ಕನ್ನಡ ಸುದ್ದಿ  /  ಮನರಂಜನೆ  /  ರೇವ್‌ ಪಾರ್ಟಿಯಲ್ಲಿ ಸಿಕ್ಕಿಬಿದ್ದಾಗ ನನ್ನೆಸ್ರು ಕೃಷ್ಣವೇಣಿ ಎಂದು ಹೇಳಿ ಬೆಂಗಳೂರು ಪೊಲೀಸರ ದಾರಿ ತಪ್ಪಿಸಿದ್ರಂತೆ ತೆಲುಗು ನಟಿ ಹೇಮಾ

ರೇವ್‌ ಪಾರ್ಟಿಯಲ್ಲಿ ಸಿಕ್ಕಿಬಿದ್ದಾಗ ನನ್ನೆಸ್ರು ಕೃಷ್ಣವೇಣಿ ಎಂದು ಹೇಳಿ ಬೆಂಗಳೂರು ಪೊಲೀಸರ ದಾರಿ ತಪ್ಪಿಸಿದ್ರಂತೆ ತೆಲುಗು ನಟಿ ಹೇಮಾ

ಬೆಂಗಳೂರು ರೇವ್‌ ಪಾರ್ಟಿ ಪ್ರಕರಣದಲ್ಲಿ ನಟಿ ಹೇಮಾ ಸಿಸಿಬಿ ಪೊಲೀಸರಿಗೆ ಗೊಂದಲ ಉಂಟುಮಾಡಿದ್ದರು. ರೈಡ್‌ ಆದ ಸಂದರ್ಭದಲ್ಲಿ ತನ್ನ ಹೆಸರು ಕೃಷ್ಣವೇಣಿ ಎಂದು ನೀಡಿರುವುದು ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿತ್ತು. ನಟಿ ಆಶಿ ರಾಯ್‌ ಕೂಡ ರೇವ್‌ ಪಾರ್ಟಿ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು.

ರೇವ್‌ ಪಾರ್ಟಿಯಲ್ಲಿ ಸಿಕ್ಕಿಬಿದ್ದಾಗ ನನ್ನೆಸ್ರು ಕೃಷ್ಣವೇಣಿ ಎಂದು ಹೇಳಿದ್ರಂತೆ ನಟಿ ಹೇಮಾ
ರೇವ್‌ ಪಾರ್ಟಿಯಲ್ಲಿ ಸಿಕ್ಕಿಬಿದ್ದಾಗ ನನ್ನೆಸ್ರು ಕೃಷ್ಣವೇಣಿ ಎಂದು ಹೇಳಿದ್ರಂತೆ ನಟಿ ಹೇಮಾ

ಬೆಂಗಳೂರು ರೇವ್‌ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಭಾಗವಹಿಸಿದ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. ರೇವ್‌ ಪಾರ್ಟಿ ನಡೆದ ದಿನದಂದು ಪಾರ್ಟಿಯಲ್ಲಿ ಟಾಲಿವುಡ್‌ ನಟಿ ಹೇಮಾ ಭಾಗವಹಿಸಿದ್ದಾರೆ ಎಂದು ಗುಲ್ಲೆದ್ದಿತ್ತು. ಆ ಸಮಯದಲ್ಲಿ ಯಾವುದೋ ಫಾರ್ಮ್‌ ಹೌಸ್‌ನಲ್ಲಿ ರಜಾ ದಿನಗಳನ್ನು ಕಳೆಯುತ್ತಿರುವಂತಹ ಲೈವ್‌ ವಿಡಿಯೋಗೆ ಬಂದು "ನಾನು ಇಲ್ಲಿದ್ದೇನೆ, ರೇವ್‌ ಪಾರ್ಟಿಯಲ್ಲಿ ನಾನೂ ಭಾಗವಹಿಸಿದೆ ಎಂದು ಸುಳ್ಳು ಸುದ್ದಿಗಳು ಹಬ್ಬುತ್ತಿವೆ" ಎಂದು ಅವಲತ್ತುಕೊಂಡಿದ್ದರು. ಆದರೆ, ಬೆಂಗಳೂರು ಪೊಲೀಸರು ನಟಿ ಹೇಮಾ ಭಾಗವಹಿಸಿದ್ದನ್ನು ಬಳಿಕ ಖಚಿತಗೊಳಿಸಿದ್ದರು. ರಕ್ತದ ಮಾದರಿ ಪರೀಕ್ಷೆಯಲ್ಲೂ ನಟಿ ಹೇಮಾ ಡ್ರಗ್ಸ್‌ ಸೇವನೆ ಮಾಡಿರುವುದು ಖಚಿತಗೊಂಡಿತ್ತು.

ಟ್ರೆಂಡಿಂಗ್​ ಸುದ್ದಿ

ಟಾಲಿವುಡ್‌ ನಟಿ ಹೇಮಾ ಬೆಂಗಳೂರು ರೇವ್‌ ಪಾರ್ಟಿಯಲ್ಲಿ ಭಾಗವಹಿಸಿರುವ ಕುರಿತು ಇಷ್ಟೊಂದು ಗೊಂದಲ ಏಕೆ ಮೂಡಿತು ಎಂಬ ಪ್ರಶ್ನೆಗೆ ಇದೀಗ ಉತ್ತರ ದೊರಕಿದೆ. ರೇವ್‌ ಪಾರ್ಟಿಗೆ ದಾಳಿ ನಡೆಸಿದ ವೇಳೆ ಹೇಮಾ ತೊಟ್ಟ ಉಡುಗೆಗೂ ಬಳಿಕ ಹೇಮಾ ಮಾಡಿರುವ ವಿಡಿಯೋದಲ್ಲೂ ಉಟ್ಟು ಉಡುಗೆಗೂ ಸಾಮ್ಯತೆ ಬೆಂಗಳೂರು ಪೊಲೀಸರಿಗೆ ಕಾಣಿಸಿತ್ತು. "ನಾನು ಭಾಗವಹಿಸಿಲ್ಲ" ಎಂದು ವಿಡಿಯೋದಲ್ಲಿ ಕಥೆ ಹೇಳಿದರೂ ರೇವ್‌ ಪಾರ್ಟಿಯಲ್ಲಿದ್ದದ್ದು ಈಕೆ ಎಂದು ಪೊಲೀಸರಿಗೆ ಮನದಟ್ಟಾಗಿತ್ತು.

ವರದಿಗಳ ಪ್ರಕಾರ ಬೆಂಗಳೂರು ರೇವ್‌ ಪಾರ್ಟಿಗೆ ದಾಳಿ ನಡೆಸಿದ ಸಂದರ್ಭದಲ್ಲಿ ಪೊಲೀಸರು ಎಲ್ಲರ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದರು. ಎಲ್ಲರ ಹೆಸರು ಮತ್ತು ವಿವರಗಳನ್ನೂ ಪಡೆದಿದ್ದರು. ದಯವಿಟ್ಟು ನನ್ನನ್ನು ಬಿಟ್ಟುಬಿಡುವಂತೆ ನಟಿ ಹೇಮಾ ಅಂಗಲಾಚಿದ್ದರಂತೆ. ಆದರೆ, ಪೊಲೀಸರು ಬಿಡದೆ ಇದ್ದಾಗ ತನ್ನ ಹೆಸರು ನೀಡುವ ಸಮಯದಲ್ಲಿ ನಟಿ ಹೇಮಾ ತನ್ನ ಹೆಸರು "ಕೃಷ್ಣವೇಣಿ" ಎಂದಿದ್ದರಂತೆ. ಹಾಗಂತ, ಇವರು ತನ್ನ ಹೆಸರಿನ ಕುರಿತು ಪೂರ್ತಿ ಸುಳ್ಳು ಹೇಳಿಲ್ಲ. ಹೇಮಾ ಅವರ ಮೂಲ ಹೆಸರು ಕೊಲ್ಲ ಕೃಷ್ಣವೇಣಿ. ಆದರೆ, ಆ ಹೆಸರು ಬಿಟ್ಟು ಹೇಮಾ ಹೆಸರಲ್ಲಿ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದರು. ಇವರ ಜನ್ಮ ದಾಖಲೆಗಳಲ್ಲೂ ಕೋಲ ಕೃಷ್ಣವೇಣಿ ಎಂಬ ಹೆಸರೇ ಇದೆ.

ಪೊಲೀಸರಿಗೆ ಹೆಸರು ನೀಡುವಾಗ ಹೇಮಾ ಎಂಬ ಹೆಸರು ನೀಡಿದರೆ ಎಲ್ಲರಿಗೂ ತಿಳಿಯುತ್ತದೆ ಎಂದು ಕೃಷ್ಣವೇಣಿ ಎಂಬ ಹೆಸರು ನೀಡಿದ್ದರು. ಇದಾದ ಬಳಿಕ ಹೊರಕ್ಕೆ ಬಂದು ರೇವ್‌ ಪಾರ್ಟಿಯಲ್ಲಿ ನಾನು ಭಾಗವಹಿಸಲೇ ಇಲ್ಲ ಎಂದು ವಿಡಿಯೋ ಮಾಡಿದ್ದರು. ಇವರು ತೆಲುಗು ಚಿತ್ರತಂಗಕ್ಕೆ 90ರ ದಶಕದಲ್ಲಿ ಆಗಮಿಸಿದ ಸಮಯದಲ್ಲಿಯೇ ಕೃಷ್ಣವೇಣಿ ಬದಲು ಹೇಮಾ ಎಂಬ ಹೆಸರು ಬಳಸುತ್ತಿದ್ದರು.

ಪೊಲೀಸರಿಗೆ ಹೆಸರು ನೀಡಿದಾಗ "ಕೃಷ್ಣವೇಣಿ" ಎಂದದ್ದು ಮತ್ತು ಮಾಧ್ಯಮಗಳಿಗೆ ಈಕೆ ಹೇಮಾ ಎಂದು ತಿಳಿಯಿತು. ಪೊಲೀಸರಿಗೂ ಈಕೆ ಕೃಷ್ಣವೇಣಿ ಎಂಬ ಹೆಸರು ನೀಡಿದ್ದರಿಂದ ಗೊಂದಲವಾಗಿತ್ತು. ಕೊನೆಗೆ ನಮ್ಮ ಜತೆ ನಟಿ ಹೇಮಾ "ಕೃಷ್ಣವೇಣಿ" ಹೆಸರಲ್ಲಿ ಆಟವಾಡಿದ್ದನ್ನು ಕಂಡುಕೊಂಡರು. ಟಾಲಿವುಡ್‌ ನಟಿ ಹೇಮಾರ ರಕ್ತದ ಮಾದರಿ ಪರೀಕ್ಷೆ ಪಾಸಿಟೀವ್‌ ಬಂದಿದೆ. ಹೀಗಾಗಿ ಈಕೆ ಬೆಂಗಳೂರು ರೇವ್‌ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವನೆ ಮಾಡಿರುವುದು ಖಚಿತವಾಗಿದೆ. ಈ ಕುರಿತು ಅಧಿಕೃತವಾಗಿ ಮಾಹಿತಿ ಹೊರಬಿದ್ದ ಬಳಿಕ ನಟಿ ಹೇಮಾ ಸೈಲೆಂಟ್‌ ಆಗಿದ್ದಾರೆ.

ಬೆಂಗಳೂರು ರೇವ್‌ ಪಾರ್ಟಿಯಲ್ಲಿ ನಟಿ ಹೇಮಾ ಮಾತ್ರವಲ್ಲದೆ ನಟಿ ಆಶಿ ರಾಯ್‌ ಕೂಡ ಪಾಲ್ಗೊಂಡಿದ್ದರು. ಇವರ ರಕ್ತದ ಮಾದರಿ ಪರೀಕ್ಷೆಯ ಫಲಿತಾಂಶವೂ ಪಾಸಿಟೀವ್‌ ಬಂದಿದ್ದು, ಡ್ರಗ್ಸ್‌ ಸೇವನೆ ಮಾಡಿರುವುದು ಋಜುವಾತಾಗಿದೆ. ಇದಕ್ಕೂ ಮೊದಲು "ನಾನು ಪಾರ್ಟಿಯಲ್ಲಿ ಭಾಗವಹಿಸಿದ್ದು ನಿಜ. ನನಗೆ ಅದು ರೇವ್‌ ಪಾರ್ಟಿ ಎಂದು ಗೊತ್ತಿರಲಿಲಿಲ್ಲ. ಅದು ಬರ್ತ್‌ಡೇ ಪಾರ್ಟಿ ಎಂದುಕೊಂಡಿದ್ದೆ. ಒಳಗೆ ನಾನು ಹೋಗಿರಲಿಲ್ಲ. ನಾನು ಚಿತ್ರರಂಗದಲ್ಲಿ ಚಿಕ್ಕವಳು. ಈಗಷ್ಟೇ ಅವಕಾಶ ಪಡೆಯುತ್ತಿದ್ದೇನೆ. ದಯವಿಟ್ಟು ನನ್ನನ್ನು ಕಾಪಾಡಿ" ಎಂದು ಭಯದಿಂದ ಸೋಷಿಯಲ್‌ ಮೀಡಿಯಾದ ಮುಂದೆ ಹೇಳಿದ್ದರು.

ಟಿ20 ವರ್ಲ್ಡ್‌ಕಪ್ 2024