ್ಡಿ ನಿರ್ದೇಶಿಸಿದ್ದಾರೆ. ನಿರ್ಮಾಪಕ ಅನಿಲ್ ಸುಂಕರ ಅವರು ಸುಮಾರು ಎಂಬತ್ತು ಕೋಟಿ ಬಜೆಟ್‌ನಲ್ಲಿ ಏಜೆಂಟ್ ಚಿತ್ರವನ್ನು ನಿರ್ಮಿಸಿದ್ದರು. ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡ ಈ ಸಿನಿಮಾ, ನಿರ್ಮಾಪಕರು ಹಾಗೂ ಅಖಿಲ್‌ಗೆ ಮಾಸದ ಹೊಡೆತ ನೀಡಿದೆ. ಇದು ಕಳೆದ ವರ್ಷದ ಅತಿ ದೊಡ್ಡ ಡಿಸಾಸ್ಟರ್‌ ಕಂಡ ಸಿನಿಮಾಗಳಲ್ಲಿ ಒಂದಾಗಿದೆ.

ಇದು ಏಜೆಂಟ್ ‌ಚಿತ್ರದ ಕಥೆ...

ರಿಕಿ ಅಲಿಯಾಸ್ ರಾಮಕೃಷ್ಣ (ಅಖಿಲ್) ಬಾಲ್ಯದಿಂದಲೂ ರಾ ಏಜೆಂಟ್ ಆಗಬೇಕೆಂದು ಕನಸು ಕಾಣುತ್ತಾನೆ. ಎಷ್ಟೇ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗುವುದಿಲ್ಲ. ರಿಕಿ ರಾ ಚೀಫ್ ಮಹಾದೇವ್ (ಮಮ್ಮುಟ್ಟಿ) ಸಿಸ್ಟಮ್‌ ಹ್ಯಾಕ್ ಮಾಡಿ, ಅವನಿಂದ ಮೆಚ್ಚುಗೆ ಪಡೆಯುತ್ತಾನೆ. ಹೀಗಿರುವಾಗಲೇ ‌ದೇಶದಲ್ಲಿ ಬಾಂಬ್ ದಾಳಿಗಳನ್ನು ತಡೆಗಟ್ಟಲು, ಮಹಾದೇವ್‌ ಜತೆಗೆ ರಿಕ್ಕಿ ಜತೆಯಾಗುತ್ತಾನೆ. ಕೊನೆಗೆ ಅದೇ ಮಹಾದೇವ್‌ನನ್ನು ರಿಕ್ಕಿ ಹತ್ಯೆ ಮಾಡುತ್ತಾನೆ. ಹೀಗೆ ಥ್ರಿಲ್ಲಿಂಗ್‌ ಆಗಿಯೇ ಈ ಸಿನಿಮಾ ಮೂಡಿಬಂದಿದೆ.

ಮುಂದಿನ ಚಿತ್ರ…

ಏಜೆಂಟ್ ಸಿನಿಮಾ ಸೋತ ಬಳಿಕ, ಕಥೆ ಆಯ್ಕೆಯಲ್ಲಿ ಅಖಿಲ್‌ ತುಂಬ ಜಾಗೃತೆ ವಹಿಸುತ್ತಿದ್ದಾರೆ. ಈ ಬಾರಿ ಹೆಚ್ಚಿನ ನಿರೀಕ್ಷೆಗಳಿಲ್ಲದೆ ಸೈಲೆಂಟಾಗಿ ತಮ್ಮ ಹೊಸ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಸಾಹೋ ಚಿತ್ರದ ಸಹಾಯಕ ನಿರ್ದೇಶಕರ ಜತೆ ಹೊಸ ಸಿನಿಮಾ ಮಾಡಿದ್ದು, ಫ್ಯಾಂಟಸಿ ಲವ್ ಸ್ಟೋರಿ ಕಥಾಹಂದರ ಆ ಚಿತ್ರದ್ದು. ಇನ್ನೇನು ಶೀಘ್ರದಲ್ಲಿಯೇ ಈ ಸಿನಿಮಾ ಬಗ್ಗೆ ಅಪ್‌ಡೇಟ್‌ ಮಾಹಿತಿ ಹೊರಬೀಳಲಿದೆ.

Whats_app_banner