ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ನಟನೆಯ 7 ಅತ್ಯುತ್ತಮ ಸಿನಿಮಾಗಳು: ಭೀಮ್ಲಾ ನಾಯಕ್‌ನಿಂದ ವಕೀಲ್ ಸಾಹೀಬ್‌ವರೆಗೆ ಇಲ್ಲಿದೆ ಲಿಸ್ಟ್
Pawan Kalyan best movies: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಪವನ್ ಕಲ್ಯಾಣ್ ಅವರು ನಟಿಸಿದ ಅತ್ಯುತ್ತಮ 7 ಚಲನಚಿತ್ರಗಳ ವಿವರ ಇಲ್ಲಿದೆ. ಬ್ಲಾಕ್‌ಬಸ್ಟರ್ ಭೀಮ್ಲಾ ನಾಯಕ್‌ನಿಂದ ಕಾನೂನು ಸಾಹಸ ಥ್ರಿಲ್ಲರ್ ಸಿನಿಮಾ ವಕೀಲ್ ಸಾಬ್‌ವರೆಗೆ ವಿವಿಧ ಸಿನಿಮಾಗಳ ವಿವರ ಇಲ್ಲಿ ನೀಡಲಾಗಿದ್ದು, ವಿವಿಧ ಒಟಿಟಿಗಳಲ್ಲಿ ಈ ಸಿನಿಮಾಗಳನ್ನು ನೋಡಬಹುದು.

ಬೆಂಗಳೂರು: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿದ್ದಾರೆ. ಭಾರತೀಯ ಚಿತ್ರರಂಗದ ಸಹೋದ್ಯೋಗಿಗಳಿಂದ ಪ್ರಶಂಸೆಗೆ ಪಾತ್ರರಾಗಿರುವ ನಟ-ರಾಜಕಾರಣಿ ಟಾಲಿವುಡ್‌ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವು ಆಕ್ಷನ್-ಥ್ರಿಲ್ಲರ್ ಮತ್ತು ಕಮರ್ಷಿಯಲ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಪವನ್ ಕಲ್ಯಾಣ್ ನಟನೆಯ ಅತ್ಯುತ್ತಮ ಏಳು ಸಿನಿಮಾಗಳ ವಿವರ ಇಲ್ಲಿ ನೀಡಲಾಗಿದೆ.
ವಕೀಲ್ ಸಾಬ್
ವೇಣು ಶ್ರೀರಾಮ್ ಬರೆದು ನಿರ್ದೇಶಿಸಿದ ತೆಲುಗು ಕಾನೂನು ಆಕ್ಷನ್-ಥ್ರಿಲ್ಲರ್ ವಕೀಲ್ ಸಾಬ್ 2021ರಲ್ಲಿ ತೆರೆಕಂಡಿತ್ತು. ನಿವೇತಾ ಥಾಮಸ್, ಅಂಜಲಿ ಮತ್ತು ಅನನ್ಯಾ ನಾಗಲ್ಲಾ ಅವರು ಪಲ್ಲವಿ, ಜರೀನಾ ಮತ್ತು ದಿವ್ಯಾ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ವಕೀಲ ಕೊನಿಡೆಲಾ ಸತ್ಯದೇವ್ ಪಾತ್ರವನ್ನು ಪವನ್ ಕಲ್ಯಾಣ್ ನಿರ್ವಹಿಸಿದ್ದಾರೆ. ಈ ಸಿನಿಮಾವು ಅಮಿತಾಬ್ ಬಚ್ಚನ್-ತಾಪ್ಸಿ ಪನ್ನು ಅಭಿನಯದ ಪಿಂಕ್ ಚಿತ್ರದ ರಿಮೇಕ್ ಇದಾಗಿದೆ. ಪಿತೃಪ್ರಧಾನ ಮನಸ್ಥಿತಿ ಮತ್ತು ಲಿಂಗ ಅಪರಾಧ ಪ್ರಕರಣಗಳಲ್ಲಿ ಕಾನೂನು ಮತ್ತು ಸಾಮಾಜಿಕ ಅಡೆತಡೆಗಳ ವಿಷಯಗಳನ್ನು ಒಳಗೊಂಡಿದೆ. ವಕೀಲ್ ಸಾಬ್ ವಿಶ್ವಾದ್ಯಂತ 137.65 ಕೋಟಿ ರೂಪಾಯಿ ಗಳಿಸಿದೆ. ಸಾಂಕ್ರಾಮಿಕ ರೋಗದ ನಂತರ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಪಡೆದು ಚಿತ್ರರಂಗಕ್ಕೆ ಉತ್ತಮ ಆರಂಭ ನೀಡಿತ್ತು. ಮೊದಲ ದಿನ 38 ಕೋಟಿ ರೂಪಾಯಿ ಗಳಿಸಿದೆ.
ಭೀಮ್ಲಾ ನಾಯಕ್ (2022)
ಭೀಮ್ಲಾ ನಾಯಕ್ ಆಕ್ಷನ್-ಥ್ರಿಲ್ಲರ್ ಆಗಿದ್ದು, ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾಗರ್ ಕೆ ಚಂದ್ರ ನಿರ್ದೇಶನದ ಈ ಚಿತ್ರದಲ್ಲಿ ಇವರಿಬ್ಬರು ಮಿತ್ರರಾಗಿದ್ದವರು ಮತ್ತೆ ವೈರಿಗಳಾಗಿ ಬದಲಾಗುತ್ತಾರೆ. ಸಂಯುಕ್ತಾ, ನಿತ್ಯಾ ಮೆನನ್ ಮತ್ತು ಮುರಲ್ ಶರ್ಮಾ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಬಿಜು ಮೆನನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ಮಲಯಾಳಂ ಆಕ್ಷನ್-ಥ್ರಿಲ್ಲರ್ ಅಯ್ಯಪ್ಪನುಮ್ ಕೋಶಿಯುಮ್ (2020) ನ ಅಧಿಕೃತ ರಿಮೇಕ್ ಆಗಿದೆ. ಭೀಮ್ಲಾ ನಾಯಕ್ ವಿಶ್ವಾದ್ಯಂತ 148.6 ಕೋಟಿ ರೂಪಾಯಿ ಗಳಿಸಿದೆ.
ಗೋಪಾಲ ಗೋಪಾಲ (2015)
ಕಿಶೋರ್ ಕುಮಾರ್ ಪರ್ದಾಸಾನಿ ಅವರ ವಿಡಂಬನಾತ್ಮಕ ಹಾಸ್ಯ ಸಿನಿಮಾ ಇದಾಗಿದೆ. ಇದರಲ್ಲಿ ಪವನ್ ಕಲ್ಯಾಣ್ ಗೋವಿಂದ ಗೋಪಾಲ ಹರಿ ಅಲಿಯಾಸ್ ಕೃಷ್ಣ ಅವತಾರದ ಪಾತ್ರವನ್ನು ನಿರ್ವಹಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಚಿತ್ರವು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ ಜತೆ ಕಾನೂನು ಅಡೆತಡೆಗಳನ್ನು ಎದುರಿಸಬೇಕಾಯಿತು. ವಿವಾದದ ಹೊರತಾಗಿಯೂ, ಈ ಚಲನಚಿತ್ರವು ವಿಶ್ವಾದ್ಯಂತ 88.1 ಕೋಟಿ ರೂಪಾಯಿ ಗಳಿಸಿತು. ಗೋಪಾಲ ಗೋಪಾಲ 7.2 ಐಎಂಡಿಬಿ ರೇಟಿಂಗ್ ಹೊಂದಿದೆ.
ಗಬ್ಬರ್ ಸಿಂಗ್ (2012)
ಸಲ್ಮಾನ್ ಖಾನ್ ಅವರ ದಬಾಂಗ್ (2010) ಚಿತ್ರದಿಂದ ಸ್ಫೂರ್ತಿ ಪಡೆದ ಆಕ್ಷನ್-ಹಾಸ್ಯ ಚಿತ್ರದಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಈ ಚಿತ್ರವು ವಿಶ್ವಾದ್ಯಂತ 101 ಕೋಟಿ ರೂಪಾಯಿ ಗಳಿಸಿತು. ಇದರಲ್ಲಿ ಶ್ರುತಿ ಹಾಸನ್, ಅಭಿಮನ್ಯು ಸಿಂಗ್ ಮತ್ತು ಇತರರು ನಿರ್ಣಾಯಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ತೆಲುಗು ಬ್ಲಾಕ್ಬಸ್ಟರ್ ಸಿನಿಮಾ ಐಎಂಡಿಬಿಯಲ್ಲಿ 7.1 ರೇಟಿಂಗ್ ಹೊಂದಿದೆ.
ಖುಷಿ (2001)
ಪವನ್ ಕಲ್ಯಾಣ್ ಅವರ ರೊಮ್ಯಾಂಟಿಕ್ ಆಕ್ಷನ್-ಡ್ರಾಮಾ ಗಲ್ಲಾಪೆಟ್ಟಿಗೆಯಲ್ಲಿ 36.9 ಕೋಟಿ ರೂಪಾಯಿ ಗಳಿಸಿತ್ತು. ಆ ಸಮಯದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆಯ ಟಾಲಿವುಡ್ ಚಿತ್ರವಾಯಿತು. ಖುಷಿ 2023ರಲ್ಲಿ ಮರು ಬಿಡುಗಡೆಯಾಯಿತು ಮತ್ತು 7.46 ಕೋಟಿ ರೂಪಾಯಿ ಗಳಿಸಿತು. ಎಸ್ ಜೆ ಸೂರ್ಯ ನಿರ್ದೇಶನದ ಈ ಚಿತ್ರದಲ್ಲಿ ಭೂಮಿಕಾ ಚಾವ್ಲಾ, ನಾಸರ್ ಮತ್ತು ಇತರರು ನಟಿಸಿದ್ದಾರೆ. ಈ ಸಿನಿಮಾಕ್ಕೆ ಐಎಂಡಿಬಿ ರೇಟಿಂಗ್ 8.1 ಇದೆ.
ಅತ್ತಾರಿಂಟಿಕಿ ದಾರೇದಿ (2013)
ಈ ತೆಲುಗು ಹಾಸ್ಯ-ಸಿನಿಮಾ ಪವನ್ ಕಲ್ಯಾಣ್ ಅವರ ಚಲನಚಿತ್ರ ವೃತ್ತಿಜೀವನದಲ್ಲಿ ಒಂದು ಹೆಗ್ಗುರುತಾಯಿತು. ಅತ್ತಾರಿಂಟಿಕಿ ದಾರೇದಿ ಸಿನಿಮಾವು 2006ರ ಮಗಧೀರ ಸಿನಿಮಾವನ್ನು ಹಿಂದಿಕ್ಕಿ ಸಾರ್ವಕಾಲಿಕವಾಗಿ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗು ಚಿತ್ರವಾಯಿತು. ಈ ಚಿತ್ರವು ವಿಶ್ವಾದ್ಯಂತ 187 ಕೋಟಿ ರೂಪಾಯಿ ಗಳಿಸಿತು. ಇದಕ್ಕೆ 7.3 ಐಎಂಡಿಬಿ ರೇಟಿಂಗ್ ಹೊಂದಿದೆ.
ಗೋಕುಲಮ್ಲೋ ಸೀತಾ (1997)
ಪವನ್ ಕಲ್ಯಾಣ್ ಅವರ ವೃತ್ತಿಜೀವನದಲ್ಲಿ ಗೋಕುಲಮ್ಲೋ ಸೀತಾ ಕಮರ್ಷಿಯಲ್ ಹಿಟ್ ಆಗಿತ್ತು. ಇದು ತಮಿಳು ಚಿತ್ರ ಗೋಕುಲತಿಲ್ ಸೀತೈ (1996) ನ ರಿಮೇಕ್ ಆಗಿತ್ತು. ಈ ಚಲನಚಿತ್ರವನ್ನು 11 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ 11 ಕೋಟಿ ರೂಪಾಯಿಗೂ ಹೆಚ್ಚು ಸಂಗ್ರಹಿಸುವಲ್ಲಿ ಯಶಸ್ವಿಯಾಯಿತು. ಮುತ್ಯಾಲ ಸುಬ್ಬಯ್ಯ ನಿರ್ದೇಶನದ ಈ ಚಿತ್ರವು 5.7 ಐಎಂಡಿಬಿ ರೇಟಿಂಗ್ ಪಡೆದಿದೆ.
