ಮೆಲೋಡಿ ಗುಂಗು ಹಿಡಿಸಲು ಬರ್ತಿದೆ ಅಲ್ಲು ಅರ್ಜುನ್‌ Pushpa 2 ಚಿತ್ರದ ಎರಡನೇ ಹಾಡು; ಯಾವಾಗ ಬಿಡುಗಡೆ? ಹೀಗಿದೆ ಮಾಹಿತಿ
ಕನ್ನಡ ಸುದ್ದಿ  /  ಮನರಂಜನೆ  /  ಮೆಲೋಡಿ ಗುಂಗು ಹಿಡಿಸಲು ಬರ್ತಿದೆ ಅಲ್ಲು ಅರ್ಜುನ್‌ Pushpa 2 ಚಿತ್ರದ ಎರಡನೇ ಹಾಡು; ಯಾವಾಗ ಬಿಡುಗಡೆ? ಹೀಗಿದೆ ಮಾಹಿತಿ

ಮೆಲೋಡಿ ಗುಂಗು ಹಿಡಿಸಲು ಬರ್ತಿದೆ ಅಲ್ಲು ಅರ್ಜುನ್‌ Pushpa 2 ಚಿತ್ರದ ಎರಡನೇ ಹಾಡು; ಯಾವಾಗ ಬಿಡುಗಡೆ? ಹೀಗಿದೆ ಮಾಹಿತಿ

ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಪುಷ್ಪ 2 ಚಿತ್ರದ ಎರಡನೇ ಹಾಡಿನ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಈಗಾಗಲೇ ಮೊದಲ ಹಾಡು ಟ್ರೆಂಡ್‌ ಸೆಟ್‌ ಮಾಡಿದ್ದು, ಈಗ ಎರಡನೇ ಸಾಂಗ್‌ ಮೆಲೋಡಿ ಗುಂಗು ಹಿಡಿಸಲಿದೆಯಂತೆ.

ಮೆಲೋಡಿ ಗುಂಗು ಹಿಡಿಸಲು ಬರ್ತಿದೆ ಅಲ್ಲು ಅರ್ಜುನ್‌ Pushpa 2 ಚಿತ್ರದ ಎರಡನೇ ಹಾಡು; ಯಾವಾಗ ಬಿಡುಗಡೆ? ಹೀಗಿದೆ ಮಾಹಿತಿ
ಮೆಲೋಡಿ ಗುಂಗು ಹಿಡಿಸಲು ಬರ್ತಿದೆ ಅಲ್ಲು ಅರ್ಜುನ್‌ Pushpa 2 ಚಿತ್ರದ ಎರಡನೇ ಹಾಡು; ಯಾವಾಗ ಬಿಡುಗಡೆ? ಹೀಗಿದೆ ಮಾಹಿತಿ

Pushpa 2 Second Song: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2: ದಿ ರೂಲ್' ಚಿತ್ರದ ಎರಡನೇ ಹಾಡಿನ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಬಂದಿರುವ 'ಪುಷ್ಪಾ.. ಪುಷ್ಪ' ಎಂಬ ಮಾಸ್ ಬೀಟ್ ಸಾಂಗ್ ಈಗಾಗಲೇ ಟ್ರೆಂಡ ಸೆಟ್‌ ಮಾಡಿದೆ. ಎಲ್ಲೆಡೆ ಆ ಹಾಡಿನ ಹುಕ್‌ ಸ್ಟೆಪ್‌ ಸಖತ್‌ ಸೌಂಡ್‌ ಮಾಡ್ತಿದೆ. ಇದೀಗ ಎರಡನೇ ಹಾಡನ್ನೂ ಬಿಡುಗಡೆ ಮಾಡಲು ಪುಷ್ಪಾ ಟೀಂ ರೆಡಿಯಾಗಿದೆ. ಹಾಗಾದರೆ, ಪುಷ್ಪ ಪಾರ್ಟ್‌ 2 ಚಿತ್ರದ ಎರಡನೇ ಹಾಡಿನ ಅಪ್‌ಡೇಟ್ ನೀಡಲು ಚಿತ್ರತಂಡ ಅದಕ್ಕೂ ಒಂದು ಸಮಯ ನಿಗದಿಪಡಿಸಿದೆ.

ಪುಷ್ಪ 2 ದಿ ರೂಲ್ ಚಿತ್ರದ ಎರಡನೇ ಸಾಂಗ್ ಅಪ್‌ಡೇಟ್ ನಾಳೆ (ಮೇ 23) ಬೆಳಗ್ಗೆ 11:07ಕ್ಕೆ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್‌ ಘೋಷಣೆ ಮಾಡಲಿದೆ. ಪುಷ್ಪ 2 ರ ಮೊದಲ ಹಾಡು ಸಂಪೂರ್ಣ ಮಾಸ್ ಬೀಟ್‌ನೊಂದಿಗೆ ಬಂದಿತ್ತು. ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಟ್ರೆಂಡಿ ಟ್ಯೂನ್ ನೀಡಿದ್ದರು. ಅಲ್ಲು ಅರ್ಜುನ್ 'ಪುಷ್ಪಾ.. ಪುಷ್ಪಾ' ಹಾಡಿಗೆ ಹುಕ್ ಸ್ಟೆಪ್ಸ್ ಹಾಕಿ ಎಲ್ಲರನ್ನು ರಂಜಿಸಿದ್ದರು. ಇದೀಗ ಎರಡನೇ ಹಾಡು ಮೆಲೋಡಿಯಿಂದ ಕೂಡಿರಲಿದೆಯಂತೆ. ಹಾಡಿನಲ್ಲಿ ಅಲ್ಲು ಅರ್ಜುನ್ ಮತ್ತು ನಾಯಕಿ ರಶ್ಮಿಕಾ ಮಂದಣ್ಣ ಸಹ ಕಾಣಿಸಿಕೊಳ್ಳಲಿದ್ದಾರೆ.

2021ರಲ್ಲಿ ಮೊದಲ ಭಾಗ ಬಿಡುಗಡೆ

ಪುಷ್ಪ 2 ಚಿತ್ರವನ್ನು ನಿರ್ದೇಶಕ ಸುಕುಮಾರ್ ನಿರ್ದೇಶನ ಮಾಡಿದ್ದಾರೆ. 2021ರಲ್ಲಿ ಬ್ಲಾಕ್‌ಬಸ್ಟರ್ ಹಿಟ್‌ ಆಗಿತ್ತು. ಇದೀಗ ಎರಡನೇ ಭಾಗ ಅದಕ್ಕೂ ಮಿಗಿಲಾಗಿರಲಿದೆ ಎಂದೇ ಹೇಳಲಾಗುತ್ತಿದೆ. ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಇದೇ ವರ್ಷದ ಆಗಸ್ಟ್ 15ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಪುಷ್ಪ 2 ಚಿತ್ರದ ಹಿಂದಿ ಭಾಷೆಯ ಥಿಯೇಟ್ರಿಕಲ್‌ ಹಕ್ಕುಗಳು ಬರೋಬ್ಬರಿ 200 ​​ಕೋಟಿಗೆ ಮಾರಾಟವಾಗಿದೆ ಎಂಬ ಮಾಹಿತಿ ಇದೆ. ಈ ಮೂಲಕ ಅಲ್ಲು ಅರ್ಜುನ್ ಉತ್ತರ ಭಾರತದಲ್ಲಿ ಬಾಲಿವುಡ್ ಹೀರೋಗಳನ್ನು ಮೀರಿ ಈ ದಾಖಲೆ ಸೃಷ್ಟಿಸಿದ್ದಾರೆ.

ಮುಂದುವರಿದ ಶೂಟಿಂಗ್‌..

ಸದ್ಯ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪುಷ್ಪ 2 ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ಚಿತ್ರದ ಇನ್ನೂ ಹಲವು ಭಾಗದ ಶೂಟಿಂಗ್‌ ಬಾಕಿ ಉಳಿದಿದ್ದು, ಫಹಾದ್‌ ಫಾಸಿಲ್‌ ಎರಡು ವಾರಗಳ ಕಾಲ ಈ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಐಟಂ ಹಾಡಿನಲ್ಲಿ ಯಾರು ನಟಿಸಲಿದ್ದಾರೆ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯದ ಮೂಲಗಳ ಪ್ರಕಾರ ಜಾನ್ವಿ ಕಪೂರ್‌, ದಿಶಾ ಪಟಾಣಿ ಹೆಸರುಗಳು ಕೇಳಿಬಂದಿವೆಯಾದರೂ, ಇಬ್ಬರ ಪೈಕಿ ಯಾರು ಲಾಕ್‌ ಆಗಬಹುದು ಎಂಬುದನ್ನು ಕಾದು ನೋಡಬೇಕಿದೆ.

ಚಿತ್ರದಲ್ಲಿ ಯಾರೆಲ್ಲ ಇದ್ದಾರೆ

ಇನ್ನು ಪುಷ್ಪ 2 ಚಿತ್ರದಲ್ಲಿ ಸ್ಟಾರ್‌ ತಾರಾಬಳಗವೇ ಹೈಲೈಟ್‌. ಅಲ್ಲು ಅರ್ಜುನ್ ಜತೆಗೆ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಮಲಯಾಳಂ ನಟ ಫಹಾದ್ ಫಾಸಿಲ್ ಪೊಲೀಸ್‌ ಅಧಿಕಾರಿಯಾಗಿ ನಟಿಸಿದರೆ, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)