ಕನ್ನಡ ಸುದ್ದಿ  /  ಮನರಂಜನೆ  /  ಬೆಂಗಳೂರು ರೇವ್‌ ಪಾರ್ಟಿ: ನಟಿ ಹೇಮಾ, ಆಶಿ ರಾಯ್‌ ಸೇರಿದಂತೆ 83 ಜನರ ರಕ್ತದ ಮಾದರಿ ಪಾಸಿಟೀವ್‌; ಡ್ರಗ್ಸ್‌ ಸೇವಿಸಿದ್ದು ದೃಢ

ಬೆಂಗಳೂರು ರೇವ್‌ ಪಾರ್ಟಿ: ನಟಿ ಹೇಮಾ, ಆಶಿ ರಾಯ್‌ ಸೇರಿದಂತೆ 83 ಜನರ ರಕ್ತದ ಮಾದರಿ ಪಾಸಿಟೀವ್‌; ಡ್ರಗ್ಸ್‌ ಸೇವಿಸಿದ್ದು ದೃಢ

Bengaluru Rave Party News: ಬೆಂಗಳೂರು ರೇವ್‌ ಪಾರ್ಟಿಗೆ ಸಂಬಂಧಪಟ್ಟಂತೆ ರಕ್ತ ಮತ್ತು ಮೂತ್ರದ ಮಾದರಿ ಪರೀಕ್ಷೆಯ ಫಲಿತಾಂಶ ಬಂದಿದೆ. ಟಾಲಿವುಡ್‌ ನಟಿಯರಾದ ಹೇಮಾ, ಆಶಿ ರಾಯ್‌ ಸೇರಿದಂತೆ 83 ಜನರ ರಕ್ತದ ಮಾದರಿ ಪಾಸಿಟೀವ್‌ ಬಂದಿದೆ.

ನಟಿ ಹೇಮಾ, ಆಶಿ ರಾಯ್‌ ಸೇರಿದಂತೆ 83 ಜನರ ರಕ್ತದ ಮಾದರಿ ಪಾಸಿಟೀವ್‌
ನಟಿ ಹೇಮಾ, ಆಶಿ ರಾಯ್‌ ಸೇರಿದಂತೆ 83 ಜನರ ರಕ್ತದ ಮಾದರಿ ಪಾಸಿಟೀವ್‌

ಬೆಂಗಳೂರು: ಬೆಂಗಳೂರು ರೇವ್‌ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊಸ ಅಪ್‌ಡೇಟ್‌ ಬಂದಿದೆ. ಈ ಪಾರ್ಟಿಯಲ್ಲಿ ಹಲವು ತೆಲುಗು ನಟಿ ನಟರು ಭಾಗವಹಿಸಿದ್ದಾರೆ. ಇದೀಗ ನಟಿ ಹೇಮಾ, ಆಶಿ ರಾಯ್‌ ಸೇರಿದಂತೆ 100 ಜನರಲ್ಲಿ 83 ಜನರ ರಕ್ತದ ಮಾದರಿಯ ಫಲಿತಾಂಶ "ಪಾಸಿಟೀವ್‌" ಬಂದಿದೆ. ಈ ಮೂಲಕ ನಾನು ರೇವ್‌ ಪಾರ್ಟಿಯಲ್ಲಿ ಭಾಗವಹಿಸಲೇ ಇಲ್ಲ ಎಂದ ನಟಿ ಹೇಮಾರ ಮಾತು ಸುಳ್ಳಾಗಿದೆ. ಅದು ರೇವ್‌ ಪಾರ್ಟಿ ಎಂದು ತಿಳಿದಿರಲಿಲ್ಲ, ಹುಟ್ಟುಹಬ್ಬದ ಪಾರ್ಟಿ ಎಂದು ಭಾಗವಹಿಸಿದ್ದೆ ಎಂದು ಹೇಳಿರುವ ನಟಿ ಆಶಿ ರಾಯ್‌ ಮಾತೂ ಸುಳ್ಳಾಗಿದೆ. ಆಕೆಯೂ ಡ್ರಗ್ಸ್‌ ಸೇವನೆ ಮಾಡಿರುವುದು ಈ ರಕ್ತದ ಪರೀಕ್ಷೆ ಮೂಲಕ ಸಾಬೀತಾಗಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಸಿಸಿಬಿ ಪೊಲೀಸರು ಇತ್ತೀಚೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಫಾರ್ಮ್‌ ಹೌಸ್‌ಗೆ ರೈಡ್‌ ಮಾಡಿದ್ದು, ಆ ಸಂದರ್ಭದಲ್ಲಿ ಅಲ್ಲಿದ್ದವರ ರಕ್ತದ ಮಾದರಿ ಸಂಗ್ರಹಿಸಿದ್ದರು. ಕರ್ನಾಟಕದ ಕೇಂದ್ರ ಅಪರಾಧ ವಿಭಾಗದ ಆಂಟಿ ನಾರ್ಕೊಟಿಕ್ಸ್‌ ವಿಭಾಗಕ್ಕೆ ಇದೀಗ ರಕ್ತದ ಫಲಿತಾಂಶ ದೊರಕಿದೆ. 73 ಪುರುಷರ ಮತ್ತು 30 ಮಹಿಳೆಯರ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ಇವರಲ್ಲಿ ಕ್ರಮವಾಗಿ 59 ಪುರುಷರ ಮತ್ತು 27 ಮಹಿಳೆಯರ ರಕ್ತದ ಮಾದರಿ ಪಾಸಿಟಿವ್‌ ಬಂದಿದೆ ಎಂದು ವರದಿಗಳು ತಿಳಿಸಿವೆ.

ಮೂವರು ತೆಲುಗು ನಟಿ ನಟರಾದ ಹೇಮಾ, ಚಿರಂಜೀವಿ, ಆಶಿ ರಾಯ್‌ ಅವರ ರಕ್ತದ ಮಾದರಿಗಳು ಪಾಸಿಟಿವ್‌ ಬಂದಿದೆ ಎಂದು ಸೆಂಟ್ರಲ್‌ ಕ್ರೈಮ್‌ ಬ್ರಾಂಚ್‌ ತಿಳಿಸಿದೆ. ಮುಂದಿನ ವಿಚಾರಣೆಗೆ ಹಾಜರಾಗುವಂತೆ ಈ ಮೂವರಿಗೆ ಕೇಂದ್ರ ಅಪರಾಧ ವಿಭಾಗವು ನೋಟಿಸ್‌ ಕಳುಹಿಸಲಿದೆ.

ರೇವ್‌ ಪಾರ್ಟಿ ಬಗ್ಗೆ ಆಶಿ ರಾಯ್‌ ಪ್ರತಿಕ್ರಿಯೆ

"ನಾನು ಪಾರ್ಟಿಯಲ್ಲಿ ಭಾಗವಹಿಸಿದ್ದೆ. ಆದರೆ, ಒಳಗೆ ಹೋಗಿರಲಿಲ್ಲ" ಎಂದು ಆಶಿ ರಾಯ್‌ ಹೇಳಿದ್ದರು. "ಇದು ಹುಟ್ಟುಹಬ್ಬದ ಪಾರ್ಟಿ. ನನಗೆ ಬೇರೇನೂ ಗೊತ್ತಿಲ್ಲ. ನನಗೆ ನೀವು ಬೆಂಬಲ ನೀಡಬೇಕು. "ನನಗೆ ಏನೂ ಗೊತ್ತಿರಲಿಲ್ಲ. ಹುಟ್ಟುಹಬ್ಬದ ಪಾರ್ಟಿಯೆಂದು ಭಾಗವಹಿಸಿದ್ದೆ. ನಾನು ಚಿಕ್ಕವಳು, ಸಹಾಯ ಮಾಡಿ. ನಾನು ಸಹೋದರ ಎಂದು ಪರಿಗಣಿಸುತ್ತಿದ್ದ ವ್ಯಕ್ತಿಯು ಆಯೋಜಿಸಿದ್ದ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದೆ. ಪಾರ್ಟಿಯ ಒಳಗೆ ಏನು ನಡೆದಿದೆ ಎಂದು ನನಗೆ ತಿಳಿದಿಲ್ಲ. ಪೊಲೀಸರು ನಮ್ಮನ್ನು ಕೂಡಿಹಾಕಿ ರಕ್ತದ ಮಾದರಿ ತೆಗೆದುಕೊಂಡು ಹೋಗಿದ್ದಾರೆ. ನನಗೆ ಇದರಿಂದ ಭಯವಾಗಿದೆ" ಎಂದು ಹೇಳಿದ್ದರು. ಇದೀಗ ಆಶಿ ರಾಯ್‌ ಕೂಡ ಡ್ರಗ್ಸ್‌ ಸೇವಿಸಿರುವುದು ಖಚಿತವಾಗಿದೆ.

ತೆಲುಗು ನಟಿ ಹೇಮಾ ಭಾಗಿ

ಈ ಮಧ್ಯೆ ತೆಲುಗು ನಟಿ ಹೇಮಾ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು ರೆಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಹೇಮಾ ಅವರು ಸ್ಪಷ್ಟನೆ ನೀಡಿ ನಾನು ನನ್ನ ಹೈದರಾಬಾದ್‌ನ ಫಾರ್ಮ್‌ ಹೌಸ್‌ ನಲ್ಲಿದ್ದೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದರು. ಆದರೆ, ಬಳಿಕ ಈಕೆ ರೇವ್‌ ಪಾರ್ಟಿಯಲ್ಲಿ ಭಾಗವಹಿಸಿದ್ದನ್ನು ಪೊಲೀಸರು ಖಚಿತಪಡಿಸಿದ್ದರು. ಇದೀಗ ಇವರು ಮಾದಕ ದ್ರವ್ಯ ಸೇವನೆ ಮಾಡಿರುವುದು ಖಚಿತವಾಗಿದೆ.

ಇತ್ತೀಚೆಗೆ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ರೇವ್‌ ಪಾಟ್ರಿ ಮೇಲೆ ದಾಳಿ ನಡೆಸಿದ್ದಾರೆ. ಆಂಧ್ರಪ್ರದೇಶದ ಖ್ಯಾತ ಉದ್ಯಮಿ ವಾಸು ಅವರ ಹುಟ್ಟು ಹಬ್ಬದ ಅಂಗವಾಗಿ ಈ ಪಾರ್ಟಿ ನಡೆಯುತ್ತಿತ್ತು. ದಾಳಿ ನಡೆದ ಸಂದರ್ಭದಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ಮತ್ತು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ಸಂದರ್ಭದಲ್ಲಿ ಆರೋಪಿಗಳಿಂದ 15.56 ಗ್ರಾಂ ಎಂಡಿಎಂಎ, 6.2 ಗ್ರಾಂ ಕೊಕೋನ್‌, 6 ಗ್ರಾಂ ಹೈಡ್ರೋ ಗಾಂಜಾ, 5 ಮೊಬೈಲ್‌ ಮತ್ತು 2 ವಾಹನಗಳನ್ನು ಜಪ್ತಿ ಮಾಡಲಾಗಿತ್ತು.

ಟಿ20 ವರ್ಲ್ಡ್‌ಕಪ್ 2024