ಕನ್ನಡ ಸುದ್ದಿ  /  Entertainment  /  Tollywood News Anatharu Baava Baamaida Kannada Movie Actress Rambha Celebrating Her 47th Birthday In Canada Toronto Rsm

Rambha Birthday: ಒಂಟಿ ಒಂಟಿಯಾಗಿರುವುದು ಬೋರೋ ಬೋರು ಎಂದ ಬಾವ ಬಾಮೈದ ಸಿನಿಮಾ ನಟಿ ರಂಭಾಗೆ ಇಂದು 47ನೇ ಹುಟ್ಟುಹಬ್ಬದ ಸಂಭ್ರಮ

ಕನ್ನಡದಲ್ಲಿ ರಂಭಾ ಮೊದಲು ನಟಿಸಿದ್ದು 1993ರಲ್ಲಿ ತೆರೆ ಕಂಡ 'ಸರ್ವರ್‌ ಸೋಮಣ್ಣ' ಸಿನಿಮಾದಲ್ಲಿ. ಅನಾಥರು ಚಿತ್ರದಲ್ಲಿ ರಂಭಾ ಅತಿಥಿ ಪಾತ್ರದಲ್ಲಿ ಹಾಡೊಂದರಲ್ಲಿ ಹೆಜ್ಜೆ ಹಾಕಿದರು. ಇದರ ನಂತರ ಮತ್ತೆ ಅವರು ಕನ್ನಡದಲ್ಲಿ ಕಾಣಿಸಿಕೊಳ್ಳಲಿಲ್ಲ.

47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರಂಭಾ
47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರಂಭಾ

ಆಂಧ್ರ ಪ್ರದೇಶದಲ್ಲಿ ಹುಟ್ಟಿ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೆಂಗಾಳಿ, ಭೋಜ್‌ಪುರಿ, ಇಂಗ್ಲೀಷ್‌ ಭಾಷೆಗಳ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿಯಾಗಿ ಹೆಸರು ಮಾಡಿರುವ ನಟಿ ರಂಭಾ ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು, ಸಿನಿಮಾ ಗಣ್ಯರು ಮುದ್ದು ಹುಡುಗಿ ರಂಭಾಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.

ಆಂಧ್ರದ ವಿಜಯವಾಡಕ್ಕೆ ಸೇರಿದ ವಿಜಯಲಕ್ಷ್ಮಿ

ರಂಭಾ ಮೂಲ ಹೆಸರು ವಿಜಯಲಕ್ಷ್ಮಿ. ಈ ಸುಂದರಿ ಆಂಧ್ರ ಪ್ರದೇಶದ ವಿಜಯವಾಡದವರು. ಹುಟ್ಟಿದ್ದು 5 ಜೂನ್‌ 1976. ಬಾಲ್ಯದಿಂದಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ವಿಜಯಲಕ್ಷ್ಮಿ 7ನೇ ಕ್ಲಾಸ್‌ ಓದುವಾಗ ನಾಟಕವೊಂದರಲ್ಲಿ ದೇವರ ಪಾತ್ರದಲ್ಲಿ ಮಿಂಚಿದ್ದರು. ರಂಭಾ ನಟನೆ ನೋಡಿದ ನಿರ್ದೇಶಕ ಹರಿಹರನ್‌ ಪೋಷಕರನ್ನು ಒಪ್ಪಿಸಿ ಆಕೆಯನ್ನು ಸಿನಿಮಾ ರಂಗಕ್ಕೆ ಕರೆ ತಂದರು.

ಮಲಯಾಳಂ ಸಿನಿಮಾ ಮೂಲಕ ಸಿನಿರಂಗಕ್ಕೆ ಬಂದ ರಂಭಾ

'ಸರ್‌ಗಮ್‌' ಎಂಬ ಸಿನಿಮಾ ಮೂಲಕ ರಂಭಾ ಸಿನಿಪಯಣ ಆರಂಭಿಸಿದರು. ಚಿತ್ರರಂಗಕ್ಕೆ ಬಂದ ನಂತರ ಆಕೆಯ ಹೆಸರನ್ನು ಅಮೃತ ಎಂದು ಬದಲಿಸಲಾಯ್ತು. ನಂತರ ತೆಲುಗಿನ 'ಆ ಒಕ್ಕಟಿ ಅಡಕ್ಕು' ಎಂಬ ಸಿನಿಮಾದಲ್ಲಿ ರಂಭಾ ನಟಿಸಿದರು. ಈ ಸಿನಿಮಾದಲ್ಲಿ ಆಕೆ ರಂಭಾ ಹೆಸರಿನ ಪಾತ್ರದಲ್ಲಿ ನಟಿಸಿದರು. ನಂತರ ತಮ್ಮ ಹೆಸರನ್ನು ರಂಭಾ ಎಂದೇ ಬದಲಿಸಿಕೊಂಡರು. ಅಲ್ಲಿಂದ ಆಕೆ ತಿರುಗಿ ನೋಡಿದ್ದೇ ಇಲ್ಲ. ಒಂದರ ಹಿಂದೊಂದರಂತೆ ಆಕೆಗೆ ಅವಕಾಶಗಳು ಹುಡುಕಿ ಬಂದವು. ಚಿಕ್ಕ ವಯಸ್ಸಿನಲ್ಲೇ ರಂಭಾ ಹಣ, ಹೆಸರು , ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದರು.

ಕನ್ನಡದಲ್ಲಿ ರಂಭಾ ನಟಿಸಿದ ಸಿನಿಮಾಗಳಿವು

ಕನ್ನಡದಲ್ಲಿ ರಂಭಾ ಮೊದಲು ನಟಿಸಿದ್ದು 1993ರಲ್ಲಿ ತೆರೆ ಕಂಡ 'ಸರ್ವರ್‌ ಸೋಮಣ್ಣ' ಸಿನಿಮಾದಲ್ಲಿ. ಜಗ್ಗೇಶ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ರಂಭಾ ಜೋಡಿಯಾಗಿ ಅಭಿಜಿತ್‌ ನಟಿಸಿದ್ದರು. ನಂತರ ಕೆಂಪಯ್ಯ ಐಪಿಎಸ್‌, ಓ ಪ್ರೇಮವೇ, ಪಾಂಚಾಲಿ, ಭಾವ ಬಾಮೈದ, ಸಾಹುಕಾರ, ಪಾಂಡುರಂಗ ವಿಠಲ, ಗಂಡುಗಲಿ ಕುಮಾರ ರಾಮ, ಸಿನಿಮಾಗಳಲ್ಲಿ ನಟಿಸಿದರು. 2007ರಲ್ಲಿ ತೆರೆ ಕಂಡ ಅನಾಥರು ಚಿತ್ರದಲ್ಲಿ ರಂಭಾ ಅತಿಥಿ ಪಾತ್ರದಲ್ಲಿ ಹಾಡೊಂದರಲ್ಲಿ ಹೆಜ್ಜೆ ಹಾಕಿದರು. ಇದರ ನಂತರ ಮತ್ತೆ ಅವರು ಕನ್ನಡದಲ್ಲಿ ಕಾಣಿಸಿಕೊಳ್ಳಲಿಲ್ಲ.

ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ

ಚಿತ್ರರಂಗದಲ್ಲಿ ಇನ್ನೂ ಬೇಡಿಕೆ ನಟಿಯಾಗಿರುವಾಗಲೇ ರಂಭಾ 8 ಏಪ್ರಿಲ್‌ 2010 ರಂದು ತಿರುಮಲದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ರಂಭಾ ಪತಿ ಇಂದ್ರಕುಮಾರ್‌ ಪದ್ಮನಾಭನ್‌ ಕೆನಾಡದಲ್ಲಿ ಬ್ಯುಸ್ನೆಸ್‌ ಮ್ಯಾನ್‌ ಆಗಿ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಪತಿ ಹಾಗೂ ಮಕ್ಕಳೊಂದಿಗೆ ರಂಭಾ ಟೊರೊಂಟೋದಲ್ಲಿ ನೆಲೆಸಿದ್ದಾರೆ. ಹುಟ್ಟುಹಬ್ಬ ಕೂಡಾ ಅಲ್ಲೇ ಆಚರಿಸಿಕೊಂಡಿದ್ದಾರೆ.

ರಂಭಾಗೆ ಇಬ್ಬರು ಹೆಣ್ಣು ಮೂವರು ಗಂಡು ಮಕ್ಕಳು. ಈಗಲೂ ರಂಭಾ ಸೋಷಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ವಿದೇಶದಲ್ಲಿದ್ದರೂ ರಂಭಾ ತಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯನ್ನು ಕಲಿಸುತ್ತಿದ್ದಾರೆ. ಮಕ್ಕಳಿಗೆ ಟ್ರೆಡಿಷನಲ್‌ ಡ್ರೆಸ್‌ ತೊಡಿಸಿ ತೆಗೆಸಿರುವ ಅನೇಕ ಫೋಟೋಗಳನ್ನು ರಂಭಾ ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ನಲ್ಲಿ ನೋಡಬಹುದು. 2010ರಲ್ಲಿ ತೆರೆ ಕಂಡ ತಮಿಳಿನ ಪೆಣ್‌ ಸಿಂಗಮ್‌ ರಂಭಾ ನಟಿಸಿದ ಕೊನೆಯ ಸಿನಿಮಾ ಮದುವೆ ನಂತರ ಆಕೆ ನಟನೆಯಿಂದ ಸಂಪೂರ್ಣ ದೂರಾದರು.

IPL_Entry_Point