ಕನ್ನಡ ಸುದ್ದಿ  /  ಮನರಂಜನೆ  /  ರೇವ್‌ ಪಾರ್ಟಿ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರ ದಾಳಿ; ತೆಲುಗು ನಟಿಯರು, ಮಾಡೆಲ್‌ಗಳು, ಆರ್‌ಜೆಗಳು, ರಾಜಕಾರಣಿಗಳು ಭಾಗಿ? ಇಲ್ಲಿದೆ ವಿವರ

ರೇವ್‌ ಪಾರ್ಟಿ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರ ದಾಳಿ; ತೆಲುಗು ನಟಿಯರು, ಮಾಡೆಲ್‌ಗಳು, ಆರ್‌ಜೆಗಳು, ರಾಜಕಾರಣಿಗಳು ಭಾಗಿ? ಇಲ್ಲಿದೆ ವಿವರ

ತೆಲುಗು ನಟಿಯರು, ಮಾಡೆಲ್‌ಗಳು, ಜನಪ್ರಿಯ ಡಿಜೆಗಳು ಭಾಗವಹಿಸಿದ್ದಾರೆ ಎನ್ನಲಾದ ಬೃಹತ್‌ ರೇವ್‌ ಪಾರ್ಟಿ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದ್ದು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಕಾರಣಿಗಳು, ಟೆಕಿಗಳು ಕೂಡ ಈ ರೇವ್‌ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ.

ತೆಲುಗು ನಟಿಯರು, ಮಾಡೆಲ್‌ಗಳು, ಆರ್‌ಜೆಗಳು, ರಾಜಕಾರಣಿಗಳು ಭಾಗಿಯಾಗಿದ್ದ ರೇವ್‌ ಪಾರ್ಟಿ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರ ದಾಳಿ
ತೆಲುಗು ನಟಿಯರು, ಮಾಡೆಲ್‌ಗಳು, ಆರ್‌ಜೆಗಳು, ರಾಜಕಾರಣಿಗಳು ಭಾಗಿಯಾಗಿದ್ದ ರೇವ್‌ ಪಾರ್ಟಿ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರ ದಾಳಿ

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿಯ ಜಿಆರ್‌ ಫಾರ್ಮ್‌ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್‌ಪಾರ್ಟಿ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಕೆಲವು ತೆಲುಗು ನಟಿಯರು, ಮಾಡೆಲ್‌ಗಳು ಕೂಡ ಭಾಗಿಯಾಗಿದ್ದರು ಎಂದು ವರದಿಗಳು ಹೇಳಿವೆ. ಬೆಂಗಳೂರಿನಲ್ಲಿ ಮತ್ತೆ ಸಿನಿಮಾ ತಾರೆಯರನ್ನು ಒಳಗೊಂಡ ರೇವ್‌ ಪಾರ್ಟಿ ಸದ್ದು ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಬೆಳಗ್ಗಿನ ಜಾವ 3 ಗಂಟೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಿಸಿಬಿ ಪೊಲೀಸರು ಎಂಡಿಎಂಎ ಮಾತ್ರೆಗಳು, ಕೊಕೈನ್‌ ವಶಪಡಿಸಿಕೊಂಡಿದ್ದಾರೆ. ಹೈದರಾಬಾದ್‌ ಮೂಲದ ವಾಸು ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಜಿಆರ್‌ ಫಾರ್ಮ್‌ ಹೌಸ್‌ನಲ್ಲಿ ಈ ಪಾರ್ಟಿ ಆಯೋಜಿಸಿದ್ದರು. ಹಲವು ಸಿನಿಮಾ ಸೆಲೆಬ್ರಿಟಿಗಳೂ ಈ ರೇವ್‌ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಈ ಪಾರ್ಟಿಗೆ ಸನ್‌ಸೆಟ್‌ ಟು ಸನ್‌ರೈಸ್‌ ಎಂದು ಹೆಸರಿಡಲಾಗಿತ್ತು. ಅಂದರೆ, ಸಂಜೆ 5 ಗಂಟೆಯಿಂದ ಪೂರ್ವಾಹ್ನ 5 ಗಂಟೆಯವರೆಗೆ ಈ ರೇವ್‌ ಪಾರ್ಟಿ ಆಯೋಜಿಸಲು ಉದ್ದೇಶಿಸಲಾಗಿತ್ತು.

ಈ ರೇವ್‌ ಪಾರ್ಟಿಯಲ್ಲಿ ಹೈದರಾಬಾದ್‌ ಮತ್ತು ಬೆಂಗಳೂರಿನ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಕೆಲವು ತೆಲುಗು ನಟಿಯರು, ಸೀರಿಯಲ್‌ ನಟಿಯರು, ಮಾಡೆಲ್‌ಗಳೂ ಕೂಡ ಭಾಗವಹಿಸಿದ್ದರು ಎನ್ನಲಾಗುತ್ತಿದೆ. ಈ ರೇವ್‌ ಪಾರ್ಟಿಗೆ ದಾಳಿ ಮಾಡುವ ಸಮಯದಲಿ 25ಕ್ಕೂ ಹೆಚ್ಚು ಯುವತಿಯರು ಪತ್ತೆಯಾಗಿದ್ದರು. ಮಾಡೆಲ್‌ಗಳು, ಟೆಕ್ಕಿಗಳು ಕೂಡ ಭಾಗವಹಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ನಟಿಯರು, ಮಾಡೆಲ್‌ಗಳ ವಿವರ ಸೇರಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ವರದಿಗಳ ಪ್ರಕಾರ ಈ ರೇವ್‌ ಪಾರ್ಟಿ ಆಯೋಜಕರು ಆಂಧ್ರಪ್ರದೇಶದಿಂದ ವಿಮಾನದ ಮೂಲಕ ಈ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದರಂತೆ. ಸುಮಾರು 50 ಲಕ್ಷ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿ ಒಂದು ದಿನದ ರೇವ್‌ ಪಾರ್ಟಿ ಆಯೋಜಿಸಲಾಗಿತ್ತಂತೆ. ಗೋಪಾಲ ರೆಡ್ಡಿ ಎಂಬವರ ಮಾಲೀಕತ್ವದ ಫಾರ್ಮ್‌ ಹೌಸ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ಎಂಎಲ್‌ಎಗೆ ಸೇರಿದ ಮರ್ಸಿಡಿಸ್‌ ಬೆಂಝ್‌ ಕಾರು ಮತ್ತು ಪಾಸ್‌ಪೋರ್ಟ್‌ ಕೂಡ ಸಿಸಿಬಿ ಪೊಲೀಸರಿಗೆ ದೊರಕಿದೆ ಎಂದು ಏಷ್ಯಾನೇಟ್‌ ನ್ಯೂಸ್‌ ವರದಿ ಮಾಡಿದೆ. ಈ ಪಾಸ್‌ಪೋರ್ಟ್‌ ಎಂಎಲ್‌ಎ ಕಾಕಣಿ ಗೋವರ್ಧನ್‌ ರೆಡ್ಡಿಗೆ ಸೇರಿದ್ದು ಎನ್ನಲಾಗಿದೆ. ಹೆಚ್ಚುವರಿಯಾಗಿ ಹದಿನೈದಕ್ಕೂ ಹೆಚ್ಚು ದುಬಾರಿ ಕಾರುಗಳು ಪಾರ್ಕಿಂಗ್‌ ಮಾಡಲಾಗಿತ್ತು. ಮರ್ಸಿಡಿಸ್‌ ಬೆಂಝ್‌, ಜಾಗ್ವಾರ್‌, ಆಡಿ ಕಾರುಗಳು ಘಟನೆ ನಡೆದ ಸ್ಥಳದಲ್ಲಿ ದೊರಕಿವೆ. ಈ ಕಾರುಗಳ ಮಾಲೀಕರನ್ನು ಹುಡುಕಿದಾಗ ರೇವ್‌ ಪಾರ್ಟಿಯಲ್ಲಿ ಭಾಗವಹಿಸಿದ ಇನ್ನಿತರ ವಿವರವೂ ದೊರಕಲಿದೆ.

ಅವಧಿ ಮೀರಿ ರೇವ್‌ ಪಾರ್ಟಿ ನಡೆಯುತ್ತಿರುವ ಸೂಚನೆ ದೊರಕಿದಾಗ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲಿ ಮಾದಕ ವಸ್ತುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ರೇವ್‌ ಪಾರ್ಟಿಯಲ್ಲಿ ಜನಪ್ರಿಯ ಡಿಜಿಎಗಳಾದ ರಾಬ್ಸ್‌, ಕಾಯ್ವಿ, ಬ್ಲಡಿ ಮಸ್ಕರಾ ಮುಂತಾದವರೂ ಭಾಗಿಯಾಗಿದ್ದರು ಎನ್ನಲಾಗಿದೆ. ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಟಿ20 ವರ್ಲ್ಡ್‌ಕಪ್ 2024