ಕನ್ನಡ ಸುದ್ದಿ  /  ಮನರಂಜನೆ  /  ಬಿಡುಗಡೆ ಮುಂದೂಡಿದ ಪುಷ್ಪ 2 ಚಿತ್ರಕ್ಕೆ ಕೋಟಿ ಕೋಟಿ ಲಾಸ್!‌ ಇದು ನಿರ್ದೇಶಕ ಸುಕುಮಾರ್‌ ಮಾಡಿಕೊಂಡ ಎಡವಟ್ಟಾ?

ಬಿಡುಗಡೆ ಮುಂದೂಡಿದ ಪುಷ್ಪ 2 ಚಿತ್ರಕ್ಕೆ ಕೋಟಿ ಕೋಟಿ ಲಾಸ್!‌ ಇದು ನಿರ್ದೇಶಕ ಸುಕುಮಾರ್‌ ಮಾಡಿಕೊಂಡ ಎಡವಟ್ಟಾ?

Pushpa 2: The Rule Postponed: ಅಲ್ಲು ಅರ್ಜುನ್‌ ನಟನೆಯ ಪುಷ್ಪ 2 ಚಿತ್ರದ ಬಿಡುಗಡೆ ಮುಂದೂಡಿಕೆಯಾಗಿದೆ. ಆಗಸ್ಟ್‌ ತಿಂಗಳಲ್ಲಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಾಣಬೇಕಿದ್ದ ಈ ಸಿನಿಮಾ ನಾಲ್ಕು ತಿಂಗಳು ಮುಂದೆ ಹೋಗಿದೆ. ಹಾಗಾದರೆ ಬಿಡುಗಡೆ ಯಾವಾಗ?

ಬಿಡುಗಡೆ ಮುಂದೂಡಿದ ಪುಷ್ಪ 2 ಚಿತ್ರಕ್ಕೆ ಕೋಟಿ ಕೋಟಿ ಲಾಸ್!‌ ಇದು ನಿರ್ದೇಶಕ ಸುಕುಮಾರ್‌ ಮಾಡಿಕೊಂಡ ಎಡವಟ್ಟಾ?
ಬಿಡುಗಡೆ ಮುಂದೂಡಿದ ಪುಷ್ಪ 2 ಚಿತ್ರಕ್ಕೆ ಕೋಟಿ ಕೋಟಿ ಲಾಸ್!‌ ಇದು ನಿರ್ದೇಶಕ ಸುಕುಮಾರ್‌ ಮಾಡಿಕೊಂಡ ಎಡವಟ್ಟಾ?

Pushpa 2: The Rule Postponed: ತೆಲುಗಿನ ಸ್ಟಾರ್‌ ನಿರ್ದೇಶಕ ಸುಕುಮಾರ್ ನಿರ್ದೇಶನದ ಮತ್ತು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2: ದಿ ರೂಲ್' ಸಿನಿಮಾ ತಂಡದಿಂದ ಶಾಕಿಂಗ್‌ ಸುದ್ದಿ ಹೊರಬಿದ್ದಿದೆ. ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಎಲ್ಲ ಸಿನಿಪ್ರೇಮಿಗಳು ಕಾಯುತ್ತಿರುವ ಈ ಸಿನಿಮಾ ಬಗ್ಗೆ ಇದೀಗ ಪ್ರೇಕ್ಷಕ ವಲಯದಲ್ಲಿ ನಿರಾಸೆ ಮೂಡಿದೆ. ಆಗಸ್ಟ್ 15ಕ್ಕೆ ಬಿಡುಗಡೆಯಾಗಬೇಕಿದ್ದ ಪುಷ್ಪ 2 ಸಿನಿಮಾವನ್ನು ಡಿಸೆಂಬರ್ 6ಕ್ಕೆ ಮುಂದೂಡಿದೆ ಚಿತ್ರತಂಡ. ಈ ಬಗ್ಗೆ ಅಧಿಕೃತ ಘೋಷಣೆ ಕೂಡ ಮಾಡಲಾಗಿದೆ. ಆದರೆ, ಇದರಿಂದ ಚಿತ್ರತಂಡಕ್ಕೇ ಹೆಚ್ಚಿನ ಹೊರೆ!

ಹೆಚ್ಚುವರಿ 40 ಕೋಟಿ ವೆಚ್ಚ!

ಪುಷ್ಪ '2: ದಿ ರೂಲ್' ಅನ್ನು ನವೀನ್ ಯೆರ್ನೇನಿ ಮತ್ತು ರವಿಶಂಕರ್ ಅವರು ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಸುಮಾರು ನಾಲ್ಕು ತಿಂಗಳ ಕಾಲ ಈ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದ್ದು, ಇದರ ಪರಿಣಾಮ ನಿರ್ಮಾಪಕರ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಮುಂದೂಡಿಕೆಯಿಂದಾಗಿ ಈ ಚಿತ್ರಕ್ಕೆ ಹೆಚ್ಚುವರಿಯಾಗಿ ಸುಮಾರು ರೂ.40 ಕೋಟಿ ವೆಚ್ಚವಾಗಲಿದೆ ಎಂದು ಟಾಲಿವುಡ್‌ ಮೂಲಗಳು ತಿಳಿಸಿವೆ ಎಂದು OTT ಪ್ಲೇ ವರದಿ ಮಾಡಿದೆ. ಪುಷ್ಪ 2 ಚಿತ್ರ ಸುಮಾರು 350 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಸಿನಿಮಾ.

ಟ್ರೆಂಡಿಂಗ್​ ಸುದ್ದಿ

50 ದಿನದ ಶೂಟಿಂಗ್‌ ಬಾಕಿ

ಪುಷ್ಪ 2 ಚಿತ್ರೀಕರಣಕ್ಕೆ ಇನ್ನೂ 50 ದಿನ ಬಾಕಿ ಇದೆ. ಕೆಲವು ದೃಶ್ಯಗಳನ್ನು ರೀಶೂಟ್ ಮಾಡುತ್ತಿದೆಯಂತೆ ಚಿತ್ರತಂಡ. ಇದರಿಂದಾಗಿ ಈ ಸಿನಿಮಾದ ಬಿಡುಗಡೆಯನ್ನು ಮುಂದೂಡಬೇಕಾಗಿದೆ. ಆದರೆ, ಈಗಾಗಲೇ ಚಿತ್ರಕ್ಕಾಗಿ ಹಾಕಲಾಗಿರುವ ಬೃಹತ್ ಸೆಟ್‌ಗಳನ್ನು ಇನ್ನೂ ಹೆಚ್ಚು ಕಾಲ ಮುಂದುವರಿಸಬೇಕಾಗಿದೆ. ಕೆಲ ನಟರ ಡೇಟ್ಸ್ ಕೂಡ ಈ ಸಿನಿಮಾಕ್ಕೆ ಹೊಂದಾಣಿಕೆ ಆಗಿಲ್ಲ. ಅವರ ಹೊಸ ಡೇಟ್ಸ್‌ ಸಿಕ್ಕ ಬಳಿಕ ಮತ್ತೆ ಶೂಟಿಂಗ್‌ ನಡೆಯಲಿದೆಯಂತೆ. ಇದರಿಂದಾಗಿ ನಿರ್ಮಾಪಕರಿಗೆ ಸುಮಾರು 40 ಕೋಟಿ ಹೆಚ್ಚುವರಿ ಬಜೆಟ್ ಹೊರೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಪರೋಕ್ಷವಾಗಿ ನಿರ್ದೇಶಕರೇ ಈ ಬೆಳವಣಿಗೆಗೆ ಕಾರಣ ಎಂಬ ಮಾತೂ ಕೇಳಿಬಂದಿದೆ.

ಡಿಸೆಂಬರ್‌ 6ಕ್ಕೆ ರಿಲೀಸ್

2021ರಲ್ಲಿ ಬಿಡುಗಡೆಯಾದ ಪುಷ್ಪ ಚಿತ್ರವು ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ದೊಡ್ಡ ಬ್ಲಾಕ್‌ಬಸ್ಟರ್‌ ಆಯಿತು. ಅದರಂತೆ ಪುಷ್ಪ 2: ದಿ ರೂಲ್ ಸಿನಿಮಾ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹೆಚ್ಚಿಸಿಕೊಂಡಿದೆ. ಹಾಗಾಗಿಯೇ ನಿರ್ದೇಶಕ ಸುಕುಮಾರ್ ಈ ಸಿನಿಮಾದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಯಾವುದೇ ತಪ್ಪುಗಳಿಲ್ಲದೆ ಹೆಚ್ಚಿನ ಕಾಳಜಿಯಿಂದ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಮೂಲಗಳ ಪ್ರಕಾರ, ಅಲ್ಲು ಅರ್ಜುನ್ ಮತ್ತು ನಿರ್ಮಾಪಕರು ಆಗಸ್ಟ್ 15ಕ್ಕೆ ಈ ಚಿತ್ರವನ್ನು ಬಿಡುಗಡೆ ಮಾಡಲು ಬಯಸಿದ್ದರು. ಆದರೆ ಇನ್ನೂ 50 ದಿನದ ಶೂಟಿಂಗ್‌ ಬಾಕಿ ಇರುವುದರಿಂದ, ಬಿಡುಗಡೆಯನ್ನು ಡಿಸೆಂಬರ್‌ 6ಕ್ಕೆ ಮುಂದೂಡಲಾಗಿದೆ.

ಪ್ರೇಕ್ಷಕರಿಗೆ ಉತ್ತಮವಾದದ್ದನ್ನು ನೀಡುವುದು ತಮ್ಮ ಗುರಿಯಾಗಿದೆ ಎಂದು ತಯಾರಕರು ಬಹಿರಂಗಪಡಿಸಿದ್ದಾರೆ. ಶೂಟಿಂಗ್ ಇನ್ನೂ ಬಾಕಿ ಇರುವ ಕಾರಣ ಪುಷ್ಪ 2 ಅನ್ನು ಮುಂದೂಡಲಾಗುತ್ತಿದೆ. ಪುಷ್ಪ 2 ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದ್ದು, ದೇವಿ ಶ್ರೀಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಎದುರು ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಫಹಾದ್ ಫಾಸಿಲ್, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು ಮತ್ತು ಸುನೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.