ಕನ್ನಡ ಸುದ್ದಿ  /  ಮನರಂಜನೆ  /  ಅಲ್ಲು ಅರ್ಜುನ್‌ಗೆ ಈಗ ವಯಸ್ಸೆಷ್ಟು? ಇನಿಯನ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ ಅಲ್ಲು ಸ್ನೇಹ

ಅಲ್ಲು ಅರ್ಜುನ್‌ಗೆ ಈಗ ವಯಸ್ಸೆಷ್ಟು? ಇನಿಯನ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ ಅಲ್ಲು ಸ್ನೇಹ

Allu Arjun Birthday: ಏಪ್ರಿಲ್‌ 8 ಅಲ್ಲು ಅರ್ಜುನ್‌ ಹುಟ್ಟುಹಬ್ಬ. ನಿನ್ನೆ ರಾತ್ರಿಯೇ ಅಲ್ಲು ಅರ್ಜುನ್‌ ಹುಟ್ಟುಹಬ್ಬದ ಪಾರ್ಟಿಯನ್ನು ಹೈದರಾಬಾದ್‌ನ ತಮ್ಮ ಮನೆಯಲ್ಲಿ ಪತ್ನಿ ಅಲ್ಲು ಸ್ನೇಹ ಆಯೋಜಿಸಿದ್ದರು. ಅಂದಹಾಗೆ, ಅಲ್ಲು ಅರ್ಜುನ್‌ಗೆ ಈಗ 42 ವರ್ಷದ ಹುಟ್ಟುಹಬ್ಬ.

ಅಲ್ಲು ಅರ್ಜುನ್‌ ಹುಟ್ಟುಹಬ್ಬ
ಅಲ್ಲು ಅರ್ಜುನ್‌ ಹುಟ್ಟುಹಬ್ಬ

ಬೆಂಗಳೂರು: ಟಾಲಿವುಡ್‌ನ ಜನಪ್ರಿಯ ನಟ ಅಲ್ಲು ಅರ್ಜುನ್‌ಗೆ ಇಂದು (ಏಪ್ರಿಲ್‌ 8) 42ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಭಾನುವಾರ ರಾತ್ರಿ ಅರ್ಜುನ್‌ ಪತ್ನಿ ಅಲ್ಲು ಸ್ನೇಹ ಅವರು ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಬರ್ತ್‌ಡೇ ಪಾರ್ಟಿ ಆಯೋಜಿಸಿದ್ದಾರೆ. ಈ ಹುಟ್ಟುಹಬ್ಬದ ಪಾರ್ಟಿಯಲ್ಲಿ ಅವರ ಆತ್ಮೀಯ ಬಂಧುಗಳು, ಸ್ನೇಹಿತರು ಭಾಗವಹಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಅಲ್ಲು ಅರ್ಜುನಾ ಹುಟ್ಟುಹಬ್ಬ

ಸ್ನೇಹ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹುಟ್ಟುಹಬ್ಬದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲು ಅರ್ಜುನ್‌ ಅವರ ಸಾಧನೆಗಳನ್ನು ಬಿಂಬಿಸುವಂತೆ ಬರ್ತ್‌ಡೇ ಕೇಕ್‌, ಇತರೆ ಡೆಕೊರೆಷನ್‌ ಮಾಡಲಾಗಿತ್ತು. ಇತ್ತೀಚೆಗೆ ದುಬೈನಲ್ಲಿ ಅಲ್ಲು ಅರ್ಜುನ್‌ ಅವರ ಮೇಣದ ಕೇಕ್‌ ಲಾಂಚ್‌ ಮಾಡಲಾಗಿತ್ತು. ಇದೇ ರೀತಿಯ ವಿನ್ಯಾಸ ಕೇಕ್‌ನಲ್ಲಿತ್ತು. ಅಲಾ ವೈಕುಂಟಪುರುಮಲ್ಲೊ ಸಿನಿಮಾದ ಅಲ್ಲು ಅರ್ಜುನ್‌ ಅವರ ಪ್ರೀತಿಯ ಕೆಂಪು ಜಾಕೆಟ್‌, ಪುಷ್ಪಾ ಸಿನಿಮಾದ ಗೆಸ್ಚರ್‌ ಎಲ್ಲವನ್ನೂ ಕಾಣಬಹುದು.

ಮತ್ತೊಂದು ಚಿತ್ರದಲ್ಲಿ ಮೂರು ಅಂತಸ್ತಿನ ಹುಟ್ಟುಹಬ್ಬದ ಬರ್ತ್‌ಡೇ ಕೇಕ್‌ ಇತ್ತು. ಬಿಳಿ ಮತ್ತು ಚಿನ್ನದ ಬಣ್ಣದ ಕೇಕ್‌ನಲ್ಲೂ ಅಲ್ಲು ಅರ್ಜುನ್‌ ಮತ್ತು ಅವರ ಮೇಣದ ಪ್ರತಿಮೆಯ ಚಿತ್ರ ಕಾಣಬಹುದು. ಅಲ್ಲು ಅರ್ಜುನ್‌ ಹುಟ್ಟುಹಬ್ಬಕ್ಕೆ ಸ್ನೇಹ ಅವರು ಸುಂದರವಾದ ಬಿಳಿ ಕಟೌಟ್‌ ಡ್ರೆಸ್‌ ತೊಟ್ಟಿದ್ದರು. ತನ್ನ ಪತಿಗೆ ಬೋನ್ಸಾಯಿ ಉಡುಗೊರೆ ನೀಡಿದ್ದಾರೆ. "ಪುಟ್ಟಿನಂದುಕ್‌ ಥ್ಯಾಂಕ್ಸ್‌ ಬಾವಾ" ಎಂದು ಕ್ಯಾಪ್ಷನ್‌ ಕೂಡ ಸ್ನೇಹ ಅವರ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕಾಣಬಹುದು.

ಅಲ್ಲು ಅರ್ಜುನ್‌ ಹುಟ್ಟುಹಬ್ಬ
ಅಲ್ಲು ಅರ್ಜುನ್‌ ಹುಟ್ಟುಹಬ್ಬ

ಅಲ್ಲು ಅರ್ಜುನ್‌ ಅಭಿಮಾನಿಗಳು ನಿನ್ನೆ ಸಂಜೆಯಿಂದಲೇ ತನ್ನ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತಿದ್ದಾರೆ. ಮಧ್ಯರಾತ್ರಿ ನಟ ಅಲ್ಲು ಅರ್ಜುನ್‌ ಮನೆಯಿಂದ ಹೊರಕ್ಕೆ ಬಂದು ತನ್ನ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಪುಷ್ಪ 2: ದಿ ರೂಲ್‌ ಸಿನಿಮಾದ ಟೀಸರ್‌

ಸುಕುಮಾರ್‌ ನಿರ್ದೇಶನದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ದಿ ರೂಲ್‌ ಸಿನಿಮಾದ ಟೀಸರ್‌ ಇಂದು ಬಿಡುಗಡೆಯಾಗಿದೆದೆ. ಇದು 2021ರ ಪುಷ್ಪ ದಿ ರೈಸ್‌ ಸಿನಿಮಾದ ಸೀಕ್ವೆಲ್‌ ಆಗಿದೆ. ಈ ಸಿನಿಮಾದ ನಟನೆಗಾಗಿ ಅಲ್ಲು ಅರ್ಜುನ್‌ಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿತ್ತು. ಪುಷ್ಪ ರಾಜ್‌ ಎಂಬ ಸಾಮಾನ್ಯ ಕೆಲಸಗಾರ ಸ್ಮಗ್ಲರ್‌ ಆಗಿ ಬದಲಾಗುವಂತಹ ಕಥೆಯನ್ನು ಪುಷ್ಪ ಹೊಂದಿದೆ.

ಈ ಸಿನಿಮಾದಲ್ಲಿ ರಶ್ಮಿಕಾ ಅವರು ಶ್ರೀವಲ್ಲಿಯಾಗಿ ನಟಿಸಿದ್ದಾರೆ. ಫಹಾದ ಫಾಸಿಲ್‌, ಜಗಪತಿ ಬಾಬು, ಅನಸೂಯ ಭಾರದ್ವಾಜ್‌, ಧನಂಜಯ್‌ ಮುಂತಾದ ಹಲವು ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ದೇವಿ ಶ್ರೀ ಪ್ರಸಾದ್‌ ಅವರ ಸಂಗೀತ ನಿರ್ದೇಶನವಿದೆ. ಪುಷ್ಪ ದಿ ರೂಲ್‌ ಸಿನಿಮಾವು ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ.

IPL_Entry_Point